ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡರ ಖುರ್ಚಿಗೆ ಕುತ್ತು, ನಾಮಿನೇಟ್ ಮಾಡಿದ್ದೇ ಕಾನೂನು ಬಾಹಿರವಂತೆ, ಹೈಕೋರ್ಟ್ ಮಹತ್ವದ ಆದೇಶ..!

ಮಾರ್ಕೆಟಿಂಗ್ ಸೊಸೈಟಿ ಅಧ್ಯಕ್ಷ ರವಿಗೌಡರ ಖುರ್ಚಿಗೆ ಕುತ್ತು, ನಾಮಿನೇಟ್ ಮಾಡಿದ್ದೇ ಕಾನೂನು ಬಾಹಿರವಂತೆ, ಹೈಕೋರ್ಟ್ ಮಹತ್ವದ ಆದೇಶ..!

 ಇದು ಮುಂಡಗೋಡ ತಾಲೂಕಿನ ಪಾಲಿಗೆ ಅಚ್ಚರಿಯ ಸಂಗತಿ. ಮುಂಡಗೋಡ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷರ ಖುರ್ಚಿಗೆ ಕುತ್ತು ಬಂದಿದೆಯಾ..? ಮಾರ್ಕೆಟಿಂಗ್ ಸೊಸೈಟಿಗೆ ರವಿಗೌಡ ಪಾಟೀಲರ ನಾಮನಿರ್ದೇಶನವೇ ಕಾನೂನು ಬಾಹಿರಾಗಿದೆ ಅಂತಾ ಹೈಕೋರ್ಟ್ ಧಾರವಾಡ ವಿಭಾಗೀಯ ಪೀಠ ಆದೇಶ ನೀಡಿದೆ. 03.11.2020 ರಂದು ರವಿಗೌಡ ಪಾಟೀಲರನ್ನು ಸರ್ಕಾರದಿಂದಲೇ ನಾಮ ನಿರ್ದೇಶನಗೊಳಿಸಿದ್ದು ಕಾನೂನು ಬಾಹಿರ ಅಂತಾ ಸರ್ಕಾರದ ಆದೇಶವನ್ನು ಮಾನ್ಯ ಹೈಕೋರ್ಟ್ ವಿಭಾಗೀಯ ಪೀಠ ಕಿತ್ತು ಹಾಕಿದೆ. ಹೀಗಾಗಿ, ಸಚಿವ ಶಿವರಾಮ್ ಹೆಬ್ಬಾರ್ ರವರ ಪರಮಾಪ್ತ, ಬಿಜೆಪಿಯ ಪ್ರಭಾವಿ ಮುಖಂಡ ರವಿಗೌಡ ಪಾಟೀಲರಿಗೆ ದಕ್ಕಿದ್ದ ಇಲ್ಲಿನ ಪ್ರತಿಷ್ಟಿತ ಮಾರ್ಕೆಟಿಂಗ್ ಸೊಸೈಟಿಯ ಅಧ್ಯಕ್ಷ ಗಾದಿ ಬಹುತೇಕ ಕೈ ತಪ್ಪುವಂತಾಗಿದೆ. ಕಾನೂನು ಬಾಹಿರ..! ಅಂದಹಾಗೆ, 3.11.2020 ರಂದು ಮಾರ್ಕೆಟಿಂಗ್ ಸೊಸೈಟಿಯಲ್ಲಿ ಅಧ್ಯಕ್ಷ ಪದವಿಗಾಗಿಯೇ ಸರ್ಕಾರದ ಪರವಾಗಿ ನಾಮಿನೇಟ್ ಸದಸ್ಯರನ್ನಾಗಿ ರವಿಗೌಡರಿಗೆ ನೇಮಿಸಲಾಗಿತ್ತು. ಅಧ್ಯಕ್ಷ ಪದವಿ ನೀಡುವ ಸಲುವಾಗಿಯೇ ಕಾನೂನು ಬಾಹಿರವಾಗಿ ನಾಮಿನೆಟ್ ಮಾಡಲಾಗಿದೆ ಅಂತಾ ಕೆಲವು ಸದಸ್ಯರು ಕೋರ್ಟ್ ಮೊರೆ ಹೋಗಿದ್ದರು‌. ಹೀಗಾಗಿ, ಸದ್ಯ ಹೈಕೋರ್ಟ್ ವಿಭಾಗೀಯ...

ಉತ್ತರ ಕನ್ನಡ ಎಸ್ಪಿ ಸುಮನಾ ಪೆನ್ನೇಕರ್ ಎತ್ತಂಗಡಿ, ವರ್ಗಾವಣೆಗೊಳಿಸಿ ಸರ್ಕಾರ ಆದೇಶ..!

ಉತ್ತರ ಕನ್ನಡ ಎಸ್ಪಿ ಸುಮನಾ ಪೆನ್ನೇಕರ್ ಎತ್ತಂಗಡಿ, ವರ್ಗಾವಣೆಗೊಳಿಸಿ ಸರ್ಕಾರ ಆದೇಶ..!

ಉತ್ತರ ಕನ್ನಡ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯಾಗಿದ್ದ ಡಾ.ಸುಮನಾ ಪೆನ್ನೇಕರ್ ಎತ್ತಂಗಡಿಯಾಗಿದ್ದಾರೆ. ಒಂದೇ ಒಂದು ವರ್ಷದ ಅವದಿಯಲ್ಲೇ ಉತ್ತರ ಕನ್ನಡ ಜಿಲ್ಲೆಯಿಂದ ಎಸ್ಪಿ‌ ಮೇಡಂ ವರ್ಗಾವಣೆ ಮಾಡಿದ್ದು ಜಿಲ್ಲೆಯಾದ್ಯಂತ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ. ಅಂದಹಾಗೆ, ಪಬ್ಲಿಕ್ ಫಸ್ಟ್ ನ್ಯೂಸ್ ಕಳೆದ ಒ‌ಂದು ತಿಂಗಳ ಹಿಂದೆಯೇ ‌ನುಡಿದಿದ್ದ ಭವಿಷ್ಯ ನಿಜವಾಗಿದ್ದು, ಉತ್ತರ ಕನ್ನಡಕ್ಕೆ ನೂತನ ಎಸ್ಪಿಯಾಗಿ ಎನ್. ವಿಷ್ಣುವರ್ಧನ್ ವರ್ಗಾವಣೆಗೊಂಡಿದ್ದಾರೆ. ಡಾ ಸುಮನಾ ಪೆನ್ನೇಕರ್ ಮೇಡಂ ಜಿಲ್ಲೆಗೆ ಎಂಟ್ರಿಯಾಗಿ ಬಂದಾಗಿನಿಂದ ಇಲ್ಲಿ‌ನ ಅಕ್ರಮಿಗಳು ಬಾಲ ಬಿಚ್ಚಲು ಸಾಧ್ಯವಾಗಿರಲಿಲ್ಲ. ಹೀಗಾಗಿ, ಅದೇಷ್ಟೋ ಅಕ್ರಮ ಚಟುವಟಿಕೆಗಳಿಗೆ ಬ್ರೇಕ್ ಬಿದ್ದಿತ್ತು. ಹೀಗಾಗಿ, ಕೆಲವು ರಾಜಕಾರಣಿಗಳೂ ಸೇರಿದಂತೆ ಅಕ್ರಮಿಗಳು, ಎಸ್ಪಿ ವರ್ಗಾವಣೆಗೆ ಪಟ್ಟು ಹಿಡಿದು ಬೆಂಗಳೂರಿಗೆ ಅಲೆದಿದ್ದರು. ಅದ್ರಂತೆ, ಸರ್ಕಾರ ಇಂದು ಎಸ್ಪಿ ಡಾ. ಸುಮನಾ ಪೆನ್ನೇಕರ್ ರವರನ್ನ ತಕ್ಷಣದಿಂದಲೆ ವರ್ಗಾವಣೆಗೊಳಿಸಿ ಆದೇಶ ಹೊರಡಿಸಿದೆ.

ಕುನ್ನೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಕುನ್ನೂರಿನ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಕನ್ನಡ ರಾಜ್ಯೋತ್ಸವ

ಶಿಗ್ಗಾವಿ: ವಿದ್ಯಾರ್ಥಿಗಳು ತಮ್ಮ ಪ್ರಾಥಮಿಕ ಶಿಕ್ಷಣ ಕಲಿಕಾ ದಿನಗಳಲ್ಲಿ ನಾಡು ನುಡಿಯ ಹೆಮ್ಮೆಯ ಸಂಘತಿಗಳ ಕುರಿತು ತಿಳಿದುಕೊಂಡು ನಾಡಿನ ಕೀರ್ತಿ ಬೆಳಗಿದ ಮಹನಿಯರ ಆದರ್ಶಗಳನ್ನು ಪಾಲಿಸುತ್ತ ಹೋದಾಗ ಉತ್ತಮ ರಾಷ್ಟದ ಶಕ್ತಿಗಳಾಗಿ ಹೊರ ಹೊಮ್ಮುತ್ತಾರೆ ಎಂದು ಶಿಕ್ಷಣ ಪ್ರೇಮಿ ಶಿವಾನಂದ ದೊಡ್ಡಮನಿ ಹೇಳಿದರು. 67ನೇ ಕನ್ನಡ ರಾಜ್ಯೋತ್ಸವದ ನಿಮಿತ್ಯ ಶಿಗ್ಗಾವಿ ತಾಲೂಕ ಕುನ್ನೂರ ಪ್ಲಾಟ್ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಕರ್ನಾಟಕದ ಜನತೆಗೆ ನವೆಂಬರ್ 1 ಹೆಮ್ಮೆಯ ದಿನವಾಗಿದೆ. ಪ್ರತಿ ವರ್ಷ ನವೆಂಬರ್ 1 ರಂದು ಕರ್ನಾಟಕ ರಾಜ್ಯೋತ್ಸವವನ್ನು ಬಹಳ ಅದ್ಧೂರಿಯಿಂದ ಆಚರಣೆ ಮಾಡಲಾಗುತ್ತದೆ, ಈ ದಿನದಂದು ಇಡಿ ಕರ್ನಾಟಕದ ಪ್ರತಿ ಮನೆಯಲ್ಲೂ ಹಬ್ಬದ ರೀತಿಯಲ್ಲಿ ರಾಜ್ಯೋತ್ಸವವನ್ನು ಆಚರಣೆ ಮಾಡುತ್ತಾರೆ. ಈ ದಿಸೆಯಲ್ಲಿ ಶಾಲೆಗಳಲ್ಲಿ ಕಾರ್ಯಕ್ರಮಗಳನ್ನು ಆಚರಿಸುವದರಿಂದ ವಿದ್ಯಾರ್ಥಿಗಳಲ್ಲಿ ನಾಡು, ನುಡಿ ಬಾಷಾ ಪ್ರೇಮದ ಬಗ್ಗೆ ಶಿಕ್ಷಣ ನೀಡಿದಂತಾಗುತ್ತದೆ ಎಂದರು. ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷ ಮೈಲಾರಪ್ಪ ಮಮದಾಪುರ ಮಾತನಾಡಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ...

ಸಂತೋಷ ರಾಯ್ಕರ್ ಜೆಡಿಎಸ್ ಅಭ್ಯರ್ಥಿ ಅಲ್ಲವಂತೆ, ಅಷ್ಟಕ್ಕೂ ಕೋಮಾದಲ್ಲಿರೋ ಪಕ್ಷಕ್ಕೆ ಜೀವ ತುಂಬ್ತಾರಾ ನಾಗೇಶ್ ನಾಯ್ಕ್..?

ಸಂತೋಷ ರಾಯ್ಕರ್ ಜೆಡಿಎಸ್ ಅಭ್ಯರ್ಥಿ ಅಲ್ಲವಂತೆ, ಅಷ್ಟಕ್ಕೂ ಕೋಮಾದಲ್ಲಿರೋ ಪಕ್ಷಕ್ಕೆ ಜೀವ ತುಂಬ್ತಾರಾ ನಾಗೇಶ್ ನಾಯ್ಕ್..?

ಯಲ್ಲಾಪುರ ಕ್ಷೇತ್ರದಲ್ಲಿ ಜೆಡಿಎಸ್ ಅನ್ನೋದು ಆಟಕ್ಕುಂಟು ಲೆಕ್ಕಕ್ಕಿಲ್ಲದ ಪಕ್ಷವಾಗಿ ವರ್ಷಗಳೇ ಕಳೆದು ಹೋಗಿದೆ. ಪ್ರತೀ ಚುನಾವಣೆ ಬಂದಾಗಲಷ್ಟೇ ಎಲ್ಲೆಲ್ಲಿಂದಲೋ ಬಂದು ಬ್ಯಾನರು, ಪ್ಲೆಕ್ಸು ಕಟ್ಟುವ ನಾಯಕರುಗಳು ಇನ್ನೇನು ಮತದಾನದ ದಿನ ಹತ್ತಿರ ಬರುತ್ತಿದ್ದಂತೆ ನಾಪತ್ತೆಯಾಗುವ ಚಾಳಿ “ಸಂಪ್ರದಾಯ” ಆದಂತೆ ಆಗಿದೆ. ಸದ್ಯ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿರೋ ಈ ಸಂದರ್ಭದಲ್ಲೂ ಮತ್ತದೇ ಸಂಪ್ರದಾಯ ಶುರುವಾಯ್ತಾ ಅನ್ನೋ ಪ್ರಶ್ನೆ ಎದುರಾಗಿದೆ. ಯಾಕಂದ್ರೆ, ಪ್ರಸಕ್ತ ಮುಂಡಗೋಡ ಜೆಡಿಎಸ್ ನಲ್ಲಿ ನಡೆಯುತ್ತಿರೋ ವಿದ್ಯಮಾನಗಳು ಅಂತಹದ್ದೊಂದು ಅನುಮಾನಕ್ಕೆ ಕಾರಣವಾಗ್ತಿದೆ. ಅವ್ರು ಸಂತೋಷ ರಾಯ್ಕರ್ ಹೆಚ್ಚೂ ಕಡಿಮೆ ಒಂದು ವರ್ಷ ಆಗ್ತಾ ಬಂತು, ಮುಂಡಗೋಡ ತಾಲೂಕಿನಾಧ್ಯಂತ ಮುಂದಿನ ವಿಧಾನಸಭಾ ಚುನಾವಣೆಗೆ ನಾನೇ ಜೆಡಿಎಸ್ ಅಭ್ಯರ್ಥಿ ಅಂತಾ ಎಲ್ಲಾ ಕಡೆ ಹೇಳಿಕೊಂಡು ತಿರುಗಾಡಿದ್ದವರು ಇವ್ರು. ಹೆಸ್ರು ಸಂತೋಷ ರಾಯ್ಕರ್ ಅಂತಾ. ಮೊದ ಮೊದಲು ಬಿಜೆಪಿಯಲ್ಲಿ ಗುರುತಿಸಿಕೊಂಡಿದ್ದವರು. ನಂತರ ಅದೇನಾಯ್ತೋ ಗೊತ್ತಿಲ್ಲ. ರಾತ್ರೋ ರಾತ್ರಿ ತೆನೆಹೊತ್ತ ಮಹಿಳೆಯನ್ನ ವರಿಸಿಕೊಂಡ್ರು. ಆ ಬಳಿಕ ಬಹುತೇಕ ಗ್ರಾಮಗಳಲ್ಲಿ ಹಬ್ಬ ಹರಿದಿನಗಳಿಗೆ ಶುಭಾಶಯಗಳ ಪ್ಲೆಕ್ಸು, ಬ್ಯಾನರು ಕಟ್ಟಿ...

ಕಾತೂರು ನಂದಿಪುರದ ಬಳಿ ಭೀಕರ ಅಪಘಾತ, ಎರಡು ಬೈಕಿಗೆ ಕಾರು ಡಿಕ್ಕಿ ಮೂವರಿಗೆ ಗಂಭೀರ ಗಾಯ..!

ಕಾತೂರು ನಂದಿಪುರದ ಬಳಿ ಭೀಕರ ಅಪಘಾತ, ಎರಡು ಬೈಕಿಗೆ ಕಾರು ಡಿಕ್ಕಿ ಮೂವರಿಗೆ ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ನಂದೀಪುರ ಬಳಿ ಭೀಕರ ಅಪಘಾತವಾಗಿದೆ. ರಾಂಗ್ ಸೈಡ್ ಬಂದ ಕಾರೊಂದು ಎರಡು ಬೈಕ್ ಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಬೈಕ್ ನಲ್ಲಿದ್ದ ಮಹಿಳೆಯೂ ಸೇರಿ ಮೂವರಿಗೆ ಗಂಭೀರ ಗಾಯವಾಗಿದೆ. ಮುಂಡಗೋಡ ಕಡೆಯಿಂದ ಶಿರಸಿ ಕಡೆಗೆ ಹೋಗುತ್ತಿದ್ದ ಕಾರು, ಶಿರಸಿ ಕಡೆಯಿಂದ ಮುಂಡಗೋಡ ಕಡೆಗೆ ಬರುತ್ತಿದ್ದ ಎರಡು ಬೈಕ್ ಗಳಿಗೆ ಡಿಕ್ಕಿಯಾಗಿದೆ. ಪರಿಣಾಮ ಬೈಕಿನಲ್ಲಿದ್ದ ಹಾವೇರಿ ಮೂಲದ ಓರ್ವ ಮಹಿಳೆ ಹಾಗೂ ಪುರುಷನಿಗೆ ಗಂಭೀರ ಗಾಯವಾಗಿದೆ. ಹಾಗೆಯೇ ಮತ್ತೊಂದು ಬೈಕಿನಲ್ಲಿದ್ದ ವ್ಯಕ್ತಿಗೂ ಗಾಯವಾಗಿದೆ. ಎಣ್ಣೆ ಏಟಲ್ಲಿ..? ಅಂದಹಾಗೆ, ಅಕ್ಷರಶಃ ರಾಂಗ್ ರೂಟ್ ನಲ್ಲಿದ್ದ KA 33 M 4620 ನೋಂದಣಿ ಸಂಖ್ಯೆಯ ಕಾರು, ಬೈಕುಗಳಿಗೆ ಡಿಕ್ಕಿಹೊಡೆದಿದೆ, ಕಾರಿನಲ್ಲಿದ್ದವರು ಅಪಘಾತವಾದ ತಕ್ಷಣವೇ ಕಾರು ಬಿಟ್ಟು ಪರಾರಿಯಾಗಿದ್ದಾರೆ ಎನ್ನಲಾಗಿದೆ. ಕಾರಿನಲ್ಲಿ ಇಬ್ಬರು ಯುವತಿಯರ ಜೊತೆ ಮತ್ತಿಬ್ಬರು ಯುವಕರು ಇದ್ದರು ಎನ್ನಲಾಗಿದೆ. ಕಾರಿನಲ್ಲಿ ಎಣ್ಣೆ ಬಾಟಲಿಗಳು, ಕಾಂಡೋಮ್ ಪಾಕೇಟ್ಸ್ ಸಿಕ್ಕಿದ್ದು ಕುಡಿದ ನಶೆಯಲ್ಲೇ ಅತಿ ವೇಗದಲ್ಲಿ ಕಾರು ಚಲಾಯಿಸಿ ಅಪಘಾತ ಪಡಿಸಿದ್ದಾರೆ ಅಂತಾ ಸ್ಥಳೀಯರು...

ಮುಂಡಗೋಡಿನಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ರಾಜ್ಯೋತ್ಸವ, ಧ್ವಜಾರೋಹಣ ಮಾಡಿದ ಪಿಐ ಸಿಮಾನಿ

ಮುಂಡಗೋಡಿನಲ್ಲಿ ಕರವೇ ಪ್ರವೀಣ್ ಶೆಟ್ಟಿ ಬಣದಿಂದ ರಾಜ್ಯೋತ್ಸವ, ಧ್ವಜಾರೋಹಣ ಮಾಡಿದ ಪಿಐ ಸಿಮಾನಿ

ಮುಂಡಗೋಡ: ಕನ್ನಡ ರಾಜ್ಯೋತ್ಸವದ ಅಂಗವಾಗಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ ಶೆಟ್ಟಿ ಬಣ) ತಾಲೂಕಾ ಘಟಕದ ವತಿಯಿಂದ ಇಲ್ಲಿನ ಶಿವಾಜಿ ವೃತ್ತದಲ್ಲಿ ಕನ್ನಡ ದ್ವಜಾರೋಹಣ ನೆರವೇರಿಸಲಾಯಿತು. ಮುಂಡಗೋಡ ಪಿಐ ಸಿದ್ದಪ್ಪ ಸಿಮಾನಿ ದ್ವಜಾರೋಹಣ ನೆರವೇರಿಸಿ ಮಾತನಾಡಿದ್ರು. ವಿವಿಧ ರಾಜ್ಯದೆಡೆಯಿಂದ ಬಂದ ಪ್ರತಿಯೊಬ್ಬರೂ ಈ ನಾಡಿನ ಋಣ ತೀರಿಸುವ ಕೆಲಸ ಮಾಡಬೇಕಿದೆ ಇಲ್ಲಿ ದೊರಕುವ ಶಾಂತಿ ಸಂಹಿತೆ ದೇಶದ ಇತರೆ ಕಡೆ ಕಾಣಸಿಗುವುದಿಲ್ಲ ಎಂದ ಅವರು, ತಾಲೂಕಿಗೆ ನೂತನವಾಗಿ ಆಗಮಿಸಿರುವ ಪ್ರವೀಣ ಶೆಟ್ಟಿ ಬಣದಿಂದ ಹೆಚ್ಚಿನದನ್ನು ನಿರೀಕ್ಷಿಸಲಾಗಿದೆ ನ್ಯಾಯಕ್ಕಾಗಿ ಬಡವರ ಪರವಾಗಿ ಹೋರಾಡಿ ಭ್ರಷ್ಟತೆ ಹೋಗಲಾಡಿಸಲು ಪಣ ತೊಡಲು ಕರೆ ನೀಡಿದ್ರು. ಈ ವೇಳೆ ದಲಿತ ರಕ್ಷಣಾ ವೇದಿಕೆ ರಾಜ್ಯಾಧ್ಯಕ್ಷ ಚಿದಾನಂದ ಹರಿಜನ, ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಅಧ್ಯಕ್ಷ ಜಗದೀಶ ದೈವಜ್ಞ, ನಿವೃತ್ತ ಶಿಕ್ಷಕ ಬಸವರಾಜ ಹೂಗಾರ, ನಿವೃತ್ತ ಶಿರಸ್ತೇದಾರ್ ತಳವಾರ, ಸಂಗಮೇಶ್ವರ್ ಸೊಸೈಟಿ ಅಧ್ಯಕ್ಷ ಸಂಗಮೇಶ್ವರ್ ಕೋಳೂರ, ರಕ್ಷಣಾ ವೇದಿಕೆ ರೈತ ಘಟಕದ ಅಧ್ಯಕ್ಷ ರಾಮುಗೌಳಿ, ಸಂಘಟನಾ ಕಾರ್ಯದರ್ಶಿ ಮಣಿಕಂಠ...

ಬಾಚಣಕಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್ ಅಕಾಲಿಕ ನಿಧನ

ಬಾಚಣಕಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್ ಅಕಾಲಿಕ ನಿಧನ

ಮುಂಡಗೋಡ ತಾಲೂಕಿನ ಬಾಚಣಕಿಯ ಹಿರಿಯ ಗುತ್ತಿಗೆದಾರ ಬರಮಪ್ಪ ಏಗಪ್ಪನವರ್(70) ವಿಧಿವಶರಾಗಿದ್ದಾರೆ. ಹೃದಯಾಘಾತದಿಂದ ಕೊನೆಯುಸಿರು ಎಳೆದಿರೋ ಬರಮಪ್ಪ ಜನಾನುರಾಗಿಯಾಗಿದ್ದರು. ಮಂಗಳವಾರ ಮದ್ಯಾಹ್ನ ಮನೆಯಲ್ಲಿ ಊಟ ಮುಗಿಸಿಕೊಂಡು ವಿಶ್ರಾಂತಿ ಪಡೆಯುತ್ತಿದ್ದ ಬರಮಪ್ಪ, ಏಕಾಏಕಿ ಹೃದಯಾಘಾತದಿಂದ ಕುಸಿದು ಬಿದ್ದು ಅಸು ನೀಗಿದ್ದಾರೆ‌. ಮೃತರು ಇಬ್ಬರು ಪುತ್ರಿಯರು ಸೇರಿದಂತೆ ಅಪಾರ ಬಳಗವನ್ನು ಅಗಲಿದ್ದಾರೆ‌. ಇನ್ನು ಬರಮಪ್ಪ ಏಗಪ್ಪನವರ್ ನಿಧನಕ್ಕೆ ತಾಲೂಕಿನ ಜೈನ ಸಮಾಜ ಕಂಬನಿ ಮಿಡಿದಿದೆ.

ವಿ.ಎಸ್.ಪಾಟೀಲ್ “ಕಮಲ” ತೊರೆದು “ಕೈ” ಹಿಡಿಯೊ ಮುಹೂರ್ತ ಫಿಕ್ಸ್: ಸಂಚಲನ ಪಕ್ಕಾನಾ..?

ವಿ.ಎಸ್.ಪಾಟೀಲ್ “ಕಮಲ” ತೊರೆದು “ಕೈ” ಹಿಡಿಯೊ ಮುಹೂರ್ತ ಫಿಕ್ಸ್: ಸಂಚಲನ ಪಕ್ಕಾನಾ..?

ಯಲ್ಲಾಪುರ ಕ್ಷೇತ್ರದ ಮಾಜಿ ಬಿಜೆಪಿ ಶಾಸಕ ಮಾಜಿ NWKSRTC ಅಧ್ಯಕ್ಷ ವಿ.ಎಸ್. ಪಾಟೀಲ್ “ಕೈ” ಪಡೆ ಸೇರುವ ಮುಹೂರ್ತ ಫಿಕ್ಸ್ ಆಗಿದೆ. ನೆವೆಂಬರ್ 4 ರಂದು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲೇ ಕಮಲ ತೊರೆದು “ಕೈ” ಹಿಡಿಯಲಿದ್ದಾರೆ ಪಾಟೀಲರು. ಅಂದಹಾಗೆ, ಇವತ್ತು ಬೆಂಗಳೂರಿನಲ್ಲಿ ಇಂತಹದ್ದೊಂದು ತೀರ್ಮಾನ ಹೊರಬಿದ್ದಿದೆ. ಡಿಕೆಶಿ ಭೇಟಿ..! ಅಸಲು, ಹಲವು ತಿಂಗಳುಗಳಿಂದಲೇ ಬಿಜೆಪಿ ಜೊತೆಗಿನ ಸಂಬಂಧ ಕಳೆದುಕೊಂಡಿದ್ದ ವಿಎಸ್ಪಿ, ಬಹುತೇಕ ಕಾಂಗ್ರೆಸ್ಸಿನ ಪಡಸಾಲೆಯಲ್ಲಿ ಒಂದು ಹೆಜ್ಜೆ ಇಟ್ಟಾಗಿತ್ತು. ಆದ್ರೆ, ಕಾಂಗ್ರೆಸ್ ನ ಭಾರತ್ ಜೋಡೋ ಕಾರ್ಯಕ್ರಮದಲ್ಲಿ ರಾಜ್ಯ ನಾಯಕರು ಬ್ಯುಸಿಯಾಗಿದ್ದ ಕಾರಣಕ್ಕೆ ಪಕ್ಷ ಸೇರುವ ದಿನಾಂಕ ಮಾತ್ರ ಬಾಕಿ ಉಳಿಸಿಕೊಳ್ಳಲಾಗಿತ್ತು. ಇವತ್ತು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರನ್ನು ಹಲವು ಮುಖಂಡರ ಜೊತೆ ಡಿಕೆಶಿ ನಿವಾಸದಲ್ಲೇ ಭೇಟಿ‌ಮಾಡಿದ ವಿ.ಎಸ್.ಪಾಟೀಲ್, ಕಾಂಗ್ರೆಸ್ ಸೇರ್ಪಡೆಯ ದಿನಾಂಕ ಪಿಕ್ಸ್ ಮಾಡಿಕೊಂಡಿದ್ದಾರೆ. ಮೊದಲು ಸೇರ್ಪಡೆ ನಂತ್ರ ಸಮಾವೇಶ..! ಬೆಂಗಳೂರಿನಲ್ಲಿ ನಡೆದ ಡಿಕೆಶಿ ಭೇಟಿ ವೇಳೆ ಚರ್ಚಿತವಾದಂತೆ, ನವೆಂಬರ್ 4 ರಂದು ಕೆಪಿಸಿಸಿ ಕಚೇರಿಯಲ್ಲೇ ಪಕ್ಷ ಸೇರ್ಪಡೆ ಕಾರ್ಯಕ್ರಮ...

ಇಂದಿರಾನಗರದ ಬಳಿ ಬೈಕ್ ಅಪಘಾತ ಓರ್ವನಿಗೆ ಗಂಭೀರ ಗಾಯ..!

ಇಂದಿರಾನಗರದ ಬಳಿ ಬೈಕ್ ಅಪಘಾತ ಓರ್ವನಿಗೆ ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ಇಂದಿರಾನಗರದ ಬಳಿ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಪರಿಣಾಮ ಬೈಕ್ ನಲ್ಲಿದ್ದ ಓರ್ವನಿಗೆ ಗಂಭೀರ ಗಾಯವಾಗಿದ್ದು ಆಸ್ಪತ್ರೆಗೆ ರವಾನಿಸಲಾಗಿದೆ. ಮುಂಡಗೋಡಿನಿಂದ ಕಲಘಟಗಿ ಕಡೆಗೆ ಹೋಗುತ್ತಿರುವಾಗ, ಇಂದಿರಾ ನಗರ ಹತ್ತಿರ ಬೈಕ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಬೈಕ್ ನಲ್ಲಿದ್ದ ಕುಂದಗೋಳ ತಾಲೂಕಿ‌ನ ಸುರೇಶ ಶಿವಪ್ಪ ಗುಡಿಯಾಳ್(33) ಎಂಬುವವರಿಗೆ ತಲೆಗೆ ಹಾಗೂ ಮುಖಕ್ಕೆ ಗಾಯವಾಗಿದೆ. ಅದೃಷ್ಟವಶಾತ್ ಮತ್ತೊರ್ವನಿಗೆ ಯಾವುದೇ ಗಾಯವಾಗದೆ ಸುರಕ್ಷಿತವಾಗಿದ್ದಾನೆ. ಇನ್ನು ಅಪಘಾತ ನಡೆದ ತಕ್ಷಣವೇ ಮುಂಡಗೋಡ ತಾಲೂಕಾಸ್ಪತ್ರೆಗೆ ಗಾಯಾಳುವನ್ನು ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ‌.

ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ

ಮುಂಡಗೋಡ ತಾಲೂಕಿನ ಇಂದೂರಿನ ಜನಪದ ಕಲಾವಿದ ಸಹದೇವಪ್ಪ ನಡಗೇರಿಯವರಿಗೆ ಪ್ರಸಕ್ತ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ದೊರೆತಿದೆ. ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ‌ ಮಾಡಿ ರಾಜ್ಯ ಸರ್ಕಾರ ಇಂದು ಘೋಷಣೆ ಮಾಡಿದೆ. ಅಂದಹಾಗೆ, ಸಹದೇವಪ್ಪ ನಡಗೇರಿಯವರು ತಾಲೂಕಿನ ಹಿರಿಯ ಜನಪದ ಕಲಾವಿದರಾಗಿದ್ದು, ವಿಶೇಷ ಶೈಲಿಯ ಜನಪದ ಗೀತೆಗಳನ್ನು ಹಾಡುತ್ತ ಜನಮನ ಗೆದ್ದಿದ್ದಾರೆ. ಸದ್ಯ ಮುಂಡಗೋಡ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿ ಸೇವೆ ಸಲ್ಲಿಸ್ತಿರೋ ನಡಗೇರಿಯವರಿಗೆ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದ್ದು ತಾಲೂಕಿನ ಜನರ ಹರ್ಷಕ್ಕೆ ಕಾರಣವಾಗಿದೆ. ಪಬ್ಲಿಕ್ ಫಸ್ಟ್ ನ್ಯೂಸ್ ಪರವಾಗಿ ಸಾಧಕ ಸಹದೇವಪ್ಪ ನಡಗೇರಿಯವರಿಗೆ ಅಭಿನಂದನೆಗಳು

error: Content is protected !!