ಶಿರಸಿ: ಸಿಎಟ್ ಟೈಯರ್ ಜಾಹೀರಾತಿಗೆ ಸಂಸದ ಅನಂತಕುಮಾರ್ ಹೆಗಡೆ ವಿರೋಧ ವ್ಯಕ್ತಪಡಿಸಿದ್ದಾರೆ. ಜಾಹೀರಾತು ಪ್ರಶ್ನಿಸಿ ಸಿಎಟ್ ಟೈಯರ್ ಕಂಪನಿ ಮಾಲೀಕ ಅನಂತ ವರಧನ್ ಗೆ ಪತ್ರ ಬರೆದಿದ್ದಾರೆ.
ಈ ಜಾಹಿರಾತಿನಲ್ಲಿ ಹಿಂದುಗಳ ಭಾವನೆಯನ್ನು ತುಳಿಯುವ ಕ್ಷುಲ್ಲಕ ಕುತಂತ್ರ ಎಂದು ಆರೋಪಿಸಿರುವ ಅನಂತಕುಮಾರ್ ಹೆಗಡೆ, ಆಮೀರ್ ಖಾನ್ ನಟಿಸಿರುವ ಜಾಹಿರಾತಿನಲ್ಲಿ ಹಿಂದುಗಳು ಪಟಾಕಿ ಸಿಡಿಸದಂತೆ ಮನವಿ ಮಾಡಿದ್ದಾರೆ
ಆದರೆ, ಅಮೀರ್ ಖಾನ್ ಪ್ರತಿಪಾದಿಸುವ ಮುಸ್ಲಿಂ ಧರ್ಮದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವುದು, ಬೆಳಿಗ್ಗೆ ಧ್ವನಿವರ್ಧಕ ಬಳಸುವುದರ ಬಗ್ಗೆ ಏಕೆ ಮೌನ..? ಎಂದು ಪ್ರಶ್ನಿಸಿದ ಅನಂತಕುಮಾರ್ ಹೆಗಡೆ ತಾವು ಬರೆದಿರುವ ಪತ್ರವನ್ನು ಟ್ವೀಟ್ ಮಾಡಿದ್ದಾರೆ.