ಮುಂಡಗೋಡ ತಾಲೂಕಿನಲ್ಲಿ ಮನೆ ಕಳೆದುಕೊಂಡ ಬಡವ್ರಿಗೆ ಲಂಚಬಾಕರದ್ದೇ ಕಾಟ, ಸಚಿವರ ಪಿಎ ಹೆಸರಲ್ಲೂ ವಸೂಲಿ..? ಹಿಂಗಾದ್ರೆ ಹೆಂಗೆ ಗುರೂ..?




ಮುಂಡಗೋಡ: ತಾಲೂಕಿನಲ್ಲಿ ಮಹಾಮಳೆ ಅನ್ನೋದು ಅದೇಷ್ಟೋ ಬಡವರನ್ನು ಬೀದಿಗೆ ತಂದಿದೆ. ಗ್ರಾಮೀಣ ಭಾಗದಲ್ಲಿ ಮಹಾಮಳೆಯಿಂದ ಅದೇಷ್ಟೋ ಬಡಕುಟುಂಬಗಳು ಸೂರು ಕಳೆದುಕೊಂಡು ಅಕ್ಷರಶಃ ನಲುಗಿ ಹೋಗಿವೆ. ಹೀಗಿದ್ದಾಗ, ಸರ್ಕಾರ ಅಂತಹ ಕುಟುಂಬಗಳಿಗೆ ಆಸರೆಯಾಗಲು, ಪರಿಹಾರದ ರೂಪದಲ್ಲಿ ಮನೆಕಳೆದುಕೊಂಡವರಿಗೆ ಮನೆ ಕಟ್ಟಿಸಿಕೊಳ್ಳಲು ನೆರವು ನೀಡ್ತಿದೆ. ಸಂಪೂರ್ಣವಾಗಿ ಮನೆ ಕಳೆದುಕೊಂಡ ಕುಟುಂಬಗಳಿಗೆ 5 ಲಕ್ಷ ರೂಪಾಯಿ ಹಣ ಕಂತುಗಳ ಮೂಲಕ ಬಿಡುಗಡೆ ಮಾಡ್ತಿದೆ. ಆದ್ರೆ, ಹೀಗೆ ಬರುವ ಹಣದಲ್ಲಿ ಕೆಲವು ಬ್ರಷ್ಟ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಪರಿಹಾರದ ಹಣದಲ್ಲೂ ವ್ಯವಹಾರಕ್ಕಿಳಿದಿದ್ದಾರೆ ಅನ್ನೋದೇ ಬಹುದೊಡ್ಡ ದುರಂತ, ನಾಚಿಗ್ಗೇಡು..!

ದಕ್ಷ ತಹಶೀಲ್ದಾರ್..!
ಅಸಲು, ನಾವಿಲ್ಲಿ ಒಂದು ವಿಷಯ ತಮಗೇಲ್ಲ ಹೇಳಲೇ ಬೇಕಿದೆ. ಮುಂಡಗೋಡ ತಾಲೂಕಿಗೆ ತಹಶೀಲ್ದಾರ್ ಆಗಿ ಬಂದಿರೋ ಶಂಕರ್ ಗೌಡಿ ನಿಜಕ್ಕೂ ಅಪ್ಪಟ ದಕ್ಷ ಅಧಿಕಾರಿ, ಯಾವತ್ತೂ ತಮ್ಮ ಕಚೇರಿಯಲ್ಲಿ ಬ್ರಷ್ಟರಿಗೆ ಜಾಗವಿಲ್ಲ ಅಂತಾ ಖಡಾಖಂಡಿತ ಆಡಳಿತ ನಡೆಸ್ತಿರೋರು ಇವ್ರು. ಹೀಗಾಗಿನೇ ಇಡೀ ತಾಲೂಕಿನ ಜನ ನೂತನ ತಹಶೀಲ್ದಾರರ ಮೇಲೆ ಸಾಕಷ್ಟು ಭರವಸೆ, ಹಾಗೂ ನಿರೀಕ್ಷೆಗಳನ್ನ ಇಟ್ಟುಕೊಂಡಿದ್ದಾರೆ. ತಹಶಿಲ್ದಾರ್ ಕಚೇರಿಯಲ್ಲಿ ಕೂತು ರೊಕ್ಕ ಗಳಿಸುವ ಅಡ್ಡ ಕಸುಬಿಗೆ ಇಳಿದಿದ್ದ ಅದೇಷ್ಟೋ ತಿಮಿಂಗಿಲುಗಳ ಬಾಲ ಕಟ್ ಮಾಡಿ ಮೂಲೆಗೆ ಕೂರಿಸಿದ್ದಾರೆ ತಹಶೀಲ್ದಾರ್ ಸಾಹೇಬ್ರು.

ವಸೂಲಿ ವೀರರು..!
ಆದ್ರೆ, ಇಷ್ಟೇಲ್ಲ ದಕ್ಷತೆಯ ಪರಿಪಾಠ ಬೆಳೆಸಿಕೊಂಡಿರೋ ತಹಶೀಲ್ದಾರ್ ಸಾಹೆಬ್ರ ಆಸುಪಾಸಲ್ಲೇ ಇನ್ನೂ ಕೆಲವು ಬ್ರಷ್ಟ ಕುಳಗಳು ಚಕ್ಕಂಬಕ್ಕಳ ಹಾಕಿ ಮೇಯಲು ಕೂತಿವೆ. ಇವ್ರಿಗೆ ಅದ್ಯಾರ ಬಲಿಷ್ಟ ಕೈಗಳ ಆಶೀರ್ವಾದ ಇದೆಯೊ ಗೊತ್ತಿಲ್ಲ. ಈ ಕೆಲ ನಾಲಾಯಕ ಸಿಬ್ಬಂದಿಗಳಿಗೆ ರೊಕ್ಕ ಇಲ್ಲದಿದ್ರೆ ಮಾತಾಡಿಸೋದೇ ಕಷ್ಟಕರವಾಗತ್ತೆ ಅನ್ನೋ ಆರೋಪವಿದೆ. ಹೀಗಾಗಿ, ತಹಶೀಲ್ದಾರ್ ಸಾಹೇಬ್ರು ಅಂತಹ ನಾಲಾಯಕ ಬ್ರಷ್ಟ ಸಿಬ್ಬಂದಿಗಳ ಬಗ್ಗೆ ಒಂದಿಷ್ಟು ಜಾಗ್ರತೆ ವಹಿಸಬೇಕಿದೆ. ಯಾಕಂದ್ರೆ, ಅವ್ರು ತಹಶೀಲ್ದಾರರ ಹೆಸರಲ್ಲೇ ಡೀಲು ಕುದುರಿಸಿ ಮೇಯಲು ಕೂತಿದ್ದಾರೆ. ಆದ್ರೆ ಇದ್ಯಾವುದೂ ತಮ್ಮ ಗಮನಕ್ಕೆ ಬಾರದೇ ಅದೇಷ್ಟೋ ವ್ಯವಹಾರಗಳನ್ನು ಕುದುರಿಸಿಕೊಳ್ತಿದಾರೆ. ಅದಕ್ಕಾಗೇ ಇಂತವರಿಗೆ ಮೂಗುದಾಣ ಹಾಕಬೇಕಿದೆ.

ಮನೆ ಬಿಲ್ ಗೆ ಲಂಚ..?
ನಿಜ ಅಂದ್ರೆ, ಮಹಾಮಳೆಗೆ ಮನೆ ಕಳೆದುಕೊಂಡ ಬಡ ಕುಟುಂಬಗಳಿಗೆ ಹಂತ ಹಂತವಾಗಿ ಕಂತುಗಳ ಮೂಲಕ ಹಣ ಮಂಜೂರಿ‌ ಮಾಡಿಕೊಡಲಾಗತ್ತೆ. ಈ ವೇಳೆ ಒಂದು ಕಂತಿಗೆ ಕನಿಷ್ಟ ಏನಿಲ್ಲವೆಂದರೂ 20 ಸಾವಿರ ಹಣ ಈ ಬ್ರಷ್ಟ ಸಿಬ್ಬಂದಿಗಳಿಗೆ ಕೊಡಲೇ ಬೇಕಿದೆ ಅನ್ನೋ ಆರೋಪವಿದೆ. ಮನೆ ಬಿದ್ದ ಕೂಡಲೇ ಪೋಟೊ ತೆಗೆಯಲು ಹೋಗುವ ಕಟ್ಟಕಡೆಯ ಸಿಬ್ಬಂದಿಯಿಂದ ಹಿಡಿದು ಕಚೇರಿಯಲ್ಲಿ ಗಡದ್ದಾಗಿ ಮೇಯುತ್ತ ಕೂತಿರೊ ಅವನೊಬ್ಬ ದಡಿಯನಿಗೆ ಹಣ ಕೊಡಲೇ ಬೇಕಂತೆ. ಹಾಗಂತ ನಾವು ಹೇಳ್ತಿಲ್ಲ. ಪರಿಹಾರ ಪಡೆದು ಈತನ ಉಪಟಳದಿಂದಾಗಿ ಎಡತಾಕುತ್ತಿರೋ ಅದೇಷ್ಟೋ ಬಡವರು ಪಬ್ಲಿಕ್ ಫಸ್ಟ್ ರಹಸ್ಯ ಕಾರ್ಯಾಚರಣೆ ವೇಳೆ ಬಾಯಿ ಬಿಟ್ಟಿದ್ದಾರೆ. ಹಿಡಿಶಾಪ ಹಾಕಿದ್ದಾರೆ. ಅಂದಹಾಗೆ, ರಹಸ್ಯ ಕಾರ್ಯಾಚರಣೆಯ ಎಲ್ಲಾ ಭಾಗಗಳೂ ಹಂತ ಹಂತವಾಗಿ ಪ್ರಸಾರ ಆಗ್ತಿವೆ.

ಬ್ರೋಕರ್ ಗಳು..!
ಇನ್ನೊಂದು ದುರಂತದ ಸಂಗತಿಯೆಂದರೆ, ತಾಲೂಕಿನಲ್ಲಿ ಮಹಾಮಳೆಗೆ ನಿಜವಾಗಿಯೂ ಮನೆ ಕಳೆದುಕೊಂಡವರಿಗೆ ಪರಿಹಾರಗಳು ಅದೇಷ್ಟರ ಮಟ್ಟಿಗೆ ದೊರಕಿದೆಯೋ ಗೊತ್ತಿಲ್ಲ. ಆದ್ರೆ, ತಹಶೀಲ್ದಾರ ಇಲಾಖೆಯಲ್ಲಿನ ಕೆಲವು ಕಡುಬ್ರಷ್ಟ ಕುಳಗಳಿಂದಾಗಿ ದಂಧೆ ರೂಪದಲ್ಲಿ ಪರಿಹಾರದ ಬಾಬತ್ತುಗಳು ಬೇಕಾಬಿಟ್ಟಿ ಹಂಚಿಕೆಯಾಗ್ತಿದೆಯಂತೆ. ಇಲ್ಲಿ, ಡೀಲು ಕುದುರಿಸಿದ್ರೆ ಮುಗೀತು ಎಲ್ಲವೂ ಅವರವರ ಇಚ್ಚೆಗನುಗುಣವಾಗಿಯೇ ನಡೆಯುತ್ತೆ ಅನ್ನೋ ಮಾತುಗಳು ಕೇಳಿ ಬರ್ತಿವೆ. ನಿಜ ಅಂದ್ರೆ ಮಾನ್ಯ ತಹಶೀಲ್ದಾರ್ ಸಾಹೇಬ್ರಿಗೂ ಈ ಬಗ್ಗೆ ಒಂದಿಷ್ಟು ಅನುಮಾನ ಬಂದಿದೆ ಎನ್ನಲಾಗಿದೆ. ಹೀಗಾಗಿ, ಇಂತಹ ಅಕ್ರಮಿಗಳು ತಂದ ಅದೇಷ್ಟೋ ಪ್ರಕರಣಗಳನ್ನು ಸಾಹೇಬ್ರು ಮುಲಾಜಿಲ್ಲದೇ ರಿಜೆಕ್ಟ್ ಮಾಡಿದ್ದಾರಂತೆ.

ಸಚಿವರ ಪಿಎ ಹೆಸರಲ್ಲೂ ವಸೂಲಿ..?
ದುರಂತ ಅಂದ್ರೆ, ಈ ಮನೆ ಪರಿಹಾರದ ಪ್ರಕ್ರಿಯೆಗಳಲ್ಲಿ ಕೆಲವು ಬ್ರಷ್ಟ ಅಧಿಕಾರಿಗಳ ಪಡೆ ಒಂದೆಡೆಯಾದ್ರೆ, ಸಚಿವ ಶಿವರಾಮ್ ಹೆಬ್ಬಾರ್ ಹೆಸರಲ್ಲೂ ಹಣ ಪೀಕುವ ಕೆಲವು ರಾಜಕೀಯ ಪುಡಾರಿಗಳು ಹುಟ್ಟಿಕೊಂಡಿದ್ದಾರಂತೆ. ಕಾತೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ನಂದಿಪುರದ ಬಡವನೊಬ್ಬನಿಗೆ ಮನೆ ಮಂಜೂರಿಸಿ ಕೊಡಲು ಅವನೊಬ್ಬ ಮಹಾನ್ ರಾಜಕೀಯ ನಾಯಕ, 25 ಸಾವಿರ ರೂಪಾಯಿಗಳಿಗೆ ಬೇಡಿಕೆ ಇಟ್ಟು ಮೊದಲ ಹಂತವಾಗಿ 10 ಸಾವಿರ ರುಪಾಯಿ ಪೀಕಿದ್ದಾನಂತೆ, ಹಾಗಂತ ಹಣ ಕಳೆದುಕೊಂಡ ಬಡ ಕುಟುಂಬಸ್ಥರೇ ಹೇಳ್ತಿದಾರೆ. ಅಸಲಿಗೆ, ಇದೇಲ್ಲ ಹೆಬ್ಬಾರ್ ಸಾಹೇಬರ ಗಮನಕ್ಕೆ ಬರುವುದೇ ಇಲ್ಲ. ಸಂಕಷ್ಟದಲ್ಲಿದ್ದ ಬಡ ಕುಟುಂಬಗಳಿಗೆ ಆಸರೆಯಾಗಲಿ ಅಂತಾ ಸಚಿವ ಹೆಬ್ಬಾರ್ ಮುತುವರ್ಜಿ ವಹಿಸಿ ಹಂಚಿಕೆ‌ಮಾಡಿರೋ ಮನೆಗಳಲ್ಲೂ ಅವ್ರ ಹೆಸರಲ್ಲಿ ವಸೂಲಿ ಮಾಡ್ತಾರೆ ಅಂದ್ರೆ ನಿಜಕ್ಕೂ ಇದು ದುರಂತವೇ ಸರಿ. ಇದನ್ನೇಲ್ಲ ಸಚಿವರು ಗಮನಿಸಲಿ.

ವೀಕ್ಷಕರೇ, ಇದು ಇಷ್ಟಕ್ಕೆ ನಿಲ್ಲಲ್ಲ, ಇದು ನಮ್ಮ ರಹಸ್ಯ ಕಾರ್ಯಾಚರಣೆ ಮೊದಲ ಕಂತು, ಇನ್ನೂ ಸಾಕಷ್ಟು ಸಂಗತಿಗಳಿವೆ, ಸಾಕಷ್ಟು ಬ್ರಷ್ಟ ಮುಖಗಳಿವೆ, ಅದ್ರ ಜೊತೆ, ತಾಲೂಕಿನಲ್ಲಿ ಎಷ್ಟೇಷ್ಟು ಮನೆಗಳ ಹಂಚಿಕೆಯಲ್ಲಿ ಹೇಗೆಲ್ಲ ವ್ಯವಹಾರವಾಗಿದೆ..? ಅಷ್ಟಕ್ಕೂ ಕೆಲ ಬ್ರಷ್ಟ ತಹಶೀಲ್ದಾರ್ ಕಚೇರಿಯ ಸಿಬ್ಬಂದಿಯಿಂದ ಬಡ ಕುಟುಂಬಗಳು ಹೇಗೆಲ್ಲ ಪರದಾಡಿವೆ..? ಅಷ್ಟಕ್ಕೂ, ಹಣ ಹೇಗೇಲ್ಲ ಪೀಕುತ್ತಾರೆ..? ಅಸಲು ಆ ಲಂಚಬಾಕ ಸಿಬ್ಬಂದಿಯ ಪಟಾಲಂ ಹೇಗಿದೆ..? ಹೇಗೆಲ್ಲ ಡೀಲು ಕುದುರಿಸ್ತಾರೆ..? ಎಲ್ಲವನ್ನೂ ಎಳೆ ಎಳೆಯಾಗಿ ಹಂತ ಹಂತವಾಗಿ ನಿಮ್ಮೆದುರು ತೆರದಿಡ್ತಿವಿ.. ಅಲ್ಲಿವರೆಗೂ ಮೊದಲನೆ ಹಂತದ ರಹಸ್ಯ ಕಾರ್ಯಾಚರಣೆ ವೀಕ್ಷಿಸಿ, ಬ್ರಷ್ಟತೆ ಹೊಡಿದೋಡಿಸಲು ಸಹಕರಿಸಿ.

error: Content is protected !!