IPL Trophy: 18ನೇ ಆವೃತ್ತಿಯ ಐಪಿಎಲ್ನಲ್ಲಿ ಚಾಂಪಿಯನ್ ಆಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ ಹೊರಹೊಮ್ಮಿದ್ದು ಎಲ್ಲರಿಗೂ ತಿಳಿದಿರುವ ವಿಷಯ. ಕಳೆದ 17 ವರ್ಷಗಳಿಂದ ಟ್ರೋಫಿಗಾಗಿ ಹೋರಾಡಿದ್ದ ಆರ್ಸಿಬಿ ಮೂರು ಬಾರಿ ಫೈನಲ್ಗೆ ಎಂಟ್ರಿ ಪಡೆದಿದ್ದರು ಟ್ರೋಫಿ ಗೆಲ್ಲಲು ಸಾಧ್ಯವಾಗಿರಲಿಲ್ಲ.
2009, 2011 ಮತ್ತು 2016ರಲ್ಲಿ ಬೆಂಗಳೂರು ತಂಡ ಫೈನಲ್ಗೆ ಬಂದಿದ್ದರು, ಡೆಕ್ಕನ್ ಚಾರ್ಜಸ್, ಚೆನ್ನೈ ಸೂಪರ್ ಕಿಂಗ್ ಮತ್ತು ಸನ್ರೈಸರ್ಸ್ ಹೈದರಾಬಾದ್ ತಂಡಗಳ ವಿರುದ್ಧ ಸೋಲನ್ನು ಕಂಡಿತು. ಇದಾದ ಬಳಿಕ 2020, 2021, 2022 ಮತ್ತು 2024ರಲ್ಲಿ ಒಟ್ಟು ನಾಲ್ಕು ಬಾರಿ ಪ್ಲೇಆಫ್ಗೆ ಎಂಟ್ರಿ ಪಡೆದಿದ್ದರು ಬೆಂಗಳೂರು ತಂಡ ಫೈನಲ್ಗೆ ತಲುಪಲು ಸಾಧ್ಯವಾಗಿರಲಿಲ್ಲ. ಇದೀಗ ಕಪ್ ಗೆಲ್ಲುವ ಹುಮ್ಮಸಿನೊಂದಿಗೆ ಐಪಿಎಲ್ 2025ರ ಆವೃತ್ತಿಯಲ್ಲಿ ಹೊಸ ತಂಡ ಮತ್ತು ನಾಯಕನೊಂದಿಗೆ ಕಣಕ್ಕಿಳಿದಿತ್ತು.
ಆದರೆ ಈ ಹಿಂದೆ ಆಗಿದ್ದ ತಪ್ಪುಗಳು ಆಗದಂತೆ ಬೆಂಗಳೂರು ತಂಡ ಜವಾಬ್ದಾರಿಯುತವಾಗಿ ಪ್ರದರ್ಶನ ನೀಡಿತು. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಉತ್ತಮ ಪ್ರದರ್ಶನ ನೀಡಿತು. ಲೀಗ್ ಹಂತದಲ್ಲಿ ಆಡಿದ 14 ಪಂದ್ಯಗಳಲ್ಲಿ 9ರಲ್ಲಿ ಗೆಲುವು ಸಾಧಿಸಿ ಕೇವಲ ಮೂರರಲ್ಲಿ ಮಾತ್ರ ಸೋಲನ್ನು ಕಂಡು ಪ್ಲೇಆಫ್ಗೆ ಎಂಟ್ರಿ ಪಡೆಯಿತು.
ಇದನ್ನೂ ಓದಿ👉 RCB ಸಂಭ್ರಮಾಚರಣೆ ವೇಳೆ ಕಾಲ್ತುಳಿತ ಪ್ರಕರಣ, ಸಿದ್ದಾಪುರದ ಮಹಿಳೆಯೂ ಬಲಿ..!
ಆದರೇ ಈ ಗೆಲುವಿನ ಬೆನ್ನಲ್ಲೆ ಆರ್ಸಿಬಿ ಬಳಿಯಿದ್ದ ಟ್ರೋಫಿಯನ್ನು ಬಿಸಿಸಿಐ ಹಿಂಪಡೆದುಕೊಂಡಿದೆ. ಅರೆ, 17 ವರ್ಷಗಳ ಬಳಿಕ ಬೆಂಗಳೂರು ತಂಡ ಟ್ರೋಫಿ ಗೆದ್ದುಕೊಂಡಿದೆ. ಆದ್ರೆ ಹಿಂಪಡೆದಿದ್ದು ಏಕೆ ಎಂಬ ಪ್ರಶ್ನೆಗಳು ಈಗಾಗಲೇ ಎಲ್ಲರ ಮನದಲ್ಲಿ ಹುಟ್ಟಿಕೊಂಡಿರಬೇಕು. ಬಿಸಿಸಿಐ ಐಪಿಎಲ್ ಟ್ರೋಫಿ ಹಿಂಪಡೆದಿದ್ದು ಕೇವಲ ಆರ್ಸಿಬಿ ಕಡೆಯಿಂದ ಮಾತ್ರವಲ್ಲ ಈ ಹಿಂದೆ ಗೆದ್ದಿರುವ ಎಲ್ಲಾ ತಂಡಗಳಿಂದಲೂ ಟ್ರೋಫಿಗಳನ್ನು ವಾಪಸ್ ಪಡೆದುಕೊಂಡಿದೆ.
ಯಸ್, ಬಿಸಿಸಿಐ ನಿಯಮದ ಪ್ರಕಾರ ಐಪಿಎಲ್ನಲ್ಲಿ ಯಾವುದೇ ತಂಡಗಳು ಗೆಲುವು ಸಾಧಿಸಿದ ಮೇಲೆ ಒರಿಜಿನಲ್ ಟ್ರೋಫಿಯನ್ನು ನೀಡಲಾಗುತ್ತದೆ. ಆ ಬಳಿಕ ಇಂತಿಷ್ಟು ಸಮಯದ ಬಳಿಕ ಅದನ್ನು ವಾಪಸ ಪಡೆದು ಅದೇ ಮಾದರಿಯ ರಿಪ್ಲಿಕಾ ಟ್ರೋಫಿಯನ್ನು ತಂಡಗಳಿಗೆ ನೀಡಲಾಗುತ್ತದೆ.