ಶಿರಸಿ: ಹಾನಗಲ್ ನಲ್ಲಿ ನೂರಕ್ಕೆ ನೂರರಷ್ಟು ವಿಜಯ ನಮ್ಮದೇ ಅಂತಾ ಸಚಿವ ಹಾಗೂ ಹಾನಗಲ್ ಕ್ಷೇತ್ರದ ಬಿಜೆಪಿ ಚುನಾವಣಾ ಉಸ್ತುವಾರಿ ಶಿವರಾಮ್ ಹೆಬ್ಬಾರ್ ವಿಶ್ವಾಸ ವ್ಯಕ್ತ ಪಡಿಸಿದ್ರು.

ಶಿರಸಿಯಲ್ಲಿ ಮಾತನಾಡಿದ ಸಚಿವ ಹೆಬ್ಬಾರ್,
ಹಲವಾರು ಜನ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದಾರೆ, ತಾವೇ ಗೆದ್ದು ಬಿಡ್ತೀವಿ ಅಂತ ಮಾತನಾಡುತ್ತಿದ್ದಾರೆ, ಆದ್ರೆ,
25 ಸಾವಿರದಷ್ಟು ದೊಡ್ಡ ಅಂತರದಲ್ಲಿ ಹಾನಗಲ್ ನಲ್ಲಿ ಬಿಜೆಪಿ ಜಯ ಸಾಧಿಸಲಿದೆ
ಅಂತಾ ವಿಶ್ವಾಸದ ನುಡಿ ಹೇಳಿದ್ರು.

ಹಾನಗಲ್ ಹಾಗೂ ಸಿಂದಗಿ ಸೇರಿ ಎರಡೂ ಕ್ಷೇತ್ರಗಳಲ್ಲಿ ನಾವು ಜಯ ಸಾಧಿಸ್ತೀವಿ, ಅದ್ರಲ್ಲೂ ಹಾನಗಲ್ ನಲ್ಲಿ ಹೆಚ್ಚು ಅಂತರದಿಂದ ಜಯ ಸಾಧಿಸುತ್ತೇವೆ ಅಂತಾ ಹೆಬ್ಬಾರ್ ತಿಳಿಸಿದ್ರು.

error: Content is protected !!