ಮುಂಡಗೋಡ: ತಾಲೂಕಿನ ಕಲಘಟಗಿ ರಸ್ತೆಯ, ಟಿಬೇಟಿಯನ್ ಕ್ಯಾಂಪ್ ನಂಬರ್ 6 ಬಳಿ ಶ್ರೀಶೈಲಂ ಪ್ಯೂಲ್ ನೂತನ ಪೆಟ್ರೋಲ್ ಬಂಕ್ ಉದ್ಘಾಟನೆಗೊಂಡಿದೆ. ಕಾರ್ಮಿಕ ಸಚಿವ ಶಿವರಾಮ್ ಹೆಬ್ಬಾರ್ ಅಂಬ್ಯುಲೆನ್ಸ್ ಗೆ ಡಿಸೇಲ್ ಹಾಕುವ ಮೂಲಕ ನೂತನ ಪೆಟ್ರೊಲ್ ಬಂಕ್ ಉದ್ಘಾಟಿಸಿ ಶುಭ ಹಾರೈಸಿದ್ದಾರೆ. ಜಿಲ್ಲಾ ಪಂಚಾಯತ ಮಾಜಿ ಸದಸ್ಯ ಎಲ್.ಟಿ.ಪಾಟೀಲ್, ರವಿಗೌಡ ಪಾಟೀಲ್, ಮುಖಂಡರಾದ ನಾಗಭೂಷಣ ಹಾವಣಗಿ, ಬಸಯ್ಯ ನಡುವಿಮನಿ, ಸಿದ್ದು ಹಡಪದ, ಹಾಗೂ ಸ್ಥಳೀಯ ಪ್ರಮುಖರು, ಪೆಟ್ರೋಲ್ ಬಂಕ್ ಮಾಲೀಕರಾದ ಸುರೇಶ್ ಕಲ್ಲೋಳ್ಳಿ, ದೇವೇಂದ ಕೆಂಚಗೊಣ್ಣವರ್, ಮಂಜುನಾಥ್ ಹಿರೇಮಠ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.
Top Stories
ಮುಂಡಗೋಡಿನಲ್ಲಿ ಇಂದು ಪೊಲೀಸ್ ಜನಸಂಪರ್ಕ ಸಭೆ..! ಎಸ್ಪಿ ಎಂ ನಾರಾಯಣ್ ರಿಂದ ಮಹತ್ವದ ಹೆಜ್ಜೆ..!!
ಹುಬ್ಬಳ್ಳಿಯಲ್ಲಿ ಮತ್ತೆ ಗುಂಡಿನ ಸದ್ದು, ಇಬ್ಬರು ನಟೋರಿಯಸ್ ದರೋಡೆಕೋರರ ಮೇಲೆ ಪೊಲೀಸರ ಫೈರಿಂಗ್..!
ಹಾಡಹಗಲೇ ಮುಂಡಗೋಡಿನಲ್ಲಿ ನಡೀತು ಬೆಚ್ಚಿ ಬೀಳಿಸೋ ಅಟ್ಯಾಕ್..! ಏನಾಗ್ತಿದೆ ಮುಂಡಗೋಡಿನಲ್ಲಿ..? ಯಾರ ಭಯವೂ ಇಲ್ಲದೇ ಹೋಯ್ತಾ..?
ಮೀನುಗಾರರ ಸಂಕಷ್ಟ ಪರಿಹಾರ ಮೊತ್ತ 10 ಲಕ್ಷಕ್ಕೆ ಏರಿಕೆ :ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್
ಅಕ್ರಮವಾಗಿ ಇಂದೂರಿನಿಂದ ಸಾಗಿಸಲಾಗುತ್ತಿದ್ದ ಜಾನುವಾರುಗಳ ರಕ್ಷಣೆ, ಟಾಟಾ ಎಸ್ ಸಮೇತ ಆರೋಪಿ ವಶಕ್ಕೆ..!
ಯಲ್ಲಾಪುರದಲ್ಲಿ ನಡೀತು ಮತ್ತೊಂದು ಖತರ್ನಾಕ ರಾಬರಿ, ಖಡಕ್ಕ ಪೊಲೀಸರ ಏಟಿಗೆ ಕೆಲವೇ ಗಂಟೆಯಲ್ಲಿ ಆರೋಪಿಗಳು ಅಂದರ್..!
ಹಾನಗಲ್ ಮಾಜಿ ಶಾಸಕ ಮನೋಹರ್ ತಹಶೀಲ್ದಾರ್ ವಿಧಿವಶ..!
ಶಿಗ್ಗಾವಿ ಕಾಂಗ್ರೆಸ್ ಅಭ್ಯರ್ಥಿಯ ಮೇಲೆ ರೌಡಿಶೀಟ್ ಇಲ್ಲ: ಹಾವೇರಿ ಎಸ್ಪಿ ಅಂಶುಕುಮಾರ್ ಪ್ರಕಟಣೆ
ಹಳಿಯಾಳದಲ್ಲಿ ಕಬ್ಬು ಬೆಳೆಗಾರರು ಮತ್ತು ಸಕ್ಕರೆ ಕಾರ್ಖಾನೆ ಪ್ರತಿನಿಧಿಗಳೊಂದಿಗೆ ಡಿಸಿ ಸಭೆ: ಪ್ರಮುಖ ನಿರ್ಣಯಗಳು
ಸಲ್ಮಾನ್ ಖಾನ್ಗೆ ಕೊಲೆ ಬೆದರಿಕೆ ಹಾಕಿದ ಆರೋಪಿ ಹಾವೇರಿಯಲ್ಲಿ ಅಂದರ್
ತೆರವಾದ ಗ್ರಾ.ಪಂ. ಸದಸ್ಯ ಸ್ಥಾನಗಳಿಗೆ ಉಪ ಚುನಾವಣೆ: ವೇಳಾಪಟ್ಟಿ ಪ್ರಕಟ, ನಾಳೆ ಬುಧವಾರದಿಂದಲೇ ಅಧಿಸೂಚನೆ..!
ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಅರವಿಂದ್ ಸಾವು..! ಅಯ್ಯೋ ಈ ಸಾವು ನ್ಯಾಯವೇ..!
ಕೊಪ್ಪ (ಇಂದೂರು)ನಲ್ಲಿ ಪತ್ನಿಯ ತವರು ಮನೆ ಎದುರೇ ಪೆಟ್ರೊಲ್ ಸುರಿದುಕೊಂಡ ಪತಿ ಆತ್ಮಹತ್ಯೆಗೆ ಯತ್ನ..! ಗಂಭೀರ ಗಾಯ, ಕಿಮ್ಸ್ ಗೆ ದಾಖಲು..!
ಮುಂಡಗೋಡ ಹಳೂರಿನ ಹೋರಿ ಹಬ್ಬ ಅರ್ದಕ್ಕೆ ಬಂದ್..!
ಚಿಗಳ್ಳಿ ಹೋರಿಹಬ್ಬಕ್ಕೆ ಯುವಕ ಬಲಿ, ಹೋರಿ ತಿವಿದು 21 ವರ್ಷದ ಹುಡುಗನ ಭಯಾನಕ ಸಾವು.!
ಮುಂಡಗೋಡ ಪಟ್ಟಣದಲ್ಲೇ ಬೈಕ್ ಅಪಘಾತ, ಹಬ್ಬಕ್ಕೆಂದು ಬಂದಿದ್ದ ಹಳೂರಿನ ಯುವಕನಿಗೆ ಗಂಭೀರ ಗಾಯ..!
ಶಿಗ್ಗಾವಿ ಉಪಸಮರ: ಖಾದ್ರಿ ಮನವೊಲಿಸಲು ಜಮೀರ್ ಸರ್ಕಸ್: ಶ್ರೀನಿವಾಸ್ ಮಾನೆ ಜೊತೆ ಸಂಧಾನ..! ನಾಮಪತ್ರ ವಾಪಸ್ ಪಡೀತಾರಾ ಅಜ್ಜಂಫೀರ್..?
ಶಿಗ್ಗಾವಿ 19 ಅಭ್ಯರ್ಥಿಗಳ ನಾಮಪತ್ರ ಅಂಗೀಕಾರ; ಮಂಜುನಾಥ ಕುನ್ನೂರ ಸೇರಿ 7 ನಾಮಪತ್ರ ತಿರಸ್ಕೃತ
ಅಂದಲಗಿಯಲ್ಲಿ ರೈತನ ಮೇಲೆ ಕರಡಿ ದಾಳಿ, ಆಸ್ಪತ್ರೆಗೆ ದಾಖಲು..!
ಕ್ಯಾಂಪ್ ನಂ.6 ರ ಬಳಿ ಕಲಘಟಗಿ ರಸ್ತೆಯಲ್ಲಿ “ಶ್ರೀಶೈಲಂ ಪ್ಯೂಲ್” ನೂತನ ಪೆಟ್ರೊಲ್ ಬಂಕ್ ಪ್ರಾರಂಭ..!
ಅನೈತಿಕ ಸಂಬಂಧಕ್ಕೆ ಅಡ್ಡಿ ಅಂತಾ ತಮ್ಮನನ್ನೇ ಕೊಂದ್ಲಾ ಪಾಪಿ ಅಕ್ಕ..? ನೂಲ್ವಿ ಗ್ರಾಮದಲ್ಲೊಂದು ಅಮಾನವೀಯ ಘಟನೆ..!!
ಹುಬ್ಬಳ್ಳಿ: ನೂಲ್ವಿ ಗ್ರಾಮದಲ್ಲಿ ನಡೆದ ಕೊಲೆ ಪ್ರಕರಣವನ್ನು 24 ಗಂಟೆಯಲ್ಲಿ ಬೇಧಿಸಿ, ಆರೋಪಿಗಳನ್ನು ಬಂಧಿಸುವಲ್ಲಿ ಹುಬ್ಬಳ್ಳಿ ಗ್ರಾಮೀಣ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ. ಅಕ್ರಮ ಸಂಬಂಧಕ್ಕೆ ಅಡ್ಡಿಯಾದ ಎಂಬ ಕಾರಣಕ್ಕೆ ಸಹೋದರಿಯೇ ತನ್ನ ಪ್ರಿಯಕರನ ಜೊತೆ ಸೇರಿ ತಮ್ಮನನ್ನು ಕೊಲೆ ಮಾಡಿರುವುದು ಬಹಿರಂಗವಾಗಿದೆ. ಕಳೆದ ಎರಡು ದಿನಗಳ ಹಿಂದೆ ಶಂಭುಲಿಂಗ ಕಮಡೊಳ್ಳಿ(35) ಎಂಬಾತನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿತ್ತು. ಈ ಕುರಿತು ಹುಬ್ಬಳ್ಳಿಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಪ್ರಕರಣ ದಾಖಲಿಸಿಕೊಂಡ 24 ಗಂಟೆಯಲ್ಲೇ ಕೊಲೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕೊಲೆಯಾದ ಶಂಭುಲಿಂಗ ಕಮಡೊಳ್ಳಿ ಅನೈತಿಕ ಸಂಬಂಧಕ್ಕೆ ಸಹೋದರ ಅಡ್ಡಿಯಾಗಿದ್ದ ಎಂಬ ಕಾರಣಕ್ಕೆ ಸಹೋದರಿ ಬಸವ್ವ ನರಸಣ್ಣವರ ಹಾಗೂ ಆಕೆಯ ಪ್ರಿಯಕರ ಚನ್ನಪ್ಪ ಮರೆಪ್ಪಗೌಡರ ಸೇರಿಕೊಂಡು ಕೊಲೆ ಮಾಡಿ ಶವವನ್ನು ಎಸೆದು ಹೋಗಿದ್ದರು. ಪೊಲೀಸರಿಗೆ ಸಂಶಯ ಬಾರದಿರಲಿ ಎಂದು ಸಹೋದರಿ ಸಹೋದರನ ಶವದ ಎದುರು ಕುಳಿತು ಕಣ್ಣೀರು ಹಾಕಿ ನಾಟಕವಾಡಿದ್ದರು. ಆದ್ರೆ ಪೊಲೀಸರು ಅನುಮಾನಗೊಂಡು ವಿಚಾರಣೆ ನಡೆಸಿದಾಗ ಅನೈತಿಕ ಸಂಬಂಧಕ್ಕೆ...
ಮುಂಡಗೋಡ ತಾಲೂಕಿನ 16 ಗ್ರಾಪಂ ನಲ್ಲಿ ಕರ್ತವ್ಯದಲ್ಲಿರೋ ಸಿಬ್ಬಂದಿಗಳಿಂದ ಅನುಮೊದನೆಗೆ ಸರ್ಕಾರಕ್ಕೆ ಮನವಿ..!
ಮುಂಡಗೋಡ ಪಟ್ಟಣದ ತಹಶೀಲ್ದಾರ ಕಚೇರಿಯಲ್ಲಿ ತಾಲೂಕಿನ 16 ಗ್ರಾಮ ಪಂಚಾಯತಿಗಳಲ್ಲಿ ಇದುವರೆಗೂ ಅನುಮೋದನೆಯಾಗದೇ ಕರ್ತವ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳು ತಹಶೀಲ್ದಾರರವರ ಮುಖಾಂತರ ಮತ್ತು ಕಾರ್ಯನಿರ್ವಾಹಕ ಅಧಿಕಾರಿಗಳು ತಾಲೂಕ ಪಂಚಾಯತ ರವರ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಿದ್ರು. ತಾಲೂಕಿನ 16 ಗ್ರಾಮ ಪಂಚಾಯತಿಗಳಲ್ಲಿ ಕರ್ತವ್ಯ ನಿರ್ವಹಿಸ್ತಿರೊ ಹಲವು ಸಿಬ್ಬಂದಿಗಳಿಗೆ ಇನ್ನೂ ಅನುಮೋದನೆ ನೀಡಿಲ್ಲ. ಹೀಗಾಗಿ, ಈ ಸಿಬ್ಬಂದಿಗಳು ಬದುಕು ನಡೆಸುವುದು ಕಷ್ಟಕರವಾಗಿದೆ. ಹೀಗಾಗಿ, ತಕ್ಷಣವೇ ಅನುಮೋದನೆ ನೀಡಿ ಸಹಕಾರಿಯಾಗಬೇಕೆಂದು ಸರ್ಕಾರಕ್ಕೆ ಸಿಬ್ಬಂದಿಗಳು ಮನವಿ ಮಾಡಿದ್ದಾರೆ..
ಆ ಹುಡುಗ ಭಗವಾಧ್ವಜ ಹಾಕಿದ್ದೇ ತಪ್ಪಾಯ್ತಾ..? ಅಷ್ಟಕ್ಕೂ ಆ ಪೊಲೀಸಪ್ಪನಿಗೆ ಅಷ್ಟೇಲ್ಲ ಅಧಿಕಾರ ಕೊಟ್ಟವರು ಯಾರು..?
ಮುಂಡಗೋಡ: ತಾಲೂಕಿನ ಮಳಗಿ ಪೊಲೀಸ್ ಠಾಣೆಯ ಪೊಲೀಸಪ್ಪ ಮಾಡಿರೋ ಅದೊಂದು ರಗಳೆ ,ರಾದ್ದಾಂತ ಇಡೀ ತಾಲೂಕಿನಲ್ಲಿ ಕಿಚ್ಚು ಹೊತ್ತಿಸುತ್ತಿದೆ. ತಾನೇ ಪೊಲೀಸ್ ವರಿಷ್ಠಾಧಿಕಾರಿ ಅಂತಾ ಪೋಸು ಕೊಡುವ ಹುಂಬತನಕ್ಕೆ ಈಗ ಅದೇ ಇಲಾಖೆಯ ಹಿರಿಯರು ತಲೆ ತಗ್ಗಿಸುವ ಮಟ್ಟಿಗೆ ಬಂದು ನಿಂತಿದೆ. ಆಗಿದ್ದೇನು..? ಅದು ಪಾಳಾ ಗ್ರಾಮ, ಮುಂಡಗೋಡ ತಾಲೂಕಿನ ಮಟ್ಟಿಗೆ ಒಂದಿಷ್ಟು ಸೂಕ್ಷ್ಮ ಪ್ರದೇಶ. ಇಲ್ಲಿ ದಶಕಗಳ ಹಿಂದಿನಿಂದಲೂ ಕೋಮು ದಳ್ಳುರಿ ಒಳಗೊಳಗೆ ಹೊಗೆಯಾಡಿ, ಕೆಲವು ಬಾರಿ ಹೊತ್ತಿಕೊಂಡೂ ಉರಿದ ಘಟನೆಗಳಾಗಿತ್ತು. ಆದ್ರೆ ಇತ್ತೀಚೆಗೆ ಇಲ್ಲಿ ಅಕ್ಷರಶಃ ಸೌಹಾರ್ದಯುತ ವಾತಾವರಣ ನಿರ್ಮಾಣವಾಗಿದೆ. ಎಲ್ಲರೂ ಸಹಬಾಳ್ವೆ ನಡೆಸ್ತಿದಾರೆ. ಆದ್ರೆ, ಅವನೊಬ್ಬ ಖಾಕಿತೊಟ್ಟ ಹುಂಬನ ಕಿತಾಪತಿ ಈಗ ಮತ್ತೆ ಹಲವು ಮನಸ್ಸುಗಳನ್ನು ಕೆರಳಿಸಿದೆ. ಅವತ್ತು ಮೇ 13.. ಇದು ಈಗ್ಗೆ ಎರಡು ದಿನಗಳ ಹಿಂದಿನ ಮಾತು. ಪಾಳಾ ಸಮೀಪ ಅದೊಬ್ಬ ಮಾವಿನ ಹಣ್ಣಿನ ವ್ಯಾಪಾರಿ ಭಗವಾಧ್ವಜ ಹಾಕೊಂಡು ರಸ್ತೆ ಪಕ್ಕದಲ್ಲಿ ವ್ಯಾಪಾರ ಮಾಡ್ತಾ ಇರ್ತಾನೆ. ಆತನ ಹೆಸ್ರು ಅನಿಲ್. ಅಂದಹಾಗೆ ಈ ಹುಡುಗ...
ಮುಂಡಗೋಡ ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಶಿರಸಿಗೆ ಎತ್ತಂಗಡಿ..!
ಮುಂಡಗೋಡ: ತಹಶೀಲ್ದಾರ್ ಶ್ರೀಧರ್ ಮುಂದಲಮನಿ ಎತ್ತಂಗಡಿಯಾಗಿದ್ದಾರೆ. ಶಿರಸಿಗೆ ವರ್ಗಾವಣೆಗೊಳಿಸಿ ಸರ್ಕಾರ ಆದೇಶ ಹೊರಡಿಸಿದೆ. ಇಂದು ಮದ್ಯಾಹ್ನವೇ ಸರ್ಕಾದಿಂದ ಆದೇಶ ಹೊರಬಿದ್ದಿದ್ದು ರಾಜ್ಯದಲ್ಲಿ ಒಟ್ಟೂ ಐವರು ತಹಶೀಲ್ದಾರರಿಗೆ ವರ್ಗಾವಣೆಯಾಗಿದೆ. ಈ ಮೂಲಕ ನಕಲಿ ಜಾತಿ ಪ್ರಮಾಣ ಪತ್ರ ಪಡೆದು ಹುದ್ದೆ ಪಡೆದುಕೊಂಡಿರೋ ಆರೋಪಕ್ಕೆ ಗುರಿಯಾಗಿದ್ದ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರ ವರ್ಗಾವಣೆಗೆ ಆಗ್ರಹಿಸಿ ಹಲವು ಸಂಘಟನೆಗಳು ಪ್ರತಿಭಟನೆ ನಡೆಸಿದ್ದವು. ದಲಿತಪರ ಸಂಘಟನೆಗಳು ತಹಶೀಲ್ದಾರ್ ಕಾರ್ಯಾಲಯದ ಎದುರು ಉಪವಾಸ ಧರಣಿ ಸತ್ಯಾಗ್ರಹ ನಡೆಸಿದ್ದವು. ಇದನ್ನೇಲ್ಲ ಮನಗಂಡ ಸರ್ಕಾರ ತಹಶೀಲ್ದಾರ್ ಶ್ರೀಧರ್ ಮುಂದಲಮನಿಯವರನ್ನು ವರ್ಗಾವಣೆಗೊಳಿಸಿದೆ ಅನ್ನೋ ಮಾತುಗಳು ಕೇಳಿ ಬಂದಿವೆ. ಇಂದು ಮದ್ಯಾಹ್ನವೇ ಇಂತಹದ್ದೊಂದು ಆದೇಶ ಬಂದಿದ್ದು ಯಾರಿಗೂ ಅಧಿಕೃತ ಮಾಹಿತಿ ಇನ್ನೂ ದೊರೆತಿಲ್ಲ. ಆದ್ರೆ, ಪಬ್ಲಿಕ್ ಫಸ್ಟ್ ನ್ಯೂಸ್ ಗೆ ವರ್ಗಾವಣೆಯ ಆದೇಶ ಪ್ರತಿ ದೊರೆತಿದೆ.
ಯಲ್ಲಾಪುರ ಕ್ಷೇತ್ರಕ್ಕೆ ಜೆಡಿಎಸ್ ಅಭ್ಯರ್ಥಿ ಬಹುತೇಕ ಫಿಕ್ಸ್..?
ಯಲ್ಲಾಪುರ ಕ್ಷೇತ್ರದಲ್ಲಿ ಅಕ್ಷರಶಃ ಮಕಾಡೆ ಮಲಗಿದ್ದ ಜೆಡಿಎಸ್ ನ ತೆನೆ ಹೊತ್ತ ಮಹಿಳೆ, ಮತ್ತೆ ಮೈ ಕೊಡವಿ ಎದ್ದು ನಿಲ್ಲುವ ಸೂಚನೆಗಳು ಸಿಕ್ಕಿವೆ. ಆಟಕ್ಕುಂಟು ಲೆಕ್ಕಕ್ಕೇ ಇಲ್ಲದ ಹಾಗಿದ್ದ ಪಕ್ಷಕ್ಕೆ ಹುರುಪಿನಿಂದಲೇ ಯುವ ಪಡೆಯೊಂದು ದಾಂಗುಡಿ ಇಟ್ಟಿದೆ. ಇನ್ನೇನು ಕುಮಾರಣ್ಣನ ಇಶಾರೆಗಾಗಿ ಕಾದು ಕುಳಿತಿರೊ ಅದೊಂದು ಟೀಂ ಯಲ್ಲಾಪುರ ಕ್ಷೇತ್ರದಲ್ಲಿ ಆ್ಯಕ್ಟಿವ್ ಆಗುತ್ತಿದೆ. ಅವ್ರು ಸಂತೋಷ್..! ಅವ್ರ ಹೆಸ್ರು ಸಂತೋಷ ರಾಯ್ಕರ್, ಮಳಗಿ ಗ್ರಾಮದವರು. ನಿಮಗೆ ನೆನಪಿರಬಹುದು, ಅದು 2014 ರ ಲೋಕಸಭಾ ಚುನಾವಣೆ. ಬೆಳಗಾವಿ ಲೋಕಸಭಾ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಬಿಜೆಪಿಯ ದಿ. ಸುರೇಶ್ ಅಂಗಡಿಯವರ ವಿರುದ್ಧ ಸ್ಪರ್ಧಿಸಿದ್ದವರು ಇದೇ ಸಂತೋಷ್, ನಂತ್ರ, 2018 ರ ವಿಧಾನಸಭಾ ಚುನಾವಣೆಯಲ್ಲಿ ಯಲ್ಲಾಪುರ ಕ್ಷೇತ್ರದಿಂದ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದು ಕೊನೆ ಹಂತದಲ್ಲಿ ಕುಮಾರಣ್ಣನ ಇಶಾರೆಯಿಂದ ಕಣದಿಂದ ಹಿಂದೆ ಸರಿದಿದ್ದ ಇವ್ರು ಆ ನಂತರದಲ್ಲಿ ಕುಮಾರಣ್ಣನ ತೀರ್ಮಾನದಿಂದ ಮುನಿಸಿಕೊಂಡು ಪಕ್ಷದಿಂದ ಅಂತರ ಕಾಯ್ದುಕೊಂಡಿದ್ರು. ಆದ್ರೆ, ತಮ್ಮ ರಾಜಕೀಯದ ಕಾರ್ಯಗಳನ್ನು ಮಾತ್ರ ಕೈಬಿಟ್ಟಿರಲಿಲ್ಲ. ಬಿಜೆಪಿಯೊಂದಿಗೆ ಗುರುತಿಸಿಕೊಂಡು...
ನಂದಿಕಟ್ಟಾದ ಟಿಕ್ ಟಾಕ್ ಪ್ರೇಮಿಗಳು ಮತ್ತೆ ಒಂದಾದ್ರು, ಥ್ಯಾಂಕ್ಸ್ ಅಂದ್ಲು ಹುಡುಗಿ..!
ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದ ಯುವಕನ ಲವ್ ಕಹಾನಿ ಮತ್ತೆ ರಿಯಲ್ ಲೈಫ್ ಗೆ ಬಂದು ನಿಂತಿದೆ. ಟಿಕ್ ಟಾಕ್ ನಲ್ಲಿ ಶುರುವಾಗಿದ್ದ ಪ್ರೀತಿ ಮದುವೆಯ ಮೂರು ಗಂಟಿನೊಂದಿಗೆ ಬಾಂಧವ್ಯ ಬೆಸೆದುಕೊಂಡು ಅದೇನೋ ಮನಸ್ತಾಪಗಳು ತಪ್ಪು ಕಲ್ಪನೆಗಳಿಂದ ದೂರವಾಗಿದ್ದ ಒಂದೂವರೇ ವರ್ಷದ ಪ್ರೇಮ್ ಕಹಾನಿ ಮತ್ತದೇ ಹಳೆಯ ಪ್ರೀತಿಯ ಬಂಧನದಲ್ಲಿ ಬೆಸೆದುಕೊಂಡಿದೆ. ಹಾಗಂತ ಮೊನ್ನೆಯಷ್ಟೇ ನೊಂದು ಮನದಾಳ ಬಿಚ್ಚಿಟ್ಟಿದ್ದ ಮಹಿಳೆ ಈಗ ತನ್ನ ಲೈಫು ಸರಿಯಾಯ್ತು ಕಣ್ರಿ ಅಂತಾ ಖುಶಿಯಿಂದಲೇ ಹೇಳಿಕೊಂಡಿದ್ದಾಳೆ. ತಪ್ಪು ಕಲ್ಪನೆಗಳಾಗಿತ್ತು..! ನನ್ನ ಪತಿ ಒಳ್ಳೆಯವನು, ನನಗೆ ಮೋಸ ಮಾಡಿಲ್ಲ. ನಾನೇ ಅವರನ್ನ ಹಾಗೆ ತಪ್ಪಾಗಿ ತಿಳಿದುಕೊಂಡಿದ್ದೆ. ಅವತ್ತು ನನ್ನ ಪತಿ ಊರಿಗೆ ಹೋದವರು ವಾಪಸ್ ಬರದೇ ಇದ್ದ ಕಾರಣ ನಾನು ತುಂಬಾ ಕುಗ್ಗಿ ಹೋಗಿ ಮಾನಸಿಕವಾಗಿ ನೊಂದು ಜರ್ಜರಿತಳಾಗಿದ್ದೆ ಹೀಗಾಗಿ, ಪೊಲೀಸ್ ಠಾಣೆಯ ಮೆಟ್ಟಿಲು ಏರಬೇಕಾಗಿತ್ತು. ಅಲ್ಲದೇ ತಮ್ಮ ಮಾದ್ಯಮದ ಮೂಲಕ ನನ್ನ ನೋವು ತೋಡಿಕೊಳ್ಳಬೇಕಾಯ್ತು. ಆದ್ರೆ ಈಗ ನಿಮ್ಮೇಲ್ಲರ ಸಹಕಾರದಿಂದ ನಾವು ಒಂದಾಗಿದ್ದೇವೆ ಅಂತಾ ಪಬ್ಲಿಕ್...
ಮುಂಡಗೋಡಿನಲ್ಲಿ ರಾತ್ರೋ ರಾತ್ರಿ IPL ಬೆಟ್ಟಿಂಗ್ ಅಡ್ಡೆ ಮೇಲೆ ಎಸ್ಪಿ ಟೀಂ ದಾಳಿ, ನಾಲ್ವರು ಅರೆಸ್ಟ್..!
ಇದು ಮುಂಡಗೋಡ ಮಟ್ಟಿಗೆ ಬಹುದೊಡ್ಡ ಬ್ರೇಕಿಂಗ್ ನ್ಯೂಸ್. ಯಸ್, ಉತ್ತರ ಕನ್ನಡದ ಖಡಕ್ ಎಸ್ಪಿ ಸುಮನಾ ಫನ್ನೇಕರ್ ಮೇಡಂ ಈಗಷ್ಟೇ ತಮ್ಮ ಅಸಲೀ ಆಟಗಳನ್ನು ಶುರು ಮಾಡಿ ಆಯ್ತು. ಇನ್ನೇನಿದ್ರು ಜಿಲ್ಲೆಯಲ್ಲಿ ಅಕ್ರಮಗಳಿಗೆ ಜಾಗವಿಲ್ಲ ಅನ್ನೋದು ಪಕ್ಕಾ. ಅದ್ರ ಭಾಗವಾಗೇ ನಿನ್ನೆ ತಡರಾತ್ರಿ ಮುಂಡಗೋಡಿನಲ್ಲಿ ಅದೊಂದು ಸ್ಪೇಷಲ್ ಟೀಂ ಬೃಹತ್ ಕಾರ್ಯಾಚರಣೆ ಮಾಡಿ ನಾಲ್ವರನ್ನ ಅನಾಮತ್ತಾಗಿ ವಶಕ್ಕೆ ಪಡೆದುಕೊಂಡು ಹೋಗಿದೆ. ಅಸಲು, ಈ ಕಾರ್ಯಚರಣೆ ಖುದ್ದು ಮುಂಡಗೋಡ ಪೊಲೀಸರಿಗೂ ಬೆವರು ಇಳಿಸಿದೆ. ಯಾಕಂದ್ರೆ ಅಲ್ಲೇನಾಗ್ತಿದೆ ಅನ್ನೋ ಸಣ್ಣದೊಂದು ಸುಳಿವೂ ಮುಂಡಗೋಡದ ಧೀಮಂತ ಪೊಲೀಸರಿಗೆ ತಿಳಿದಿರಲೇ ಇಲ್ಲ. ಅಷ್ಟಕ್ಕೂ ಏನಾಯ್ತು..? ಮುಂಡಗೋಡಿನಲ್ಲಿ ಐಪಿಎಲ್ ಬೆಟ್ಟಿಂಗ್ ದಂಧೆಯ ಅಡ್ಡೆ ಮೇಲೆ ರಾತ್ರೋ ರಾತ್ರಿ ಎಸ್ಪಿ ಮೇಡಂರವರ ಸ್ಪೇಷಲ್ ಟೀಂ ದಾಳಿ ಮಾಡಿದೆ. ಪರಿಣಾಮ ನಾಲ್ವರು ಅಂದರ್ ಆಗಿದ್ದಾರೆ. ಮುಂಡಗೋಡಿನ ಇಬ್ಬರು ಹಾಗೂ ಹುಬ್ಬಳ್ಳಿಯ ಇಬ್ಬರು ಪೊಲೀಸರು ತೋಡಿದ ಖೆಡ್ಡಾಗೆ ಸುಲಭವಾಗೇ ಸಿಕ್ಕಿಬಿದ್ದಿದ್ದಾರೆ. ಅಷ್ಟಕ್ಕೂ ಇವ್ರಿಗೆ ಇಲ್ಲಿನವರ ಯಾವ ಭಯವೂ ಇರಲೇ ಇಲ್ಲವಲ್ಲ ಹಾಗಾಗಿ, ಖುಲ್ಲಂ...
ಮುಂಡಗೋಡ ಕಾಂಗ್ರೆಸ್ ಅದಃ ಪತನಕ್ಕೆ ಕಾರಣವಾಗತ್ತಾ ಅದೊಂದು ಮಾತು, ಅದೊಂದು ನಿರ್ಧಾರ..? ಪ್ರಶಾಂತಣ್ಣ ಏನಿದೇಲ್ಲ..?
“ನಾನ್ ಇನ್ವೇಸ್ಟ್ ಮಾಡುವವನು, ನಾನೇನ್ ಹೇಳ್ತಿನೋ ಅದನ್ನ ಕೇಳಕೊಂಡು ಬೆಪ್ಪಗೆ ಇರಬೇಕು ಅಷ್ಟೆ” ಇದು ಕಾಂಗ್ರೆಸ್ ಯುವ ಮುಖಂಡ ಪ್ರಶಾಂತ್ ದೇಶಪಾಂಡೆ ಸಾಹೇಬ್ರ ಪಾಲಿಟಿಕಲ್ ಸ್ಟೈಲ್ ಅಂತೆ. ಹಾಗಂತ, ಮುಂಡಗೋಡಿನ ಕೆಲವು ಕಾಂಗ್ರೆಸ್ ಮುಖಂಡರಿಗೆ ಖಡಕ್ಕಾಗಿ ಹೇಳಿಬಿಟ್ಟಿದ್ರಂತೆ… ಹೀಗಾಗಿನೇ, ಯಲ್ಲಾಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅನ್ನೋದು ಅಧಃ ಪತನವಾಗ್ತಿದೆ ಅಂತಿದಾರೆ ಖುದ್ದು ಅದೇ ಪಕ್ಷದ ಕಾರ್ಯಕರ್ತರು. ಈ ಮಾತನ್ನ ನಾವಿಲ್ಲಿ ಯಾಕೆ ಹೇಳ್ತಿದಿವಿ ಅಂದ್ರೆ, ಇಡೀ ಯಲ್ಲಾಪುರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಜವಾಬ್ದಾರಿ ಅನಾಯಾಸವಾಗಿ ಬಂದೊದಗಿತ್ತು ಪ್ರಶಾಂತಣ್ಣಂಗೆ, ಇಡೀ ಕ್ಷೇತ್ರದಲ್ಲಿ ಪಕ್ಷವನ್ನು ಇನ್ನಷ್ಟು ಬಲಿಷ್ಟಗೊಳಿಸಲು ಸಾಕಷ್ಟು ಸಮಯವೂ ಇತ್ತು. ಎಲ್ಲರೂ ಒಪ್ಪಿಕೊಂಡೂ ಆಗಿತ್ತು. ಯಾಕಂದ್ರೆ, ಅವ್ರ ಎದುರು ನಿಂತು ದೂಸ್ರಾ ಮಾತಾಡುವವರು ಯಾರೂ ಇರಲೇ ಇಲ್ಲ. ಇಷ್ಟಿದ್ರೂ ಪ್ರಶಾಂತಣ್ಣ ಮಾತ್ರ ತಮ್ಮ ಎಳಸುತನದಿಂದ ಯಲ್ಲಾಪುರ ಕ್ಷೇತ್ರದಲ್ಲಿನ ಕಾಂಗ್ರೆಸ್ ಗೆ ಉಸಿರು ನೀಡೋದಿರಲಿ, ಇರೋ ಬರೋ ಉಸಿರನ್ನು ಕಿತ್ತುಬಿಟ್ರು ಅಂತಿದಾರೆ ಕಾರ್ಯಕರ್ತರು. ರಾಜಕೀಯದಲ್ಲಿ “ದುಡ್ಡು ಕೊಟ್ರೆ ಹೆಗಲ ಮೇಲೆ” ಅನ್ನೋ ಜಾಯಮಾನಕ್ಕೆ ಅಂಟಿಕೊಂಡು ತಮ್ಮಕಾಲಮೇಲೆ...
ಮುಂಡಗೋಡ ಪೊಲೀಸರ ಕಾರ್ಯಾಚರಣೆ, ಅಕ್ರಮ ಗಾಂಜಾ ಮಾರುತ್ತಿದ್ದ ವ್ಯಕ್ತಿಯ ಬಂಧನ..!
ಮುಂಡಗೋಡ: ಪಟ್ಟಣದ ನ್ಯಾಸರ್ಗಿ ರಸ್ತೆಯ ಮೈಲಾರಲಿಂಗ ದೇವಸ್ಥಾನದ ಹತ್ತಿರ ವ್ಯಕ್ತಿಯೋರ್ವ ಗಾಂಜಾ ಮಾರಾಟ ಮಾಡುತ್ತಿದ್ದ ವೇಳೆ ಮುಂಡಗೋಡ ಪೊಲೀಸರು ದಾಳಿ ನಡೆಸಿ ಗಾಂಜಾ ವಶಪಡಿಸಿಕೊಂಡ ಘಟನೆ ನಡೆದಿದೆ. ಶಿಗ್ಗಾವಿ ತಾಲೂಕಿನ ಜೊಂಡಲಗಟ್ಟಿಯ ಮಾಧುರಾವ್ ಶಂಕರ್ ರಾವ್ ಭೋಸ್ಲೆ (26) ಎಂಬುವವನೇ ಆರೋಪಿಯಾಗಿದ್ದಾನೆ. ಈತ ಇಂದು ನ್ಯಾಸರ್ಗಿ ರಸ್ತೆಯ ಮೈಲಾರಲಿಂಗ ದೇವಸ್ಥಾನದ ಹತ್ತಿರ ಗಾಂಜಾ ಮಾರಾಟ ಮಾಡುತ್ತಿದ್ದ ಹಿನ್ನೆಲೆ ಖಚಿತ ಮಾಹಿತಿ ಮೇರೆಗೆ ಮುಂಡಗೋಡ ಪಿಎಸ್ಐ ಬಸವರಾಜ್ ಮಬನೂರು ಮತ್ತವರ ತಂಡ ದಾಳಿ ಮಾಡಿದೆ. ಸುಮಾರು 4 ಸಾವಿರ ಮೌಲ್ಯದ 62 ಗ್ರಾಂ ತೂಕದ ಗಾಂಜಾ ಹಾಗೂ 350 ರೂ. ನಗದು ಆರೋಪಿ ಸಮೇತ ವಶಪಡಿಸಿಕೊಳ್ಳಲಾಗಿದೆ. ಈ ಕುರಿತು ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.