ಉತ್ತರ ಕನ್ನಡ ಜಿಲ್ಲೆಗೆ ರಾತ್ರೋ ರಾತ್ರಿ ಎಂಟ್ರಿ ಕೊಟ್ರಾ ಪ್ರಧಾನಿ ಮೋದಿ..?

ಉತ್ತರ ಕನ್ನಡ ಜಿಲ್ಲೆಗೆ ರಾತ್ರೋ ರಾತ್ರಿ ಎಂಟ್ರಿ ಕೊಟ್ರಾ ಪ್ರಧಾನಿ ಮೋದಿ..?

 ಕುಮಟಾ: ಅಲ್ಲಿ ಎಲ್ಲಿ ನೋಡಿದರಲ್ಲಿ ಕೇಕೆ, ಚಪ್ಪಾಳೆ, ಜಯಘೋಷಗಳು..! ಮೋದಿ, ಮೋದಿ, ಮೋದಿ ಅನ್ನೋ ಅಭಿಮಾನದ ಹರ್ಷೋದ್ಘಾರ. ಅಭಿಮಾನಿಗಳತ್ತ ಕೈ ಬೀಸುತ್ತಿದ್ದ ಪ್ರಧಾನಿ ನರೇಂದ್ರ ಮೋದಿಯವರಿಗೆ ಜಯಘೋಷಗಳ ಹೂಮಳೆ. ಇದು ಕಂಡು ಬಂದಿದ್ದು ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ.. ಅಂದಹಾಗೆ, ಉತ್ತರ ಕನ್ನಡ ಜಿಲ್ಲೆಗೆ ಪ್ರಧಾನಿ ನರೇಂದ್ರ ಮೋದಿ ರಾತ್ರೊ ರಾತ್ರಿ ಎಂಟ್ರಿ ಕೊಟ್ಟಿದ್ದಾರೆ. ಸಾವಿರಾರು ಅಭಿಮಾನಿಗಳ ಮನಗೆದ್ದಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾದ ಸಾರ್ವಜನಿಕ ಗಣಪತಿಯ ವಿಸರ್ಜನಾ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ‌ ಪ್ರಧಾನಿ ಮೋದಿ..! ಅಷ್ಟಕ್ಕೂ ಇವ್ರು ಅಸಲೀ ಮೋದಿ ಅಂತಾ ಅನಕೊಂಡ್ರಾ..? ಖಂಡಿತ ಅಲ್ಲ. ಥೇಟು ಪ್ರಧಾನಿ ನರೇಂದ್ರ ಮೋದಿಯವರನ್ನೇ ಹೋಲುವ ವ್ಯಕ್ತಿ ಇವ್ರು‌. ಅಂದಹಾಗೆ, ಇವ್ರ ಹೆಸ್ರು ಸದಾನಂದ್ ನಾಯಕ್, ಮೂಲತಃ ಉಡುಪಿ ಜಿಲ್ಲೆಯವರು. ಥೇಟು ನರೇಂದ್ರ ಮೋದಯವರಂತೆ ಕಾಣುವ ಈ ಸದಾನಂದ ನಾಯಕರು ಕೈ ಬೀಸುತ್ತಿದ್ದಂತೆ ಜನಸ್ತೋಮ ನಿಬ್ಬೆರಗಾಗಿತ್ತು. ಮೋದಿಯವರೇ ಎದುರಿಗೆ ನಿಂತ ಭಾಸವಾಗಿತ್ತು. ಹೀಗಾಗಿ, ಈ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು...

ಮಜ್ಜಿಗೇರಿ ಕ್ರಾಸ್ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಜೇನುಮುರಿಯ ಬೈಕ್ ಸವಾರ ಸಾವು..!

ಮಜ್ಜಿಗೇರಿ ಕ್ರಾಸ್ ಬಳಿ ಅಪಘಾತದಲ್ಲಿ ಗಾಯಗೊಂಡಿದ್ದ ಜೇನುಮುರಿಯ ಬೈಕ್ ಸವಾರ ಸಾವು..!

ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಂ ಬಳಿಯ ಮಜ್ಜಿಗೇರಿ ಕ್ರಾಸ್ ಹತ್ತಿರ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಬೈಕ್ ಸವಾರ ಮೃತಪಟ್ಟಿದ್ದಾನೆ. ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾನೆ ಅಂತಾ ತಿಳಿದು ಬಂದಿದೆ. ಕಾರು ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾದ ಪರಿಣಾಮ, ಜೇನಮುರಿ ಗ್ರಾಮದ ಬಸವರಾಜ್ ಯಲ್ಲಪ್ಪ ಶ್ಯಾಡಂಬಿ(36) ಎಂಬುವವ ಗಂಭೀರ ಗಾಯಗೊಂಡಿದ್ದ. ಗಾಯಾಳುವನ್ನು 108 ಅಂಬ್ಯಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನಂತರ ಹೆಚ್ಚಿನ ಚಿಕಿತ್ಸೆಗಾಗಿ, ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿತ್ತು. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಉತ್ತರ ಕನ್ನಡ ಡಿಸಿ ಹಾಗೂ ಎಸ್ಪಿಯವರಿಗೆ ಮಾನವ ಹಕ್ಕುಗಳ ಆಯೋಗದಿಂದ ಸಮನ್ಸ್ ಜಾರಿ..!

ಉತ್ತರ ಕನ್ನಡ ಡಿಸಿ ಹಾಗೂ ಎಸ್ಪಿಯವರಿಗೆ ಮಾನವ ಹಕ್ಕುಗಳ ಆಯೋಗದಿಂದ ಸಮನ್ಸ್ ಜಾರಿ..!

ಕಾರವಾರ: ಉತ್ತರ ಕನ್ನಡ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗೆ ರಾಷ್ಟ್ರೀಯ ಮಾನವ ಹಕ್ಕು ಆಯೋಗ ದಿಂದ ಸಮನ್ಸ್ ಜಾರಿಯಾಗಿದೆ. ಹೊನ್ನಾವರದ ಕಾಸರಕೋಡು ಮೀನುಗಾರರು ಹಾಗೂ ಮೀನುಗಾರಿಕಾ ಮಹಿಳೆಯರ ಮೇಲೆ ದೌರ್ಜನ್ಯದ ಕುರಿತು ದಾಖಲಾದ ದೂರಿನನ್ವಯ ಸಮನ್ಸ್ ಜಾರಿಯಾಗಿದೆ. ಕಾಸರಕೋಡ ಖಾಸಗಿ ಬಂದರು ಕಾಮಗಾರಿ ಸ್ಥಗಿತ ಗೊಳಿಸುವಂತೆ ಆಗ್ರಹಿಸಿ ದಿನಾಂಕ 24/1/22 ರಂದು ಮೀನುಗಾರರು ಪ್ರತಿಭಟನೆ ನಡೆಸಿದ್ದರು. ಪ್ರತಿಭಟನೆ ವೇಳೆ ಪ್ರತಿಭಟನಾ ನಿರತ ಮೀನುಗಾರರು ಹಾಗೂ ಮೀನುಗಾರಿಕಾ ಮಹಿಳೆಯರ ಮೇಲೆ ಪೊಲೀಸರು ಲಾಠಿ ಚಾರ್ಜ್ ನಡೆಸಿದ್ದರು. ಹೀಗಾಗಿ, 6/05/22 ರಂದು ರಾಷ್ಟ್ರೀಯ ಮಾನವಹಕ್ಕು ಆಯೋಗದಲ್ಲಿ ಮೀನುಗಾರರು ದೂರು ದಾಖಲಿಸಿದ್ದರು. ಈ ಕಾರಣಕ್ಕಾಗಿ ಎಸ್ಪಿ ಹಾಗೂ ಡೀಸಿಯವರಿಗೆ ಸಮನ್ಸ್ ಜಾರಿ‌ಮಾಡಲಾಗಿದೆ

ಬಾಚಣಕಿಯ ಮಜ್ಜಿಗೇರಿ ಕ್ರಾಸ್ ಬಳಿ ಕಾರು ಬೈಕ್ ನಡುವೆ ಅಪಘಾತ, ಬೈಕ್ ಸವಾರ ಗಂಭೀರ..!

ಬಾಚಣಕಿಯ ಮಜ್ಜಿಗೇರಿ ಕ್ರಾಸ್ ಬಳಿ ಕಾರು ಬೈಕ್ ನಡುವೆ ಅಪಘಾತ, ಬೈಕ್ ಸವಾರ ಗಂಭೀರ..!

ಮುಂಡಗೋಡ ತಾಲೂಕಿನ ಬಾಚಣಕಿ ಡ್ಯಾಂ ಬಳಿಯ ಮಜ್ಜಿಗೇರಿ ಕ್ರಾಸ್ ಹತ್ತಿರ ಅಪಘಾತವಾಗಿದೆ. ಕಾರು ಹಾಗೂ ಬೈಕ್ ನಡುವೆ ಮುಖಾ ಮುಕಿ ಡಿಕ್ಕಿಯಾದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದಾನೆ. ಜೇನಮುರಿ ಗ್ರಾಮದ ಬಸವರಾಜ್ ಯಲ್ಲಪ್ಪ ಶ್ಯಾಡಂಬಿ(36) ಎಂಬುವವನಿಗೆ ಗಂಭೀರ ಗಾಯವಾಗಿದೆ. ಸದ್ಯ ಗಾಯಾಳುವನ್ನು 108 ಅಂಬ್ಯುಲೆನ್ಸ್ ಮೂಲಕ ಮುಂಡಗೋಡ ತಾಲೂಕಾಸ್ಪತ್ರೆಗೆ ರವಾನಿಸಲಾಗಿತ್ತು. ಪ್ರಥಮ ಚಿಕಿತ್ಸೆ ನಂತರ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಇನ್ನು ಗಾಯಾಳುವಿನ ಬಳಿಯಿದ್ದ 1450 ರೂ. ಹಾಗೂ ಮೊಬೈಲ್ ಸಂಬಂಧಿಕರಿಗೆ ಹಸ್ತಾಂತರಿಸಲಾಗಿದೆ. 108 ಅಂಬ್ಯಲೆನ್ಸ್ ಸಿಬ್ಬಂದಿಗಳಾದ ಧನರಾಜ್ ಹಾಗೂ ಚಾಲಕರು ಸಮಯಪ್ರಜ್ಞೆ ತೋರಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಹುಲಿಹೊಂಡ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ಕೊಲೆ ಮಾಡಿ ಬೀಸಾಕಿದ್ರಾ ದುರುಳರು..?

ಹುಲಿಹೊಂಡ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆ, ಕೊಲೆ ಮಾಡಿ ಬೀಸಾಕಿದ್ರಾ ದುರುಳರು..?

ಮುಂಡಗೋಡ ತಾಲೂಕಿನ ಹುಲಿಹೊಂಡದ ಬಳಿ ಅಪರಿಚಿತ ವ್ಯಕ್ತಿಯ ಶವ ಪತ್ತೆಯಾಗಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿರೋ ಶವ ಹಲವು ಅನುಮಾನ ಮೂಡಿಸಿದೆ. ಇಂದು ಬೆಳಿಗ್ಗೆ ಪತ್ತೆಯಾಗಿರೋ ಶವ ಆತಂಕಕ್ಕೆ ಕಾರಣವಾಗಿದೆ. ಕೊಂದು ಬೀಸಾಕಿದ್ರಾ..? ಅಸಲು, ಮೇಲ್ನೋಟಕ್ಕೆ ಇದು ಕೊಲೆಯೊ ಅಥವಾ ಬೇರಿನ್ನೇನೋ ಕಾರಣಕ್ಕೆ ನಡೆದಿರೋ ಘಟನೆಯೋ ತನಿಖೆಯ ನಂತರವಷ್ಟೇ ತಿಳಿದು ಬರಬೇಕಿದೆ. ಸಂಪೂರ್ಣ ಕೊಳೆತ ಸ್ಥಿತಿಯಲ್ಲಿರೋ ಶವದ ಮುಖ ವಿರೂಪಗೊಂಡಿದೆ. ಸದ್ಯ ಮುಂಡಗೋಡ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕಾತೂರು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಮಾರಾಮಾರಿ, ಓರ್ವ ವಿದ್ಯಾರ್ಥಿಗೆ ಗಾಯ, ಲಘು ಲಾಠಿ ಚಾರ್ಜ್..!

ಕಾತೂರು ಪ್ರೌಢಶಾಲಾ ಕ್ರೀಡಾಕೂಟದಲ್ಲಿ ವಿದ್ಯಾರ್ಥಿಗಳ ಮಾರಾಮಾರಿ, ಓರ್ವ ವಿದ್ಯಾರ್ಥಿಗೆ ಗಾಯ, ಲಘು ಲಾಠಿ ಚಾರ್ಜ್..!

 ಮುಂಡಗೋಡ; ತಾಲೂಕಿನ ಕಾತೂರಿನ ಪ್ರೌಢಶಾಲಾ ಕ್ರೀಡಾಕೂಟದಲ್ಲಿ ಮಾರಾಮಾರಿಯಾಗಿದೆ. ಪರಿಣಾಮ ಓರ್ವ ವಿದ್ಯಾರ್ಥಿಯ ತಲೆಗೆ ಗಾಯವಾಗಿದೆ. ಹೀಗಾಗಿ, ಗಲಾಟೆ ನಿಯಂತ್ರಿಸಲು ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿದ್ದಾರೆ. ಘಟನೆ ಏನು..? ಇಂದು ಕಾತೂರು ಹೈಸ್ಕೂಲು ಮೈದಾನದಲ್ಲಿ ಪ್ರೌಢಶಾಲೆಗಳ ಕ್ರೀಡಾಕೂಟ ನಡೆದಿತ್ತು. ಈ ಕ್ರೀಡಾಕೂಟದಲ್ಲಿ ಮಳಗಿ ಪ್ರೌಢಶಾಲೆ ಹಾಗೂ ಕಾತೂರು ಪ್ರೌಡಶಾಲೆಯ ವಿದ್ಯಾರ್ಥಿಗಳ ಮದ್ಯೆ ಖೋಖೋ ಪಂದ್ಯ ಶುರುವಾಗಿತ್ತು. ಈ ವೇಳೆ ಅದ್ಯಾವನೋ ನಿರ್ಣಾಯಕ‌ ಮಾಡಿದ ಯಡವಟ್ಟಿನಿಂದ, ಹುದ್ದರಿ ನಷ್ಟದ ತೀರ್ಪಿನಿಂದ ಒಂದು ಅಂಕ ಮಿಸ್ ಆಗಿದೆ ಅನ್ನೋ ಕಾರಣ ಇಟ್ಕೊಂಡು ಸಣ್ಣಗೆ ತಗಾದೆ ತೆಗೆದಿದ್ದಾರೆ ವಿದ್ಯಾರ್ಥಿಗಳು. ಹೀಗೆ ಶುರುವಾದ ಗಲಾಟೆ ವಿದ್ಯಾರ್ಥಿಗಳು ಹಾಗೂ ಅಲ್ಲಿ ನೆರೆದಿದ್ದ ಯುವಕರ ಮದ್ಯೆ ಭಾರೀ ಮಾರಾಮಾರಿಗೆ ಕಾರಣವಾಗಿದೆ. ಈ ಗಲಾಟೆಯಲ್ಲೇ ಓರ್ವ ವಿದ್ಯಾರ್ಥಿಗೆ ತಲೆಗೆ ಪೆಟ್ಟಾಗಿದೆ. ಲಘು ಲಾಠಿ ಪ್ರಹಾರ..! ಇನ್ನು ಎರಡು ವಿದ್ಯಾರ್ಥಿ ಗುಂಪುಗಳ ನಡುವೆ ನಡೆದ ಮಾರಾಮಾರಿ ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ದೌಡಾಯಿಸಿದ ಮುಂಡಗೋಡ ಪೊಲೀಸರು ಗಲಾಟೆ ನಿಯಂತ್ರಿಸಲು ಹರಸಾಹಸ ಪಟ್ಟಿದ್ದಾರೆ. ಅನಿವಾರ್ಯವಾಗಿ...

ನೇಗಿನಹಾಳ ಮಡಿವಾಳೇಶ್ವರ ಮಠದ ಸ್ವಾಮೀಜಿ ನೇಣಿಗೆ ಶರಣು..!

ನೇಗಿನಹಾಳ ಮಡಿವಾಳೇಶ್ವರ ಮಠದ ಸ್ವಾಮೀಜಿ ನೇಣಿಗೆ ಶರಣು..!

ಬೈಲಹೊಂಗಲ: ಇದು ನಿಜಕ್ಕೂ ದುರಂತದ ಸಂಗತಿ. ಬಸವ ತತ್ವ ಪ್ರತಿಪಾದಕ, ಅನುಯಾಯಿ ನೇಗಿನಹಾಳ ಶ್ರೀ ಗುರು ಮಡಿವಾಳೇಶ್ವರ ಮಠದ ಬಸವ ಸಿದ್ದಲಿಂಗ ಸ್ವಾಮೀಜಿ ನೇಣಿಗೆ ಕೊರಳೊಡ್ಡಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನಿನ್ನೆ ರಾತ್ರಿ ಮಠದ ತಮ್ಮ ಕೊಠಡಿಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನುವ ಮಾಹಿತಿ ತಿಳಿದು ಬಂದಿದೆ. ಮುರುಘಾ ಶ್ರೀಗಳ ಕೇಸ್ ಹಿನ್ನಲೆಯಲ್ಲಿ ಇಬ್ಬರು ಮಹಿಳೆಯರು ಮಾತನಾಡಿದ ಅಡಿಯೋದಲ್ಲಿ ಇವರ ಹೆಸರನ್ನು ಬಳಸಿಕೊಂಡು ಹೆಣ್ಣು ಮಕ್ಕಳೊಂದಿಗೆ ಅನೈತಿಕ ಸಂಪರ್ಕ ಹೊಂದಿದ್ದಾರೆಂದು ಮಾತನಾಡಿದ್ದು ವೈರಲ್ ಅಗಿದ್ದರಿಂದ ಮನ ನೊಂದು ನೇಣಿಗೆ ಶರಣಾಗಿದ್ದಾರೆ ಎಂದು ಶಂಕಿಸಲಾಗಿದೆ. ನಿನ್ನೆ ತಡರಾತ್ರಿವರೆಗೆ ಭಕ್ತರೊಂದಿಗೆ ಸಮಾಲೋಚನೆ ನಡೆಸಿ, ನೀವೆಲ್ಲರೂ ನಮ್ಮನ್ನು ಸಂಶಯದಿಂದ ನೋಡುವಂತಾಗಿದೆ. ಈ ಘಟನೆಯಿಂದ ಜೀವಂತ ಇರಬಾರದು ಎಂದೆನಿಸಿದೆ ಎಂದು ಹೇಳಿದ್ದರಂತೆ. ಆತ್ಮಹತ್ಯೆಯ ವಿಷಯ ತಿಳಿಯುತ್ತಿದ್ದಂತೆ ಮಠದ ಆವರಣದಲ್ಲಿ ಭಕ್ತರು ಜಮಾವಣೆಗೊಂಡಿದ್ದಾರೆ. ಪಿಐ ಉಳವಪ್ಪ ಸಾತೆನಹಳ್ಳಿ, ಡಿಎಸ್ಪಿ ಕಟಗಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಚಿತ್ರದುರ್ಗ ಮುರುಘಾ ಶರಣರು ಕೊನೆಗೂ ಆರೆಸ್ಟ್, ನಗರದಾಧ್ಯಂತ ಬಿಗಿ ಬಂದೋಬಸ್ತ್..!

ಚಿತ್ರದುರ್ಗ ಮುರುಘಾ ಶರಣರು ಕೊನೆಗೂ ಆರೆಸ್ಟ್, ನಗರದಾಧ್ಯಂತ ಬಿಗಿ ಬಂದೋಬಸ್ತ್..!

ಚಿತ್ರದುರ್ಗ: ಪೋಕ್ಸೋ ಕೇಸಿನಲ್ಲಿ ಎ-1 ಆರೋಪಿಯಾಗಿರೋ ಮುರುಘಾ ಮಠದ ಶ್ರೀಗಳು ಅರೆಸ್ಟ್ ಆಗಿದ್ದಾರೆ. ಮುರುಘಾ ಶರಣರ ಬಂಧನದ ಬಗ್ಗೆ ಚಿತ್ರದುರ್ಗ ಎಸ್ಪಿ ಪರಶುರಾಮ್ ಖಚಿತಗೊಳಿಸಿದ್ದಾರೆ. ಖುದ್ದಾಗಿ ಮುರುಘಾ ಶ್ರೀಗಳೇ ಪೊಲೀಸರಿಗೆ ಶರಣಾಗಿದ್ದಾರೆ. ಈ ವೇಳೆ ಶರಣರನ್ನು ಪೊಲೀಸರು ಬಂಧಿಸಿದ್ದಾರೆ. ಹೀಗಾಗಿ, ಕಳೆದ ಆರು ದಿನಗಳಿಂದ ಗುದುಮುರುಗಿ ಹಚ್ಚಿದ್ದ ಪ್ರಕರಣವೀಗ ಮತ್ತೊಂದು ತಿರುವು ಪಡೆದುಕೊಂಡಿದೆ. ಮುರುಘಾ ಶರಣರ ಬಂಧನ ಹಿನ್ನೆಲೆಯಲ್ಲಿ ಚಿತ್ರದುರ್ಗದಾದ್ಯಂತ ಭಾರೀ ಬಿಗಿ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲೆಡೆ ಬ್ಯಾರಿಕೇಡ್ ಹಾಕಿ ನಾಕಾಬಂದಿ ಹಾಕಲಾಗಿದೆ.

ಮಳಗಿ ಸಹಕಾರಿ ಬ್ಯಾಂಕಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ದರೋಡೆ, ಸೆಕ್ಯುರಿಟಿ ಗಾರ್ಡ್ ಕಟ್ಟಿ ಹಾಕಿದ್ರು ಖದೀಮರು.‌!

ಮಳಗಿ ಸಹಕಾರಿ ಬ್ಯಾಂಕಿನಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ದರೋಡೆ, ಸೆಕ್ಯುರಿಟಿ ಗಾರ್ಡ್ ಕಟ್ಟಿ ಹಾಕಿದ್ರು ಖದೀಮರು.‌!

ಮುಂಡಗೋಡ ತಾಲೂಕಿನ ಮಳಗಿಯಲ್ಲಿ ಥೇಟು ಸಿನಿಮಾ ಸ್ಟೈಲಿನಲ್ಲೇ ದರೋಡೆಯಾಗಿದೆ. ನಿನ್ನೆ ರಾತ್ರಿ 9.30 ರ ಸಮಯದಲ್ಲೇ ಬಂದು, ಸೆಕ್ಯುರಿಟಿ ಗಾರ್ಡ್ ನನ್ನು ಕಟ್ಟಿಹಾಕಿ, ರಾತ್ರಿಯಿಡೀ ಅಲ್ಲೇ ಬೀಡು ಬಿಟ್ಟು, ಯಾರದ್ದೂ ಭಯವಿಲ್ಲದೇ ದರೋಡೆಕೋರರ ಗ್ಯಾಂಗ್ ಸಹಕಾರಿ ಸಂಘದಲ್ಲಿ ದರೋಡೆ ಮಾಡಿಕೊಂಡು ಹೋಗಿದೆ. ಗಾರ್ಡಿಗೆ ಕಟ್ಟಿ ಹಾಕಿ..! ಅಂದಹಾಗೆ, ನಿನ್ನೆ ರಾತ್ರಿ ಎಲ್ಲರೂ ಗಣೇಶ ಚತುರ್ಥಿಯ ಸಂಭ್ರಮದಲ್ಲಿದ್ದರೆ, ದರೋಡೆಕೋರ ಗ್ಯಾಂಗ್ ಮಾತ್ರ ಕಳ್ಳತನದ ಪ್ಲ್ಯಾನ್ ಹಾಕಿದೆ. ಹೀಗಾಗಿ, ಇನ್ನೂ ಯಾರೂ ಮಲಗದ ವೇಳೆಯೇ ಮಳಗಿ ಸೇವಾ ಸಹಕಾರಿ ಸಂಘದ ಅಂಗಳಕ್ಕೆ ಬಂದಿದೆ. ಸಂಘದಲ್ಲಿ ರಾತ್ರಿ ಕಾಯಲು ಇದ್ದ ಸೆಕ್ಯುರಿಟಿ ಗಾರ್ಡ್ ಮಹದೇವಪ್ಪನ ಬಾಯಿಗೆ ಬಟ್ಟೆ ತುರುಕಿ ಕಟ್ಟಿ ಹಾಕಿದ್ದಾರೆ ದರೋಡೆಕೋರರು. ನಿನ್ನ ತಲೆದಿಂಬಿನ ಹತ್ತಿರವೇ ಬಾಂಬ್ ಇಟ್ಟಿದ್ದೇವೆ ನೀನೇನಾದ್ರೂ ಬಾಲ ಬಿಚ್ಚಿದ್ರೆ ರಿಮೋಟ್ ಮೂಲಕ ಉಡಾಯಿಸಿ ಬಿಡ್ತಿವಿ ಅಂತಾ ಭಯಗೊಳಿಸಿ ಒಳನುಗ್ಗಿದ್ದಾರಂತೆ. ಹೀಗಾಗಿ, ಏನೂ ಮಾಡಲಾಗದ ಸ್ಥಿತಿಯಲ್ಲಿ ಪರದಾಡಿದ್ದಾನೆ ಸೆಕ್ಯುರಿಟಿ ಗಾರ್ಡ್ ಮಹದೇವಪ್ಪ. ಕಟ್ಟರ್ ಮಶಿನ್ ತಂದ್ರು..! ಹೀಗೆ, ಸೆಕ್ಯುರಿಟಿ ಗಾರ್ಡ್ ಮಹದೇವಪ್ಪನನ್ನು...

ಬಾಚಣಕಿ ಶಾಲೆಯಲ್ಲಿ ವಿದ್ಯುತ್ ಆಘಾತ,  ಅದೃಷ್ಟವಶಾತ್ ಆರು ವಿದ್ಯಾರ್ಥಿಗಳು ಬಚಾವ್..!

ಬಾಚಣಕಿ ಶಾಲೆಯಲ್ಲಿ ವಿದ್ಯುತ್ ಆಘಾತ, ಅದೃಷ್ಟವಶಾತ್ ಆರು ವಿದ್ಯಾರ್ಥಿಗಳು ಬಚಾವ್..!

 ಮುಂಡಗೋಡ ತಾಲೂಕಿನ ಬಾಚಣಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾರಿ ಅನಾಹುತವೊಂದು ಕೂದಲೆಳೆ ಅಂತರದಲ್ಲಿ ತಪ್ಪಿದೆ. ಇಲ್ಲಿನ ಹಿರಿಯ ಪ್ರಾಥಮಿಕ ಶಾಲೆಯ ಶಿಕ್ಷಕರ ಬೇಜವಾಬ್ದಾರಿಯಿಂದ ಆರು ವಿದ್ಯಾರ್ಥಿಗಳು ಅಧೃಷ್ಟವಶಾತ್ ಬಚಾವ್ ಆಗಿದ್ದಾರೆ. ವಿದ್ಯುತ್ ಪ್ರವಹಿಸಿ ಆರು ಮಕ್ಕಳಿಗೆ ಆಘಾತವಾಗಿದೆ. ಗ್ರಾಮಸ್ಥರು ಪೋಷಕರ ಸಮಯಪ್ರಜ್ಞೆಯಿಂದ ಆರು ಮಕ್ಕಳು ಬಚಾವ್ ಆಗಿದ್ದಾರೆ. ಏನಿದು ಘಟನೆ..? ಅಂದಹಾಗೆ, ಬಾಚಣಕಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ, ವಿದ್ಯುತ್ ಮೀಟರ್ ಪಕ್ಕದಿಂದ‌ ಡೈರೆಕ್ಟ್ ಆಗಿ ವಿದ್ಯುತ್ ಸಂಪರ್ಕ ಪಡೆಯಲಾಗಿದೆ. ಅಂದ್ರೆ ಅಲ್ಲಿ ಯಾವುದೇ ರಕ್ಷಣಾತ್ಮಕ ಪರಿಕರಗಳನ್ನು ಬಳಸದೇ ಸ್ವಿಚ್ ಬೋರ್ಡ್ ಹಾಕಲಾಗಿದೆ. ಎಲ್ಲೆಂದರಲ್ಲಿ ಹರಿದ ವಿದ್ಯುತ್ ವೈಯರ್ ಗಳನ್ನು ನೇತಾಡುವಂತೆ ಮಾಡಲಾಗಿದೆ. ಹೀಗಾಗಿ, ಇಂದು ಬೆಳಿಗ್ಗೆ ಶಾಲೆಗೆ ಆಗಮಿಸಿದ್ದ ವಿದ್ಯಾರ್ಥಿಗಳು ಬಾಗಿಲು ತೆರೆಯಲು ಹೋದಾಗ ವಿದ್ಯುತ್ ಪ್ರವಹಿಸಿದೆ. ತಕ್ಷಣವೇ ಭಯದಿಂದ ನಡುಗಿ ಹೋದ ವಿದ್ಯಾರ್ಥಿಗಳು ಶಿಕ್ಷಕರ ಗಮನಕ್ಕೆ ತಂದಿದ್ದಾರೆ. ಗ್ರಾಮಸ್ಥರು ಪೋಷಕರು ಸೇರಿ  ತಕ್ಷಣವೇ ಮೇನ್ ಲೈನ್ ಸಂಪರ್ಕ‌ ಕಡಿತಗೊಳಿಸಿದ್ದಾರೆ. ಈ ಕಾರಣಕ್ಕೆ ವಿದ್ಯಾರ್ಥಿಗಳು ಬಚಾವ್ ಆಗಿದ್ದಾರೆ. ಕಾಮೆನ್ ಸೆನ್ಸ್...

error: Content is protected !!