ಮುಂಡಗೋಡ: ತಾಲೂಕಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಕಾರ್ಯಕರ್ತರು, ಬೆಳಗಾವಿಯಲ್ಲಿ ಅದ್ದೂರಿ ಕನ್ನಡ ರಾಜ್ಯೋತ್ಸವವನ್ನು ಆಚರಿಸಲು ಅನುಮತಿ ನೀಡಬೇಕೆಂದು, ಮುಂಡಗೋಡ ತಹಶೀಲ್ದಾರ್ ಮೂಲಕ ಮುಖ್ಯಂಮತ್ರಿಗಳಿಗೆ ಮನವಿ ಸಲ್ಲಿಸಿದ್ದಾರೆ. ಈ ವೇಳೆಯಲ್ಲಿ ಅಯ್ಯಪ್ಪ ಬಜಂತ್ರಿ. ಶಿವಣ್ಣ ಕುಂದರಗಿ. ಪಿರಜ್ಜಾ ಸಾಗರ್. ಮಂಜುನಾಥ್ ಕುರುಬರ, ಕೃಷ್ಣ ಕುಂದರಗಿ. ನಿಗಪ್ಪ ಕುರಬರ, ಪ್ರಕಾಶ್ ಕೊರವರ್, ಕೈಲಾಶ್ ಗಜಕೋಷ್, ಸಂಕೇತ್ ಗೌಡರ್, ಶ್ರೀನಿವಾಸ್ ಹುಲಗೂರ್ ಸೇರಿ ಹಲವರು ಹಾಜರಿದ್ದರು.
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಕಾಲೇಜು ಆವರಣದಲ್ಲೇ ಬಾಂಬ್ ಮಾದರಿಯ ವಸ್ತು ಪತ್ತೆ, ಆತಂಕದಲ್ಲಿದೆ ತಾಲೂಕಿನ ಜನತೆ..!
ಕುಮಟಾ- ಕಾಲೇಜು ಆವರಣದಲ್ಲಿ ಬಾಂಬ್ ಮಾದರಿ ವಸ್ತು ಪತ್ತೆಯಾಗಿದೆ. ಕುಮಟಾದ ವಿದ್ಯಾಧಿರಾಜ ಪಾಲಿಟೆಕ್ನಿಕ್ ಕಾಲೇಜ್ ಹಿಂಬದಿ ಪತ್ತೆಯಾಗಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ. ಸಂಜೆ ವಾಯುವಿಹಾರಕ್ಕೆ ತೆರಳಿದ್ದವರ ಕಣ್ಣಿಗೆ ಬಿದ್ದಿದ್ದ ಬಾಂಬ್ ಮಾದರಿ ವಸ್ತು ಗಮನಿಸಿದ ಸ್ತಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕುಮಟಾ ಪೊಲೀಸ್ ದೌಡಾಯಿಸಿ, ಪರಿಶೀಲನೆ ಕೈಗೊಂಡಿದ್ದಾರೆ. ಕಾಲೇಜು ಆವರಣದಲ್ಲಿ ಅಗ್ನಿಶಾಮಕ ಸಿಬ್ಬಂದಿ, ಶ್ವಾನದಳ ಬೀಡು ಬಿಟ್ಟಿದೆ. ಮಂಗಳೂರಿನಿಂದ ಬಾಂಬ್ ನಿಷ್ಕ್ರಿಯ ತಂಡ ಆಗಮಿಸೋ ಸಾಧ್ಯತೆಯಿದೆ. ಬಾಂಬ್ ಮಾದರಿಯ ವಸ್ತು ಸಿಕ್ಕಿದ್ದು ಕುಮಟಾ ವ್ಯಾಪ್ತಿಯಲ್ಲಿ ಆತಂಕದ ವಾತಾವರಣ ನಿರ್ಮಾಣ ಮಾಡಿದೆ.
5 ಕೋಟಿ ರೂ. ಮೌಲ್ಯದ ತಿಮಿಂಗಿಲ ವಾಂತಿ ವಶಕ್ಕೆ ಪಡೆದ ಪೊಲೀಸರು..!
ಶಿರಸಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಕೋಟಿ ಕೋಟಿ ಮೌಲ್ಯದ ನಿಷೇಧಿತ ಅಂಬರ್ ಗ್ರೀಸ್( ತಿಮಿಂಗಿಲ ವಾಂತಿ) ವಶಕ್ಕೆ ಪಡೆದಿದ್ದಾರೆ. ಜೊತೆಗೆ ಇಬ್ಬರನ್ನು ಬಂದಿಸಿದ್ದಾರೆ. ಬೆಳಗಾವಿಯಿಂದ ತಂದು ಶಿರಸಿಯಲ್ಲಿ ಮಾರಾಟಕ್ಕೆ ಯತ್ನ ಮಾಡುತ್ತಿದ್ದ, ಪ್ರಮುಖ ಆರೋಪಿ ಬೆಳಗಾವಿಯ ಸಂತೋಷ್ ಕಾಮತ್ ಮತ್ತು ಶಿರಸಿಯ ರಾಜೇಶ್ ಪೂಜಾರಿಯನ್ನು ತಡರಾತ್ರಿ ಬಂಧಿಸಲಾಗಿದೆ. ಬಂಧಿತರಿಂದ ಸುಮಾರು 5 ಕೋಟಿ ರೂಪಾಯಿ ಮೌಲ್ಯದ 5 ಕೆಜಿ, ನಿಷೇಧಿತ ಅಂಬರ್ ಗ್ರೀಸ್ ( ತಿಮಿಂಗಿಲ ವಾಂತಿ ) ವಶಕ್ಕೆ ಪಡೆಯಲಾಗಿದೆ. ಅಂದಹಾಗೆ, ಇದು ಉತ್ತರ ಕನ್ನಡ ಜಿಲ್ಲೆಯಲ್ಲಿಯೇ ಮೊಟ್ಟ ಮೊದಲ ಪ್ರಕರಣವಾಗಿದೆ.
ಅಗಡಿಯಲ್ಲಿ ಅಂಬ್ಯುಲೆನ್ಸ್ ನಲ್ಲೇ ಹೆಣ್ಣು ಮಗುವಿಗೆ ಜನ್ಮನೀಡಿದ ತಾಯಿ..!
ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಗರ್ಭಿಣಿಯೋರ್ವಳು ಹೆರಿಗೆ ನೋವಿನಿಂದ ಬಳಲುತ್ತಿದ್ದರು. ಹೀಗಾಗಿ, 108 ಅಂಬ್ಯಲೆನ್ಸ್ ಗೆ ಕರೆ ಮಾಡಲಾಗಿತ್ತು. ತಕ್ಷಣವೇ ಸ್ಥಳಕ್ಕೆ ಬಂದ 108 ಸಿಬ್ಬಂದಿಗಳು, ತೀವ್ರ ಹೆರಿಗೆ ನೋವಿನಿಂದ ಬಳಲುತ್ತಿದ್ದ ಗರ್ಭಿಣಿಗೆ ಮನೆಯ ಹತ್ತಿರ ಅಂಬ್ಯುಲೆನ್ಸ್ ನಲ್ಲೇ ಸುರಕ್ಷಿತವಾಗಿ ಹೆರಿಗೆ ಮಾಡಿಸಿಕೊಂಡಿದ್ದಾರೆ. ಹೆಣ್ಣು ಮಗುವಿಗೆ ಜನ್ಮನೀಡಿರೋ ಗೀತಾ ಪ್ರಭು ನಾಯಕ ಎಂಬ ಮಹಿಳೆ ಆರೋಗ್ಯವಾಗಿದ್ದಾರೆ. ಹೆರಿಗೆಯ ನಂತರ ಸೂಕ್ತ ಚಿಕಿತ್ಸೆಗಾಗಿ ಮುಂಡಗೋಡ ತಾಲೂಕಾಸ್ಪತ್ರೆಗೆ ಕರೆ ತಂದು ದಾಖಲಿಸಲಾಗಿದೆ. ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಬಳೂರು ಹಾಗೂ ಚಾಲಕ ಕೆಂಚೇಶ್ ಈ ವೇಳೆ ಇದ್ದರು.
ಹಾನಗಲ್ ಕ್ಷೇತ್ರದಲ್ಲಿ ಗೆಲುವು ನಮ್ಮದೇ; ಸಚಿವ ಹೆಬ್ಬಾರ್ ವಿಶ್ವಾಸದ ನುಡಿ..!
ಶಿರಸಿ: ಹಾನಗಲ್ ನಲ್ಲಿ ನೂರಕ್ಕೆ ನೂರರಷ್ಟು ವಿಜಯ ನಮ್ಮದೇ ಅಂತಾ ಸಚಿವ ಹಾಗೂ ಹಾನಗಲ್ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಶಿವರಾಮ್ ಹೆಬ್ಬಾರ್ ವಿಶ್ವಾಸ ವ್ಯಕ್ತ ಪಡಿಸಿದ್ರು. ಶಿರಸಿಯಲ್ಲಿ ಮಾತನಾಡಿದ ಸಚಿವ ಹೆಬ್ಬಾರ್, ಹಲವಾರು ಜನ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ, ತಾವೇ ಗೆದ್ದು ಬಿಡ್ತೀವಿ ಅಂತ ಮಾತನಾಡುತ್ತಿದ್ದಾರೆ, ಆದ್ರೆ, 25 ಸಾವಿರದಷ್ಟು ದೊಡ್ಡ ಅಂತರದಲ್ಲಿ ಹಾನಗಲ್ ನಲ್ಲಿ ಬಿಜೆಪಿ ಜಯ ಸಾಧಿಸಲಿದೆ ಅಂತಾ ವಿಶ್ವಾಸದ ನುಡಿ ಹೇಳಿದ್ರು. ಹಾನಗಲ್ ಹಾಗೂ ಸಿಂದಗಿ ಸೇರಿ ಎರಡೂ ಕ್ಷೇತ್ರಗಳಲ್ಲಿ ನಾವು ಜಯ ಸಾಧಿಸ್ತೀವಿ, ಅದ್ರಲ್ಲೂ ಹಾನಗಲ್ ನಲ್ಲಿ ಹೆಚ್ಚು ಅಂತರದಿಂದ ಜಯ ಸಾಧಿಸುತ್ತೇವೆ ಅಂತಾ ಹೆಬ್ಬಾರ್ ತಿಳಿಸಿದ್ರು.
ಹಾನಗಲ್ ಉಪ ಕದನದಲ್ಲಿ ಮುಂಡಗೋಡ ಬಿಜೆಪಿಗರ ಪ್ರಚಾರ ಭರಾಟೆ..!
ಹಾನಗಲ್ ನಲ್ಲಿ ಉಪಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ ತವರು ಕ್ಷೇತ್ರದಲ್ಲಿ ಗೆಲ್ಲಲೇ ಬೇಕು ಅನ್ನೋ ಪ್ರತಿಷ್ಟೆಯ ಜಿದ್ದಿಗೆ ಬಿದ್ದಿದ್ದಾರೆ. ಹೀಗಾಗಿ, ಇಡೀ ಕ್ಷೇತ್ರದಾದ್ಯಂತ ಭರ್ಜರಿ ಪ್ರಚಾರಕ್ಕೆ ಕಾರ್ಯಪಡೆ ರಚಿಸಿದ್ದಾರೆ. ಅದ್ರಂತೆ, ಪಕ್ಕದ ಮುಂಡಗೋಡ ತಾಲೂಕಿನ ಬಿಜೆಪಿ ಕಾರ್ಯಕರ್ತರು ಹಾನಗಲ್ ಉಪಚುನಾವಣೆಯ ಅಖಾಡಕ್ಕೆ ಇಳಿದು ಭರ್ಜರಿ ಪ್ರಚಾರ ಕೈಗೊಂಡಿದ್ದಾರೆ. ತಾಲೂಕಾ ಬಿಜೆಪಿ ಯುವ ಮೋರ್ಚಾ ಪದಾಧಿಕಾರಿಗಳು, ಮುಖಂಡರು ಹಾನಗಲ್ ಕ್ಷೇತ್ರದ ಹಳ್ಳಿ, ಹಳ್ಳಿಗಳಲ್ಲಿ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದಲ್ಲಿ ತೊಡಗಿದ್ದಾರೆ. ಮುಂಡಗೋಡ ಬಿಜೆಪಿಯ ಯುವ ಮೋರ್ಚಾ ತಾಲೂಕಾ ಘಟಕದ ಅಧ್ಯಕ್ಷ ಗಣೇಶ್ ಶಿರಾಲಿ, ಸಂಜೀವ ಪೀಸೆ, ಮಂಜುನಾಥ್ ಹಿರೇಮಠ, ಶಿವಯೋಗಿ ಕೂಡಲಮಠ ಸೇರಿದಂತೆ ಹಲವು ಯುವ ಮುಖಂಡರು ಪ್ರಚಾರ ಕಾರ್ಯದಲ್ಲಿ ತೊಡಗಿದ್ರು.
ಸಿಎಟ್ ಟೈಯರ್ ಜಾಹೀರಾತಿಗೆ ಸಂಸದ ಅನಂತಣ್ಣನ ಆಕ್ರೋಶ..! ಕಂಪನಿ ಮಾಲೀಕಗೆ ಪತ್ರ ಬರೆದ ಹಿಂದು ಹುಲಿ..!!
ಶಿರಸಿ: ಸಿಎಟ್ ಟೈಯರ್ ಜಾಹೀರಾತಿಗೆ ಸಂಸದ ಅನಂತಕುಮಾರ್ ಹೆಗಡೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಾಹೀರಾತು ಪ್ರಶ್ನಿಸಿ ಸಿಎಟ್ ಟೈಯರ್ ಕಂಪನಿ ಮಾಲೀಕ ಅನಂತ ವರಧನ್ ಗೆ ಪತ್ರ ಬರೆದಿದ್ದಾರೆ. ಸಿಎಟ್ ಜಾಹೀರಾತಿನಲ್ಲಿ ಹಿಂದುಗಳ ಆಚರಣೆಗಳನ್ನು ನಟ ಅಮೀರ್ ಖಾನ್ ಹೀಯಾಳಿಸಿರುವ ಕುರಿತು ವಿರೋಧ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ. ಈ ಜಾಹಿರಾತಿನಲ್ಲಿ ಹಿಂದುಗಳ ಭಾವನೆಯನ್ನು ತುಳಿಯುವ ಕ್ಷುಲ್ಲಕ ಕುತಂತ್ರ ಎಂದು ಆರೋಪಿಸಿರುವ ಅನಂತಕುಮಾರ್ ಹೆಗಡೆ, ಆಮೀರ್ ಖಾನ್ ನಟಿಸಿರುವ ಜಾಹಿರಾತಿನಲ್ಲಿ ಹಿಂದುಗಳು ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ ಆದರೆ, ಅಮೀರ್ ಖಾನ್ ಪ್ರತಿಪಾದಿಸುವ ಮುಸ್ಲಿಂ ಧರ್ಮದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವುದು, ಬೆಳಿಗ್ಗೆ ಧ್ವನಿವರ್ಧಕ ಬಳಸುವುದರ ಬಗ್ಗೆ ಏಕೆ ಮೌನ..? ಎಂದು ಪ್ರಶ್ನಿಸಿದ ಅನಂತಕುಮಾರ್ ಹೆಗಡೆ ತಾವು ಬರೆದಿರುವ ಪತ್ರವನ್ನು ಟ್ವೀಟ್ ಮಾಡಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆ, ಕಿಮ್ಸ್ ಗೆ ದಾಖಲು..!
ಮುಂಡಗೋಡ: ವಿಷ ಸೇವಿಸಿದ ಮಹಿಳೆಯೋರ್ವಳು ತೀವ್ರ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿದ ಘಟನೆ ತಾಲೂಕಿನ ಕೋಡಂಬಿಯಲ್ಲಿ ನಡೆದಿದೆ. ಪ್ರೇಮಾ ಕೃಷ್ಣಪ್ಪ ಕೊರಗರ್ ಎಂಬುವ ಗೃಹಿಣಿಯೇ ವಿಷಸೇವಿಸಿ ಆತ್ಮಹತ್ಯೆಗೆ ಯತ್ನಿಸಿದವಳಾಗಿದ್ದಾಳೆ. ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಮುಂಡಗೋಡಿನ 108 ಅಂಬ್ಯುಲೆನ್ಸ್ ಸಿಬ್ಬಂದಿ, ತಾಲ್ಲೂಕು ಆಸ್ಪತ್ರೆ ಮುಂಡಗೋಡಿಂದ ಹುಬ್ಬಳ್ಳಿ ಕಿಮ್ಸ್ ಗೆ,108 ಅಂಬ್ಯುಲೆನ್ಸ್ ಮುಖಾಂತರ ದಾಖಲಿಸಿದ್ದಾರೆ. 108 ಅಂಬ್ಯುಲೆನ್ಸ್ ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಸಿ. ಬಳೂರು, ಚಾಲಕ ಕೆಂಚೇಶ್ ಇ. ಎನ್ ಈ ವೇಳೆ ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಗೆ ಸೂಕ್ತ ಪ್ರಾಥಮಿಕ ಚಿಕಿತ್ಸೆ ನೀಡಿದರು.. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಮಾಜಿ ಗ್ರಾಪಂ ಸದಸ್ಯ ಮರಿಯಪ್ಪ ಮೇತ್ರಿ ಹೃದಯಾಘಾತದಿಂದ ವಿಧಿವಶ, ಗ್ರಾಮಸ್ಥರ ಕಂಬನಿ..!
ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಮಾಜಿ ಗ್ರಾಮ ಪಂಚಾಯತ ಸದಸ್ಯ ಮರಿಯಪ್ಪ ಮೇತ್ರಿ ಹೃದಯಾಘಾತದಿಂದ ತಡರಾತ್ರಿ ನಿಧನರಾಗಿದ್ದಾರೆ. ಮಂಗಳವಾರ ತಡರಾತ್ರಿ ಎದೆನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಅವ್ರನ್ನು ತಕ್ಷಣವೇ ಆಸ್ಪತ್ರೆಗೆ ಸಾಗಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಗ್ರಾಮದಲ್ಲಿ ರೈತರ ಬೋರವೆಲ್ ರಿಪೇರಿ ಮಾಡುತ್ತಿದ್ದ ಮರಿಯಪ್ಪ ಮೇತ್ರಿ ನಿಧನಕ್ಕೆ ಗ್ರಾಮಸ್ಥರು ಕಂಬನಿ ಮಿಡಿದಿದ್ದಾರೆ.
72 ರ ಹರೆಯದಲ್ಲೂ ಬತ್ತದ ಕ್ರೀಡೋತ್ಸಾಹ, Y.R.ಗೇಟಿಯವರ್ ಸಾಧನೆಗೆ ಬೇಕಿದೆ ಇನ್ನಷ್ಟು ಪ್ರೋತ್ಸಾಹ..!
ಅವ್ರು 72 ವರ್ಷದ ಹಿರಿಯ ಕ್ರೀಡಾಪಟು.. ಇವತ್ತಿಗೂ ಆ ಹಿರಿಯ ಜೀವ ಓಟಕ್ಕೆ ನಿಂತರೆ ಸಾಕು ಯಾರಿಗೂ ಕಡಿಮೆಯಿಲ್ಲ ಅನ್ನೋ ಛಾಪು ಮೂಡಿಸ್ತಾರೆ. ಪ್ರಶಸ್ತಿಗಳನ್ನು ಬಾಚಿಕೊಳ್ತಾರೆ. ದಶಕಗಳಿಂದಲೂ ಕ್ರೀಡಾಕ್ಷೇತ್ರದಲ್ಲಿ ತಮ್ಮದೇ ಆದ ನಿರಂತರ ಸೇವೆ ಸಲ್ಲಿಸ್ತಿದಾರೆ. ಆದ್ರೆ, ಇವ್ರ ಸಾಧನೆಯ ಹೆಜ್ಜೆಗಳನ್ನು ಅದ್ಯಾಕೋ ಏನೋ ರಾಜ್ಯ ಸರ್ಕಾರ ಮಾತ್ರ ಇನ್ನೂ ಗುರುತಿಸಿಯೇ ಇಲ್ಲ. ಹೀಗಾಗಿ, ಈ ಹಿರಿಯ ಕ್ರೀಡಾಪಟುವಿಗೆ ಸದ್ಯ ರಾಜ್ಯೋತ್ಸವ ಪ್ರಶಸ್ತಿ ನೀಡಲೇ ಬೇಕು ಅಂತಾ ಉತ್ತರ ಕರ್ನಾಟಕದ ಅಸಂಖ್ಯ ಕ್ರೀಡಾಭಿಮಾನಿಗಳು ಅಭಿಯಾನ ಶುರು ಮಾಡಿದ್ದಾರೆ. ಹೌದು, ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿಯ, ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿರೋ, ವಾಯ್ ಆರ್ ಗೇಟಿಯವರ್, ಈ ಹೆಸ್ರು ಉತ್ತರ ಕರ್ನಾಟಕ ಭಾಗದ ಕ್ರೀಡಾಭಿಮಾನಿಗಳಿಗೆ ಅಚ್ಚು ಮೆಚ್ಚು. 72 ವರ್ಷ ವಯಸ್ಸಿನ ಈ ಇಳಿ ವಯಸ್ಸಿನಲ್ಲೂ ಗೇಟಿಯವರ್ ಅದ್ಭುತ ಕ್ರೀಡಾಪಟುವಾಗೇ ನಿರಂತರತೆ ಕಾಯ್ದುಕೊಂಡು, ಥೇಟು 18 ರ ನವಯುವಕನಂತೆ ಮೈದಾನಕ್ಕೀಳಿತಾರೆ. ತಮ್ಮ ಬದುಕಿನ ಅಷ್ಟೂ ಸಮಯವನ್ನು ರಾಜ್ಯ, ದೇಶವನ್ನು ಪ್ರತಿನಿಧಿಸಿ ನೂರಾರು...