ಅವ್ರು 72 ವರ್ಷದ ಹಿರಿಯ ಕ್ರೀಡಾಪಟು.. ಇವತ್ತಿಗೂ ಆ ಹಿರಿಯ ಜೀವ ಓಟಕ್ಕೆ ನಿಂತರೆ ಸಾಕು ಯಾರಿಗೂ ಕಡಿಮೆಯಿಲ್ಲ ಅನ್ನೋ ಛಾಪು ಮೂಡಿಸ್ತಾರೆ. ಪ್ರಶಸ್ತಿಗಳನ್ನು ಬಾಚಿಕೊಳ್ತಾರೆ. ದಶಕಗಳಿಂದಲೂ ಕ್ರೀಡಾಕ್ಷೇತ್ರದಲ್ಲಿ ತಮ್ಮದೇ ಆದ ನಿರಂತರ ಸೇವೆ ಸಲ್ಲಿಸ್ತಿದಾರೆ. ಆದ್ರೆ, ಇವ್ರ ಸಾಧನೆಯ ಹೆಜ್ಜೆಗಳನ್ನು ಅದ್ಯಾಕೋ ಏನೋ ರಾಜ್ಯ ಸರ್ಕಾರ ಮಾತ್ರ ಇನ್ನೂ ಗುರುತಿಸಿಯೇ ಇಲ್ಲ. ಹೀಗಾಗಿ, ಈ ಹಿರಿಯ ಕ್ರೀಡಾಪಟುವಿಗೆ ಸದ್ಯ ರಾಜ್ಯೋತ್ಸವ ಪ್ರಶಸ್ತಿ ನೀಡಲೇ ಬೇಕು ಅಂತಾ ಉತ್ತರ ಕರ್ನಾಟಕದ ಅಸಂಖ್ಯ ಕ್ರೀಡಾಭಿಮಾನಿಗಳು ಅಭಿಯಾನ ಶುರು ಮಾಡಿದ್ದಾರೆ.

ಹೌದು, ಮೂಲತಃ ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಗುಡಗೇರಿಯ, ಸದ್ಯ ಹುಬ್ಬಳ್ಳಿಯಲ್ಲಿ ವಾಸವಾಗಿರೋ, ವಾಯ್ ಆರ್ ಗೇಟಿಯವರ್, ಈ ಹೆಸ್ರು ಉತ್ತರ ಕರ್ನಾಟಕ ಭಾಗದ ಕ್ರೀಡಾಭಿಮಾನಿಗಳಿಗೆ ಅಚ್ಚು ಮೆಚ್ಚು.

72 ವರ್ಷ ವಯಸ್ಸಿನ ಈ ಇಳಿ ವಯಸ್ಸಿನಲ್ಲೂ ಗೇಟಿಯವರ್ ಅದ್ಭುತ ಕ್ರೀಡಾಪಟುವಾಗೇ ನಿರಂತರತೆ ಕಾಯ್ದುಕೊಂಡು, ಥೇಟು 18 ರ ನವಯುವಕನಂತೆ ಮೈದಾನಕ್ಕೀಳಿತಾರೆ. ತಮ್ಮ ಬದುಕಿನ ಅಷ್ಟೂ ಸಮಯವನ್ನು ರಾಜ್ಯ, ದೇಶವನ್ನು ಪ್ರತಿನಿಧಿಸಿ ನೂರಾರು ಪದಕಗಳನ್ನು ದೇಶಕ್ಕೆ, ರಾಜ್ಯಕ್ಕೆ ತಂದು ಕೊಟ್ಟಿದ್ದಾರೆ.

ಅಚ್ಚರಿಯ ಸಾಧಕ..
ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಟ್ಟದ ಕ್ರೀಡಾ ಕ್ಷೇತ್ರದಲ್ಲಿ 800 ಮೀ, 1500 ಮೀ, 5000 ಮೀ ಓಟಗಳಲ್ಲಿ ನೂರಾರು ಚಿನ್ನ, ,ಬೆಳ್ಳಿ ಹಾಗು ಕಂಚಿನ ಪದಕಗಳನ್ನು ಪಡೆದಿರೋ ಇವ್ರ ಸಾಧನೆ ನಿಜಕ್ಕೂ ಅಚ್ಚರಿ ತರಿಸುವಂತದ್ದು. ಅನೇಕ ದೇಶದಲ್ಲಿ ಭಾರತವನ್ನು ಪ್ರತಿನಿಧಿಸಿ ನಮ್ಮ ದೇಶಕ್ಕೆ ಕೀರ್ತಿಯನ್ನು ತಂದಿರೊ ವಾಯ್.ಆರ್.ಗೇಟಿಯವರ್ ಗೆ ಬೇಕಿದೆ ನಮ್ಮೇಲ್ಲರ ಮತ್ತಷ್ಟು ಸಹಕಾರ. ಪ್ರಸ್ತುತವಾಗಿ ಹಿರಿಯರ ಏಷಿಯನ್ ಕ್ರೀಡಾಕೂಟ ದಲ್ಲಿಯೂ ಸಹ ಅನೇಕ ಚಿನ್ನದ ಪದಕಗಳನ್ನು ಗಳಿಸಿದ್ದಾರೆ. ಇವರಿಗೆ ಸೌತ್ ಸೆಂಟ್ರಲ್ ರೈಲ್ವೆ ಇಲಾಖೆಯ ಯಲ್ಲಿ 9 ಚಿನ್ನದ ಪದಕ , GM ಅವಾರ್ಡ್, DRM ಅವಾರ್ಡ್, ಮಹಾನಗರ ಮೇಯರ್ ವತಿಯಿಂದ ಅವಾರ್ಡ್ ಮತ್ತು 10000 ನಗದು ಪುರಸ್ಕಾರ, ಧರ್ಮಸ್ಥಳ ಪೀಠದಿಂದ ಪುರಸ್ಕಾರ , ಜನಮುಖಿ ಸನ್ಮಾನ, ಹೀಗೆ ಹತ್ತು ಹಲವು ಪ್ರಶಸ್ತಿ ಗಳು ಸಂದಿವೆ.

ಇವರ ಕುರಿತು ಮಾಸ ಪತ್ರಿಕೆ ದಿನಪತ್ರಿಕೆ ಆಕಾಶವಾಣಿ ಧಾರವಾಡ ಹಾಗೂ ಅನೇಕ TV ಚಾನಲ್ ನಲ್ಲಿ ವಿಶೇಷ ವರದಿಗಳು ಪ್ರಸಾರವಾಗಿವೆ. ಆದರೂ ಇದುವರೆಗೂ ಎಲ್ಲಾ ಅರ್ಹತೆಗಳಿದ್ದರೂ ರಾಜ್ಯ ಸರ್ಕಾರ ನೀಡುವ ರಾಜ್ಯೋತ್ಸವ ಪ್ರಶಸ್ತಿ ಮಾತ್ರ ದಕ್ಕಿಲ್ಲ. ಹೀಗಾಗಿ, ಕ್ರೀಡಾಭಿಮಾನಿಗಳಿಗೆ ಬೇಸರ ಮೂಡಿದೆ.

ಸಮಾಜ ಸೇವೆಯೂ ನಿರಂತರ..!
ಇನ್ನು, ವಾಯ್.ಆರ್.ಗೇಟಿಯವರ್ ಕ್ರೀಡಾಕ್ಷೇತ್ರದಲ್ಲಷ್ಟೇ ಅಲ್ಲ, ಹಲವು ಸಾಮಾಜಿಕ ಜಾವಾಬ್ದಾರಿಗಳನ್ನೂ ನಿಭಾಯಿಸಿಕೊಂಡೆ ಬಂದಿದ್ದಾರೆ.
ಸಮಾಜ ಸೇವೆಯ ಅಂಗವಾಗಿ ಗಂಗಾ ಕೋ ಆಪರೇಟಿವ್ ಸೊಸೈಟಿ ಸ್ಥಾಪಿಸಿದ್ದಾರೆ . ಅನೇಕ ಸಂಘ ಸಂಸ್ಥೆಗಳಲ್ಲಿ ಆಜೀವ ಸದಸ್ಯತ್ವವನ್ನು ಹೊಂದಿದ್ದಾರೆ. ಹಾಗೆ ಬಡ ವಿದ್ಯಾರ್ಥಿಗಳ ಸಲುವಾಗಿ ಕೈಗಾರಿಕಾ ತರಬೇತಿ ಸಂಸ್ಥೆ ಸ್ಥಾಪಿಸಿದ್ದಾರೆ. ಆ ಮೂಲಕ ಸಮಾಜ ಸೇವೆ ಸಲ್ಲಿಸುತ್ತಿದ್ದಾರೆ. ಜೊತೆ ಜೊತೆಗೆ, ತಮ್ಮ 72 ನೇ ವಯಸ್ಸಿನಲ್ಲಿಯೂ ಹಿರಿಯರ ಕ್ರೀಡಾಕೂಟದಲ್ಲಿ ಭಾಗವಹಿಸುತ್ತಾ ಪದಕ, ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಅಲ್ಲದೇ ಸದ್ಯ, ಉದಯೋನ್ಮುಖ ಕ್ರೀಡಾ ಪಟುಗಳಿಗೆ ಉಚಿತ ತರಬೇತಿ ನೀಡುತ್ತಿದ್ದಾರೆ. ಹೀಗಾಗಿ, ಇವರಿಗೆ ಪ್ರಸಕ್ತ ವರ್ಷದ ರಾಜ್ಯೋತ್ಸವ ಪ್ರಶಸ್ತಿ ಲಭಿಸಬೇಕು ಅಂತಾ ಲಕ್ಷಾಂತರ ಅಭಿಮಾನಿಗಳು ಹಂಬಲಿಸಿದ್ದಾರೆ.

ಸದ್ಯ ರಾಜ್ಯೋತ್ಸವ ಪ್ರಶಸ್ತಿಗಾಗಿ ಅಭಿಮಾನಿಗಳಿಂದ ಅಭಿಯಾನ ಶುರುವಾಗಿದೆ. ನೀವೂ ಈ ಹಿರಿಯ ಕ್ರೀಡಾಪಟುವಿಗೆ ಬೆಂಬಲಿಸಲು ಹೀಗೆ ಮಾಡಿ., ಸೇವಾ ಸಿಂಧು ವೆಬ್ ಗೆ ಹೋಗಿ ಕನ್ನಡ ರಾಜ್ಯೋತ್ಸವ ನಾಮ ನಿದೇರ್ಶನ ಅಂತ ಹಾಕಿ, ನಿಮ್ಮ ಆಧಾರ್ ಸಂಖ್ಯೆ ಸೇರಿಸಿ, ನಂತರ ಮೊಬೈಲ್ ನಂಬರ್ ನಮೂದಿಸಿ, ಕ್ರೀಡಾ ಕ್ಷೇತ್ರದ ವಿಭಾಗದಲ್ಲಿ ಕ್ಲಿಕ್ ಮಾಡಿ Y.R.ಗೇಟಿಯವರ್ ಗೆ ಬೆಂಬಲಿಸಿ..

error: Content is protected !!