Sirsi-Kumta Road Open:
ಕುಮಟಾ : ಭಾರೀ ಮಳೆಯಿಂದ ಶಿರಸಿ-ಕುಮಟಾ ರಸ್ತೆಯಲ್ಲಿ ನಿರ್ಮಾಣ ಹಂತದಲ್ಲಿದ್ದ ಬೆಣ್ಣೆ ಹೊಳೆ ಸೇತುವೆ ಪಕ್ಕದಲ್ಲಿ ತಾತ್ಕಾಲಿಕವಾಗಿ ವಾಹನ ಸಂಚಾರಕ್ಕೆ ಮಾಡಿದ್ದ ರಸ್ತೆಯು ಮಳೆಯ ನೀರಿಗೆ ಕೊಚ್ಚಿ ಹೋಗಿದ್ದರಿಂದ ಸಂಪೂರ್ಣ ಬಂದ್ ಆಗಿದ್ದ ಸಂಚಾರ, ಪುನರ್ ಆರಂಭವಾಗಿದೆ.
ಶಿರಸಿ-ಕುಮಟಾ ರಸ್ತೆಯಲ್ಲಿ ಬೆಣ್ಣೆ ಹಳ್ಳ ಬ್ರಿಜ್ ಕಾಮಗಾರಿ ನಡೆಯುತ್ತಿರುವ ಸ್ಥಳದ ಪಕ್ಕದಲ್ಲಿ ತಾತ್ಕಾಲಿಕ ಸಂಚಾರ ವ್ಯವಸ್ಥೆಗಾಗಿ ಕಲ್ಪಿಸಿದ್ದ ಪರ್ಯಾಯ ರಸ್ತೆಯ ಮೇಲೆ “ಬೆಣ್ಣೆ ಹೊಳೆ”ಯ ನೀರು ಹರಿದಿದ್ದ ಹಿನ್ನೆಲೆಯಲ್ಲಿ ಶಿರಸಿ ಕುಮಟಾ ರಸ್ತೆಯಲ್ಲಿ ಬ್ಯಾರೀಕೆಡ್ ಅಳವಡಿಸಿ ಎಲ್ಲಾ ಮಾದರಿಯ ವಾಹನ ಸಂಚಾರವನ್ನು ತಾತ್ಕಾಲಿಕ ವಾಗಿ ನಿಷೇಧಿಸಲಾಗಿತ್ತು.
ಇದನ್ನೂ ಓದಿ👉ಹುಲಿಹೊಂಡದ ಈ ಹುಡುಗನ ಸಾವು ನ್ಯಾಯವೇ..? ಟ್ರಾಕ್ಟರ್ ದುರಂತದಲ್ಲಿ ಮಡಿದ ಸತೀಶನಿಗೆ ಕಣ್ಣೀರಿನ ಶೃದ್ಧಾಂಜಲಿ..!
ಸದ್ಯ, ತಾತ್ಕಾಲಿಕ ರಸ್ತೆ ದುರಸ್ಥಿ ಆದ ಹಿನ್ನೆಲೆಯಲ್ಲಿ ಹಾಗೂ ಮಳೆಯ ಪ್ರಮಾಣ ತಗ್ಗಿರೊ ಹಿನ್ನೆಲೆಯಲ್ಲಿ, ಲಘು ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.