ಮುಂಡಗೋಡ: ತಾಲೂಕಿನಲ್ಲಿ ಈಗ ಬರೀ ರಾಜಕೀಯದ್ದೇ ಹವಾ. ಇನ್ನೇನು ತಾಲೂಕಾ ಪಂಚಾಯತಿ ಹಾಗೂ ಜಿಲ್ಲಾ ಪಂಚಾಯತಿ ಚುನಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕು, ಮೀಸಲಾತಿಗಳೂ ಪ್ರಕಟವಾಗಿದೆ. ಹೀಗಾಗಿ, ಎಲ್ಲೇಲ್ಲೂ ರಾಜಕೀಯ ಚರ್ಚೆ ಶುರುವಾಗಿದೆ. ಅದ್ರಂತೆ ಇವತ್ತು ನಾವು ಹುನಗುಂದ ತಾಪಂ ಕ್ಷೇತ್ರದ ಹಕೀಕತ್ತು ನಿಮ್ಮ ಮುಂದೆ ಇಡ್ತಿದಿವಿ. ಇದು ಹುನಗುಂದ ಕ್ಷೇತ್ರ..! ಅಂದಹಾಗೆ, ಹುನಗುಂದ ತಾಪಂ ಕ್ಷೇತ್ರ ಹುನಗುಂದ, ಅಗಡಿ, ಅತ್ತಿವೇರಿ, ಗೌಳಿದಡ್ಡಿ ಗ್ರಾಮಗಳನ್ನು ಒಳಗೊಂಡಿದೆ. ಗ್ರಾಮ ಪಂಚಾಯತಿ ಆಡಳಿತ ಸಧ್ಯ ಕಾಂಗ್ರೆಸ್ ಬೆಂಬಲಿತರ “ಕೈ” ಯಲ್ಲಿದೆ. ಹೀಗಿದ್ದಾಗಲೂ ಇಲ್ಲಿ ಬಿಜೆಪಿ ಪ್ರಭಾವ ತುಸು ಜಾಸ್ತಿನೇ ಇದೆ. ಆದ್ರೆ ಸ್ಥಳೀಯ ಮಟ್ಟದ ಆಂತರಿಕ ಬೇಗುದಿ ಅನ್ನೋದು, ಬಹುಶಃ ಇಲ್ಲಿನ ಬಿಜೆಪಿಗೆ ಒಂದಿಷ್ಟು ಹಿನ್ನಡೆ ತಂದಿದೆ. ಇದು ಇತ್ತಿಚೆಗಷ್ಟೇ ನಡೆದ ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಜಗಜ್ಜಾಹೀರಾಗಿದೆ. ಎಡಗೈಯನ್ನ ಬಲಗೈ, ಬಲಗೈಯನ್ನ ಎಡಗೈ ನಂಬದ ಸ್ಥಿತಿಯಲ್ಲಿ ಬಿಜೆಪಿ ಪರದಾಡಿದೆ ಈ ಕಾರಣಕ್ಕಾಗೇ, ಅನಾಯಾಸವಾಗಿ ದಕ್ಕಬೇಕಿದ್ದ ಗ್ರಾಮ ಪಂಚಾಯತಿ ಆಡಳಿತ ಇಲ್ಲಿನ ಬಿಜೆಪಿಗರಿಗೆ ಕೈತಪ್ಪಿ ಹೋಗಿದೆ. ತಾಪಂ...
Top Stories
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ನಂದಿಕಟ್ಟಾ ತಾಪಂ ಕ್ಷೇತ್ರ; ಬಿಜೆಪಿಗೆ ಟಿಕೆಟ್ ಆಕಾಂಕ್ಷಿಗಳ ತಲೆಬಿಸಿ, ಕಾಂಗ್ರೆಸ್ ಗೆ ವರವಾಗೋ ಖುಶಿ..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ತಾಲೂಕಾ ಪಂಚಾಯತಿ ಮತಕ್ಷೇತ್ರ ಬಿರುಸುಗೊಂಡಿದೆ. ಇನ್ನೂ ಚುನಾವಣೆಯೇ ಘೋಷಣೆಯಾಗಿಲ್ಲ, ಮೀಸಲಾತಿ ಪ್ರಕಟವಾಗ್ತಿದ್ದಂತೆ ರಾಜಕೀಯ ಚದುರಂಗದಾಟಗಳು ತೆರೆಮರೆಯಲ್ಲೇ ಚಾಲ್ತಿ ಪಡೆದುಕೊಂಡಿವೆ. ಬಿಜೆಪಿ ತಲೆಬಿಸಿ..! ಅಂದಹಾಗೆ, ನಂದಿಕಟ್ಟಾ ತಾಪಂ ಕ್ಷೇತ್ರಕ್ಕೆ ” ಸಾಮಾನ್ಯ” ಮೀಸಲಾತಿ ಪ್ರಕಟಗೊಂಡಿದೆ. ಹೀಗಾಗಿ, ಇಲ್ಲಿನ ಬಿಜೆಪಿಯಲ್ಲಿ ಈಗಾಗಲೇ ಟಿಕೆಟ್ ಪಡೆಯಲು ಇನ್ನಿಲ್ಲದ ಕಸರತ್ತುಗಳು ಜಾರಿಯಲ್ಲಿವೆ. ಹಾಗೆ ಆಕಾಂಕ್ಷಿತರ ಪಟ್ಟಿ ಹನುಂಮತನ ಬಾಲದಂಗಿದೆ. ಈ ಸಾರಿ ನಾನೂ ಒಂದು ಕೈ ನೋಡೇ ಬಿಡ್ತಿನಿ ಅಂತಾ ಆಕಾಂಕ್ಷಿಗಳು ತೋಳು ಏರಿಸಿಕೊಂಡು ಸನ್ನದ್ದವಾಗಿದ್ದಾರೆ. ಆದ್ರೆ ಆ ಇಬ್ಬರು ಆಕಾಂಕ್ಷಿಗಳ ನಡುವೆ ಮಾತ್ರ ಕೊಂಚ ಜಾಸ್ತಿ ಪೈಪೋಟಿ ಏರ್ಪಟ್ಟಿದ್ದು, ಆ ಇಬ್ಬರಲ್ಲಿ, ಒಬ್ಬರಿಗೆ ಟಿಕೆಟ್ ಪಕ್ಕಾ ಅನ್ನಲಾಗ್ತಿದೆ. ಕಲ್ಲನಗೌಡ್ರು ಕಣಕ್ಕಿಳಿತಾರಾ..? ನಂದಿಕಟ್ಟಾ ಗ್ರಾಮ ಪಂಚಾಯತಿಗೆ ಎರಡೆರಡು ಬಾರಿ ನಿಂತು ಜಯಭೇರಿ ಬಾರಿಸಿದ್ದ ಕಲ್ಲನಗೌಡ ಬಸನಗೌಡ್ರು ಅದ್ಯಾಕೋ ಏನೋ ಈ ಬಾರಿ ಗ್ರಾಮ ಪಂಚಾಯತಿ ಚುನಾವಣೆಗೆ ಸ್ಪರ್ಧಿಸಿ ಮಕಾಡೆ ಮಲಗಿದ್ರು. ಯಾಕೋ ಗೊತ್ತಿಲ್ಲ, ನಂದಿಕಟ್ಟಾ ಗ್ರಾಮದಲ್ಲಿ ಅವ್ರ ವಾರ್ಡಿನ ಜನ ಅವರನ್ನ ಬೆಂಬಲಿಸಲೇ...
ಸದಾನಂದಗೌಡ ಸಿಎಂ ಪಟ್ಟಕ್ಕೇರೋದು ಪಕ್ಕಾನಾ..? ಅಷ್ಟಕ್ಕೂ ಬಿಜೆಪಿ ಹೈಕಮಾಂಡ್ ಲೆಕ್ಕಾಚಾರವೇನು..?
ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಕೂಗು ಕೇಳಿಬರುತ್ತಿರೋ ಬೆನ್ನಲ್ಲೇ ಬಿಜೆಪಿ ಹೈಕಮಾಂಡ್ ಸಿಎಂ ಬದಲಾವಣೆಗೆ ಮುಂದಾಗಿದೆ ಎನ್ನಲಾಗ್ತಿದೆ. ಯಡಿಯೂರಪ್ಪ ಹುದ್ದೆಯಿಂದ ಕೆಳಗಿಳಿದ್ರೆ ಸಿಎಂ ಯಾರು ಅನ್ನೋ ಪ್ರಶ್ನೆಗೆ ಹೈಕಮಾಂಡ್ ಪರೋಕ್ಷವಾಗಿ ಉತ್ತರ ನೀಡಿದ್ದು, ಸಂಸದ ಡಿ.ವಿ.ಸದಾನಂದ ಗೌಡ ಎರಡನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗೋದು ಬಹುತೇಕ ಪಕ್ಕಾ ಅನ್ನುವಂತಾಗಿದೆ. ಬಿಜೆಪಿ ಒಡೆದ ಮನೆ..! ನಾಯಕತ್ವದ ವಿಚಾರದಲ್ಲಿಯೇ ಬಿಜೆಪಿ ಸದ್ಯ ಒಡೆದ ಮನೆ. ಸಿಎಂ ಯಡಿಯೂರಪ್ಪ ಅವರನ್ನು ಹುದ್ದೆಯಿಂದ ಕೆಳಗಿಳಿಸಲು ವಿರೋಧಿ ಪಾಳಯ ಶತಾಯಗತಾಯ ಪ್ರಯತ್ನ ನಡೆಸ್ತಿದೆ. ಈ ನಡುವಲ್ಲೇ ಯಡಿಯೂರಪ್ಪ ಅವರನ್ನು ಗೌರವಯುತವಾಗಿ ಬೀಳ್ಕೊಡಲು ಹೈಕಮಾಂಡ್ ಮುಂದಾಗಿದೆ. ರಾಜ್ಯದಲ್ಲಿ ಸಿಎಂ ಹುದ್ದೆಗೆ ಒಂದಿಷ್ಟು ಮಂದಿಯ ಹೆಸರು ಕೇಳಿಬರುತ್ತಿದೆ. ಆದ್ರೆ ಆ ಹೆಸರುಗಳ ಕುರಿತು ಪಕ್ಷದಲ್ಲಿಯೇ ವಿರೋಧವಿದೆ. ಬಣದ ಶಾಸಕರನ್ನು ಸಿಎಂ ಹುದ್ದೆಯಲ್ಲಿ ಕೂರಿಸಿದ್ರೆ ಸರಕಾರಕ್ಕೆ ಡ್ಯಾಮೇಜ್ ಆಗೋದು ಖಚಿತ. ಇನ್ನೊಂದೆಡೆ ಪಕ್ಷದ ಬಂಡಾಯ ನಾಯಕರ ಜೊತೆಗೆ ಮುಂದಿನ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲೇ ಬೇಕಾದ ಸ್ಥಿತಿಯಲ್ಲಿದೆ ಬಿಜೆಪಿ. ಹೀಗಾಗಿ ಬಂಡಾಯದ ಜೊತೆಗೆ ಪಕ್ಷವನ್ನು ಮುನ್ನಡೆಸುವ ಸಮರ್ಥರನ್ನು...
ಮುಂಡಗೋಡಿಗೆ ಡಿಕೆಶಿ ಭೇಟಿ, ಹೂವಿನ ಮಳೆ ಸುರಿಸಿ ಕಾರ್ಯಕರ್ತರ ಉತ್ಸಾಹ..!
ಮುಂಡಗೋಡ: ಉತ್ತರ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಹಮ್ಮಿಕೊಂಡಿದ್ದ ಸೈಕಲ್ ಜಾಥಾ ಪ್ರತಿಭಟನೆಗೆ ಆಗಮಿಸಿದ್ದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಂಡಗೋಡ ಪಟ್ಟಣಕ್ಕೆ ಭೇಟಿ ನೀಡಿದ್ರು. ಶಿರಸಿಯಿಂದ ಹುಬ್ಬಳ್ಳಿಗೆ ತೆರಳುವ ವೇಳೆ ಮುಂಡಗೋಡ ಪಟ್ಟಣದಲ್ಲೂ ಕೆಲಹೊತ್ತು ನಿಂತು ಕಾರ್ಯಕರ್ತರನ್ನು ಭೇಟಿ ಮಾಡಿದ್ರು. ಡಿಕೆಶಿ ಬರ್ತಿದ್ದಾರೆ ಅಂತಾ ಮಾಹಿತಿ ತಿಳಿದು ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ನೂರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಯುವ ಕಾರ್ಯಕರ್ತರು ಜಮಾವಣೆ ಆಗಿದ್ರು. ಡಿ.ಕೆ.ಶಿವಕುಮಾರ್ ಬರುತ್ತಿದ್ದಂತೆ ಘೋಷಣೆ ಕೂಗಿ ಹೂವಿನ ಮಳೆ ಸುರಿಸಿದ್ರು. ಹಾರ ಹಾಕಿ ಸನ್ಮಾನಿಸಿದ್ರು. ಕೆಲಹೊತ್ತು ಕಾರ್ಯಕರ್ತರೊಂದಿಗೆ ಮಾತನಾಡಿದ ಡಿಕೆಶಿ ಮುಂದೆ ಪ್ರಯಾಣ ಬೆಳೆಸಿದ್ರು.
ಬೆಲೆ ಏರಿಕೆ ವಿರುದ್ಧ ಕಲಘಟಗಿಯಲ್ಲಿ ಸಂತೋಷ್ ಲಾಡ್ ನೇತೃತ್ವದಲ್ಲಿ ಬೃಹತ್ ಸೈಕಲ್ ಜಾಥಾ..!
ಕಲಘಟಗಿ: ಪೆಟ್ರೊಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಸೈಕಲ್ ಜಾಥಾವನ್ನ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಮಾಡಲಾಯಿತು. ಸೈಕಲ್ ಜಾಥಾ ಜೊತೆಗೆ ಸಂತೋಷ್ ಲಾಡ್ ಒಂಟೆ, ಕುದುರೆ ಹಾಗೂ ಎತ್ತಿನ ಬಂಡಿಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದು ರಾಜ್ಯದಲ್ಲೇ ವಿನೂತನವಾಗಿತ್ತು. ಅಲ್ಲದೇ ಎತ್ತಿನ ಬಂಡೆಯ ಮೇಲೆ ಬೈಕ್ ಇಟ್ಟು ಆಕ್ರೋಶವನ್ನ ಲಾಡ್ ವ್ಯಕ್ತ ಪಡಿಸಿದರು, ಇನ್ನು ಬಡವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಅಂತಾ, ಕೇಂದ್ರ ಸರ್ಕಾರದ ವಿರುದ್ಧ ಕೈ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು. ದಾಸ್ತಿಕೊಪ್ಪ ಪೆಟ್ರೊಲ್ ಬಂಕ್ ನಿಂದ ತಹಶೀಲ್ದಾರ್ ಕಚೇರಿವರೆಗೆ ನಡೆದ ಜಾಥಾದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ರು. ಎತ್ತಿನ ಬಂಡಿಯ ಮೇಲೆ ಬೈಕ್ಗಳನ್ನಿಟ್ಟು ಜನರು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸಚಿವ ಸಂಪುಟದಲ್ಲಿ ನೂತನ ಸಚಿವರ ಲಿಸ್ಟ್ ಇಲ್ಲಿದೆ ನೋಡಿ..!
ನವದೆಹಲಿ:ಕೇಂದ್ರ ಸಚಿವ ಸಂಪುಟ ಪುನಾರಚನೆಗೆ ಕ್ಷಣಗಣನೆ ಆರಂಭವಾಗಿದ್ದು, 43 ನೂತನ ಸಚಿವರ ಪಟ್ಟಿ ಬಿಡುಗಡೆಯಾಗಿದೆ. ರಾಜ್ಯದ ನಾಲ್ವರು ಸಂಸದರಿಗೆ ಪ್ರಧಾನಿ ಮೋದಿ ಸಂಪುಟದಲ್ಲಿ ಸ್ಥಾನ ನೀಡಲಾಗಿದೆ. ಡಿ.ವಿ ಸದಾನಂದಗೌಡ, ಡಾ.ಹರ್ಷವರ್ಧನ್ ಸೇರಿದಂತೆ 11 ಸಚಿವರಿಗೆ ಸಂಪುಟದಿಂದ ಕೊಕ್ ನೀಡಲಾಗಿದೆ. ನೂತನ ಸಚಿವರ ಪಟ್ಟಿ ಇಂತಿದೆ. 1.ಶೋಭಾ ಕರಂದ್ಲಾಜೆ 2.ರಾಜೀವ್ ಚಂದ್ರಶೇಖರ್ 3.ಭಗವಂತ ಖೂಬಾ 4.ಎ.ನಾರಾಯಣಸ್ವಾಮಿ 5.ನಾರಾಯಣ್ ರಾಣೆ 6.ಸರ್ಬಾನಂದ್ ಸೋನೊವಾಲ್ 7.ವಿರೇಂದ್ರ ಕುಮಾರ್ 8.ಜ್ಯೋತಿರಾದಿತ್ಯ ಸಿಂಧ್ಯಾ 9.ರಾಮಚಂದ್ರ ಪ್ರಸಾದ್ ಸಿಂಗ್ 10.ಅಶ್ವಿನಿ ವೈಷ್ಣವ್ 11.ಪಶುಪತಿ ಕುಮಾರ್ ಪರಸ್ 12.ಕಿರಣ್ ರಿಜುಜು 13.ರಾಜ್ ಕುಮಾರ್ ಸಿಂಗ್ 14.ಹರ್ದೀಪ್ ಸಿಂಗ್ ಪುರಿ 15.ಮುನುಷ್ಕ್ ಮಂಡವಿಯಾ 16.ಭೂಪೇಂದ್ರ ಯಾದವ್ 17.ಪುರುಷೋತ್ತಮ್ ರೂಪಾಲ 18.ಜಿ.ಕೃಷ್ಣಾ ರೆಡ್ಡಿ 19.ಅನುರಾಗ್ ಸಿಂಗ್ ಠಾಕೂರ್ 20.ಪಂಕಜ್ ಚೌದರಿ 21.ಅನುಪ್ರಿಯ ಸಿಂಗ್ ಪಟೇಲ್ 22.ಸತ್ಯಪಾಲ್ ಸಿಂಗ್ 23.ಭಾನುಪ್ರತಾಪ್ ಸಿಂಗ್ ವರ್ಮಾ 24.ದರ್ಶನ್ ವಿಕ್ರಮ್ ಜಾರ್ದೋಷ್ 25.ಮೀನಾಕ್ಷಿ ಲೇಖಿ 26.ಅನ್ನಪೂರ್ನ ದೇವಿ 27.ಕೌಶಾಲ್ ಕಿಶೋರ್ 28.ಅಜಯ್ ಭಟ್ 29.ಬಿ.ಎಲ್.ವರ್ಮಾ 30.ಅಜಯ್ ಕುಮಾರ್ 31.ಚೌಹಾಣ್ ದೇವುಸಿನ್...
ತೈಲ ಬೆಲೆ ಏರಿಕೆಗೆ ಖಂಡನೆ: ಶಿರಸಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ; ಸೈಕಲ್ ಏರಿ ಡಿಕೆಶಿ ಆಕ್ರೋಶ..!
ಶಿರಸಿ: ನಗರದಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ವಿರುದ್ಧ, ತೈಲ ಬೆಲೆ ಏರಿಕೆ ಖಂಡಿಸಿ ಸೈಕಲ್ ಜಾಥಾ ನಡೆಯಿತು. ಕೋವಿಡ್ ನಿಯಮ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಸೈಕಲ್ ಜಾಥಾಗೆ ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿರಲಿಲ್ಲ. ಆದರೂ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತ ಪಡಿಸಿದ್ರು. ಕಾಂಗ್ರೆಸ್ ಹಿರಿಯ ಮುಖಂಡ ಆರ್. ವಿ.ದೇಶಪಾಂಡೆ ಸೇರಿದಂತೆ ಹಲವು ಮುಖಂಡರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ರು.
ಇದು ಮುಂಡಗೋಡ ಕಾಂಗ್ರೆಸ್ ಹಕೀಕತ್ತು..! ಯುವ ಪಡೆಗೆ “ಗದ್ದುಗೆ” ಪ್ರಿಯರದ್ದೇ ಆಪತ್ತು..! ಇನ್ನಾದ್ರೂ ಎದ್ದೇಳತ್ತಾ “ಕೈ” ಪಡೆ..?
ಮುಂಡಗೋಡ ತಾಲೂಕಿನಲ್ಲಿ ಕಾಂಗ್ರೆಸ್ ಇನ್ನೂ ಉಸಿರಾಡ್ತಿದೆಯಾ..? ಇಂತಹದ್ದೊಂದು ಪ್ರಶ್ನೆ ಬಹುತೇಕ ಕ್ಷೇತ್ರದ ಜನರಲ್ಲಿದೆ. ಯಾಕಂದ್ರೆ, ಯಾವಾಗ, ಶಿವರಾಮ್ ಹೆಬ್ಬಾರ್ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಬಾವುಟ ಹಿಡಿದ್ರೊ, ಆ ಕ್ಷಣದಿಂದಲೇ ಇಡೀ ಮುಂಡಗೋಡ ತಾಲೂಕಿನ “ಕೈ” ಪಡೆಯ ಜಂಘಾಬಲವೇ ಕುಗ್ಗಿಹೋಯ್ತು, ಇನ್ನೇನು ತಾಲೂಕಿನಲ್ಲಿ ಕಾಂಗ್ರೆಸ್ ಖತಂ ಆಯ್ತು ಅನ್ನೋ ವಾತಾವರಣ ಇತ್ತು. ಇದು ಇತಿಹಾಸ..! ಹಾಗೆ ನೋಡಿದ್ರೆ, ಇದುವರೆಗೂ ತಾಲೂಕಿನ ಮೂರೂ ಜಿಲ್ಲಾ ಪಂಚಾಯತಿ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಪ್ರಭಲವಾಗಿಯೇ ಇತ್ತು. ಬಿಜೆಪಿ ಯಾವುದೇ ಒಂದು ಕ್ಷೇತ್ರದಲ್ಲೂ ಇದುವರೆಗೂ ಗೆದ್ದ ಇತಿಹಾಸವೇ ಇಲ್ಲ. ತಾಲೂಕಿನಲ್ಲಿ ಬಿಜೆಪಿ ಆಡಳಿತವಿದ್ದು, ವಿ.ಎಸ್.ಪಾಟೀಲ್ ಶಾಸಕಾರಾಗಿದ್ದಾಗಲೂ ಇಲ್ಲಿ ಬಿಜೆಪಿ ವರ್ಕೌಟ್ ಮಾಡಿಕೊಳ್ಳಲು ಸಾಧ್ಯವಾಗಿರಲೇ ಇಲ್ಲ. ಇದಕ್ಕೆ ಕಾರಣ, ಕಾಂಗ್ರೆಸ್ ನಲ್ಲಿದ್ದ ಸ್ಥಳೀಯ ಗಟ್ಟಿನಾಯಕರು. ದೇಶಪಾಂಡೆ, ಹೆಬ್ಬಾರ್ ರಂತವರ ಗಟ್ಟಿ ಮುಂದಾಳತ್ವ ಕಾಂಗ್ರೆಸ್ ತಳಮಟ್ಟದಲ್ಲಿ ಬದ್ರವಾಗುವಂತೆ ಮಾಡಿತ್ತು. ಆದ್ರೆ ಯಲ್ಲಾಪುರ ಕ್ಷೇತ್ರದಲ್ಲಿ ಯಾವಾಗ ರಾಜಕೀಯ ಬದಲಾವಣೆ ಗಾಳಿ ಬೀಸಿ ಹೆಬ್ಬಾರ್ ಕಾಂಗ್ರೆಸ್ ತೊರೆದರೋ ಆ ಕ್ಷಣದಿಂದಲೇ ಇಲ್ಲಿನ...
ಶಿರಸಿಯಲ್ಲಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್ ಸೈಕಲ್ ಸವಾರಿಗೆ ಆರಂಭಿಕ ವಿಘ್ನ..? ನಡಿಯತ್ತಾ ಪ್ರತಿಭಟನೆ..?
ಶಿರಸಿ: ನಗರದಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ನಡೆಸಲಿರೋ ಸೈಕಲ್ ಜಾಥಾ ಗೆ ಆರಂಭಿಕ ವಿಘ್ನ ಎದುರಾಗಿದೆ. ಕೋವಿಡ್ ನಿಯಮ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಸೈಕಲ್ ಜಾಥಾಗೆ ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಅನುಮತಿ ನಿರಾಕರಿಸಲಾಗಿದ್ದು, ಈ ನಡುವೆಯೇ ಕಾಂಗ್ರೆಸ್ ಸೈಕಲ್ ಜಾಥಾ ನಡೆಸಲು ತಯಾರಿ ನಡೆಸಿದೆ. ಈಗಷ್ಟೇ ಶಿರಸಿ ನಗರಕ್ಕೆ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಮೊದಲು ಮಾರಿಕಾಂಬೆಯ ದರ್ಶನ ಪಡೆದ ಡಿಕೆಶಿ, ಆನಂತರದಲ್ಲಿ ಸೈಕಲ್ ಜಾಥಾ ನಡೆಸಲಿದ್ದಾರೆ. ಹೀಗಾಗಿ, ಶಿರಸಿ ಮಾರಿಕಾಂಬೆ ದೇವಸ್ಥಾನದ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊಂಡಿದ್ದಾರೆ. ಕೋವಿಡ್ ನಿಯಮಕ್ಕೆ ಕ್ಯಾರೇ ಎನ್ನದೇ ಜಮಾವಣೆ ಆಗಿರೋ ಕಾರ್ಯಕರ್ತರಿಗೆ ಸೈಕಲ್ ಜಾಥಾ ನಡೆಸಲು ಜಿಲ್ಲಾಡಳಿತ ಮತ್ತೆ ತಡೆ ನೀಡುವ ಸಾಧ್ಯತೆ ಇದೆ. ಈಗಾಗಲೇ ಪೊಲೀಸರು ಬಿಗಿ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದ್ದು, ಸೈಕಲ್ ಜಾಥಾ ಆರಂಭವಾಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಹನುಮಾಪುರ ಶ್ರೀಗಳ ಸಾವಿಗೆ ಕಾರಣವೇನು..? ಅಷ್ಟಕ್ಕೂ ವಿ.ಎಸ್.ಪಾಟೀಲರು ಹೇಳಿದ್ದೇನು..?
ಮುಂಡಗೋಡ: ತಾಲೂಕಿನ ಹನುಮಾಪುರ ಕಾಳಿಕಾಮಠದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು ಕೊರೋನಾ ಪಾಸಿಟಿವ್ ಆಗಿ ತೀವ್ರ ಸಂಕಷ್ಟ ಅನುಭವಿಸಿದ್ರು. ತುಮಕೂರು, ರಾಣೇಬೆನ್ನೂರು ಸೇರಿದಂತೆ ಹಲವು ಕಡೆ ಚಿಕಿತ್ಸೆ ಪಡೆದಿದ್ರು. ಆನಂತರದಲ್ಲಿ ಶ್ರೀಗಳಿಗೆ, ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.. ಆದ್ರೆ ಚಿಕಿತ್ಸೆ ಪಲಕಾರಿಯಾಗದೇ ಶ್ರೀಗಳು ವಿಧಿವಶರಾದ್ರು ಅಂತಾ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಪಬ್ಲಿಕ್ ಫಸ್ಟ್ ಗೆ ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಮಾಜಿ ಶಾಸಕರು ಶ್ರೀಗಳ ಬಗ್ಗೆ ಹೇಳಿದ್ದಾದ್ರೂ ಏನು..? ಇಲ್ಲಿದೆ ನೋಡಿ..