Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ: ಗಂಭೀರ ಗಾಯ..!

ಅಗಡಿ ಬಳಿ ಬೈಕ್ ಸ್ಕಿಡ್ ಆಗಿ ಬಿದ್ದ ಸವಾರ: ಗಂಭೀರ ಗಾಯ..!

ಮುಂಡಗೋಡ: ತಾಲೂಕಿನ ಅಗಡಿ ಸಮೀಪದ ಶಾಂತಾ ದುರ್ಗಾ ರೈಸ್ ಮಿಲ್ ಬಳಿ ಬೈಕ್ ಸ್ಕಿಡ್ ಆಗಿ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ನಡೆದಿದೆ. ಕಲಘಟಗಿ ತಾಲೂಕಿನ ಶಿಗ್ಗಟ್ಟಿ ಗ್ರಾಮದ ಶೇಖಪ್ಪಾ ಲಮಾಣಿ ಗಾಯಗೊಂಡ ಬೈಕ್ ಸವಾರ ಅಂತಾ ತಿಳಿದು ಬಂದಿದೆ. ಬೈಕ್ ನ ಹಿಂದಿನ ಗಾಲಿ ಪಂಕ್ಚರ್ ಆಗಿದ್ದ ಕಾರಣಕ್ಕೆ ಸ್ಕಿಡ್ ಆಗಿ ಬಿದ್ದಿದ್ದು, ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ. ಹೀಗಾಗಿ, ಸ್ಥಳೀಯರು ಕೂಡಲೇ ಅಂಬ್ಯುಲೆನ್ಸ್ ತರಿಸಿ ಗಾಯಗೊಂಡ ಬೈಕ್ ಸವಾರನನ್ನು ಕಲಘಟಗಿ ತಾಲೂಕಾ ಆಸ್ಪತ್ರೆಗೆ...

Post
ನಂದಿಕಟ್ಟಾ ಭಾಗದಲ್ಲಿ ಕೈಗೆಟುಕದ “ಕರೆಂಟು”..! ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣವೇ ಕಗ್ಗಂಟು..!!

ನಂದಿಕಟ್ಟಾ ಭಾಗದಲ್ಲಿ ಕೈಗೆಟುಕದ “ಕರೆಂಟು”..! ವಿದ್ಯಾರ್ಥಿಗಳ ಆನ್ ಲೈನ್ ಶಿಕ್ಷಣವೇ ಕಗ್ಗಂಟು..!!

ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದ ಜನ ಕಂಗಾಲಾಗಿದ್ದಾರೆ. ನಿತ್ಯವೂ ಇಲ್ಲಿನ ಜನ್ರು ಕತ್ತಲೆಯಲ್ಲೇ ಬದುಕಬೇಕಾದ ಅನಿವಾರ್ಯತೆ ಎದುರಾಗಿದೆ. ಇನ್ನು ಮನೆಯಲ್ಲೇ ಕುಳಿತು ಆನ್ ಲೈನ್ ಕ್ಲಾಸ್ ಗಾಗಿ ಕಾಯ್ತಿರೊ ಮಕ್ಕಳ ಗೋಳು ಹೇಳತೀರದ್ದು. ಯಾಕಂದ್ರೆ ಇಲ್ಲಿ ಕರೇಂಟೇ ಇರಲ್ಲ. ಕಣ್ಣಾ ಮುಚ್ಚಾಲೆ..! ನಿಜ, ನಂದಿಕಟ್ಟಾ ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಅದೇನು ಸಮಸ್ಯೆಯೋ ಗೊತ್ತಿಲ್ಲ. ಇಲ್ಲಿ ವಿದ್ಯುತ್ ಬಹುತೇಕ ಇರೋದೇ ಇಲ್ಲ. ಐದು ನಿಮಿಷ ಬಂದ್ರೆ, ಮತ್ತೆ ಒಂದು ಗಂಟೆ ಕರೇಂಟು ಕೈ ಕೊಡುತ್ತದೆ. ಪ್ರತೀ ಕ್ಷಣವೂ ಕಣ್ಣಾ‌ಮುಚ್ಚಾಲೆ...

Post
ಅಬ್ಬಾ..!! ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಹೇಗೆ ನೆಲಸಮಗೊಳಿಸಿದ್ರು ಗೊತ್ತಾ..?

ಅಬ್ಬಾ..!! ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ಹೇಗೆ ನೆಲಸಮಗೊಳಿಸಿದ್ರು ಗೊತ್ತಾ..?

ಮುಂಡಗೋಡ: ತಾಲೂಕಿನ ಓಣಿಕೇರಿ ಗ್ರಾಮದ ಜನ ಇವತ್ತು ಒಂದು ಕ್ಷಣ ರೋಮಾಂಚಕ ಅನುಭವ ಪಡೆದುಕೊಂಡ್ರು. ಗ್ರಾಮದಲ್ಲಿ ಕುಡಿಯುವ ನೀರು ಸರಭರಾಜು ಮಾಡುವ ಶಿಥಿಲಗೊಂಡಿದ್ದ ನೀರಿನ ಟ್ಯಾಂಕ್ ನೆಲಸಮಗೊಳಿಸಲಾಯಿತು‌. ಹೌದು, ಮುಂಡಗೋಡ ತಾಲೂಕಿನ ಓಣಿಕೇರಿ ಗ್ರಾಮದಲ್ಲಿ ಸುಮಾರು 8ರಿಂದ 10 ವರ್ಷ ಹಳೆಯ, ಸಂಪೂರ್ಣ ಶಿಥಿಲಗೊಂಡಿದ್ದ ಕುಡಿಯುವ ನೀರಿನ ಟ್ಯಾಂಕ್ ಇತ್ತು. ನೀರಿನ ಟ್ಯಾಂಕ್ ಸಂಪೂರ್ಣವಾಗಿ ಶಿಥಿಲಗೊಂಡಿದ್ದ ಕಾರಣ ನೀರಿನ ಟ್ಯಾಂಕ್ ಪಕ್ಕದ ಮನೆಯ ಮಾಲೀಕರಾದ ರವಿ ಸಹದೇವಪ್ಪ ಸುಭಾಂಜಿ ಅವರ ಮನೆ ಮೇಲೆ ಯಾವುದೇ ಕ್ಷಣದಲ್ಲಾದ್ರೂ ಬಿದ್ದು...

Post
ಚವಡಳ್ಳಿ ರಸ್ತೆಯ ಗುಂಡಿ ಮುಚ್ಚಲು ಎದ್ದು ಬಂದ ಅಧಿಕಾರಿಗಳು..! ತುಂಬಾ ಥ್ಯಾಂಕ್ಸ್ ಅಂದ ಗ್ರಾಮಸ್ಥರು..!!

ಚವಡಳ್ಳಿ ರಸ್ತೆಯ ಗುಂಡಿ ಮುಚ್ಚಲು ಎದ್ದು ಬಂದ ಅಧಿಕಾರಿಗಳು..! ತುಂಬಾ ಥ್ಯಾಂಕ್ಸ್ ಅಂದ ಗ್ರಾಮಸ್ಥರು..!!

ಮುಂಡಗೋಡ:ತಾಲೂಕಿನ ಚೌಡಳ್ಳಿ, ಕ್ಯಾಸನಕೇರಿ ರಸ್ತೆಯ ಅದ್ವಾನಕ್ಕೆ ಕೊಂಚ ರಿಲೀಫ್ ಸಿಕ್ಕಂತಾಗಿದೆ. ಲೇಟ್ ಆದ್ರೂ ಅಧಿಕಾರಿಗಳು ಎಚ್ಚೆತ್ತುಕೊಂಡಿದ್ದಾರೆ. ಬಹುತೇಕ ಹಳ್ಳಿಗಳಿಗೆ ರಸ್ತೆ ಸಂಪರ್ಕವನ್ನೇ ಬಂದ್ ಮಾಡಿದ್ದ ಚೌಡಳ್ಳಿ ರಸ್ತೆಗೆ ತೆಪೆ ಹಚ್ಚಲಾಗಿದೆ. ಅಂದಹಾಗೆ, ಇದು ಪಬ್ಲಿಕ್ ಫಸ್ಟ್ ಬಿಗ್ ಇಂಪ್ಯಾಕ್ಟ್.. ಆಕ್ರೋಶದ ಕಟ್ಟೆಯೊಡೆದಿತ್ತು..! ಹೌದು, ಮುಂಡಗೋಡ ತಾಲೂಕಿನ ಚೌಡಳ್ಳಿ, ಮಲವಳ್ಳಿ, ಲಕ್ಕೊಳ್ಳಿ, ಕ್ಯಾಸನಕೇರಿ ಗ್ರಾಮಗಳಿಗೆ ಸಂಪರ್ಕ ಕಲ್ಪಿಸೋ ರಸ್ತೆಯಲ್ಲಿ ನೀರಾವರಿ ಯೋಜನೆಗಾಗಿ ಪೈಪಲೈನ್ ಕಾಮಗಾರಿ ಮಾಡಲಾಗಿತ್ತು. ಪೈಪಲೈನ್ ಅಳವಡಿಸಲು ರಸ್ತೆಯಲ್ಲೇ ಗುಂಡಿ ತೆಗೆದು ಪೈಪಲೈನ್ ಜೋಡಿಸಲಾಗಿತ್ತು. ಆದ್ರೆ ಹಾಗೆ...

Post
ಇದು ಟಿಬೇಟಿಯನ್ ಕಾಲೋನಿಯಲ್ಲಿ  ಕಂಡ ಅದ್ಭುತ ದೃಷ್ಯ..! ನೋಡಿದ್ರೆ ಮೈ ಜುಮ್ ಅನ್ನತ್ತೆ..!!

ಇದು ಟಿಬೇಟಿಯನ್ ಕಾಲೋನಿಯಲ್ಲಿ ಕಂಡ ಅದ್ಭುತ ದೃಷ್ಯ..! ನೋಡಿದ್ರೆ ಮೈ ಜುಮ್ ಅನ್ನತ್ತೆ..!!

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕ್ಯಾಂಪ್ ನಂ.6 ರಲ್ಲಿ ಇವತ್ತು ಒಂದು ಅದ್ಭುತ ನಡೆದಿದೆ. ಕಾಳಿಂಗ ಸರ್ಪವೊಂದು ಗಿಡದ ಮೇಲೇರಿ ಹೆಡೆ ಎತ್ತಿ ಸ್ವಚ್ಚಂದವಾಗಿ ಆಟವಾಡಿದೆ. ಯಸ್, ಇದು ಮುಂಡಗೋಡ ತಾಲೂಕಿನ ಟಿಬೇಟಿಯನ್ ಕಾಲೋನಿಯಲ್ಲಿ ಕಂಡು ಬಂದ ಅದ್ಭುತ ದೃಷ್ಯ. ಹೇಗಿದೆ ಅಂತಾ ಈ ವಿಡಿಯೋ ನೋಡಿ..  

Post
ತಾಲೂಕಿನಲ್ಲಿಂದು 07 ಕೊರೋನಾ ಪಾಸಿಟಿವ್..!

ತಾಲೂಕಿನಲ್ಲಿಂದು 07 ಕೊರೋನಾ ಪಾಸಿಟಿವ್..!

ಮುಂಡಗೋಡ: ತಾಲೂಕಿನಲ್ಲಿ ಇಂದು 8 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿವೆ. ಸದ್ಯ ತಾಲೂಕಿನಲ್ಲಿ ಒಟ್ಟೂ 88 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 35 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 52 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. ಯಾವುದೇ ಸೋಂಕಿತರು ಇಂದು ಗುಣಮುಖರಾಗಿಲ್ಲ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ನಲ್ಲಿ ಓರ್ವ ಸೋಂಕಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅಂತಾ ಮುಂಡಗೋಡ ತಹಶೀಲ್ದಾರ್ ಮಾಹಿತಿ ನೀಡಿದ್ದಾರೆ

Post
ದೇಶಪಾಂಡೆ ರುಡ್ ಸೆಟಿಯಿಂದ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ..!

ದೇಶಪಾಂಡೆ ರುಡ್ ಸೆಟಿಯಿಂದ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ..!

ಮುಂಡಗೋಡ: ದೇಶಪಾಂಡೆ ರುಡ್ ಸೆಟಿ ಸಂಸ್ಥೆಯ ಮುಖಾಂತರ ಇಂದು ತಾಲೂಕಿನ ಇಂದೂರ ಗ್ರಾಮದಲ್ಲಿ ಇಂದೂರು, ನಂದಿಕಟ್ಟಾ ಹಾಗೂ ಹುನಗುಂದ ಗ್ರಾಮಗಳ ಅಂಗನವಾಡಿ ಕಾರ್ಯಕರ್ತರಿಗೆ ಮೆಡಿಕಲ್ ಸೆಫ್ಟಿ ಕಿಟ್ ವಿತರಣೆ ಮಾಡಲಾಯಿತು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಕೃಷ್ಣ ಹಿರೇಹಳ್ಳಿ, ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಧರ್ಮರಾಜ ನಡಿಗೇರ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸುಪ್ರವೈಜರ್ ಫಾತಿಮಾ, ಗ್ರಾಮ ಪಂಚಾಯಿತಿ ಸದಸ್ಯರಾದ ಇಮ್ರಾನ್ ಖಾನ್ ಬಾಳಿಕಾಯಿ, ರಾಜು ಹರಿಜನ, ಸಂಸ್ಥೆಯ ಸುಪ್ರವೈಜರ್ ಈರಯ್ಯ ಸ್ವಾಮಿ ಸೇರಿದಂತೆ...

Post
ಮುಂಡಗೋಡ ಮಹಿಳಾ ಮೋರ್ಚಾದಿಂದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ..!

ಮುಂಡಗೋಡ ಮಹಿಳಾ ಮೋರ್ಚಾದಿಂದ ಡಾ.ಶ್ಯಾಮ್ ಪ್ರಸಾದ್ ಮುಖರ್ಜಿ ಪುಣ್ಯತಿಥಿ..!

ಮುಂಡಗೋಡ: ಪಟ್ಟಣದಲ್ಲಿ ಇಂದು ಬಿಜೆಪಿ ಮಹಿಳಾ ಮೋರ್ಚಾ ಮಂಡಲ ವತಿಯಿಂದ ಡಾ. ಶ್ಯಾಮ್ ಪ್ರಸಾದ್ ಮುಖರ್ಜಿಯವರ 68 ನೇ ಪುಣ್ಯತಿಥಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಮುಖ್ಯ ಅತಿಥಿಯಾಗಿ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಅಶೋಕ ಚಲವಾದಿ, ಡಾ.ಶ್ಯಾಮ್ ಪ್ರಸಾದ್ ಮುಖರ್ಜಿಯವರ ಜೀವನ, ಸಾಧನೆಗಳ ಕುರಿತು ಮಾತನಾಡಿದ್ರು. ಇನ್ನು ಕಾರ್ಯಕ್ರಮದಲ್ಲಿ ಬಿಜೆಪಿ ತಾಲೂಕಾ ಮಂಡಲಾಧ್ಯಕ್ಷ ನಾಗಭೂಷಣ ಹಾವಣಗಿ, ಮಹಿಳಾ ಮೋರ್ಚಾ ಜಿಲ್ಲಾ ಉಪಾಧ್ಯಕ್ಷೆ ವೀಣಾ ಓಸಿಮಠ್, ತಾಲೂಕಾ ಮಹಿಳಾ ಮೋರ್ಚಾ ಅಧ್ಯಕ್ಷೆ ಲೈಸಾ ಥಾಮಸ್, ಮಹಿಳಾ ಮೋರ್ಚಾ ತಾಲೂಕಾ ಪ್ರಧಾನ ಕಾರ್ಯದರ್ಶಿ ಮಾಲತಿ...

Post
ಮುಂಡಗೋಡ ಠಾಣೆಯ 7 ಪೊಲೀಸರ ವರ್ಗಾವಣೆ: ಸನ್ಮಾನಿಸಿ ಬಿಳ್ಕೋಡುಗೆ..!

ಮುಂಡಗೋಡ ಠಾಣೆಯ 7 ಪೊಲೀಸರ ವರ್ಗಾವಣೆ: ಸನ್ಮಾನಿಸಿ ಬಿಳ್ಕೋಡುಗೆ..!

ಮುಂಡಗೋಡ: ಓರ್ವ ಎಎಸ್ಐ ಸೇರಿದಂತೆ ಒಟ್ಟು 7 ಜನ ಪೊಲೀಸರಿಗೆ ಮುಂಡಗೋಡ ಪೊಲೀಸ್ ಠಾಣೆಯಿಂದ ವರ್ಗಾವಣೆಯಾಗಿದೆ. ಎಎಸ್ಐ ಅಶೋಕ ರಾಠೋಡ್, ಖೀರು ಘಟಕಾಂಬಳೆ, ರಾಘೂ ನಾಯ್ಕ್, ಭಗವಾನ್ ಗಾಂವಕರ್, ಕುಮಾರ್ ಬಣಕಾರ್, ಗುರು ನಾಯಕ ಹಾಗೂ ಮಹಿಳಾ ಪೇದೆ ಪೂಜಾ ವರ್ಗಾವಣೆಗೊಂಡಿದ್ದಾರೆ. ಹೀಗಾಗಿ ಮುಂಡಗೋಡ ಠಾಣೆಯಲ್ಲಿ ವರ್ಗಾವಣೆಗೊಂಡ ಪೊಲೀಸರಿಗೆ ಬಿಳ್ಕೋಡುವ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಸಿಪಿಐ ಪ್ರಭುಗೌಡ ಕಿರೇದಳ್ಳಿ, ಕ್ರೈಂ ಪಿಎಸ್ಐ ಎನ್.ಡಿ.ಜಕ್ಕಣ್ಣವರ್, ಪಿಎಸ್ಐ ಬಸವರಾಜ್ ಮಬೆನೂರು ಸೇರಿದಂತೆ ಹಲವರು ಈ ವೇಳೆ ಉಪಸ್ಥಿತರಿದ್ದರು.

Post
ತಾಲೂಕಿನಲ್ಲಿಂದು 05 ಕೊರೋನಾ ಪಾಸಿಟಿವ್..! 2 ಸಾವು..!!

ತಾಲೂಕಿನಲ್ಲಿಂದು 05 ಕೊರೋನಾ ಪಾಸಿಟಿವ್..! 2 ಸಾವು..!!

ಮುಂಡಗೋಡ: ತಾಲೂಕಿನಲ್ಲಿ ಇಂದು 5 ಹೊಸ ಕೊರೋನಾ ಪಾಸಿಟಿವ್ ದೃಢಪಟ್ಟಿದೆ. 19 ಸೋಂಕಿತರು ಗುಣಮುಖರಾಗಿದ್ದಾರೆ. ಸದ್ಯ ತಾಲೂಕಿನಲ್ಲಿ ಒಟ್ಟೂ 84 ಸಕ್ರೀಯ ಪ್ರಕರಣಗಳಿದ್ದು, ಆಸ್ಪತ್ರೆಯಲ್ಲಿ 43 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. 41 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 13 ಜನ ಸೋಂಕಿತರು ಇಂದು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಇನ್ನು, ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಖಾಲಿ ಖಾಲಿಯಾಗಿದೆ. ಇಂದು ತಾಲೂಕಿನಲ್ಲಿ ಇಬ್ಬರು ಸೋಂಕಿತರು ಮೃತಪಟ್ಟಿದ್ದು, ತಾಲೂಕಿನ ತಟ್ಟಿಹಳ್ಳಿಯ 65 ವರ್ಷದ ಓರ್ವ ಪುರುಷ ವ್ಯಕ್ತಿ, ಹಾಗೂ...

error: Content is protected !!