ಮುಂಡಗೋಡ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡುವಂತೆ ಒತ್ತಾಯಿಸಿ ಖುದ್ದು ಕಾಂಗ್ರೆಸ್ ಕಾರ್ಯಕರ್ತರೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೆ ಅಲವತ್ತುಕೊಂಡು ಮನವಿ ಅರ್ಪಿಸಿದ ಘಟನೆ ನಡೆದಿದೆ. ಸರ್ವಾಧಿಕಾರಿ ಅಧ್ಯಕ್ಷರಾ..? ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕಾರ್ಯ ವೈಖರಿ ಕೆಲವು ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಬೇಸರ ಮೂಡಿಸಿದ್ದು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆಯಿಂದ ಕಾರ್ಯಕರ್ತರು ಕಂಗಾಲಾಗಿದ್ದು ಲೋಕಸಭಾ ಚುನಾವಣೆಗೂ ಮುನ್ನವೆ ಈಗೀನ ಅಧ್ಯಕ್ಷ ಜ್ಞಾನದೇವ ಗುಡಿಹಾಳ ಅವರನ್ನು ಬದಲಾವಣೆ ಮಾಡಬೇಕು ಆ ಹುದ್ದೆಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡಿ ತಾಲೂಕಿನ ಎಲ್ಲ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ ನೂತನ ಅಧ್ಯಕ್ಷರ ಆಯ್ಕೆ ಮಾಡಬೇಕು ಹಾಗೂ ಇತ್ತೀಚೆಗೆ ಪಕ್ಷದ ಕಚೇರಿಯಲ್ಲಿ ನಡೆದ ಕಾರ್ಯಕರ್ತರ ಸಭೆಯಲ್ಲಿ ಶೇ.90ರಷ್ಟು ಕಾರ್ಯಕರ್ತರು ಅಧ್ಯಕ್ಷರ ಬದಲಾವಣೆಗೆ ಠರಾವು ಮಾಡಿದ್ದಾರೆ. ಕೂಡಲೆ ಅಧ್ಯಕ್ಷರ ಬದಲಾವಣೆ ಮಾಡುವಂತೆ ಅವರು ನೀಡಿದ ಮನವಿಯಲ್ಲಿ ತಿಳಿಸಿದ್ದಾರೆ. ಈ ವೇಳೆ ಧರ್ಮರಾಜ ನಡಗೇರಿ,ಬಸವರಾಜ ಸಂಗಮೇಶ್ವರ, ಹುಲಗಪ್ಪ ಭೋವಿ, ಹನ್ಮಂತ ವಡ್ಡರ, ಡಾಕಪ್ಪ ಲಮಾಣಿ, ಶರೀಪಸಾಬ...
Top Stories
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಮುಂಡಗೋಡ ಬ್ಲಾಕ್ ಕಾಂಗ್ರೆಸ್ ನಲ್ಲಿ ಕೋಲಾಹಲ, ಬ್ಲಾಕ್ “ಕೈ” ಅಧ್ಯಕ್ಷರ ಬದಲಾವಣೆಗಾಗಿ ಕಾರ್ಯಕರ್ತರ ಮನವಿ..!
ತಾಲೂಕಿನ ಅಧಿಕಾರಿಗಳ ಕಿವಿ ಹಿಂಡಿದ ಉಸ್ತುವಾರಿ ಮಂತ್ರಿ, ಹಾರಿಕೆ ಉತ್ತರ ನೀಡಿದ್ರೆ ನೆಟ್ಟಗಿರಲ್ಲ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಕಾಳು ವೈದ್ಯ ಖಡಕ್ ಎಚ್ಚರಿಕೆ..!
ಮುಂಡಗೋಡ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮುಂಡಗೋಡ ತಹಶೀಲ್ದಾರ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ರು. ಸಭೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಿದ ಸಚಿವ್ರು, ಕೆಲವು ಅಧಿಕಾರಿಗಳ ಕಿವಿ ಹಿಂಡಿದ್ರು. ಗೃಹಲಕ್ಷ್ಮೀ ಯೋಜನೆ ಬಿಸಿ..! ಸಭೆಯಲ್ಲಿ ಬಹುತೇಕ ಗ್ಯಾರಂಟಿ ಯೋಜನೆಗಳ ಅನುಷ್ಟಾನಗಳ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಸಚಿವ ಮಂಕಾಳು ವೈದ್ಯ, ಅನುಷ್ಟಾನದಲ್ಲಿ ಕೊಂಚವಾದ್ರೂ ಯಡವಟ್ಟು ಆಗಿದ್ರೆ ಸಹಿಸಲ್ಲ ಅನ್ನೋ ಸ್ಪಷ್ಟ ಸಂದೇಶ ರವಾನಿಸಿದ್ರು. ಫಲಾನುಭವಿಗಳಿಗೆ ಗ್ಯಾರಂಟಿ ಯೋಜನೆ ಸಿಕ್ಕಿಲ್ಲ ಎಂದು ತಾಲೂಕಿನಿಂದ ಬೆಂಗಳೂರಿಗೆ ಹೋಗಿ ಮುಖ್ಯಮಂತ್ರಿ ಇಲ್ಲವೆ ಇತರೆ ಸಚಿವರ ಬಳಿ ಹೇಳಿದರೆ ಅಧಿಕಾರಿಗಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಎಂಬರ್ಥ ಅಂತಾ ಖಡಕ್ಕಾಗಿ ಅಧಿಕಾರಿಗಳಿಗೆ ಕಿವಿ ಹಿಂಡಿದ್ರು. ಪ್ರಭಾರ CDPO ಜಟಾಪಟಿ..! ಸಭೆಯಲ್ಲಿ, ಗೃಹಲಕ್ಷ್ಮೀ ಯೋಜನೆಯ ಅನಿಷ್ಟಾನದ ಕುರಿತು ಪ್ರಭಾರ ಸಿಡಿಪಿಓ ರನ್ನು ಪ್ರಶ್ನಿಸಿದ ಸಚಿವ್ರು, ಗೃಹಲಕ್ಷ್ಮೀ ಯೊಜನೆಯಡಿಯಲ್ಲಿ ತಾಲೂಕಿನ ಫಲಾನಭವಿಗಳ ಸಂಖ್ಯೆ ಎಷ್ಟು..? ಅಂತಾ ಕೇಳಿದ್ರು. ಪ್ರತಿ ತಿಂಗಳು...
ಮದ್ಯಾನವಾದ್ರೂ ಮುಂಡಗೋಡಿಗೆ ಬಾರದ ಉಸ್ತುವಾರಿ ಸಚಿವ ಮಂಕಾಳು ವೈದ್ಯ..! ಅಧಿಕಾರಿಗಳು, ಕಾರ್ಯಕರ್ತರು ಸಚಿವರಿಗಾಗಿ ಕಾದು ಕಾದು ಸುಸ್ತು..!
ಮುಂಡಗೋಡ: ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಇವತ್ತು ಮುಂಡಗೋಡಿಗೆ ಬರುವ ಕಾರ್ಯಕ್ರಮವಿತ್ತು. ತಾಲೂಕಿನ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಂಡಿದ್ರು. ಅಸಲು, ಸಭೆ ಬೆಳಿಗ್ಗೆ 10 ಗಂಟೆಗೆ ಏರ್ಪಾಟಾಗಿತ್ತು. ಬಹುತೇಕ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಚಿವರ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಆದ್ರೆ ಉಸ್ತುವಾರಿ ಮಂತ್ರಿಗಳು ಮಾತ್ರ 10 ಗಂಟೆ ಹೋಗಲಿ, ಮದ್ಯಾನವಾದ್ರೂ ಪತ್ತೆಯಿಲ್ಲ. ಹೀಗಾಗಿ, ಅಧಿಕಾರಿಗಳು ತಮ್ಮೇಲ್ಲ ಕೆಲಸ ಕಾರ್ಯಗಳನ್ನೂ ಬದಿಗಿಟ್ಟು ಸಚಿವರನ್ನು ಕಾಣಲು ಇನ್ನೂ ಕಾಯುತ್ತಿದ್ದಾರೆ. ಕಾರ್ಯಕರ್ತರೂ ಕಂಗಾಲು..! ಇನ್ನು, ಉಸ್ತುವಾರಿ ಸಚಿವರ ಆಗಮನಕ್ಕಾಗಿ ಬೆಳಿಗ್ಗೆ 10 ಗಂಟೆಯಿಂದಲೇ ಕಾರ್ಯಕರ್ತರು ಪ್ರೆಶ್ ಹೂಮಾಲೆ ಹಿಡಿದು ಕಾಯುತ್ತಿದ್ದಾರೆ. ಆದ್ರೆ, ಸಚಿವರ ಪತ್ತೆಯಿರದ ಕಾರಣ ಹೂಮಾಲೆಯ ಜೊತೆಗೆ ಕಾರ್ಯಕರ್ತರೂ ಕೂಡ ಬಾಡಿ ಹೋಗಿದ್ದಾರೆ. ಆದ್ರೆ, ಉಸ್ತುವಾರಿ ಮಿನಿಸ್ಟರ್ ಮಾತ್ರ ಇನ್ನೂ ಬರಲೇ ಇಲ್ಲ.
ಸಾಲಗಾಂವ್ ಸಮೀಪದ ಜೋಗೇಶ್ವರ ಹಳ್ಳದ ಬಳಿ ಲಾರಿಗಳ ನಡುವೆ ಮುಖಾಮುಕಿ ಡಿಕ್ಕಿ, ಇಬ್ಬರು ಚಾಲಕರಿಗೆ ಗಾಯ..!
ಮುಂಡಗೋಡ ತಾಲೂಕಿನ ಜೋಗೇಶ್ವರ ಹಳ್ಳದ ಸಮೀಪ ಭೀಕರ ರಸ್ತೆ ಅಪಘಾತವಾಗಿದೆ. ಘಟನೆಯಲ್ಲಿ ಇಬ್ಬರು ಗಂಭೀರವಾಗಿ ಗಾಯಗೊಂಡಿರೋ ಘಟನೆ ನಡೆದಿದೆ. ಡಿಕ್ಕಿಯ ರಭಸಕ್ಕೆ ಎರಡೂ ಲಾರಿಗಳ ಮುಂಬಾಗ ಸಂಪೂರ್ಣ ಜಖಂ ಆಗಿದೆ. ಶಿರಸಿ ಕಡೆಯಿಂದ ಬರುತ್ತಿದ್ದ ಲಾರಿ, ಮುಂಡಗೋಡ ಕಡೆಯಿಂದ ಹೊರಟಿದ್ದ ಲಾರಿ ನಿಯಂತ್ರಣ ತಪ್ಪಿ ಪರಸ್ಪರ ಮುಖಾಮುಕಿ ಡಿಕ್ಕಿಯಾಗಿದೆ. ಪರಿಣಾಮ ಲಾರಿ ಚಾಲಕರು ಇಬ್ಬರಿಗೂ ಗಾಯವಾಗಿದೆ. ಇನ್ನು ಗಾಯಗೊಂಡ ಲಾರಿ ಚಾಲಕರನ್ನು ಕಲಬುರ್ಗಿಯ ಮೌನೇಶ್ ಡೋಲಿ, ಶಿರಸಿಯ ಮಹೇಶ್ ಶಂಕರ್ ಪರಪರ್ ಅಂತಾ ಗುರುತಿಸಲಾಗಿದೆ. ಸದ್ಯ ಗಾಯಾಳುಗಳನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಲಾಗಿದ್ದು, ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮ ಕೈಗೊಂಡಿದ್ದಾರೆ.
ರಾಜಕೀಯ ತೊಳಲಾಟಗಳ ನಡುವೆಯೂ ಕ್ಷೇತ್ರದ ಜನರ ಕಾಳಜಿ ಮೆರೆದ ಶಾಸಕ ಹೆಬ್ಬಾರ್..!
ಮುಂಡಗೋಡ: ತಮ್ಮ ಬಿಡುವಿಲ್ಲದ ರಾಜಕೀಯ ತೊಳಲಾಟಗಳ ನಡುವೆಯೂ ಯಲ್ಲಾಪುರ ಕ್ಷೇತ್ರದ ಶಾಸಕ ಶಿವರಾಮ್ ಹೆಬ್ಬಾರ್ ಕ್ಷೇತ್ರದ ಜನರ ದುಃಖ ದುಮ್ಮಾನಗಳನ್ನು ಮರೆತಿಲ್ಲ. ಬದಲಾಗಿ, ಕ್ಷೇತ್ರದ ಜನರ ನೋವಿನಲ್ಲಿ ಭಾಗಿಯಾಗಿದ್ದಾರೆ. ಅಂದಹಾಗೆ, ಇಂದಷ್ಟೇ ನಿಧನರಾದ ಮುಂಡಗೋಡ ತಾಲೂಕಿನ ಉಗ್ಗಿನಕೇರಿ ಗ್ರಾಮದ ಹಿರಿಯ ಸಹಕಾರಿ ಧುರೀಣ ಬಸಯ್ಯ ನಡುವಿನಮನಿ ಯವರ ಪಾರ್ಥೀವ ಶರೀರದ ಅಂತಿಮ ದರ್ಶನ ಪಡೆದುಕೊಂಡ್ರು. ಅಲ್ದೆ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದ್ರು. ರಾಜ್ಯಸಭಾ ಚುನಾವಣೆ ಹಿನ್ನೆಲೆಯಲ್ಲಿ ಬೆಂಗಳೂರಿಗೆ ತೆರಳಿದ್ದ ಶಾಸಕ ಶಿಚರಾಮ್ ಹೆಬ್ಬಾರ್, ರಾಜ್ಯಸಭಾ ಚುನಾವಣೆಯಲ್ಲಿ ಮತದಾನ ಮಾಡದೇ ಗೈರಾಗಿದ್ದರು. ಇನ್ನೇನು ಸಂಜೆಯಷ್ಟೊತ್ತಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬಹುದಾಗಿದ್ದ ಮಾತುಗಳೂ ಕೇಳಿಬಂದಿದ್ದವು. ಆದ್ರೆ, ಸದ್ಯ ಶಾಸಕ ಶಿವರಾಮ್ ಹೆಬ್ಬಾರ್ ಸ್ವ ಕ್ಷೇತ್ರಕ್ಕೆ ವಾಪಸ್ ಬಂದಿದ್ದು, ಮುಂದಿನ ನಡೆಯ ಬಗ್ಗೆ ಕುತೂಹಲ ಕೆರಳಿಸಿದೆ.
ಉಗ್ನಿಕೇರಿಯ ಸಹಕಾರಿ ಧುರೀಣ ಬಸಯ್ಯ ನಡುವಿನಮನಿ (ಹಂಡೆ ಬಸಯ್ಯ) ವಿಧಿವಶ..!
ಮುಂಡಗೋಡ ತಾಲೂಕಿನ ಹಿರಿಯ ಸಹಕಾರಿ ಧುರೀಣ, ಉಗ್ನಿಕೇರಿ ಗ್ರಾಮದ ಬಸಯ್ಯ ಫಕ್ಕೀರಯ್ಯ ನಡುವಿನಮನಿ(86) ವಿಧಿವಶರಾಗಿದ್ದಾರೆ. ವಯೋಸಹಜ ಅನಾರೋಗ್ಯದಿಂದ ಬಳಲಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಬಸಯ್ಯ ನಡುವಿನಮನಿ, ಇಂದು ಚಿಕಿತ್ಸೆ ಫಲಕಾರಿಯಾಗದೆ ನಿಧನರಾಗಿದ್ದಾರೆ ಅಂತಾ ಕುಟುಂಬದ ಮೂಲಗಳು ಮಾಹಿತಿ ನೀಡಿದ್ದಾರೆ. ಇಂದೂರು ಸೊಸೈಟಿಯ ಅಧ್ಯಕ್ಷರಾಗಿ, ಮುಂಡಗೋಡ PLD ಬ್ಯಾಂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದ ಮೃತರು, ತಾಲೂಕಿನ ಸಹಕಾರಿ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ್ದರು. ಹಂಡೆ ಬಸಯ್ಯ ಅಂತಲೇ ತಾಲೂಕಿನಲ್ಲಿ ಚಿರಪರಿಚಿತರಾಗಿದ್ದರು. ಮೃತರು ಮೂವರು ಸಹೋದರರು, ಮೂವರು ಸಹೋದರಿಯರು, ಇಬ್ಬರು ಪುತ್ರರು, ಇಬ್ಬರು ಪುತ್ರಿಯರು ಹಾಗೂ ಅಪಾರ ಬಂದು ಬಳಗವನ್ನು ಅಗಲಿದ್ದಾರೆ. ಮೃತರ ಅಗಲಿಕೆಗೆ ತಾಲೂಕಿನ ಹಲವರು ಸಂತಾಪ ಸೂಚಿಸಿದ್ದಾರೆ. ಅಂದಹಾಗೆ, ನಾಳೆ ಮದ್ಯಾನ 1 ಗಂಟೆಗೆ ತಾಲೂಕಿನ ಉಗ್ನಿಕೇರಿಯಲ್ಲಿ ಮೃತರ ಅಂತ್ಯಕ್ರಿಯೆ ನೆರವೇರಲಿದೆ ಅಂತಾ ತಿಳಿದು ಬಂದಿದೆ.
ಇವತ್ತೇ ಬಿಜೆಪಿಗೆ ಗುಡ್ ಬೈ ಹೇಳ್ತಾರಾ ಶಾಸಕ ಶಿವರಾಮ್ ಹೆಬ್ಬಾರ್..? ಶಾಸಕರ ಚಾಣಾಕ್ಷ ನಡೆ ಇನ್ನೂ ನಿಗೂಢ..!
ಇದು ಯಲ್ಲಾಪುರ ಕ್ಷೇತ್ರದ ಮಟ್ಟಿಗೆ ಬಿಗ್ ಬ್ರೇಕಿಂಗ್ ಸುದ್ದಿ.. ಯಲ್ಲಾಪುರ ಕ್ಷೇತ್ರದ ಬಿಜೆಪಿ ಶಾಸಕ ಶಿವರಾಮ್ ಹೆಬ್ಬಾರ್ ಇಂದು ಸಂಜೆಯೇ ಬಿಜೆಪಿಗೆ ಗುಡ್ ಬೈ ಹೇಳ್ತಾರಾ..? ತಮ್ಮ ಶಾಸಕ ಸ್ಥಾನಕ್ಕೂ ರಾಜೀನಾಮೆ ನೀಡಲಿದ್ದಾರೆ..? ಅನ್ನೋ ಅನುಮಾನಗಳು ಶುರುವಾಗಿವೆ. ಯಶವಂತಪುರ ಬಿಜೆಪಿ ಶಾಸಕ ಎಸ್.ಟಿ.ಸೋಮಶೇಕರ್ ಹಾಗೂ ಶಿವರಾಮ್ ಹೆಬ್ಬಾರ್ ಇಂದು ಸಂಜೆಯೇ ಶಾಸಕ ಸ್ಥಾನಕ್ಕೆ ಹಾಗೂ ಬಿಜೆಪಿ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಬೀಸಾಕಿ, ಕಾಂಗ್ರೆಸ್ ಕೈ ಹಿಡಿಯಲಿದ್ದಾರೆ ಅನ್ನೋ ಮಾಹಿತಿಗಳು ಲಭ್ಯವಾಗ್ತಿವೆ. ಇನ್ನು, ಇವತ್ತು ನಡೆಯುತ್ತಿರೋ ರಾಜ್ಯಸಭಾ ಚುನಾವಣೆಯಲ್ಲಿ ಈಗಾಗಲೇ ಎಸ್.ಟಿ.ಸೋಮಶೇಖರ್ ಬಿಜೆಪಿ ವಿರುದ್ಧ ಅಡ್ಡಮತದಾನ ಮಾಡಿದ್ದು, ಈಗಾಗಲೇ ಕಾಂಗ್ರೆಸ್ ಪಡಸಾಲೆಯಲ್ಲಿ ಕಾಲಿಟ್ಟಂತೆ ಆಗಿದೆ. ಅದೇ ರೀತಿ ಸಂಜೆಯಷ್ಟೊತ್ತಿಗೆ ಶಾಸಕ ಶಿವರಾಮ್ ಹೆಬ್ಬಾರ್ ರವರೂ ಕೂಡ ಅಡ್ಡ ಮತದಾನ ಮಾಡುವ ಎಲ್ಲಾ ಸಾಧ್ಯತೆಗಳೂ ಇದ್ದು, ಸಂಜೆಯ ವೇಳೆಗೆ ಸ್ಪಷ್ಟ ಚಿತ್ರಣ ಸಿಗಲಿದೆ. ಅಂದಹಾಗೆ, ಸದ್ಯ ರಾಜ್ಯಸಭಾ ಚುನಾವಣೆಗಾಗಿ ಕಾದು ಕುಳಿತಿದ್ದ ಶಿವರಾಮ್ ಹೆಬ್ಬಾರ್, ಚುನಾವಣೆ ಬಳಿಕ ಕಾಂಗ್ರೆಸ್ ಸೇರುವ ಪ್ಲಾನ್ ಮಾಡಿದ್ದರು ಎನ್ನಲಾಗಿದೆ....
“ಸಂಪಾಯಿತಲೇ ಪರಾಕ್” ಶ್ರೀಕ್ಷೇತ್ರ ಮೈಲಾರದ ಈ ವರ್ಷದ ಕಾರಣೀಕ..!
ಸಂಪಾಯಿತಲೇ ಪರಾಕ್” ಇದು ಪ್ರಸಕ್ತ ವರ್ಷದ ಶ್ರೀ ಕ್ಷೇತ್ರ ಮೈಲಾರಲಿಂಗನ ಕಾರಣಿಕ ನುಡಿ. ಹೂವಿನ ಹಡಗಲಿ ತಾಲೂಕಿನ ಮೈಲಾರ ಗ್ರಾಮದ ಡೆಂಕನಮರಡಿಯಲ್ಲಿ ಸೋಮವಾರ ಸಂಜೆ ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ಗೊರವಯ್ಯ ಕಾರಣೀಕ ನುಡಿದಿದ್ದಾರೆ. ಲಕ್ಷಾಂತರ ಭಕ್ತರ ನಡುವೆ ಸರಸರನೇ ಬಿಲ್ಲನ್ನೇರಿದ ವರ್ಷದ ಭವಿಷ್ಯ ವಾಣಿ ನುಡಿಯುವ ಗೊರವಯ್ಯ ರಾಮಣ್ಣ ಸದ್ದಲೇ ಎನ್ನುತ್ತ ದೇವವಾಣಿ ಎನ್ನಲಾಗುವ ವರ್ಷದ ದೇವವಾಣಿ “ಸಂಪಾಯಿತಲೇ ಪರಾಕ್” ಕಾರ್ಣಿಕದ ನುಡಿ ನುಡಿದರು. ಈ ಭವಿಷ್ಯವಾಣಿ ಆಡಳಿತದ ಏಳುಬೀಳು ಹಾಗೂ ಪ್ರಕೃತಿ ಬದಲಾವಣೆ ಮುನ್ಸೂಚನೆ ಎನ್ನುವುದು ಭಕ್ತರ ನಂಬಿಕೆಯಾಗಿದೆ. ಸೋಮವಾರ ಪ್ರಾತಃಕಾಲ 4 ರಿಂದ ಮೈಲಾರಲಿಂಗೇಶ್ವರ, ಗಂಗಿ ಮಾಳಮ್ಮ ಹಾಗೂ ಹೆಗ್ಗಪ್ಪ ದೇವರ ಉತ್ಸವ ಡೆಂಕನಮರಡಿಗೆ ಗುಪ್ತ ಮೌನ ಸವಾರಿ ಕಾರ್ಯಕ್ರಮಗಳು ನಡೆದವು. ಭಾರತ ಹುಣ್ಣಿಮೆ ಮೈಲಾರಲಿಂಗೇಶ್ವರನ ಭಕ್ತರಿಗೆ ಮಹತ್ವದ ಹುಣ್ಣಿಮೆಯಾಗಿದ್ದು, ಪ್ರಸಕ್ತ ವರ್ಷವು ಭಾರತ ಹುಣ್ಣಿಮೆಗೆ ಮೈಲಾರಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದರು. ನಾಲೈದು ದಿನಗಳ ಕಾಲ ಭಕ್ತರು ಕ್ಷೇತ್ರದಲ್ಲಿದ್ದು, ಸಾಂಪ್ರದಾಯಕ ಪೂಜೆ ಕೈಂಕರ್ಯ ಕೈಗೊಂಡು ಶ್ರೀಸ್ವಾಮಿಯ ದರ್ಶನ...
ಮುಂಡಗೋಡಿಗೆ ಸ್ಲಂ ಬೋರ್ಡ್ ಅಧ್ಯಕ್ಷ ಪ್ರಸಾದ್ ಅಬ್ಬಯ್ಯ ಭೇಟಿ ಹಿಂದೆ, ಹೆಬ್ಬಾರ್ ಸಾಹೇಬ್ರು “ಕೈ” ಹಿಡಿಯುವ ಮುಹೂರ್ತ ಫಿಕ್ಸ್..?
ಮುಂಡಗೋಡ ಹಾಗೂ ಯಲ್ಲಾಪುರ ಪಟ್ಟಣಕ್ಕೆ ಇಂದು ಕರ್ನಾಟಕ ಸ್ಲಂ ಬೋರ್ಡ್ ಅಧ್ಯಕ್ಷ, ಕಾಂಗ್ರೆಸ್ ಶಾಸಕ ಪ್ರಸಾದ್ ಅಬ್ಬಯ್ಯ ಭೇಟಿ ನೀಡಿದ್ರು. ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯ ವತಿಯಿಂದ ಮುಂಡಗೋಡ ಹಾಗೂ ಯಲ್ಲಾಪುರದಲ್ಲಿ ನಿರ್ಮಾಣವಾಗುತ್ತಿರುವ ಜಿ + 2 ಮಾದರಿಯ ಆಶ್ರಯ ವಸತಿ ಸಮುಚ್ಚಯಗಳ ಕಾಮಗಾರಿ ಪರಿಶೀಲನೆ ನಡೆಸಿ, ಕಾಮಗಾರಿಯ ಪ್ರಗತಿ ಬಗ್ಗೆ ಅಧಿಕಾರಿಗಳಿಂದ ಮಾಹಿತಿ ಪಡೆದ್ರು. ಅಸಲು ಶಾಸಕ ಶಿವರಾಮ್ ಹೆಬ್ಬಾರ್ ಹಾಗೂ ಮಾಜಿ ಶಾಸಕ ವಿ.ಎಸ್. ಪಾಟೀಲ್ ಈ ವೇಳೆ ಸ್ಲಂ ಬೋರ್ಡ್ ಅಧ್ಯಕ್ಷರಿಗೆ ಸಾಥ್ ನೀಡಿದ್ರು. ಇದು ಸತ್ಯ..! ಅಸಲು, ಇವತ್ತಿನ ಕಾರ್ಯಕ್ರಮ ನೋಡಿದ್ರೆ ಹೆಬ್ಬಾರ್ ಸಾಹೇಬ್ರು ಕಾಂಗ್ರೆಸ್ ಪಡಸಾಲೆಯಲ್ಲಿ ಬಹುತೇಕ ಹೆಜ್ಜೆ ಇಟ್ಟು ತಳವೂರಿಯೂ ಆಗಿದೆ ಅನಿಸತ್ತೆ. ಇನ್ನೇನು ಲೋಕಸಭಾ ಚುನಾವಣೆಯ ನೀತಿ ಸಂಹಿತೆ ಜಾರಿಯಾದ ಗಳಿಗೆಯಲ್ಲೇ ಕಾಂಗ್ರೆಸ್ ಸೇರ್ಪಡೆಯ ಮುಹೂರ್ತ ಫಿಕ್ಸ್ ಆಗಲಿದೆ ಅನ್ನೋ ಮಾತುಗಳಿಗೆ ಪುಷ್ಟಿ ಸಿಕ್ಕಿದೆ. ಅದ್ರಲ್ಲೂ, ಕಳೆದ ಚುನಾವಣೆಯಲ್ಲಿ ಪರಸ್ಪರ ಎದುರಾಳಿಗಳಾಗಿ ಹಾವು ಮುಂಗುಸಿಯಂತೆ ಆಡುತ್ತಿದ್ದ ವಿ.ಎಸ್.ಪಾಟೀಲರು ಹಾಗೂ ಶಿವರಾಮ್ ಹೆಬ್ಬಾರರು...
ಪಾಳಾ ಹತ್ತಿರ ಅಪಘಾತದಲ್ಲಿ ಗಾಯಗೊಂಡಿದ್ದ ವ್ಯಕ್ತಿಯೂ ಸಾವು..! ಬೈಕ್ ಸವಾರರಿಬ್ಬರೂ ದುರ್ಮರಣ..!
ಮುಂಡಗೋಡ ತಾಲೂಕಿನ ಪಾಳಾ ಹತ್ತಿರ KSRTC ಬಸ್ ಹಾಗೂ ಬೈಕ್ ನಡುವೆ, ಮುಕಾಮುಖಿ ಡಿಕ್ಕಿಯಾಗಿ ಗಂಭೀರ ಗಾಯಗೊಂಡಿದ್ದ ವ್ಯಕ್ತಿಯೂ ಮೃತಪಟ್ಟಿದ್ದಾನೆ. ಮುಂಡಗೋಡ ತಾಲೂಕಾಸ್ಪತ್ರೆಗೆ ಚಿಕಿತ್ಸೆಗೆಂದು ರವಾನಿಸುತ್ತಿದ್ದ ವೇಳೆ ಮೃತಪಟ್ಟಿದ್ದಾನೆ ಅಂತಾ ಮಾಹಿತಿ ತಿಳಿದು ಬಂದಿದೆ. ಈ ಮೂಲಕ ಘಟನೆಯಲ್ಲಿ ಸಾವಿನ ಸಂಖ್ಯೆ ಎರಡಕ್ಕೆ ಏರಿದಂತಾಗಿದೆ. ಅಂದಹಾಗೆ, ಹಾವೇರಿ ಜಿಲ್ಲೆಯ ಹಾನಗಲ್ ತಾಲೂಕಿನ ಹುಡೆ ಗ್ರಾಮದ ಜಾಫರ್ ದೇವಸೂರ್(32) ಎಂಬುವವನೇ ಘಟನೆಯಲ್ಲಿ ಮೃತಪಟ್ಟ ಮತ್ತೋರ್ವ ವ್ಯಕ್ತಿಯಾಗಿದ್ದಾನೆ. ಇನ್ನು ಘಟನೆಯಲ್ಲಿ ಹಾನಗಲ್ ತಾಲೂಕಿನ ಆರೆಗೊಪ್ಪ ಗ್ರಾಮದ ಮಾಹಬಲೇಶ್ವರ ಸಂಕಪಾಳೆ(38) ಸ್ಥಳದಲ್ಲೇ ಮೃತಪಟ್ಟಿದ್ದ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.