ಅಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರ ದಾಳಿ..? ಇದು ನಿಜವಾ..?

ಅಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ಪೊಲೀಸರ ದಾಳಿ..? ಇದು ನಿಜವಾ..?

ಮುಂಡಗೋಡ: ತಾಲೂಕಿನ ಅಗಡಿಯಲ್ಲಿ ಮದ್ಯ ಮಾರಾಟ ಮಾಡುತ್ತಿದ್ದ ಅಂಗಡಿಯ ಮೇಲೆ ಪೊಲೀಸರು ದಾಳಿ ಮಾಡಿದ್ದಾರೆ ಅಂತಾ ತಿಳಿದು ಬಂದಿದೆ‌. ಇವತ್ತು ಗಾಂಧಿ ಜಯಂತಿ ಎಲ್ಲಿಯೂ ಮದ್ಯದ ಅಂಗಡಿಗಳನ್ನು ತೆರೆಯುವ ಹಾಗಿಲ್ಲ‌. ಆದ್ರೆ, ಅಗಡಿಯಲ್ಲಿ ಮಾತ್ರ ರಾಜಾರೋಶವಾಗಿ ಮದ್ಯ ಮಾರಾಟ ಮಾಡಲಾಗುತ್ತಿತ್ತು. ಹೀಗಾಗಿ, ಬಾತ್ಮಿ ತಿಳಿದು ಸ್ಥಳಕ್ಕೆ ಹೋಗಿದ್ದ ಪೊಲೀಸರಿಗೆ ಖಾತ್ರಿಯಾಗಿದೆ. ಮಾಲು ಸಮೇತ ಎಳೆದು ತಂದಿದ್ದಾರಂತೆ ಪೊಲೀಸ್ರು. ಹಾಗಂತ, ಮಾಹಿತಿಯಿದೆ, ಆದ್ರೆ, ಅಸಲು ಏನು ಅಂತಾ ಪೊಲೀಸರೇ ಹೇಳಬೇಕಿದೆ‌. ಅಷ್ಟಕ್ಕೂ ಮುಂಡಗೋಡ ತಾಲೂಕಿನ ಅಗಡಿಯಲ್ಲಿ ಇರೋ ಈ ಮದ್ಯದ ಅಂಗಡಿ ಪರವಾನಿಗೆ ಪಡೆದದ್ದು ಅಲ್ಲವಂತೆ, ಆದ್ರೆ ನಿತ್ಯವೂ ಇಲ್ಲಿ ರಾಜಾರೋಶವಾಗಿ ಮದ್ಯ ಮಾರಾಟ ಮಾಡಲಾಗ್ತಿದೆ ಅಂತಾ ಸಾಕಷ್ಟು ದೂರುಗಳು ಕೇಳಿ ಬರುತ್ತಿದೆ. ದುರಂತ ಅಂದ್ರೆ ಇದೇಲ್ಲ ಇಲ್ಲಿನ ಪೊಲೀಸರಿಗೂ ಗೊತ್ತಿದೆ. ಆದ್ರೆ, ಇವತ್ತು ಗಾಂಧಿ ಜಯಂತಿಯ ಕಾರಣಕ್ಕೆ ಮದ್ಯ ಮಾರಾಟ ಮಾಡೋರನ್ನು ಪ್ರಶ್ನಿಸಲಾಗಿದೆ‌. ಅಷ್ಟೆ. ಪ್ರತೀ ಹಳ್ಳಿಗಳಲ್ಲೂ ಇದೇ ಕತೆ ಬಿಡಿ..! ಅಸಲು, ಮುಂಡಗೋಡ ತಾಲೂಕಿನ ಪ್ರತೀ ಹಳ್ಳಿಗಳಲ್ಲೂ ಮದ್ಯ ಮಾರಾಟ...

ಮಳಗಿಯಲ್ಲಿ ಮತ್ತೊಂದು ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ..! ಆತಂಕದಲ್ಲಿದ್ದಾರೆ ಜನ..!!

ಮಳಗಿಯಲ್ಲಿ ಮತ್ತೊಂದು ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ..! ಆತಂಕದಲ್ಲಿದ್ದಾರೆ ಜನ..!!

ಮುಂಡಗೋಡ: ಮಳಗಿಯಲ್ಲಿ ಕಳ್ಳರು ಮತ್ತೆ ಕೈಚಳಕ ತೋರಿದ್ದಾರೆ‌. ಇಲ್ಲಿ‌ನ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಸೆಟರ್ಸ್ ಮುರಿದು ಒಳನುಗ್ಗಿರೋ ಕಳ್ಳರು, ಬ್ಯಾಂಕ್ ಕಳ್ಳತನಕ್ಕೆ ವಿಫಲ ಯತ್ನ ನಡೆಸಿದ್ದಾರೆ‌. ತಿಂಗಳಲ್ಲೇ ಇದು ಮಳಗಿಯಲ್ಲಿ ಮೂರನೇ ಕಳ್ಳತನದ ಪ್ರಕರಣವಾಗಿದೆ‌. ಹೀಗಾಗಿ, ಮಳಗಿಯಲ್ಲೇ ಠಾಣೆ ಇದ್ದರೂ ಅಲ್ಲಿನ ಪೊಲೀಸರು ಅದೇನು ಮಾಡ್ತಿದಾರೆ..? ಅನ್ನೋ ಪ್ರಶ್ನೆ ಎದುರಾಗಿದೆ‌. ನಿನ್ನೆ ತಡರಾತ್ರಿ, ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನ ಹಿಂಬದಿಯ ಸೆಟರ್ಸ್ ಮುರಿದು ಒಳ ನುಗ್ಗಿರೋ ಕಳ್ಳರು, ಎಲ್ಲೆಂದರಲ್ಲಿ ತಡಕಾಡಿದ್ದಾರೆ. ಆದ್ರೆ, ಅದೃಷ್ಟವಶಾತ್ ಯಾವುದೇ ಹಣ, ವಸ್ತುಗಳು ಅವ್ರ ಕಣ್ಣಿಗೆ ಬಿದ್ದಿಲ್ಲ. ಹೀಗಾಗಿ, ಬರಿಗೈಲಿ ವಾಪಸ್ ಆಗಿದ್ದಾರೆ ಅನ್ನೊ ಅನುಮಾನ ವ್ಯಕ್ತವಾಗಿದೆ. ಮಳಗಿ ಉಪಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

“ಗುಂಡು ಹೊಡಿಯೋಕೂ ರೆಡಿ, ಗುಂಡು ಹೊಡಿಸಿಕೊಳ್ಳೋಕೂ ರೆಡಿ” ವಾವ್, ಏನ್ ಮಾತಾಡಿದ್ರಿ “ಪುಟ್ಟ” ಪ್ರಶಾಂತಣ್ಣ..?

“ಗುಂಡು ಹೊಡಿಯೋಕೂ ರೆಡಿ, ಗುಂಡು ಹೊಡಿಸಿಕೊಳ್ಳೋಕೂ ರೆಡಿ” ವಾವ್, ಏನ್ ಮಾತಾಡಿದ್ರಿ “ಪುಟ್ಟ” ಪ್ರಶಾಂತಣ್ಣ..?

“ನಾವು ಗುಂಡು ಹೊಡಿಲಿಕ್ಕೂ ರೆಡಿ, ಗುಂಡು ಹೊಡಿಸಿಕೊಳ್ಳೋಕೂ ರೆಡಿ” ಅಯ್ಯೋ ಪ್ರಶಾಂತಣ್ಣ ನಿಮ್ಮಂತವರ ಬಾಯಲ್ಲಿ ಇಂತಹ ಮಾತಾ..? ಚುನಾವಣೆ ಅಂದಮೇಲೆ ಒಂದು ಮಾತು ಹೆಚ್ಚು, ಒಂದು ಮಾತು ಕಡಿಮೆ ಇದ್ದೇ ಇರತ್ತೆ, ಅಷ್ಟಕ್ಕೇ ಗುಂಡಿನ ದಾಳಿಗಳ ಮಾತು ಹೇಳೋದಾ..? ಅಷ್ಟಕ್ಕೂ ಆರ್.ವಿ.ದೇಶಪಾಂಡೆಯವರ ಸುಪುತ್ರರಾಗಿರೋ ನಿಮಗೆ ಇಂತಹ ಮಾತುಗಳು ಸರಿಕಾಣತ್ತಾ..? ಹಾಗಂತ, ನಿಮ್ಮ ಬಾಯಲ್ಲಿ ಆ ನಿಮ್ಮ ಗುಂಡಿನ ಸದ್ದು ಕೇಳಿದವರು ಪ್ರಶ್ನೆ ಮೇಲೆ ಪ್ರಶ್ನೆ ಕೇಳ್ತಿದಾರೆ. ಅದೇನಂದ್ರು ಪ್ರಶಾಂತಣ್ಣ ಕೇಳಿಬಿಡಿ..! ನಿಜ, ಇಂತಹದ್ದೊಂದು, “ಗುಂಡಿನ” ಮಾತನ್ನು ಯಲ್ಲಾಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಶಾಂತ್ ದೇಶಪಾಂಡೆ ಬನವಾಸಿ ಸಮೀಪದ ಬಿಸಲಕೊಪ್ಪದಲ್ಲಿ ಭಾವಾವೇಶದಲ್ಲಿ ಆಡಿ ಹೋಗಿದ್ದಾರೆ. ಆದ್ರೆ, ಈ ಮಾತು ಆಡಿ ಹೋದ ಗಳಿಗೆಯಿಂದ ಒಂದಿಷ್ಟು ಚರ್ಚೆಗಳನ್ನೂ ಹುಟ್ಟು ಹಾಕಿದ್ದಾರೆ. ಅಷ್ಟಕ್ಕೂ ಏನ್ರಿ ನಿಮ್ಮ ಸಂದೇಶ..? ನಿಜ, ಯಾವುದೇ ಪಕ್ಷವಿರಲಿ ಆ ಪಕ್ಷಗಳಿಗೆ ಕಾರ್ಯಕರ್ತರೇ ಜೀವಾಳ, ಕಾರ್ಯಕರ್ತರ ಸಲುವಾಗಿ ನಾಯಕನೆನಿಸಿಕೊಂಡವನು ಯಾವತ್ತೂ ಬೆನ್ನೆಲುಬಾಗೇ ಇರ್ತಾನೆ, ಇರಬೇಕು ಕೂಡ. ಅದು ಎಲ್ಲಾ ಪಕ್ಷಗಳ ತತ್ವ....

ವಾಟ್ಸಾಪ್ ಗ್ರೂಪ್ ಗಳಲ್ಲೂ ಸ್ಪೋಟವಾಯ್ತು ಬಿಜೆಪಿ ಅಸಮಾಧಾನ..! ಛೇ, ಏನಿದೇಲ್ಲ..?

ವಾಟ್ಸಾಪ್ ಗ್ರೂಪ್ ಗಳಲ್ಲೂ ಸ್ಪೋಟವಾಯ್ತು ಬಿಜೆಪಿ ಅಸಮಾಧಾನ..! ಛೇ, ಏನಿದೇಲ್ಲ..?

ಮುಂಡಗೋಡ ಬಿಜೆಪಿಯ ಕಾರ್ಯಕರ್ತರ ಒಳ ಗುದ್ದಾಟ ಮುಗಿಯುವ ಲಕ್ಷಣಗಳು ಸದ್ಯಕ್ಕಂತೂ ಕಾಣ್ತಿಲ್ಲ. ಅದ್ಯಾವ ಕಾರಣಕ್ಕೋ ಏನೋ ಹಲವ್ರಿಗೆ ಅಸಮಾಧಾನ ಅನ್ನೋದು ಒಳಗೊಳಗೇ ಕುದಿಯುತ್ತಿದೆ. ಹೀಗಾಗಿ, ಇಲ್ಲಿನ ಬಿಜೆಪಿ ಕಾರ್ಯಕರ್ತರ ಒಳನೋವು ವಾಟ್ಸಾಪ್ ಗ್ರೂಪ್ ಗಳಲ್ಲೂ ಸ್ಪೋಟಗೊಳ್ತಿವೆ. ಒಂದು ಕಣ್ಣಿಗೆ ಸುಣ್ಣ..! ಅಸಲು, ಮುಂಡಗೋಡ ಬಿಜೆಪಿಯಲ್ಲಿ ಕಾರ್ಯಕರ್ತರ ನೋವು ಕೇಳುವವರೇ ಇಲ್ವಾ..? ಕಾರ್ಯಕರ್ತರಲ್ಲಿ ಮುಖಂಡರ ನಡುವೆ ಅದೇಷ್ಟರ ಮಟ್ಟಿಗೆ ಗುಂಪುಗಾರಿಕೆಯಿದೆಯೋ ಅದೇಲ್ಲ ಜಾತಿಯಾದಾರಿತವಾ..? ಜಾತಿಗೊಂದು ಬಣ ಸೃಷ್ಟಿಯಾಗಿದೆಯಾ ಕಮಲ ಪಡೆಯಲ್ಲಿ..? ಇಂತಹ ಅನುಮಾನಗಳು ಸದ್ಯಕ್ಕಂತೂ ತಲೆ ಚಿಟ್ಟು ಹಿಡಿಸಿದೆ. ಅಷ್ಟಕ್ಕೂ ಇದನ್ನೇಲ್ಲ ಯಾಕಿಲ್ಲಿ ಹೇಳ್ತಿದಿವಿ ಅಂದ್ರೆ, ಇವತ್ತು ಮುಂಡಗೋಡಿನ ವಾಟ್ಸಾಪ್ ಗ್ರೂಪ್ ಒಂದರಲ್ಲಿ, ಬಿಜೆಪಿಯ ಓರ್ವ ಕಾರ್ಯಕರ್ತ ನೇರವಾಗಿ ಒಂದು ಸವಾಲು ಹಾಕಿದ್ದಾರೆ. ಒಂದು ಕಣ್ಣಿಗೆ ಸುಣ್ಣ, ಮತ್ತೊಂದು ಕಣ್ಣಿಗೆ ಬೆಣ್ಣೆ ಹಚ್ತಿರಾ ಅಂತಾ ನೇರವಾಗಿ ಪ್ರಶ್ನಿಸಿದ್ದಾನೆ. ಅದಷ್ಟೇ ಆಗಿದ್ರೆ ಏನೋ ಬಿಡು ಅಂತಾ ಸುಮ್ಮನೇ ಇರಬಹುದಿತ್ತು. ಆದ್ರೆ, ಆ ಕಾರ್ಯಕರ್ತ, ಈ ಬಾರಿ ಮರಾಠರ ತಾಕತ್ತು ಏನು ಅನ್ನೋದನ್ನ ತೋರಿಸ್ತಿವಿ ಅಂತಾ...

ದೇಶಪಾಂಡೆ ಸಾಹೇಬ್ರೆ, ಕ್ಷೇತ್ರದ ಕೆರೆಗಳೇಲ್ಲ ನಿಮ್ಮ 30 ವರ್ಷದ ಸಾಧನೆಯ ಕತೆ ಹೇಳ್ತಿವೆ: ವಿವೇಕ್ ಹೆಬ್ಬಾರ್

ದೇಶಪಾಂಡೆ ಸಾಹೇಬ್ರೆ, ಕ್ಷೇತ್ರದ ಕೆರೆಗಳೇಲ್ಲ ನಿಮ್ಮ 30 ವರ್ಷದ ಸಾಧನೆಯ ಕತೆ ಹೇಳ್ತಿವೆ: ವಿವೇಕ್ ಹೆಬ್ಬಾರ್

ದೇಶಪಾಂಡೆಯವರೇ, ನಾನು ನಿಮ್ಮ ಬಗ್ಗೆ ಮಾತನಾಡುವಷ್ಟು ದೊಡ್ಡವನಲ್ಲ, ಆದ್ರೆ ತಮ್ಮ ಮೂವತ್ತು ವರ್ಷದ ಸಾಧನೆ ಏನು ಅಂತಾ ಜನ್ರಿಗೆ ಗೊತ್ತಿದೆ, ಕ್ಷೇತ್ರದಲ್ಲಿ ಸೊರಗಿ ಹೋದ ಕೆರೆ, ಕಟ್ಟೆಗಳೇಲ್ಲ ನಿಮ್ಮ ಸಾಧನೆಯ ಕತೆ ಹೇಳ್ತಿವೆ ಅಂತಾ ಬಿಜೆಪಿ ಯುವ ನಾಯಕ ವಿವೇಕ್ ಹೆಬ್ಬಾರ್, ಮಾಜಿ ಸಚಿವ ಆರ್.ವಿ.ದೇಶಪಾಂಡೆಯವ್ರಿಗೆ ನಾಜೂಕಿನಿಂದ್ಲೇ ಹರಿತ ಬಾಣ ಬಿಟ್ಟಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ ಜೊತೆ ಮಾತನಾಡಿದ ವಿವೇಕ್ ಹೆಬ್ಬಾರ್, ಕಾಂಗ್ರೆಸ್ ಅನ್ನೋ ಪಕ್ಷ ಸದ್ಯ ಶೂನ್ಯಕ್ಕೆ ಜಾರಿದೆ. ಇಡೀ ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಗೆ ನೆಲೆಯೇ ಇಲ್ಲವಾಗಿದೆ. ಹೀಗಾಗಿ, ಬಿಜೆಪಿ ಕಾರ್ಯಕರ್ತರಿಗೆ ಏನೆನೋ ಹೇಳಕೊಂಡು ಪಕ್ಷದ ಶಾಲು ಹಾಕಿ ಪಕ್ಷ ಸೇರ್ಪಡೆ ಅಂತಾ ಬೊಬ್ಬೆ ಹೊಡಿತಿದಾರೆ ಅಂತಾ ವಿವೇಕ್ ಹೆಬ್ಬಾರ್ ವ್ಯಂಗ್ಯವಾಡಿದ್ದಾರೆ. ಬಿಜೆಪಿ ಅನ್ನೋದು ಬಹುದೊಡ್ಡ ಪಕ್ಷ, ಇಲ್ಲಿ ಎಲ್ಲರೂ ಸಮರ್ಥ ಮುಖಂಡರೇ ಇದ್ದಾರೆ. ಸಹಜವಾಗೇ ಒಂದಿಷ್ಟು ಭಿನ್ನಾಭಿಪ್ರಾಯ ಇದೆ. ಅದನ್ನ ನಾವು ಹೇಗೆ ಬಗೆಹರಿಸಿಕೊಳ್ಳಬೇಕೊ ಬಗೆಹರಿಸಿಕೊಳ್ತಿವಿ ಅಂತಾ ವಿವೇಕ್ ಹೆಬ್ಬಾರ್ ತಿಳಿಸಿದ್ರು. ಯುವಕರು ಸಮರ್ಥರಿದ್ದಾರೆ..! ಇನ್ನು, ಪ್ರಶಾಂತ್...

ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಬಂಧನ..!

ಭಟ್ಕಳ- ಸಿಇಎನ್ ಪೊಲೀಸರು ಕಾರ್ಯಚರಣೆ‌ ನಡೆಸಿ, ಭಟ್ಕಳದ ರೈಲ್ವೇ ನಿಲ್ದಾಣದ ಬಳಿ, ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಗಾಂಜಾ ಸಮೇತ ಬಂಧಿಸಿದ್ದಾರೆ. ಅಬ್ದುಲ್ ರಷೀದ್, ಮಹಮ್ಮದ್ ಇರ್ಷಾದ ಬಂಧಿತರು. ಬಂಧಿತ ಆರೋಪಿತರಿಂದ 560 ಗ್ರಾಂ ಗಾಂಜಾ ವಶಕ್ಕೆ ಪಡೆಯಲಾಗಿದೆ. ಭಟ್ಕಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಮುಂಡಗೋಡ ಬಿಜೆಪಿಯ ಒಳಗುದಿ ತಣ್ಣಗಾಗಿಸಲು “ವಿವೇಕ” ಯತ್ನ..!

ಮುಂಡಗೋಡ ಬಿಜೆಪಿಯ ಒಳಗುದಿ ತಣ್ಣಗಾಗಿಸಲು “ವಿವೇಕ” ಯತ್ನ..!

ಯಲ್ಲಾಪುರ ವಿಧಾನಸಭಾ ಕ್ಷೇತ್ರದಲ್ಲಿ ರಾಜಕೀಯ ಮೇಲಾಟಗಳು ಜಾರಿಯಲ್ಲಿವೆ. ಬಿಜೆಪಿಯ ಒಳ ಮಸಲತ್ತುಗಳ ಕುರಿತಾಗಿ ಎದ್ದಿರುವ ಸಾಲು ಸಾಲು ಗುಲ್ಲುಗಳು, ಒಂದರ್ಥದಲ್ಲಿ ಬಿಜೆಪಿ ಕಾರ್ಯಕರ್ತರಲ್ಲಿ ಇನ್ನಿಲ್ಲದ ತಳಮಳಕ್ಕೆ ಕಾರಣವಾಗಿದೆ. ಬಹುತೇಕ ಯುವ ಪಡೆ ಒಳಗೊಳಗೇ ಕುದಿಯುತ್ತಿದೆ ಅನ್ನೋ ಮಾತುಗಳು ಕೇಳಿ ಬಂದ ಹಿನ್ನೆಲೆಯಲ್ಲಿ ಹೆಬ್ಬಾರ್ ಪಡೆ ಅಲರ್ಟ್ ಆಗಿದೆ. ಅದ್ರಲ್ಲೂ ಮುಂಡಗೋಡ ತಾಲೂಕಿನಲ್ಲಿ ದಾರಿತಪ್ಪಿದ್ದ ಪಕ್ಷದ ಸಂಘಟನೆಯನ್ನು ಮತ್ತೆ ಟ್ರ್ಯಾಕ್ ಗೆ ತರಲು ಮತ್ತದೇ ಯುವ ನಾಯಕ ಫಿಲ್ಡಿಗೆ ಇಳಿದಿದ್ದಾರೆ. “ವಿವೇಕ” ದಿಂದ ಕೆಲಸ..! ಯಸ್, ಶಿವರಾಮ್ ಹೆಬ್ಬಾರ್ ಪುತ್ರ ವಿವೇಕ್ ಹೆಬ್ಬಾರ್ ಇಡೀ ಕ್ಷೇತ್ರದಲ್ಲಿ ಪಕ್ಷದಲ್ಲಿನ ಯುವ ಪಡೆಗೆ ಆಕ್ಸಿಜನ್ ನೀಡಲು ಪ್ಲಾನ್ ಮಾಡಿಕೊಂಡಿದ್ದಾರೆ. ಅಷ್ಟಕ್ಕೂ, ಕೆಲವೊಂದು ಮನಸ್ತಾಪಗಳು ಸ್ಥಳೀಯ ಮಟ್ಟದಲ್ಲಿ ಇರೋದು ಸಹಜ ಅಂತಲೇ ಫಿಲ್ಡಿಗೆ ಇಳಿದಿರೋ ವಿವೇಕ್, ಎಲ್ಲೆಲ್ಲಿ ಅಸಮಾಧಾನದ ಗಾಳಿ ಗರಮ್ಮಾಗಿದೆಯೋ ಅಲ್ಲಲ್ಲಿ, ಒಂದಿಷ್ಟು ವಿಶೇಷ ಕಾಳಜಿಗೆ ಮುಂದಾಗಿದ್ದಾರೆ. ಕಾಂಗ್ರೆಸ್ ಗೆ ಡೋಂಟ್ ಕೇರ್..! ಕ್ಷೇತ್ರದಲ್ಲಿ, ಬಹುತೇಕ ಸೋರಗಿ ಹೋಗಿದ್ದ ಕಾಂಗ್ರೆಸ್ ಗೆ ಜೀವ ತುಂಬಿ, ಹಳ್ಳಿ...

ಗೋಕರ್ಣದ ಸಮುದ್ರದಲ್ಲಿ ಮುಳುಗುತ್ತಿದ್ದ ಹುಬ್ಬಳ್ಳಿ ಹುಡುಗ, ತಕ್ಷಣವೇ ರಕ್ಷಿಸಿದ್ರು ಸ್ಥಳೀಯರು..!

ಗೋಕರ್ಣದ ಸಮುದ್ರದಲ್ಲಿ ಮುಳುಗುತ್ತಿದ್ದ ಹುಬ್ಬಳ್ಳಿ ಹುಡುಗ, ತಕ್ಷಣವೇ ರಕ್ಷಿಸಿದ್ರು ಸ್ಥಳೀಯರು..!

ಗೋಕರ್ಣ: ಸಮುದ್ರದ ನೀರಲ್ಲಿ ಮುಳುಗುತ್ತಿದ್ದ ಪ್ರವಾಸಿಗನ ರಕ್ಷಣೆ ಮಾಡಲಾಗಿದೆ. ಕುಮಟಾದ ಗೋಕರ್ಣ ಕಡಲತೀರದಲ್ಲಿ ಘಟನೆ ನಡೆದಿದ್ದು,ರೋಹಿತ್ ಪಾಟೀಲ್(21) ರಕ್ಷಣೆಗೊಳಗಾದ ಪ್ರವಾಸಿಗನಾಗಿದ್ದಾನೆ‌. ಐವರು ಸ್ನೇಹಿತರು ಹುಬ್ಬಳ್ಳಿಯಿಂದ ಗೋಕರ್ಣಕ್ಕೆ ಪ್ರವಾಸಕ್ಕೆ ಬಂದಿದ್ದರು. ಈಜಲು ಸಮುದ್ರಕ್ಕೆ ಇಳಿದಿದ್ದ ವೇಳೆ ರೋಹಿತ್ ಅಲೆಗಳಿಗೆ ಸಿಲುಕಿದ್ದ. ಈ ವೇಳೆ ಇನ್ನೇನು ಸಮುದ್ರ ಪಾಲಾಗುತ್ತಿದ್ದ ರೋಹಿತ್ ನನ್ನು ಸ್ಥಳೀಯರು, ಜೀವರಕ್ಷಕ ಸಿಬ್ಬಂದಿ ಸಹಾಯದಿಂದ ರಕ್ಷಣೆ ಮಾಡಿದ್ದಾರೆ. ಬದುಕುಳಿದು ಬಂದ ಯುವಕ ಪ್ರಾಥಮಿಕ ಚಿಕಿತ್ಸೆ ಬಳಿಕ ಚೇತರಿಸಿಕೊಂಡಿದ್ದಾನೆ‌‌. ಗೋಕರ್ಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಇಂದಿನಿಂದ ದೇವಿ ದರ್ಶನಕ್ಕೆ ಅವಕಾಶ..!

ಸವದತ್ತಿ ಯಲ್ಲಮ್ಮನ ಗುಡ್ಡದಲ್ಲಿ ಇಂದಿನಿಂದ ದೇವಿ ದರ್ಶನಕ್ಕೆ ಅವಕಾಶ..!

ಬೆಳಗಾವಿ: ಸವದತ್ತಿಯ ಯಲ್ಲಮ್ಮದೇವಿ ದೇವಸ್ಥಾನದಲ್ಲಿ ಇಂದಿನಿಂದ ಸಂಭ್ರಮ ಮತ್ತೆ ಶುರುವಾಗುತ್ತಿದೆ. ಬರೋಬ್ಬರಿ, ಒಂದೂವರೆ ವರ್ಷದ ನಂತರ ಭಕ್ತರ ದರ್ಶನಕ್ಕೆ ಯಲ್ಲಮ್ಮ ದೇವಸ್ಥಾನ ತೆರದುಕೊಳ್ಳುತ್ತಿದೆ‌. ಇಂದು ಮಂಗಳವಾರ ಬೆಳಿಗ್ಗೆ 6.30ಕ್ಕೆ ಶಾಸ್ತ್ರೋಕ್ತವಾಗಿ ದೇವಸ್ಥಾನ ಓಪನ್ ಮಾಡಿದ ಆಡಳಿತ ಮಂಡಳಿ, ಯಲ್ಲಮ್ಮ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ರು. ಭಕ್ತರ ಸ್ವಾಗತಕ್ಕೆ ದೇವಸ್ಥಾನ ಆವರಣದಲ್ಲಿ ತಳಿರು ತೋರಣಗಳಿಂದ ಅಲಂಕಾರ ಮಾಡಲಾಗಿದೆ‌. ಇಷ್ಟು ದಿನ, ಭಕ್ತರಿಲ್ಲದೇ ಭಣಗುಡುತ್ತಿದ್ದ ಏಳುಕೊಳ್ಳದಲ್ಲಿ ಭಕ್ತರ ಸಂಭ್ರಮ ಇಂದಿನಿಂದ ಕಳೆ ಕಟ್ಟಲಿದೆ. ಇನ್ನು, ಮಹಾರಾಷ್ಟ್ರ- ಕರ್ನಾಟಕ ಸೇರಿ ಹಲವು ಕಡೆಗಳಿಂದ ಭಕ್ತರ ದಂಡೇ ಆಗಮಿಸುವ ಸಾಧ್ಯತೆ ಇದ್ದು, ಕೊರೊನಾ ನಿಯಮದಂತೆ ದೇವಿ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಭಕ್ತರ ನಿಯಂತ್ರಣಕ್ಕೆ ಪೋಲಿಸ್ ಬಂದೋಬಸ್ತ್ ಮಾಡಿರುವ ಆಡಳಿತ ಮಂಡಳಿ ಸಂಪೂರ್ಣ ವ್ಯವಸ್ಥೆ ಮಾಡಿಕೊಂಡಿದೆ.

ಅತ್ತಿವೇರಿ ಬಳಿ, ಬೈಕ್ ಸವಾರನ ಮೇಲೆ ಜಿಗಿದ ಜಿಂಕೆ, ಬೈಕ್ ನಿಂದ ಕೆಳಗೆ ಬಿದ್ದ ಸವಾರ ಗಂಭೀರ ಗಾಯ..!

ಅತ್ತಿವೇರಿ ಬಳಿ, ಬೈಕ್ ಸವಾರನ ಮೇಲೆ ಜಿಗಿದ ಜಿಂಕೆ, ಬೈಕ್ ನಿಂದ ಕೆಳಗೆ ಬಿದ್ದ ಸವಾರ ಗಂಭೀರ ಗಾಯ..!

ಮುಂಡಗೋಡ: ಜಿಂಕೆಯೊಂದು ಬೈಕ್ ಗೆ ಅಡ್ಡ ಬಂದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಅತ್ತಿವೇರಿ ಪಕ್ಷಿಧಾಮದ ಹತ್ತಿರ ನಡೆದಿದೆ. ಮಾರುತಿ ರಾಮಣ್ಣ ಹುಲಿಹೊಂಡ ಎಂಬುವವನೇ ಗಾಯಗೊಂಡಿರೋ ಬೈಕ್ ಸವಾರ. ಈತ ಅತ್ತಿವೇರಿ ಪಕ್ಷಿಧಾಮದಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಇಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬರುವ ವೇಳೆ, ಏಕಾಏಕಿ ಜಿಂಕೆ ಬೈಕ್ ಮೇಲೆಯೇ ಜಿಗಿದಿದೆ. ಪರಿಣಾಮ, ಬೈಕ್ ಸವಾರ ಮಾರುತಿ ಬೈಕ್ ನಿಂದ ಕೆಳಗೆ ಬಿದ್ದಿದ್ದಾನೆ. ತಲೆಗೆ ಹಾಗೂ ಕೈಗೆ ಗಾಯವಾಗಿದ್ದು, ಪ್ರಾಥಮಿಕ ಚಿಕಿತ್ಸೆಗಾಗಿ ಮುಂಡಗೋಡಿನ ತಾಲೂಕಾಸ್ಪತ್ರೆಗೆ ಕರೆತರಲಾಗಿತ್ತು. ಅಲ್ಲಿಂದ ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಕಿಮ್ಸ್ ಗೆ ರವಾನಿಸಲಾಗಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ‌.

error: Content is protected !!