Gold Price Today: ದೇಶೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಮತ್ತೆ ಏರಿಕೆಗೆ ಸಾಕ್ಷಿಯಾಗಿದ್ದು, ಜೂನ್ 03ರಂದು ಹಳದಿ ಲೋಹದ ಬೆಲೆ ಮತ್ತಷ್ಟು ಎತ್ತರಕ್ಕೆ ಜಿಗಿತವನ್ನ ಸಾಧಿಸಿದೆ.

ವೀಕೆಂಡ್ ಬ್ರೇಕ್ ಬಳಿಕ ಬಂಗಾರದ ಬೆಲೆಯು ಸೋಮವಾರ ದಿಢೀರ್ ಜಿಗಿತಗೊಂಡಿತ್ತು. ನಿನ್ನೆ ಚಿನ್ನದ ಬೆಲೆ 10 ಗ್ರಾಂ 330 ರೂಪಾಯಿ ಹೆಚ್ಚಾಗಿತ್ತು. ಇದೀಗ ಹಳದಿ ಲೋಹದ ಬೆಲೆ ಮತ್ತಷ್ಟು ಹೆಚ್ಚಾಗಿದೆ. ಬೆಳ್ಳಿ ಬೆಲೆ ಸಹ ಚಿನ್ನದ ಜೊತೆಗ ಏರಿಕೆಗೊಂಡಿದೆ.

ಜಾಗತಿಕ ಮಟ್ಟದಲ್ಲಿ ಇಂದು ಸ್ವಲ್ಪ ಪಾಸಿಟಿವ್ ಸೂಚನೆ ಹೊರತಾಗಿಯೂ, ಹೂಡಿಕೆದಾರರು ಸುರಕ್ಷಿತ ಹೂಡಿಕೆಯಾದ ಚಿನ್ನದತ್ತ ಮೊರೆ ಹೋಗಿದ್ದಾರೆ. ರಷ್ಯಾ-ಉಕ್ರೇನ್ ನಡುವಿನ ಯುದ್ಧ ಮತ್ತಷ್ಟು ತಾರಕ್ಕೇರಿದ್ದು, ಭಾರತ-ಅಮೆರಿಕಾ ನಡುವಿನ ಟ್ರೇಡ್ ಅಂತಿಮಗೊಳ್ಳದಿರುವುದು ಹಾಗೂ ಚೀನಾ-ಅಮೆರಿಕಾ ನಡುವಿನ ವ್ಯಾಪಾರ ಯುದ್ಧ ಮುಂದುವರೆದಿದೆ.

ಹೀಗಾಗಿ ಹೂಡಿಕೆದಾರರಲ್ಲಿ ಕಳವಳ ಮೂಡಿಸಿದ್ದು, ಸುರಕ್ಷಿತ ಹೂಡಿಕೆಯಾದ ಚಿನ್ನದ ಮೇಲೆ ಮತ್ತೆ ಹೂಡಿಕೆ ಮಾಡಲು ಯತ್ನಿಸಿದ್ದಾರೆ. ಮತ್ತೊಂದೆಡೆ ಭಾರತೀಯ ಷೇರುಪೇಟೆ ಮಂಗಳವಾರ ಫ್ಲ್ಯಾಟ್ ಆಗಿ ವಹಿವಾಟು ನಡೆಸಿದೆ.

ಚಿನ್ನದ ಬೆಲೆ ಮೇಲೆ ಪರಿಣಾಮ ಬೀರುವ ಅಂಶಗಳು!
ಚಿನ್ನದ ಬೆಲೆ ಏರಿಕೆ ಹಾಗೂ ಇಳಿಕೆಗೆ ಕೆಲವು ಪ್ರಮುಖ ಅಂಶಗಳು ಪರಿಣಾಮ ಬೀರಲಿದ್ದು, ಅಂತರಾಷ್ಟ್ರೀಯ ಮಟ್ಟದಲ್ಲಿ ಯುಎಸ್‌ ಡಾಲರ್ ಏರಿಳಿತ‌ದ ಜೊತೆಗೆ ಭಾರತದ ರೂಪಾಯಿ ಬೆಲೆ ನಡುವಿನ ವ್ಯತ್ಯಾಸ ಕೂಡ ಪ್ರಭಾವ ಬೀರಲಿದೆ. ಇಷ್ಟಲ್ಲದೆ ವಿವಿಧ ದೇಶಗಳ ಕೇಂದ್ರ ಬ್ಯಾಂಕ್‌ಗಳ ನಡುವೆ ಚಿನ್ನದ ಬೇಡಿಕೆ ಪ್ರಮಾಣ, ಆಯಾ ದೇಶದ ತೆರಿಗೆಗಳು ಸೇರಿದಂತೆ ಸಾಕಷ್ಟು ಅಂಶಗಳು ಚಿನ್ನದ ಬೆಲೆ ವ್ಯತ್ಯಾಸಕ್ಕೆ ಕಾರಣವಾಗಿವೆ.

ದೆಹಲಿಯಲ್ಲಿ ಚಿನ್ನದ ಬೆಲೆ ಕುಸಿತ
ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ 22 ಕ್ಯಾರೆಟ್ ಚಿನ್ನದ ಬೆಲೆ 10 ಗ್ರಾಂ 200 ರೂಪಾಯಿ ಏರಿಕೆಗೊಂಡಿದ್ದು, 90,950 ರೂಪಾಯಿಗಳಲ್ಲಿ ವಹಿವಾಟು ನಡೆಸಿದೆ. 24 ಕ್ಯಾರೆಟ್‌ ಚಿನ್ನದ ಬೆಲೆ 10 ಗ್ರಾಂ 70 ರೂಪಾಯಿ ಏರಿಕೆಗೊಂಡು 99,060 ರೂಪಾಯಿ ದಾಖಲಾಗಿದೆ. ಆದ್ರೆ ಬೆಂಗಳೂರಿನಲ್ಲಿ 10 ಗ್ರಾಂ 220 ರೂಪಾಯಿ ದುಬಾರಿಯಾಗಿದೆ. ಇನ್ನು ಬೆಳ್ಳಿ ಬೆಲೆ ಕೆಜಿಗೆ 100 ರೂಪಾಯಿ ಹೆಚ್ಚಾಗಿ 1,00,100 ರೂಪಾಯಿ ಗಡಿ ಮುಟ್ಟಿದೆ.

ಬೆಂಗಳೂರು ಸೇರಿದಂತೆ ಪ್ರಮುಖ ನಗರಗಳಲ್ಲಿ 24 ಕ್ಯಾರೆಟ್ ಚಿನ್ನದ ಬೆಲೆ

ಬೆಂಗಳೂರು :- 99,060 ರೂಪಾಯಿ
ನಾಗ್ಪುರ :- 99,060 ರೂಪಾಯಿ
ಮುಂಬೈ :- 99,060 ರೂಪಾಯಿ
ಚೆನ್ನೈ :- 99,060 ರೂಪಾಯಿ
ಕೋಲ್ಕತ್ತಾ :- 99,060 ರೂಪಾಯಿ
ಪಾಟ್ನಾ :- 99,110 ರೂಪಾಯಿ
ಸೂರತ್‌ :- 99,060 ರೂಪಾಯಿ
ಚಂಡೀಗಢ :- 99,060 ರೂಪಾಯಿ
ಲಕ್ನೋ :-99,060 ರೂಪಾಯಿ

ಈ ಮೇಲ್ಕಂಡ ನಗರಗಳಲ್ಲಿ ಬೆಳ್ಳಿ ಬೆಲೆ (ಪ್ರತಿ ಕೆಜಿಗೆ) ಎಷ್ಟಿದೆ ಈ ಕೆಳಗೆ ಚೆಕ್ ಮಾಡಿ.

ನಗರಗಳು ಬೆಲೆ (ಪ್ರತಿ ಕೆಜಿಗೆ)
ದೆಹಲಿ :- 1,00,100 ರೂ.
ಬೆಂಗಳೂರು :- 1,00,100 ರೂ.
ಚೆನ್ನೈ :- 1,11,100 ರೂ.
ಮುಂಬೈ :-1,00,100 ರೂ.
ಕೋಲ್ಕತ್ತಾ :- 1,00,100 ರೂ.
ಕೇರಳ :- 1,11,100 ರೂ.
ಪಾಟ್ನಾ :- 1,00,100 ರೂ.
ಸೂರತ್‌ :- 1,00,100 ರೂ
ಚಂಡೀಗಢ :- 1,00,100 ರೂ.
ಲಕ್ನೋ :- 1,00,100 ರೂ.

 

error: Content is protected !!