ತಾಲೂಕಿನಲ್ಲಿ ಕುದುರೆ ಕಳ್ಳರ ಗ್ಯಾಂಗ್ ಆ್ಯಕ್ಟಿವ್ ಆಗಿದೆಯಾ..?

ಮುಂಡಗೋಡ: ತಾಲೂಕಿನಲ್ಲಿ ಕುದುರೆ ಕಳ್ಳರು ಬಂದಿದ್ದಾರಾ ಎನ್ನುವ ಪ್ರಶ್ನೆ ಎದುರಾಗಿದೆ. ಯಾಕಂದ್ರೆ ಇಲ್ಲಿ ಎಲ್ಲಿಂದಲೋ ಬಂದು ವಾಹನ ತಂದು ಕುದುರೆಗಳನ್ನು ತೆಗೆದುಕೊಂಡು ಹೋಗುತ್ತಿದ್ದಾರೆ.

ಸಂಚಾರಿ ಕುರುಬರು ಎಲ್ಲೆಂದರಲ್ಲಿ ಬಿಟ್ಟು ಹೋಗುತ್ತಿರೋ ಕುದುರೆಗಳನ್ಬು ಕಳವು ಮಾಡಿಕೊಂಡು ಹೋಗುವ ಗ್ಯಾಂಗ್ ಬಂದಿದೆಯಾ ಅನ್ನೋ ಅನುಮಾನಗಳು ಶುರುವಾಗಿದೆ. ಯಾಕಂದ್ರೆ ತಾಲೂಕಿನ ಟಿಬೇಟಿಯನ್ ಕಾಲೊನಿ ಸೇರಿದಂತೆ ಎಲ್ಲೆಂದರಲ್ಲಿ ತಿರುಗಾಡುವ ಕುದುರೆಗಳನ್ನು ಕಳ್ಳರು ಹಾಡಹಗಲೆ ಎತ್ತಾಕೊಂಡು ಹೋಗ್ತಿದಾರಾ ಅನ್ನೊ ಅನುಮಾನಗಳು ಶುರುವಾಗಿದೆ. ಹೀಗಾಗಿ, ಹಾಗೆ ಕಳ್ಳರ ಕೃತ್ಯಗಳನ್ನು ಕೆಲ ಯುವಕರ ಪಡೆ ನಿಯಂತ್ರಿಸಲು ಪಣ ತೊಟ್ಟು ನಿಂತಿದೆ.

error: Content is protected !!