ಮುಂಡಗೋಡ: ಪಟ್ಟಣದಲ್ಲಿ ಇಂದು ಶ್ರೀರಾಮ ಸೇನೆ ಹಾಗೂ ಹಿಂದೂ ಪರ ಸಂಘಟನೆಗಳು ಬೀದಿಗಿಳಿದಿದ್ದವು. ಶಿವಮೊಗ್ಗದ ಹಿಂದೂ ಕಾರ್ಯಕರ್ತ ಹರ್ಷ ಹತ್ಯೆ ಖಂಡಿಸಿ ಪ್ರತಿಭಟನಾ ಮೆರವಣಿಗೆ ನಡೀತು. ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟನೆ ಕೈಗೊಂಡ ಹಿಂದು ಕಾರ್ಯಕರ್ತರು ಶೀಘ್ರವೇ ಹಿಂದು ಕಾರ್ಯಕರ್ತ ಹರ್ಷ ಹತ್ಯೆಯ ಆರೋಪಿಗಳನ್ನ ಬಂಧಿಸಿ, ಅವ್ರಿಗೆ ಗಲ್ಲು ಶಿಕ್ಷೆ ವಿಧಿಸಬೇಕು ಅಂತಾ ಅಗ್ರಹಿಸಿದ್ರು. ಈ ವೇಳೆ ನೂರಾರು ಸಂಖ್ಯೆಯ ಹಿಂದು ಕಾರ್ಯಕರ್ತರು ಭಾಗಿಯಾಗಿದ್ರು. ಪ್ರತಿಭಟನೆಗೆ ಗೋ ಮಾತೆ ಸಾಥ್..! ಶಿವಾಜಿ ಸರ್ಕಲ್ ನಲ್ಲಿ ಮಾನವ ಸರಪಳಿ ನಿರ್ಮಿಸಿ ಹಿಂದು ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದ ವೇಳೆ ಗೋಮಾತೆಯೊಂದು ಪ್ರತಿಭಟನಾ ಸ್ಥಳಕ್ಕೆ ಬಂದು ನಿರ್ಭಿಡೆಯಿಂದ ಪ್ರತಿಭಟನೆಗೆ ಸಾಥ್ ನೀಡಿತು. ಇದನ್ನು ಕಂಡ ಹಿಂದು ಕಾರ್ಯಕರ್ತರು ಸಂತಸಗೊಂಡರು.
Top Stories
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
ನೀರಿಗೆ ಜಿಗಿಯೋಕೂ ಮುನ್ನ ವಿಷ ಕುಡಿದಿತ್ತಾ ಜೋಡಿ..? ಅಷ್ಟಕ್ಕೂ ಬಾಚಣಕಿ ಡ್ಯಾಂ ಅಂಗಳದಲ್ಲಿ ನಡೆದದ್ದಾದ್ರೂ ಏನು..?
ಮುಂಡಗೋಡ: ಏನಾಗ್ತಿದೆ ನಮ್ಮ ಮುಂಡಗೋಡ ತಾಲೂಕಿನ ಯುವಕ ಯುವತಿಯರಿಗೆ..? ನಿಜಕ್ಕೂ ಮಮ್ಮಲ ಮರಗುತ್ತಿದೆ ಇಡೀ ತಾಲೂಕು. ಯಾಕಂದ್ರೆ ಇನ್ನೂ ಮೀಸೆ ಚಿಗುರದ, ವಯಸ್ಸಲ್ಲದ ವಯಸ್ಸಲ್ಲಿ ಪ್ರೀತಿ ಪ್ರೇಮ ಅಂತೇಲ್ಲ ಇಡೀ ಬದುಕನ್ನೇ ಹಾಳು ಮಾಡಿಕೊಳ್ತಿದಾರಾ ಯುವ ಪಡೆ..? ಹಾಗಂತ ಆತಂಕಗೊಂಡಿದ್ದಾರೆ ತಂದೆ ತಾಯಂದಿರು. ಪ್ರೀತಿಗೆ ಬಲಿ..? ಯಸ್, ಮುಂಡಗೋಡ ತಾಲೂಕಿನಲ್ಲಿ ಇತ್ತೀಚೆಗೆ ಪ್ರೇಮ ಪ್ರಕರಣಗಳಲ್ಲಿ ನಾಪತ್ತೆಯಾದ ಯುವಕ ಯುವತಿಯರ ಸಂಖ್ಯೆ ಇನ್ನಿಲ್ಲದ ಹಾಗೆ ಏರಿಕೆಯಾಗಿದೆ. ಅದ್ರೊಟ್ಟಿಗೆ, ಇವತ್ತಿನ ಈ ಪ್ರಕರಣ ಬಹುಶಃ ಇಡೀ ತಾಲೂಕಿನ ಮಂದಿಗೆ ಬೆಚ್ಚಿ ಬೀಳುವಂತೆ ಮಾಡಿದೆ. ಅಷ್ಟಕ್ಕೂ ಬಾಚಣಕಿ ಜಲಾಶಯದ ಅಂಗಳದಲ್ಲಿ ಮಟ ಮಟ ಮದ್ಯಾಹ್ನ ಹಾಗೆ ಶವವಾಗಿ ಸಿಕ್ಕವಳ ಜೊತೆ ಪ್ರೇಮ್ ಕಹಾನಿಯಿತ್ತಾ..? ಅಷ್ಟಕ್ಕೂ ಜೊತೆಗೇ ಆ ಹುಡುಗನೂ ಬಲಿಯಾಗಿದ್ದಾನಾ..? ಇದೇಲ್ಲ ಪ್ರಶ್ನೆಗಳಿಗೆ ಉತ್ತರ ಸಿಗಬೇಕಿದೆ. ಬಹುಶಃ ಹುಡುಗನ ಶವ ಪತ್ತೆಯಾದ ಮೇಲೆಯೇ ಉತ್ತರ ಸಿಗಬಹುದೆನೋ..? ಹಾಗಾದ್ರೆ ಪ್ರೀತಿಗೆ ಬಲಿಯಾಯ್ತಾ ಜೋಡಿ..? ಅವ್ರದ್ದು ಮೂರು ವರ್ಷದ ಪ್ರೀತಿಯಂತೆ..? ಅಂದಹಾಗೆ, ಇವತ್ತು ಬಾಚಣಕಿ ಜಲಾಶಯದ ನೀರಿನಲ್ಲಿ ಉಸಿರು...
ಅಯ್ಯೋ ದೇವ್ರೇ, ಬಾಚಣಕಿ ಡ್ಯಾಂನಲ್ಲಿ ಹೆಣವಾದ್ರಾ ಪ್ರೇಮಿಗಳು..? ಆತ್ಮಹತ್ಯೆನಾ..?
ಮುಂಡಗೋಡ: ಬಾಚಣಕಿ ಜಲಾಶಯದಲ್ಲಿ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡ್ರಾ..? ಸಧ್ಯದ ಮಾಹಿತಿ ಪ್ರಕಾರ ಹೌದು ಅಂತಿವೆ ಮೂಲಗಳು. ಕಾಲೇಜು ಯೂನಿಫಾರ್ಮಿನಲ್ಲೇ ಯುವಕ ಹಾಗೂ ಯುವತಿ ಬಾಚಣಕಿ ಜಲಾಶಯದಲ್ಲಿ ದಾರುಣ ಸಾವು ಕಂಡಿರೋ ಘಟನೆ ನಡೆದಿದೆ. ಕಾಲೇಜಿನಿಂದ ನೇರವಾಗಿ ಬಾಚಣಕಿ ಜಲಾಶಯಕ್ಕೆ ಬಂದಿರೋ ಯುವಕ ಯುವತಿ ಜಲಾಶಯದಲ್ಲಿ ನೀರು ಪಾಲಾಗಿದ್ದಾರೆ ಎನ್ನಲಾಗ್ತಿದೆ. ಯುವತಿ ಶವ ಹೊರ ತೆಗೆಯಲಾಗಿದ್ದು, ಮೃತ ಯುವತಿ ಮುಂಡಗೋಡ ತಾಲೂಕಿನ ಕಲಕೇರಿ ಗ್ರಾಮದ ತನುಜಾ ಅಂತಾ ತಿಳಿದು ಬಂದಿದೆ. ಆದ್ರೆ ಯುವಕನ ಶವಕ್ಕಾಗಿ ಶೋಧ ಕಾರ್ಯ ನಡೆದಿದೆ. ಯುವಕನ ಶವಕ್ಕಾಗಿ ಪೊಲೀಸರ ಶೋಧ ಕಾರ್ಯ ನಡೆದಿದೆ. ಅಂದಹಾಗೆ ಹುಡುಗ ಮುಂಡಗೋಡ ತಾಲೂಕಿನ ಹನುಮಾಪುರದವನು ಅಂತಾ ಹೇಳಲಾಗಿದೆ.
ಮುಂಡಗೋಡಿನ ಅಮ್ಮಾಜಿ ಕೆರೆ ಮೇಲೆ ಬೈಕ್ ಅಪಘಾತ, ಸವಾರನಿಗೆ ಗಂಭೀರ ಗಾಯ..!
ಮುಂಡಗೋಡ: ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆ ಮೇಲೆ ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ವಿರೂಪಾಕ್ಷಯ್ಯ ಜಂಬಯ್ಯನವರ್ (45) ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಈತ ಹಾವೇರಿ ಜಿಲ್ಲೆಯ ಶಿಗ್ಗಾವಿ ತಾಲೂಕಿನ ಅಂದಲಗಿ ಗ್ರಾಮದವನು ಅಂತಾ ಮಾಹಿತಿ ಲಭ್ಯವಾಗಿದೆ. ಘಟನೆ ನಡೆದ ತಕ್ಷಣವೇ 108 ಅಂಬ್ಯುಲೆನ್ಸ್ ಮೂಲಕ ತಾಲೂಕಾಸ್ಪತ್ರೆಗೆ ರವಾನಿಸಲಾಗಿದೆ. ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ್ ಪ್ರಥಮ ಚಿಕಿತ್ಸೆ ನೀಡಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ತಾಲೂಕಿನಲ್ಲಿ ಕುದುರೆ ಕಳ್ಳರ ಗ್ಯಾಂಗ್ ಆ್ಯಕ್ಟಿವ್ ಆಗಿದೆಯಾ..?
ಮುಂಡಗೋಡ: ತಾಲೂಕಿನಲ್ಲಿ ಕುದುರೆ ಕಳ್ಳರು ಬಂದಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಇಲ್ಲಿ ಎಲ್ಲಿಂದಲೋ ಬಂದು ವಾಹನ ತಂದು ಕುದುರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ. ಸಂಚಾರಿ ಕುರುಬರು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿರೋ ಕುದುರೆಗಳನ್ಬು ಕಳವು ಮಾಡಿಕೊಂಡು ಹೋಗುವ ಗ್ಯಾಂಗ್ ಬಂದಿದೆಯಾ ಅನ್ನೋ ಅನುಮಾನಗಳು ಶುರುವಾಗಿದೆ. ಯಾಕಂದ್ರೆ ತಾಲೂಕಿನ ಟಿಬೇಟಿಯನ್ ಕಾಲೊನಿ ಸೇರಿದಂತೆ ಎಲ್ಲೆಂದರಲ್ಲಿ ತಿರುಗಾಡುವ ಕುದುರೆಗಳನ್ನು ಕಳ್ಳರು ಹಾಡಹಗಲೆ ಎತ್ತಾಕೊಂಡು ಹೋಗ್ತಿದಾರಾ ಅನ್ನೊ ಅನುಮಾನಗಳು ಶುರುವಾಗಿದೆ. ಹೀಗಾಗಿ, ಹಾಗೆ ಕಳ್ಳರ ಕೃತ್ಯಗಳನ್ನು ಕೆಲ ಯುವಕರ ಪಡೆ ನಿಯಂತ್ರಿಸಲು ಪಣ ತೊಟ್ಟು ನಿಂತಿದೆ.
ಮುಂಡಗೋಡಿನ ನ್ಯಾಸರ್ಗಿ ಬಳಿ ಭೀಕರ ಅಪಘಾತ, ಮರಕ್ಕೆ ಡಿಕ್ಕಿ ಹೊಡೆದ ಕಾರು, ಓರ್ವ ಗಂಭೀರ..!!
ಮುಂಡಗೋಡ; ತಾಲೂಕಿನ ನ್ಯಾಸರ್ಗಿ ಬಳಿ ಭೀಕರ ಅಪಘಾತವಾಗಿದೆ. ವೇಗವಾಗಿ ಬಂದ ಕಾರೊಂದು ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ನುಜ್ಜುಗುಜ್ಜಾಗಿದೆ. ಘಟನೆಯಲ್ಲಿ ಓರ್ವ ಗಂಭೀರ ಗಾಯಗೊಂಡಿದ್ದಾನೆ. ನ್ಯಾಸರ್ಗಿಯ ಅನ್ವರ್ ಷಹಜಹಾನ್ ದೊಡ್ಮನಿ(26) ಗಂಭೀರ ಗಾಯಗೊಂಡ ವ್ಯಕ್ತಿಯಾಗಿದ್ದಾನೆ. ಈತ ನ್ಯಾಸರ್ಗಿಯಿಂದ ಮುಂಡಗೋಡಿಗೆ ಕಾರಲ್ಲಿ ಬರುತ್ತಿದ್ದ ವೇಳೆ ಮರಕ್ಕೆ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಕಾರು ಸಂಪೂರ್ಣ ನುಜ್ಜುಗುಜ್ಜಾಗಿದೆ. ಮುಂಡಗೋಡಿನ 108 ಅಂಬ್ಯಲೆನ್ಸ್ ಗೆ ಕರೆ ಮಾಡಿ ಗಾಯಾಳುವನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಗಾಯಾಳುವಿನ ಕಾಲಿಗೆ ಭಾರೀ ಪೆಟ್ಟು ಬಿದ್ದಿದ್ದು ತಾಲೂಕಾಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. 108 ಅಂಬ್ಯುಲೆನ್ಸ್ ನ ಧನರಾಜ್ ಹಾಗೂ ಚಾಲಕ ಕೆಂಚೇಶ್ ಗಾಯಾಳುವಿಗೆ ಪ್ರಥಮ ಚಿಕಿತ್ಸೆ ನೀಡಿದ್ರು. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಇಂದೂರಿನಲ್ಲಿ “ದೇವರ ಹಾವು” ಪ್ರತ್ಯಕ್ಷ..!
ಮುಂಡಗೋಡ: ತಾಲೂಕಿನ ಇಂದೂರಿನಲ್ಲಿ ನಡೆಯುತ್ತಿರೊ ಕಾಲುವೆ ಕಾಮಗಾರಿ ವೇಳೆ ಬೃಹತ್ ನಾಗರ ಹಾವು ಪ್ರತ್ಯಕ್ಷವಾಗಿ ಆತಂಕ ಮೂಡಿಸಿತ್ತು. ಜಲಾಶಯದ ಕಾಲುವೆ ಕಾಮಗಾರಿ ವೇಳೆ ಆಹಾರ ಅರಸಿ ಬಂದಿದ್ದ ಘಟ ಸರ್ಪ ನಿರಾತಂಕವಾಗಿ ಕಾಲುವೆಯಲ್ಲಿ ಆಟವಾಡುತ್ತಿತ್ತು. ಹೀಗಾಗಿ ಕೆಲಹೊತ್ತು, ಕಾರ್ಮಿಕರ ಆತಂಕಕ್ಕೆ ಕಾರಣವಾಗಿತ್ತು. ಹಾವನ್ನು ಸುರಕ್ಷಿತವಾಗಿ ಕಾಲುವೆಯಿಂದ ಹೊರಗೆ ಕಳಿಸುವಲ್ಲಿ ಜನರು ಯಶಸ್ವಿಯಾದ್ರು. ಅಲ್ಲದೆ ಈ ಹಾವು ದೇವರ ಹಾವು ಅಂತಾ ಅಲ್ಲಿದ್ದವರು ಕೈ ಮುಗಿದು ನಿಂತಿರೊ ದೃಷ್ಯ ಕಂಡು ಬಂತು. ಒಟ್ನಲ್ಲಿ ಹಾವು ಬಂದ ಕಾರಣಕ್ಕೆ ಸ್ಥಳದಲ್ಲಿ ಕೆಲಹೊತ್ತು ಆತಂಕಕ್ಕೆ ಕಾರಣವಾಯ್ತು.
ಕೂರ್ಲಿ ಗ್ರಾಮದಲ್ಲಿ ಪಶು ಸಂಗೋಪನಾ ಇಲಾಖೆಯಿಂದ ಜಾನುವಾರು ಪ್ರದರ್ಶನ..!
ಮುಂಡಗೋಡ: ತಾಲೂಕಿನ ಮಳಗಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಕೂರ್ಲಿ ಗ್ರಾಮದಲ್ಲಿ ಪಶುಸಂಗೋಪನಾ ಇಲಾಖೆಯಿಂದ ಜಾನುವಾರು ಪ್ರದರ್ಶನ ಕಾರ್ಯಕ್ರಮ ನಡೆಯಿತು. ಜಾನುವಾರು ಪ್ರದರ್ಶನದಲ್ಲಿ ಉತ್ತಮ ಜಾನುವಾರುಗಳಿಗೆ ಬಹುಮಾನ ನೀಡಲಾಯಿತು. ಇನ್ನು ಜಾನುವಾರುಗಳಿಗೆ ಕಾಲುಬಾಯಿ ರೋಗ ಬರದಂತೆ ಮುನ್ನೆಚ್ಚರಿಕೆ ವಹಿಸಿ, ಲಸಿಕೆ ಹಾಕಿಸಬೇಕು. ಜಾನುವಾರುಗಳ ಆರೋಗ್ಯ ಕಾಪಾಡಲು ಕೊಟ್ಟಿಗೆಯಲ್ಲಿ ಸ್ವಚ್ಛತೆ ಕಾಪಾಡಬೇಕು. ಜಾನುವಾರುಗಳಿಗೆ ಕಿವಿಓಲೆ(ಗುರುತಿನ ಸಂಖ್ಯೆ) ಹಾಕಿಸಿಕೊಳ್ಳುವುದು ಕಡ್ಡಾಯವಾಗಿದ್ದು, ವಿವಿಧ ಯೋಜನೆಗಳಡಿ ಸಿಗುವ ಸೌಲಭ್ಯಗಳನ್ನು ರೈತರು ಸದುಪಯೋಗಪಡಿಸಿಕೊಳ್ಳಬೇಕು. ಜಾನುವಾರುಗಳ ಸಂತತಿ ಹೆಚ್ಚಾದರೆ, ರೈತರಿಗೆ ಅನುಕೂಲವಾಗುತ್ತದೆʼ ಅಂತಾ ಕಾರ್ಯಕ್ರಮದಲ್ಲಿ ಮಾಹಿತಿ ನೀಡಲಾಯಿತು. ಪಶುವೈದ್ಯರಾದ ಡಾ.ಜಯಚಂದ್ರ ಕೆಂಪಶಿ, ಡಾ. ಪ್ರಸನ್ನ ಹೆಗಡೆ ರೈತರಿಗೆ ಮಾರ್ಗದರ್ಶನ ನೀಡಿದ್ರು. ಕಾರ್ಯಕ್ರಮದಲ್ಲಿ ಇಲಾಖಾ ಸಿಬ್ಬಂದಿಗಳಾದ ಸುರೇಶ್ ಡೋರಿ, ಮುತ್ತುರಾಜ ತಟ್ಟಿ, ಸಂತೋಷ ಅಡೂರು, ಮಹಮ್ಮದ್ ರಫೀಕ್ ಮರಗಡಿ, ಫಕ್ಕಿರೇಶ್ ನೆಗೋನಿ ಉಪಸ್ಥಿತರಿದ್ದರು.
ಅಗಡಿ ಚೆಕ್ ಪೊಸ್ಟ್ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಒದ್ದಾಡಿದ ಸವಾರ, ಆಸ್ಪತ್ರೆಗೆ ರವಾನೆ..!
ಮುಂಡಗೋಡ; ತಾಲೂಕಿನ ಕಲಘಟಗಿ ರಸ್ತೆಯ ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದು ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ ಬೆಂಡ್ಲಗಟ್ಟಿ ಗ್ರಾಮದವನು ಅಂತಾ ಹೇಳಲಾಗಿರೋ ವ್ಯಕ್ತಿ ಬೈಕ್ ನಿಂದ ಬಿದ್ದು ಒದ್ದಾಡುತ್ತಿದ್ದಾನೆ. ಈ ವೇಳೆ ಸ್ಥಳೀಯರು ಅಂಬ್ಯುಲೆನ್ಸ್ ಗೆ ಕಾಲ್ ಮಾಡಿ ಗಾಯಾಳು ವ್ಯಕ್ತಿಯ ಚಿಕಿತ್ಸೆಗೆ ರವಾನಿಸಲು ರೆಡಿಯಾಗಿದ್ದಾರೆ. ಆದ್ರೆ ಇದೇ ವೇಳೆ ಪೊಲೀಸರ ವಾಹನ ಬಂದು ಗಾಯಾಳುವನ್ನು ಆಸ್ಪತ್ರೆಗೆ ಸಾಗಿಸಿದೆ.
ಮುಂಡಗೋಡ ಯುವಕರ ಮಾನವೀಯ ಕಾರ್ಯ..!
ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಚರ್ಮ ರೋಗದಿಂದ ಬಳಲುತ್ತಿದ್ದ ಆಕಳಿಗೆ ಇಲ್ಲಿನ ಯುವಕರ ಬಳಗ ಚಿಕಿತ್ಸೆ ನೀಡಿ ಮಾನವೀಯತೆ ತೋರಿದೆ. ತೀವ್ರವಾದ ಚರ್ಮರೋಗದಿಂದ ಬಳಲುತ್ತಿದ್ದ ಆಕಳು ಪರದಾಡುತ್ತಿತ್ತು. ಇದನ್ನು ಕಂಡ ಯುವಕರ ಪಡೆ ತಕ್ಷಣವೇ ಆಕಳನ್ನು ಹಿಡಿದು ಕಟ್ಟಿ, ಪಶುವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿದ್ದಾರೆ. ಯುವಕರ ಕರೆಗೆ ಓಗೋಟ್ಟು ತಕ್ಷಣವೇ ಹಾಜರಾದ ಪಶು ವೈದ್ಯ ಅವಿನಾಶ್ ಪೂಜಾರ್ ಕರ್ತವ್ಯ ಪ್ರಜ್ಞೆ ತೋರಿದ್ದಾರೆ. ಕಳೆದ ವಾರವಷ್ಟೇ ಅನಾರೋಗ್ಯದಿಂದ ಬಳಲಿ ನಿತ್ರಾಣಗೊಂಡಿದ್ದ ಆಕಳ ಕರುವಿಗೆ ಚಿಕಿತ್ಸೆ ನೀಡಿದ್ದ ಇದೇ ಯುವಕರ ತಂಡ ಕರುವನ್ನು ಬದುಕಿಸಲು ಹರಸಾಹಸ ಪಟ್ಟಿತ್ತು. ಹೀಗಾಗಿ, ಮುಂಡಗೋಡಿನ ಯುವಕರ ಮಾನವೀಯ ಕಾರ್ಯ ಪ್ರಶಂಸೆಗೆ ಪಾತ್ರವಾಗಿದೆ.