ಖಾಕಿ ಪಡೆಯಲ್ಲೂ ಇನ್ನಿಲ್ಲದ ಎತ್ತುವಳಿ ಶೂರರಿದ್ದಾರೆ, ಅವ್ರಿಂದ ಹುಶಾರಾಗಿರಿ ಅಂತಾ ಉತ್ತರ ಕನ್ನಡ ಎಸ್ಪಿ ಪ್ರಕಾಶ ದೇವರಾಜು ಇತ್ತಿಚೇಗಷ್ಟೇ ಖಡಕ್ಕಾಗಿ ಹೇಳಿದ್ರು. ಅಲ್ದೇ ಹಿರಿಯ ಅಧಿಕಾರಿಗಳ ಹೆಸ್ರಲ್ಲಿ ದುಡ್ಡು ಪೀಕೊ ಕೆಲ ಪೊಲೀಸರು, ವಂಚಕರು ದಂಧೆಗೆ ಇಳಿದಿದ್ದಾರೆ. ಅಂತವರಿಗೆ ಯಾರೂ ಬಿಡಿಗಾಸೂ ಕೊಡಬೇಡಿ, ಹಾಗೇನಾದ್ರೂ ಕೇಳಿದ್ರೆ ನೇರವಾಗಿ ನಂಗೆ ಕಂಪ್ಲೇಂಟ್ ಕೊಡಿ ಅಂತಾ ಖಡಕ್ಕಾದ ಮಾತು ಹೇಳಿದ್ರು. ಹಾಗಾದ್ರೆ, ಅವ್ರು ಇಂತವರನ್ನ ನೋಡಿಯೇ ಹೇಳಿದ್ರಾ..? ಗೊತ್ತಿಲ್ಲ. ಹಾಗಾದ್ರೆ, ಎಸ್ಪಿ ಸಾಹೇಬ್ರು ಹೇಳಿದ್ದಾದ್ರೂ ಏನು ಒಮ್ಮೆ ಕೇಳಿ, ಆಮೇಲೆ ಮುಂದಿನ ವಿಷಯಕ್ಕೆ ಬರೋಣ.. ಇಲ್ಲಿ ಇದನ್ಯಾಕಪ್ಪಾ ಹೇಳ್ತಿದಿನಿ ಅಂದ್ರೆ, ಇಲ್ಲೊಬ್ಬ ಖತರ್ನಾಕ ಮಾಜಿ ಪೊಲೀಸಪ್ಪ ಮಾಡಬಾರದ ಕೆಲಸ ಮಾಡಿ ನಾಪತ್ತೆಯಾಗಿದ್ದಾನೆ ಅನ್ನೊ ಆರೋಪ ಕೇಳಿ ಬಂದಿದೆ. ಅದೇಂತದ್ದೋ ಹೈ ಲೇವೆಲ್ ಕಾಂಟ್ಯಾಕ್ಟ್ ಹೆಸ್ರಲ್ಲಿ ಹಲವು ಜನರ ಜೀವ ಹಿಂಡಿದ್ದಾನೆ. ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸ್ತಿನಿ ಅಂತಾ ಬರೋಬ್ಬರಿ 12 ಜನ ಅಭ್ಯರ್ಥಿಗಳಿಗೆ ಮಕ್ಮಲ್ ಟೋಪಿ ಹಾಕಿದ್ದಾನೆ. ಒಬ್ಬೊಬ್ಬರಿಂದ 2 ಲಕ್ಷ ಹಣ ಪಡೆದು...
Top Stories
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಶಿಗ್ಗಾವಿ ವಿಧಾನಸಭಾ ಕ್ಷೇತ್ರ: ಕೊನೆಯದಿನ 20 ಅಭ್ಯರ್ಥಿಗಳಿಂದ 25 ನಾಮಪತ್ರ ಸಲ್ಲಿಕೆ” ಈವರೆಗೆ 26 ಅಭ್ಯರ್ಥಿಗಳಿಂದ 46 ನಾಮಪತ್ರ..!
ಶಿಗ್ಗಾವಿಗೆ ಕೈ ಅಭ್ಯರ್ಥಿಯಾಗಿ ವಿನಯ್ ಕುಲಕರ್ಣಿ ಸುಪುತ್ರಿ ವೈಶಾಲಿ ಕುಲಕರ್ಣಿ..!
ಮುಂಡಗೋಡ ತಾಲೂಕಿನಲ್ಲಿ ಸೋಮವಾರದ ರಣಭೀಕರ ಮಳೆಗೆ ಭಾರೀ ದುರಂತ..?
ಕೆರೆಯಲ್ಲಿ ನಾಪತ್ತೆಯಾಗಿದ್ದ ಬಾಲಕ ಶವವಾಗಿ ಪತ್ತೆ..! ಸಾಲಗಾವಿಯಲ್ಲಿ ಘಟನೆ
ಸಾಲಗಾಂವಿಯಲ್ಲಿ ಮಳೆಯ ಅರ್ಭಟ, ತುಂಬಿದ ಕೆರೆ, ನೋಡಲು ಹೋದ ಬಾಲಕ ಕೆರೆಯಲ್ಲೇ ನಾಪತ್ತೆ..!
ಕ್ಷುಲಕ ಕಾರಣಕ್ಕೆ ಯುವಕನಿಗೆ ಚಾಕು ಇರಿತ: ಓರ್ವನ ಬಂಧನ, ಉಳಿದವರಿಗಾಗಿ ಶೋಧ..!
ಶಿಗ್ಗಾವಿ ಉಪ ಚುನಾವಣೆ: JDS ಪ್ರಬಲಗೊಳಿಸಲು ಬಂದಿಳಿದ ನಿಖಿಲ್ ಕುಮಾರಸ್ವಾಮಿ..!
ಶಿಗ್ಗಾವಿ ಉಪಚುನಾವಣೆ: ಬಿಜೆಪಿ, ಕಾಂಗ್ರೆಸ್ ನಲ್ಲಿ ಟಿಕೆಟ್ ಹಂಚಿಕೆಯೇ ಸವಾಲು..! ಯಾರಿಗೆ ಸಿಗತ್ತೆ ಟಿಕೆಟ್..?
ಮಾಜಿ ಪೊಲೀಸಪ್ಪನ ವಂಚಕ ಪುರಾಣ; ಬಗೆದಷ್ಟು ಬಯಲಾಗತ್ತೆ “ಪೀಕಾ”ಯಣ..! ಅಷ್ಟಕ್ಕೂ, ಆತನ ಅಸಲಿ ಕಹಾನಿ ಏನು ಗೊತ್ತಾ..?
ಯಲ್ಲಾಪುರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಸಚಿವ ಸಿ.ಸಿ.ಪಾಟೀಲ್ ಬೇಟಿ..!
ಯಲ್ಲಾಪುರ: ಮಳೆಯಿಂದಾಗಿ ಹಾನಿಗೊಳಗಾಗಿ ಭೂಕುಸಿತವಾಗಿದ್ದ ಯಲ್ಲಾಪುರ ತಾಲೂಕಿನ ಕಳಚೆ, ಗುಳ್ಳಾಪುರ ಭಾಗಕ್ಕೆ ಲೋಕೋಪಯೋಗಿ ಸಚಿವ ಸಿ.ಸಿ. ಪಾಟೀಲ್ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ರು. ಸಚಿವರು ಭೇಟಿ ನೀಡಿದಾಗ ಗ್ರಾಮಸ್ಥರು ಗ್ರಾಮವನ್ನೇ ಸ್ಥಳಾಂತರ ಮಾಡುವಂತೆ ಮನವಿ ನೀಡಿದರು. ಗುಳ್ಳಾಪುರದಲ್ಲಿ ಪ್ರವಾಹದಿಂದಾಗಿ ಕೊಚ್ಚಿಹೋಗಿರುವ ಸ್ಥಳಕ್ಕೆ ಭೇಟಿ ನೀಡಿದ ಸಚಿವರು ಈ ಪ್ರದೇಶದಲ್ಲಿ ಹಾನಿಯಾಗಿರುವ ಬಗ್ಗೆ ಸಿ ಎಂ ಜೊತೆ ಮಾತುಕತೆ ನಡೆಸಿ ಶೀಘ್ರದಲ್ಲಿ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಕೊಡುವುದಾಗಿ ಸಚಿವರು ಭರವಸೆ ನೀಡಿದರು. ಕಳೆದ 60-65 ವರ್ಷದ ನಂತರ ಈ ರೀತಿಯ ಭಾರೀ ಮಳೆ ಸುರಿದಿದೆ. ನಾನು ಕೂಡ ಭೂಕುಸಿತ ಹಾಗೂ ರಸ್ತೆ ಕುಸಿತ ನೋಡಿ ಮೂಕ ವಿಸ್ಮಿತನಾಗೋ ಸಂದರ್ಭ. ಅಪಾರವಾದ ಹಾನಿಯಾಗಿದೆ. ಈಗಾಗ್ಲೇ ಮುಖ್ಯಮಂತ್ರಿಗಳು ಭೇಟಿ ನೀಡಿ ಪರಿಹಾರವನ್ನ ಕೂಡ ಬಿಡುಗಡೆ ಮಾಡಿದ್ದಾರೆ. 200 ಕೋಟಿ ರೂಪಾಯಿಗಳ ಪರಿಹಾರ ನೀಡಿರೋದು ಸಂತಸವಿದೆ. ಪ್ರಾರಂಭಿಕ ಹಂತದ ಕಾಮಗಾರಿಗಳು ಉಸ್ತುವಾರಿ ಸಚಿವರ ಶ್ರಮದಿಂದ ಪ್ರಾರಂಭವಾಗಿದೆ. ಇಲ್ಲಿಯ ಚಿತ್ರಣವನ್ನ...
ಅಗಡಿಯ “ಮೈಲಾರಿ”ಗೆ ಹುಟ್ಟುಹಬ್ಬದ ಸಂಭ್ರಮ..! ಹಾಗಾದ್ರೆ ಯಾರು ಈ ಮೈಲಾರಿ..?
ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ನಿಂಗಪ್ಪ ಬರಮಪ್ಪ ತಳವಾರ ಎಂಬುವವರು ತಾವು ಮುದ್ದಿನಿಂದ ಸಾಕಿದ ಹೋರಿಗೆ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಿದ್ರು. ತಮ್ಮ ಮನೆಯ ಮುದ್ದಿನ ಮಗನ ಹಾಗೆ ಸಾಕಿದ ಮೈಲಾರಿ ಎಂಬ ಹೋರಿಗೆ ನಾಲ್ಕನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ರು. ಅಂದಹಾಗೆ, ಮೈಲಾರಿ ಅನ್ನೋ ಹೋರಿ ಈಗಾಗಲೇ ನಾಲ್ಕೈದು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದೆ. ತಮ್ಮ ಮನೆಯಲ್ಲೆ ಹುಟ್ಟಿ ಬೆಳೆದ ಹೋರಿಗೆ ಇಡೀ ಮನೆಯ ಮಂದಿ ತಮ್ಮ ಮನೆಮಗನ ಹಾಗೇ ಮುದ್ದು ಮಾಡುತ್ತಾರೆ. ಪ್ರೀತಿಯಿಂದ ತುತ್ತು ತಿನಿಸುತ್ತಾರೆ. ಹೀಗಾಗಿ, ನಿನ್ನೆ ರಾತ್ರಿ ಹೋರಿಯ ನಾಲ್ಕನೇ ವರ್ಷದ ಹುಟ್ಟು ಹಬ್ಬದ ನಿಮಿತ್ತ ಕೇಕ್ ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಿದ್ರು. ಈ ವೇಳೆ ಮೈಲಾರಿಯ ಅಭಿಮಾನಿಗಳು ಭಾಗಿಯಾಗಿದ್ರು.
ಹುನಗುಂದ ವಿಠ್ಠಲ ರುಕ್ಮಾಯಿ ಮಂದಿರದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ..!
ಮುಂಡಗೋಡ:ತಾಲೂಕಿನ ಹುನಗುಂದ ಗ್ರಾಮದ ವಿಠಲ ರುಕ್ಮಿಣಿ ಹರಿಮಂದಿರದಲ್ಲಿ ರವಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 29-8-2021 ರಂದು ರವಿವಾರ ದಿವಸ ಬೆಳಿಗ್ಗೆ 10-00 ಘಂಟೆಗೆ ವಿಠ್ಹಲ ರುಕ್ಮಿಣಿ ಹರಿ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ಕೃಷ್ಣನನ್ನು ತೊಟ್ಟಿಲು ಹಾಕುವ ಕಾರ್ಯಕ್ರಮ ಇರುತ್ತದೆ. ಮಧ್ಯಾನ ಪ್ರಸಾಧ ವ್ಯವಸ್ಥೆ ಇರುವದರಿಂದ ಎಲ್ಲಾ ಭಕ್ತಾದಿಗಳು ಭಾಗವಹಿಸಬೇಕೆಂದು ಪಾಂಡುರಂಗ ಸೇವಾ ಸಮಿತಿಯವರು ಮನವಿ ಮಾಡಿದ್ದಾರೆ.
ಆಲಳ್ಳಿಯಲ್ಲಿ ವ್ಯಕ್ತಿಯ ಮೇಲೆ ಕರಡಿ ದಾಳಿ, ಗಾಯ..!
ಮುಂಡಗೋಡ : ತಾಲೂಕಿನ ಆಲಳ್ಳಿ ಗ್ರಾಮದ ಕಾಡಿನಲ್ಲಿ ಅಣಬೆ ಕೀಳಲು ಹೋದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿದ ಘಟನೆ ನಡೆದಿದೆ. ಇಂದು ನಸುಕಿನ ಜಾವ ಆಲಳ್ಳಿ ಗ್ರಾಮದ ಧರ್ಮಣ್ಣ ಖಂಡೋಜಿ ಹಾಗೂ ಸಂಗಡಿಗರು ಸೇರಿ ಆಲಳ್ಳಿ ಅರಣ್ಯದಲ್ಲಿ ಅಣಬೆ ಕೀಳಲು ಹೋದಾಗ ಧರ್ಮಣ್ಣನ ಮೇಲೆ ಕರಡಿ ದಾಳಿ ಮಾಡಿದೆ ಅಂತಾ ತಿಳಿದು ಬಂದಿದೆ. ಅರಣ್ಯದಂಚಿನಲ್ಲಿರುವ ಗೋವಿನಜೋಳ ಹೊಲಕ್ಕೆ ಹೋದ ಸಂದರ್ಭದಲ್ಲಿ ಮಂಗಗಳನ್ನು ಓಡಿಸಲು ಹೋದಾಗ ಕರಡಿ ದಾಳಿ ಮಾಡಿದೆ. ಕರಡಿಯ ಜೊತೆ ಎರಡು ಮರಿಗಳಿದ್ದವು. ಜೋರಾಗಿ ಕೂಗಿದ್ದರಿಂದ ಕರಡಿ ಕಾಡಿನಲ್ಲಿ ಓಡಿ ಹೋಗಿದೆ ಅಂತಾ ತಿಳಿದು ಬಂದಿದೆ.
ಎಲ್ಟಿ MLC ಆಗೋ ಕನಸಿನ ಹಿಂದೆ, ಇಂದೂರು ಕ್ಷೇತ್ರದ ನಂಟು..? ಒಳ ಮಸಲತ್ತುಗಳ ಏಟಿಗೆ, ಎಲ್ಲವೂ ಕಗ್ಗಂಟು..!!
ಮುಂಡಗೋಡ: ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಸದ್ಯ ಟಿಕೆಟ್ ಪೈಪೋಟಿ ತಾರ್ಕಿಕ ಅಂತ್ಯಕ್ಕೆ ಬಂದಾಯ್ತಾ..? ಇಂತಹದ್ದೊಂದು ಪ್ರಶ್ನೆ ಮತ್ತು ಅನುಮಾನ ಸದ್ಯದ ಕೆಲ ಬೆಳವಣಿಗೆಗಳನ್ನು ನೋಡಿದ್ರೆ ಎಂತವರಿಗೂ ಅನಿಸದೇ ಇರಲ್ಲ. ಯಾಕಂದ್ರೆ, ಮೊದ ಮೊದಲು ಮೂವರ ನಡುವೆ ಟಿಕೆಟ್ ಗುದ್ದಾಟ ಇತ್ತು. ಅದ್ರಲ್ಲಿ, ಕೆಂಜೋಡಿ ಗಲಬಿ, ಸಿದ್ದು ಹಡಪದ ಹಾಗೂ ರವಿಗೌಡ ಪಾಟೀಲರ ನಡುವೆ ಟಿಕೆಟ್ ಫೈಟ್ ನಡೆದಿತ್ತು, ಆ ನಂತರದಲ್ಲಿ ಬಸನೂ ನಡುವಿನಮನಿ ಅನ್ನೊ ಯುವಕ ನಾನೂ ಒಂದು ಕೈ ನೋಡೇ ಬಿಡ್ತಿನಿ ಅಂತಾ ಬಿಜೆಪಿಯ ಟಿಕೆಟ್ ಕಣದಲ್ಲಿ ಸೆಡ್ಡು ಹೊಡೆದು ಬಿಟ್ಟರು. ಅವಾಗಲೇ ಇಂದೂರು ಕ್ಷೇತ್ರದ ಕಣ ರೋಚಕತೆಯ ಘಟ್ಟಕ್ಕೆ ಬಂದು ನಿಂತಿತ್ತು. ಆದ್ರೆ, ಇವತ್ತಿನ ಮತ್ತೊಂದು ಆಕಾಂಕ್ಷಿಯ ಸೇರ್ಪಡೆ ನಿಜಕ್ಕೂ ಕ್ಷೇತ್ರದಲ್ಲಿ ಸಂಚಲನ ತರುವಂತಿದೆ. ನಿಜ, ಚಿಗಳ್ಳಿ ಜಿಪಂ ಕ್ಷೇತ್ರದಿಂದ ಖಾಯಂ ಅಭ್ಯರ್ಥಿಯಂತಿದ್ದ ಎಲ್ಟಿ ಪಾಟೀಲರಿಗೆ ಈ ಸಾರಿ ಆ ಕ್ಷೇತ್ರ ಕೈ ಬಿಡುವ ಅನಿವಾರ್ಯತೆ ಎದುರಾಗಿದೆ. ಅನಿವಾರ್ಯತೆ ಅನ್ನೋದಕ್ಕಿಂತ ಒಳ ಮಸಲತ್ತುಗಳ ಸುಳಿಯಲ್ಲಿ ಆ...
ಬಿಜೆಪಿ ಮಹಿಳಾ ಮೋರ್ಚಾದಿಂದ ಹಿರಿಯ ನಾಗರಿಕರಿಗೆ ರಕ್ಷಾಬಂಧನ..!
ಮುಂಡಗೋಡ: ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ನಿಮಿತ್ತ ಹಿರಿಯ ನಾಗರಿಕರಿಗೆ ರಾಖಿ ಕಟ್ಟುವ ಮೂಲಕ ಆಚರಿಸಲಾಯಿತು. ಈ ವೇಳೆ ಜಿಲ್ಲಾ ಉಪಾಧ್ಯಕ್ಷೆ ವೀಣಾ ಓಸಿಮಠ, ತಾಲೂಕಾಧ್ಯಕ್ಷೆ ಲೈಸಾ ಥಾಮಸ್, ಪ್ರದಾನ ಕಾರ್ಯದರ್ಶಿ ಅಂಜು ಪಾಯಣ್ಣವರ, ಉಪಾಧ್ಯಕ್ಷೆ ಸರಸ್ವತಿ ಕೊಂಡ್ಲಿ, ಮತ್ತು ಸವಿತಾ ಸಾನು ಸೇರಿ ಹಲವರು ಹಾಜರಿದ್ದರು.
ಮುಂಡಗೋಡಿನಲ್ಲಿ ನೂಲಿ ಚಂದಯ್ಯನವರ ಜಯಂತ್ಯೋತ್ಸವ..!
ಮುಂಡಗೋಡ: ಪಟ್ಟಣದಲ್ಲಿ ಕೊರವ ಸಮಾಜದ ಶಿವಶರಣ ಶ್ರೀ ನೂಲಿ ಚಂದಯ್ಯ ನವರ ಜಯಂತೋತ್ಸವ ಕಾರ್ಯಕ್ರಮವನ್ನು ಬಂಕಾಪುರ ರಸ್ತೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾಜದ ಗುರುಹಿರಿಯರ ಹಾಗೂ ಸಮಾಜದ ಬಂಧು ಮಿತ್ರ ಸಹೋದರರ ಆಶ್ರಯದಲ್ಲಿ ಶಿವ ಶರಣರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಮಾಡಲಾಯಿತು. ಕಾಯಕಯೋಗಿ ನೂಲಿಯ ಚಂದಯ್ಯನವರು ಜನಿಸಿದ ದಿನವಾದ ಇಂದು ರಕ್ಷಾ ಬಂಧನದ ಪ್ರಯುಕ್ತವಾಗಿ ಬಂಧುಗಳಲ್ಲಿ ಶ್ರೀರಕ್ಷೆ ನಮ್ಮೆಲ್ಲರಿಗೂ ರಕ್ಷಣೆ ಆಗಲೆಂದು ರಕ್ಷಾಬಂಧನವನ್ನು ಮಾಡಿಸಿ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ವೇಳೆ ತಾಲೂಕಿನ ಸಮಾಜದ ಎಲ್ಲ ಗಣ್ಯ ವ್ಯಕ್ತಿಗಳು ಹಾಗೂ ಸಹೋದರ ಬಂಧುಮಿತ್ರರು ಉಪಸ್ಥಿತರಿದ್ದರು.
ನಾಗರಹಾವು ಸೆರೆಹಿಡಿದು ರಕ್ಷಿಸಿದ ಅರಣ್ಯ ಸಿಬ್ಬಂದಿ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ಹತ್ತಿರ ವಿರುವ ರಾಮಣ್ಣ ಕುನ್ನೂರ ಅವರ ಹಿತ್ತಲಲ್ಲಿ ನಾಗರಹಾವು ಪ್ರತ್ಯಕ್ಷವಾಗಿ ಆತಂಕ ಹುಟ್ಟಿಸಿತ್ತು. ಹೀಗಾಗಿ, ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಸ್ಥಳೀಯರು ಕರೆ ಮಾಡಿದ್ರು. ನಂತರ ಬಂದ ಅರಣ್ಯ ಸಿಬ್ಬಂದಿ ನಾಗರಹಾವನ್ನು ಸುರಕ್ಷಿತವಾಗಿ ಸೆರೆ ಹಿಡಿದ್ರು. ನಂತರ ಸೆರೆಹಿಡಿದ ಹಾವನ್ನು ಸುರಕ್ಷಿತವಾಗಿ ಕಾಡಿನಲ್ಲಿ ಬಿಡಲಾಯಿತು.. ಹೀಗಾಗಿ, ಅಲ್ಲಿನ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟರು.
ನ್ಯಾಸರ್ಗಿ ಗ್ರಾಮದೇವಿಗೆ 108 ದಿನದ ಉಡಿತುಂಬುವ ಕಾರ್ಯಕ್ರಮ..!
ಮುಂಡಗೋಡ: ತಾಲೂಕಿನ ನ್ಯಾಸರ್ಗಿ ಗ್ರಾಮದ ಗ್ರಾಮದೇವಿ ದ್ಯಾಮವ್ವ ತಾಯಿಗೆ ಉಡಿತುಂಬುವ ಕಾರ್ಯಕ್ರಮ ನೆರವೇರಿಸಲಾಯಿತು. 108 ದಿನದ ಉಡಿತುಂಬುವ ಕಾರ್ಯಕ್ರಮವನ್ನು ಗ್ರಾಮಸ್ಥರು ಶೃದ್ದಾಪೂರ್ವಕವಾಗಿ ನೆರವೇರಿಸಿದ್ರು. ಈ ವೇಳೆ ದ್ಯಾಮವ್ವ ತಾಯಿಗೆ ಸಾಂಪ್ರದಾಯಿಕವಾಗಿ ಉಡಿ ತುಂಬಲಾಯಿತು. ವಿಶೇಷವಾಗಿ ಪೂಜೆ ನೆರವೇರಿಸಿ ಪ್ರಸಾದ ಹಂಚಲಾಯಿತು. ಈ ವೇಳೆ ಗ್ರಾಮದ ಮುಖಂಡರು, ಮುತ್ತೈದೆಯರು ಸೇರಿದಂತೆ ಹಲವರು ಭಾಗಿಯಾಗಿದ್ರು.