ನಂದಿಗಟ್ಟಾದಲ್ಲೂ ಶೃದ್ಧಾ ಭಕ್ತಿಯ ಹನುಮ ಜಯಂತಿ, ಅನ್ನ ಸಂತರ್ಪಣೆ..!

ನಂದಿಗಟ್ಟಾದಲ್ಲೂ ಶೃದ್ಧಾ ಭಕ್ತಿಯ ಹನುಮ ಜಯಂತಿ, ಅನ್ನ ಸಂತರ್ಪಣೆ..!

ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ಹನುಮ‌ಭಕ್ತರಿಂದ ಹನುಮ ಜಯಂತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.‌ ಇಲ್ಲಿನ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು. ಬೆಳಗಿನಿಂದಲೂ ಹನುಮನಿಗೆ ವಿಶೇಷ ಪೂಜೆ, ಅಭಿಷೇಕ ಸೇರಿದಂತೆ ಹಲವು ಧಾರ್ಮಿಕ ಕಾರ್ಯಕ್ರಮಗಳು ನಡೆದವು. ಈ ವೇಳೆ ರಾಘು ಕಾಂಬಳೆ, ನವೀನ ಸವಣೂರು, ಸೋಮಶೇಖರ್, ದಿಲಿಪ್, ಕಿರಣ್ ಖಾರದ್, ಮಹದೇವ್ ಕಾಂಬ್ಳೆ, ಸುನಿಲ್ ಕೊಟಗುಣಸಿ, ಅರವಿಂದ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಮುಂಡಗೋಡಿನಲ್ಲಿ ಶೃದ್ಧಾ ಭಕ್ತಿಯ ಹನುಮ ಜಯಂತಿ, ಹಿಂದು ಕಾರ್ಯಕರ್ತರ ಸಂಭ್ರಮ..!

ಮುಂಡಗೋಡಿನಲ್ಲಿ ಶೃದ್ಧಾ ಭಕ್ತಿಯ ಹನುಮ ಜಯಂತಿ, ಹಿಂದು ಕಾರ್ಯಕರ್ತರ ಸಂಭ್ರಮ..!

ಮುಂಡಗೋಡ: ಪಟ್ಟಣದಲ್ಲಿ ಇಂದು ಹನುಮ ಜಯಂತಿಯ ಸಂಭ್ರಮ ಜೋರಾಗಿತ್ತು. ಇಲ್ಲಿನ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಸಂಯುಕ್ತ ಆಶ್ರಯದಲ್ಲಿ ಪಟ್ಟಣದ ಅಂಬೇಡ್ಕರ್ ಓಣಿಯ ಹತ್ತಿರ ಇರೋ ಹನುಮ ಮಂದಿರದಲ್ಲಿ ವಿಶೇಷ ಪೂಜೆ ಹಾಗೂ ಅನ್ನ ಸಂತರ್ಪಣೆ ನಡೆಸಲಾಯಿತು. ಈ ವೇಳೆ ರವಿ ಗೌಡ ಪಾಟೀಲ್, ಫಣಿರಾಜ್ ಹದಳಗಿ, ಶೇಖರ್ ಲಮಾಣಿ, ಶಂಕರ್ ಲಮಾಣಿ, ರವಿ ಹಾವೇರಿ, ಮಂಜುನಾಥ್ ಹರಮಲ್ಕರ್, ಅಯ್ಯಪ್ಪ ಭಜಂತ್ರಿ, ಲಕ್ಷ್ಮಣ ಲಮಾಣಿ, ಉದಯ್ ಪಾಲೇಕರ್, ಬಸವರಾಜ ತನಿಕೆದಾರ್, ಶಂಭು ನಿಡಗುಂದಿ. ಪ್ರಕಾಶ ಬಡಿಗೇರ್, ಮಂಜು ಹರಿಜನ್, ವಿನಾಯಕ ರಾಯ್ಕರ್, ವಿಶ್ವ ನಾಯರ್, ರವಿ ನಿಡಗುಂದಿ, ವಿನೋದ್ ಲಮಾಣಿ, ವಿಷ್ಣು ರಾಠೋಡ್, ಮಹೇಶ್ ರಾಠೋಡ್, ವಿಷ್ಣು ಲಮಾಣಿ, ಷಣ್ಮುಖ ಕೋಳೂರು, ಬಸ್ಸು ಲಮಾಣಿ, ಗುರು ಕಾಮತ್ ಸೇರಿದಂತೆ ಹಲವು ಹಿಂದು ಕಾರ್ಯಕರ್ತರು ಉಪಸ್ಥಿತರಿದ್ದರು.

ಯಲ್ಲಾಪುರ ಕ್ಷೇತ್ರ: ವಿ.ಎಸ್. ಪಾಟೀಲ್ “ಕೈ” ಅಭ್ಯರ್ಥಿ ಫಿಕ್ಸ್,  ರೆಡಿಯಾಯ್ತು ಅಖಾಡ..! ಒಳ ಮಸಲತ್ತುಗಳ “ಆಟ”ದಲ್ಲಿ ಗೆಲುವು ಯಾರ ಕಡೆ..?

ಯಲ್ಲಾಪುರ ಕ್ಷೇತ್ರ: ವಿ.ಎಸ್. ಪಾಟೀಲ್ “ಕೈ” ಅಭ್ಯರ್ಥಿ ಫಿಕ್ಸ್, ರೆಡಿಯಾಯ್ತು ಅಖಾಡ..! ಒಳ ಮಸಲತ್ತುಗಳ “ಆಟ”ದಲ್ಲಿ ಗೆಲುವು ಯಾರ ಕಡೆ..?

ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯನ್ನು ಘೋಷಣೆ ಮಾಡಿದೆ. ನಿರೀಕ್ಷಿಸಿದಂತೆ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿಯೋದು ಕನ್ಪರ್ಮ್ ಆಗಿದೆ. ಈ ಮೂಲಕ ಕ್ಷೇತ್ರದಲ್ಲಿ ಸುಳಿದಾಡುತ್ತಿದ್ದ ಹಲವು ಊಹಾಪೋಹಗಳಿಗೆ ತೆರೆ ಬಿದ್ದಂತಾಗಿದೆ‌. ಕಾಂಗ್ರೆಸ್ ಕೊನೆಗೂ “ನಮ್ಮ ಅಭ್ಯರ್ಥಿ” ಇವರೇ ಅಂತಾ ಅಧಿಕೃತ ಮುದ್ರೆ ಒತ್ತಿದೆ. ಇದ್ರ ಜೊತೆ ಯಲ್ಲಾಪುರ ಕ್ಷೇತ್ರ ಜಿದ್ದಾಜಿದ್ದಿನ ಕಣವಾಗುವತ್ತ ಮತ್ತೆ ಹೊರಳಿಕೊಂಡಿದೆ. ಮೂರು ತಿಂಗಳ ಹಿಂದೆಯೇ..! ಅಸಲಿಗೆ, ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆಯಾಗಿದ್ದ ವಿ.ಎಸ್.ಪಾಟೀಲರಿಗೆ ಅವತ್ತೇ ಇಂತಹದ್ದೊಂದು “ಗ್ಯಾರಂಟಿ” ನೀಡಲಾಗಿತ್ತಂತೆ. ನೀವು ಯಲ್ಲಾಪುರ ಕ್ಷೇತ್ರದ ಮುಂದಿನ ಅಭ್ಯರ್ಥಿಯಾಗೋದು ಪಕ್ಕಾ, ಯಾವುದೇ ಅಳುಕಿಲ್ಲದೇ ಪಕ್ಷ ಸೇರ್ಪಡೆಯಾಗಿ ಅಂತಾ ರಾಜ್ಯ ನಾಯಕರು ಇನ್ವೈಟ್ ಮಾಡಿದ್ರಂತೆ. ಹಾಗಂತ, ವಿ.ಎಸ್.ಪಾಟೀಲರ ಆಪ್ತ‌ ಬಳಗ ಹೇಳಿಕೊಂಡಿದೆ. ಸದ್ಯ ಕಾಂಗ್ರೆಸ್ ಟಿಕೆಟ್ ಸಿಕ್ಕಿರೋದು ಕ್ಷೇತ್ರದಲ್ಲಿ ಮತ್ತೊಂದು ಸಂಚಲನಕ್ಕೆ ಕಾರಣವಾಗಿದೆ‌. ನೆಕ್ ಟೂ ನೆಕ್…! ಅಂದಹಾಗೆ, ಯಲ್ಲಾಪುರ ಕ್ಷೇತ್ರದಲ್ಲಿ ಈ ಬಾರಿ ಇನ್ನಿಲ್ಲದ ಜಿದ್ದಾ ಜಿದ್ದು ಏರ್ಪಡುವ ಎಲ್ಲಾ ಲಕ್ಷಣ ಇದೆ. ಅದ್ಯಾರೇ ಗೆದ್ರೂ ಸಾವಿರಗಳ...

ಸಿಎಂ ತವರಿನಲ್ಲಿ ಬಂಜಾರಾ ಸಮುದಾಯದ ಪ್ರತಿಭಟನೆ, ಆಕ್ರೋಶ..! ಆತ್ಮಹತ್ಯೆಗೆ ಯತ್ನಿಸಿದ್ರಾ ಬಂಜಾರಾ ಪೀಠದ ಶ್ರೀಗಳು..?

ಸಿಎಂ ತವರಿನಲ್ಲಿ ಬಂಜಾರಾ ಸಮುದಾಯದ ಪ್ರತಿಭಟನೆ, ಆಕ್ರೋಶ..! ಆತ್ಮಹತ್ಯೆಗೆ ಯತ್ನಿಸಿದ್ರಾ ಬಂಜಾರಾ ಪೀಠದ ಶ್ರೀಗಳು..?

 ಸಿಎಂ ತವರು ಕ್ಷೇತ್ರ ಶಿಗ್ಗಾವಿಯಲ್ಲಿ ಬಂಜಾರಾ ಸಮುದಾಯದ ಆಕ್ರೋಶ ಮುಗಿಲು‌ ಮುಟ್ಟಿದೆ‌. ಒಳ‌ಮೀಸಲಾತಿಯ ವರ್ಗೀಕರಣದ ವಿರುದ್ಧ ಸಿಡಿದೆದ್ದಿರುವ ಬಂಜಾರಾ ಸಮುದಾಯ ಶಿಗ್ಗಾವಿಯಲ್ಲಿ ಪ್ರತಿಭಟನೆ ನಡೆಸಿತು. ಕೂಡಲೇ ಮೀಸಲಾತಿ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿದ್ರು. ಶಿಗ್ಗಾವಿಯ ಕಿತ್ತೂರು ಚೆನ್ನಮ್ಮ ಸರ್ಕಲ್ ನಿಂದ ಹೊರಟ ಪ್ರತಿಭಟನಾ ಮೆರವಣಿಗೆ, ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡುವ ಮೂಲಕ ಸಾಗಿ ಬಂದು ಹೊಸ ಬಸ್ ನಿಲ್ದಾಣದವರೆಗೂ ಸಾಗಿತ್ತು. ಆತ್ಮಹತ್ಯೆಗೆ ಯತ್ನಿಸಿದ್ರಾ ಶ್ರೀಗಳು..? ಇನ್ನು, ಬಂಜಾರಾ ಸಮುದಾಯದ ಪ್ರತಿಭಟನೆ ವೇಳೆ, ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಗೆ ಮಾಲಾರ್ಪಣೆ ಮಾಡಲು ಹುಬ್ಬಳ್ಳಿಯ ಬಂಜಾರಾ ಪೀಠದ ಶ್ರೀಗಳಾದ ಶ್ರೀ ತಿಪ್ಪೇಶ್ವರ ಸ್ವಾಮೀಜಿಯವರು ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಅಲ್ಲಿಂದಲೇ ಕೆಳಗೆ ಜಿಗಿದು ಆತ್ಮಹತ್ಯೆಗೆ ಯತ್ನಿಸಿದ್ರು. ಹೀಗಾಗಿ ಇದೇ ವೇಳೆ ಅಲ್ಲಿ ನೆರೆದಿದ್ದ ಸಮುದಾಯದ ಜನ ಶ್ರೀಗಳನ್ನು ತಕ್ಷಣವೇ ಕೆಳಗಿಳಿಸಲು ಪ್ರಯತ್ನಿಸಿದ್ರು. ಹೀಗಾಗಿ, ಈ ಘಟನೆ ಬಂಜಾರಾ ಸಮುದಾಯದವರಲ್ಲಿ ಸಾಕಷ್ಟು ಕಿಚ್ಚು ಹೊತ್ತಿಸಿದೆ. ಒಟ್ನಲ್ಲಿ, ಒಳ‌ಮೀಸಲಾತಿ ಬೇಗುದಿಯಲ್ಲಿ ಬೆಂದಿರುವ ಬಂಜಾರಾ ಸಮುದಾಯದವರು ರಾಜ್ಯ...

ಅಮ್ಮಾಜಿ ಕೆರೆ ಹತ್ತಿರ ಅಂಬ್ಯುಲೆನ್ಸ್, ಬೈಕ್ ನಡುವೆ ಡಿಕ್ಕಿ, ಯುವಕನಿಗೆ ಗಾಯ..!

ಅಮ್ಮಾಜಿ ಕೆರೆ ಹತ್ತಿರ ಅಂಬ್ಯುಲೆನ್ಸ್, ಬೈಕ್ ನಡುವೆ ಡಿಕ್ಕಿ, ಯುವಕನಿಗೆ ಗಾಯ..!

ಮುಂಡಗೋಡ ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಹತ್ತಿರ ಅಪಘಾತವಾಗಿದೆ. ಅಂಬ್ಯುಲೆನ್ಸ್ ಹಾಗೂ ಬೈಕ್ ನಡುವೆ ಮುಖಾಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಾಯಗೊಂಡ ಘಟನೆ ನಡೆದಿದೆ. ಮುಂಡಗೋಡಿನ ತೇಜಸ್ (26) ಎಂಬುವ ಯುವಕನೇ ಗಾಯಗೊಂಡಿದ್ದು, ಸದ್ಯ ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಮುಂಡಗೋಡ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ..! ಸಿಕ್ಕ ಮೊತ್ತ ಎಷ್ಟು ಗೊತ್ತಾ..?

ಮುಂಡಗೋಡ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೆ ಸಾಗಿಸುತ್ತಿದ್ದ ಹಣ ವಶಕ್ಕೆ..! ಸಿಕ್ಕ ಮೊತ್ತ ಎಷ್ಟು ಗೊತ್ತಾ..?

ಮುಂಡಗೋಡ ತಾಲೂಕಿನ ಅಗಡಿ ಚೆಕ್ ಪೊಸ್ಟ್ ಬಳಿ ದಾಖಲೆ ಇಲ್ಲದೇ ಸ್ಕೂಟಿಯಲ್ಲಿ ಸಾಗಿಸುತ್ತಿದ್ದ 3.40 ಲಕ್ಷ ರೂ. ವಶ ಪಡಿಸಿಕೊಳ್ಳಲಾಗಿದೆ‌. ಪೊಲೀಸರು ಹಾಗೂ ಕಂದಾಯ ಅಧಿಕಾರಿಗಳು ದಾಳಿ ನಡೆಸಿ ದಾಖಲೆಯಿಲ್ಲದೇ ಸಾಗಿಸುತ್ತಿದ್ದ ಹಣ ವಶಕ್ಕೆ ಪಡೆದಿದ್ದಾರೆ‌. ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ರಚಿಸಲಾಗಿರೋ ಚೆಕ್ ಪೊಸ್ಟ್ ನಲ್ಲಿ ತಪಾಸಣೆ ನಡೆಸುತ್ತಿದ್ದಾಗ ದಾಖಲೆ ಇಲ್ಲದ ಹಣ ಪತ್ತೆಯಾಗಿದೆ. ಮುಂಡಗೋಡ ನೆಹರು ನಗರದ ನಿವಾಸಿ ಹಸನ ಸಾಬ್ ಮೋದಿನ್ ಸಾಬ್ ಫರೀದ್ ಎಂಬುವವರು ತಮ್ಮ ಸ್ಕೂಟಿಯಲ್ಲಿ ಹಣವನ್ನು ಕೊಂಡೊಯ್ಯುತ್ತಿದ್ದರು ಎನ್ನಲಾಗಿದೆ. ಹೀಗಾಗಿ, ಈ ವೇಳೆ ತಪಾಸಣೆ ನಡೆಸಿದಾಗ ಹಣ ಪತ್ತೆಯಾಗಿದೆ. ಆದ್ರೆ, ಹೀಗೆ ಸಿಕ್ಕ ಹಣಕ್ಕೆ ಸೂಕ್ತ ದಾಖಲೆಗಳನ್ನು ಒದಗಿಸದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲಾಗಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ಹಾಗೂ ಮತ್ತವರ ತಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಮುಂದಿನ ಕ್ರಮ ಕೈಗೊಂಡಿದೆ.

ತಾಲೂಕಿನಲ್ಲಿ ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಕೂಡಲೇ ಕಚೇರಿಗೆ ದೂರು ನೀಡಿ: ತಹಶೀಲ್ದಾರ್ ಶಂಕರ್ ಗೌಡಿ ಮನವಿ

ತಾಲೂಕಿನಲ್ಲಿ ಸ್ಮಶಾನ ಭೂಮಿ ಒತ್ತುವರಿಯಾಗಿದ್ದಲ್ಲಿ ಕೂಡಲೇ ಕಚೇರಿಗೆ ದೂರು ನೀಡಿ: ತಹಶೀಲ್ದಾರ್ ಶಂಕರ್ ಗೌಡಿ ಮನವಿ

ಮುಂಡಗೋಡ: ತಾಲೂಕಿನ ಬಹುತೇಕ 82 ಗ್ರಾಮಗಳಲ್ಲಿ ಸ್ಮಶಾನ ಭೂಮಿಯನ್ನು ಗುರುತಿಸಿ ಈಗಾಗಲೇ ಪಹಣಿ ಪತ್ರಿಕೆಗಳಲ್ಲಿ ದಾಖಲಿಸಲಾಗಿದೆ. ಅಲ್ಲದೇ ನಿರ್ವಹಣೆಗಾಗಿ ಸ್ಥಳೀಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದ್ದು, ಹೀಗಾಗಿ, ಸದ್ಯ ಸ್ಮಶಾನ ಭೂಮಿಗಾಗಿ ಕಾಯ್ದಿರಿಸಿದ ಭೂಮಿಯನ್ನು ಯಾರಾದರೂ ಒತ್ತುವರಿ ಮಾಡಿಕೊಂಡಿದ್ದರೆ ಅಂತವರ ವಿರುದ್ಧ ಕೂಡಲೇ ತಹಶೀಲ್ದಾರ ಕಚೇರಿಗೆ ದೂರು ನೀಡುವಂತೆ ಮುಂಡಗೋಡ ತಹಶೀಲ್ದಾರ್ ಶಂಕರ್ ಗೌಡಿ ಮನವಿ ಮಾಡಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಒಟ್ಟು 94 ಗ್ರಾಮಗಳಿದ್ದು ಈ ಪೈಕಿ 12 ಜನವಸತಿ ಇಲ್ಲದ ಬೇಚರಾಕ ಗ್ರಾಮಗಳಿವೆ. ಬಾಕಿ ಉಳಿದ 82 ಗ್ರಾಮಗಳಲ್ಲಿ ಈಗಾಗಲೇ ಸ್ಮಶಾನಕ್ಕಾಗಿ ಸರ್ಕಾರಿ ಭೂಮಿಯನ್ನು ಗುರುತಿಸಿ ಕಾಯ್ದಿರಿಸಲಾಗಿದೆ. ಸ್ಮಶಾನಕ್ಕಾಗಿ ಕಾಯ್ದಿರಿಸಿದ ಜಾಗಗಳನ್ನು ಈಗಾಗಲೇ ಪಹಣಿ ಪತ್ರಿಕೆಯಲ್ಲಿ ಇಂಡೀಕರಣಗೊಳಿಸಲಾಗಿದೆ, ಹಾಗೂ ಸಂಬಂಧಪಟ್ಟ ಸ್ಥಳಿಯ ಸಂಸ್ಥೆಗಳಿಗೆ ಹಸ್ತಾಂತರಿಸಲಾಗಿದೆ. ಹೀಗಾಗಿ, ಸ್ಮಶಾನಕ್ಕಾಗಿ ಕಾಯ್ದಿರಿಸಿದ ಜಾಗವು ಒತ್ತುವರಿಯಾಗಿದ್ದಲ್ಲಿ ಸಾರ್ವಜನಿಕರು ಸಂಬಂಧಪಟ್ಟ ತಹಶೀಲ್ದಾರ, ಉಪವಿಭಾಗಾಧಿಕಾರಿ ಅಥವಾ ಜಿಲ್ಲಾಧಿಕಾರಿಗಳಲ್ಲಿ ನೇರವಾಗಿ ದೂರು ಸಲ್ಲಿಸಬಹುದಾಗಿದೆ ಅಂತಾ ತಹಶೀಲ್ದಾರರು ಸಾರ್ವಜನಿಕರಿಗೆ ಮನವಿ ಮಾಡಿದ್ದಾರೆ.

ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್:  ಮೇ10 ರಂದು ಮತದಾನ, ಮೇ 13ರಂದು ಫಲಿತಾಂಶ..! ಇವತ್ತಿನಿಂದಲೇ ನೀತಿ ಸಂಹಿತೆ ಜಾರಿ.!

ವಿಧಾನಸಭೆ ಚುನಾವಣೆಗೆ ಮುಹೂರ್ತ ಫಿಕ್ಸ್: ಮೇ10 ರಂದು ಮತದಾನ, ಮೇ 13ರಂದು ಫಲಿತಾಂಶ..! ಇವತ್ತಿನಿಂದಲೇ ನೀತಿ ಸಂಹಿತೆ ಜಾರಿ.!

ಅಂತೂ ಇಂತೂವಿಧಾನಸಭೆ ಚುನಾವಣೆಗೆ ಮುಹೂರ್ತ ಪಿಕ್ಸ್ ಆಗಿದೆ. ಮೇ 10 ರಂದು ಮತದಾನ ನಡೆಸಲು ದಿನಾಂಕ ಘೋಷಣೆ ಮಾಡಲಾಗಿದೆ. ಒಂದೇ ಹಂತದಲ್ಲಿ ಚುನಾವಣೆ ನಡೆಸಲು ತೀರ್ಮಾನ ಮಾಡಲಾಗಿದೆ. ಮೇ.13 ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು ಅಂದೇ ಫಲಿತಾಂಶ ಹೊರಬೀಳಲಿದೆ.

ವಿಧಾನಸಭೆ ಚುನಾವಣೆಗೆ ಇವತ್ತೇ ಮುಹೂರ್ತ ಫಿಕ್ಸ್: ಇವತ್ತಿನಿಂದಲೇ ನೀತಿ ಸಂಹಿತೆ ಜಾರಿ..!

ವಿಧಾನಸಭೆ ಚುನಾವಣೆಗೆ ಇವತ್ತೇ ಮುಹೂರ್ತ ಫಿಕ್ಸ್: ಇವತ್ತಿನಿಂದಲೇ ನೀತಿ ಸಂಹಿತೆ ಜಾರಿ..!

ಇಂದೇ ವಿಧಾನಸಭೆ ಚುನಾವಣೆಗೆ ಮುಹೂರ್ತ ಪಿಕ್ಸ್ ಆಗಲಿದೆ. ಇಂದು ಬೆಳಿಗ್ಗೆ 11.30 ಕ್ಕೆ ಕೇಂದ್ರ ಚುನಾವಣಾ ಆಯೋಗ ಪತ್ರಿಕಾಗೋಷ್ಠಿ ನಡೆಸಿ ಚುನಾವಣೆ ದಿನಾಂಕ ಘೋಷಣೆ‌ ಮಾಡುವ ಸಾಧ್ಯತೆ ಇದೆ. ಬೆಳಿಗ್ಗೆ 11.30 ಕ್ಕೆ ದೆಹಲಿಯ ವಿಜ್ಞಾನ ಭವನದಲ್ಲಿ ಚುನಾವಣಾ ಆಯೋಗ ಸುದ್ದಿಗೋಷ್ಠಿ ಕರೆದಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಸುದ್ದಿಗೋಷ್ಠಿ ನಡೆಸಿ ಚುನಾವಣೆ ದಿನಾಂಕ ಘೋಷಣೆ ಮಾಡಲಿದ್ದಾರೆ. ಹೀಗಾಗಿ, ಇಂದಿನಿಂದಲೇ ಚುನಾವಣೆ ನೀತಿ ಸಂಹಿತೆ ಜಾರಿಯಾಗುವ ಎಲ್ಲಾ ಸಾಧ್ಯತೆ ಇದೆ.

ನ್ಯಾಸರ್ಗಿ ಡ್ಯಾಂ ನಲ್ಲಿ ಮಗನ ಎದುರೇ ತಂದೆ ಸಾವು, ನೀರಲ್ಲಿ ಈಜಲು ಹೋದವ ಹೆಣವಾದ..!

ನ್ಯಾಸರ್ಗಿ ಡ್ಯಾಂ ನಲ್ಲಿ ಮಗನ ಎದುರೇ ತಂದೆ ಸಾವು, ನೀರಲ್ಲಿ ಈಜಲು ಹೋದವ ಹೆಣವಾದ..!

ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಡ್ಯಾಂ ನಲ್ಲಿ ಈಜಲು ನೀರಿಗೆ ಇಳಿದಿದ್ದ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ. ಪುಟ್ಟ ಮಗನ ಕಣ್ಣೇದುರೇ ತಂದೆ ನೀರಲ್ಲಿ ಮುಳುಗಿ ಸಾವು ಕಂಡಿದ್ದು ಧಾರುಣವಾಗಿದೆ. ಲಕ್ಷ್ಮಣ ಭೀಮಣ್ಣ ಬೋವಿ (42) ಈಜಲು ಹೋಗಿ ಮೃತಪಟ್ಟ ವ್ಯಕ್ತಿಯಾಗಿದ್ದಾನೆ. ಇವನು ಮದ್ಯಾನ ನ್ಯಾಸರ್ಗಿ ಡ್ಯಾಂ ನಲ್ಲಿ ಸ್ನಾನ ಮಾಡಲೆಂದು, ಮಗನ ಬಳಿ ಬಟ್ಟೆ ಕೊಟ್ಟು ನೀರಿಗೆ ಇಳಿದಿದ್ದ ಎನ್ನಲಾಗಿದೆ. ಈ ವೇಳೆ ನೀರಲ್ಲಿ ಈಜಾಡುತ್ತಿರುವಾಗಲೇ ನಾಪತ್ತೆಯಾಗಿದ್ದಾನೆ. ಹೀಗಾಗಿ ತಂದೆ ನೀರಲ್ಲಿ ಕಣ್ಮರೆಯಾಗುತ್ತಲೇ ಆತಂಕಗೊಂಡ ಮಗ ಸ್ಥಳೀಯರಿಗೆ ವಿಷಯ ಮುಟ್ಟಿಸಿದ್ದಾನೆ. ಇನ್ನು ಸುದ್ದಿ ತಿಳಿದ ತಕ್ಷಣವೇ ಸ್ಥಳಕ್ಕೆ ಧಾವಿಸಿದ ಮುಂಡಗೋಡ ಕ್ರೈಂ ಪಿಎಸ್ ಐ ಎನ್.ಡಿ.ಜಕ್ಕಣ್ಣವರ್ ಹಾಗೂ ಸಿಬ್ಬಂದಿಗಳು, ಅಗ್ನಿ ಶಾಮಕ ಸಿಬ್ಬಂದಿಗಳು ನೀರಿನಿಂದ ಹೊರ ತೆಗೆದಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

error: Content is protected !!