OPS News: ಬೆಂಗಳೂರು : ಹಳೆ ಪಿಂಚಣಿ ಯೋಜನೆ (Old pension Scheme) ನಿರೀಕ್ಷೆಯಲ್ಲಿರುವ ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಹಳೆ ಪಿಂಚಣಿ ಯೋಜನೆ (OPS) ಪ್ರಸ್ತಾವನೆ ಪರಿಶೀಲಿಸಲು ಮೂರು ತಂಡಗಳ ರಚನೆ ಮಾಡಿ ಆದೇಶ ಹೊರಡಿಸಿದೆ.
ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಬೇಕು ಎಂಬುದು ಸರ್ಕಾರಿ ನೌಕರರ ಬಹುದಿನಗಳ ಒತ್ತಾಯವಾಗಿದೆ. ದಿನಾಂಕ: 24.1.2024ರ ಆದೇಶದನ್ವಯ ಒಪಿಎಸ್ ಒಳಪಡುವ ಸರ್ಕಾರಿ ನೌಕರರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸಲು ತಲಾ ಮೂವರು ಅಧಿಕಾರಿ/ನೌಕರರನ್ನೊಳಗೊಂಡಂತೆ ಮೂರು ತಂಡಗಳನ್ನು ರಚಿಸಿ ಕಾರ್ಯ ಹಂಚಿಕೆ ಮಾಡಿದೆ.
ಈ ಅಧಿಕಾರಿ / ನೌಕರರು ಪ್ರತಿ ದಿನ ಅಪರಾಹ್ನ ಕಡ್ಡಾಯವಾಗಿ ಹಾಜರಾಗಿ ದಿನಾಂಕ: 24.1.2024ರ ಆದೇಶದನ್ವಯ ಒಪಿಎಸ್ಗೆ ಒಳಪಡುವ ಸರ್ಕಾರಿ ನೌಕರರ ಪ್ರಸ್ತಾವನೆಗಳನ್ನು ಪರಿಶೀಲಿಸಿ ಶೀಘ್ರವಾಗಿ ಇತ್ಯರ್ಥಪಡಿಸುವಂತೆ ಆದೇಶಿಸಲಾಗಿದೆ.
ಅನೇಕ ಕೇಂದ್ರ ಸರ್ಕಾರಿ ಮತ್ತು ರಾಜ್ಯ ಸರ್ಕಾರಿ ನೌಕರರು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೆ ತರಲು ಒತ್ತಾಯಿಸುತ್ತಿದ್ದಾರೆ. ಹಲವು ರಾಜ್ಯಗಳು ಹಳೆಯ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಿವೆ.