ಮುಂಡಗೋಡ: ತಾಲೂಕಿನ ಗುಂಜಾವತಿ ಸೇರಿದಂತೆ ಸುತ್ತ ಮುತ್ತಲ ಭಾಗಗಳಲ್ಲಿ ಕಾಡಾನೆ ಹಾವಳಿ ಶುರುವಾಗಿದೆ. ಕಳೆದ 3 ದಿನಗಳಿಂದ ಕಾಡಾನೆಗಳ ಹಿಂಡು ಈ ಭಾಗದ ರೈತರ ನಿದ್ದೆಗೆಡಿಸಿವೆ.
ಗುಂಜಾವತಿ ಭಾಗದ ರೈತರ ಕಬ್ಬಿನ ಗದ್ದೆ ಹಾಗೂ ಅಡಿಕೆ ತೋಟಕ್ಕೆ ನುಗ್ಗಿರೋ ಕಾಡಾನೆಗಳು ಗಬ್ಬಿನ ಬೆಳೆಯನ್ನು ತಿಂದು ಹಾಕಿ, ಹಾನಿ ಮಾಡಿವೆ. ಇಲ್ಲಿನ ಗುರುಬಸಯ್ಯ ಎಂಬುವವರ 5 ಎಕರೆ ಕಬ್ಬಿನ ಗದ್ದೆಯಲ್ಲಿ ಬೆಳೆ ತಿಂದು, ನಾಶಗೊಳಿಸಿವೆ.
ಇಷ್ಟೇಲ್ಲ ಆದ್ರೂ ಅರಣ್ಯ ಇಲಾಖೆ ಅಧಿಕಾರಿಗಳು ಗಮನ ಹರಿಸಿಲ್ಲ ಅಂತಾ ರೈತರು ಆಕ್ರೋಶ ವ್ಯಕ್ತ ಪಡಿಸಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಾನೆಗಳ ಹಾವಳಿ ತಪ್ಪಿಸಲು ಕ್ರಮ ಕೈಗೊಳ್ಳಬೇಕಿದೆ.
ಅಂದಹಾಗೆ, ಪ್ರತಿವರ್ಷವೂ ಈ ಭಾಗದಲ್ಲಿ ಕಾಡಾನೆಗಳ ಹಿಂಡು ರೈತರ ಜಮೀನುಗಳಿಗೆ ನುಗ್ಗಿ ಹಾನಿ ಮಾಡುತ್ತಿವೆ. ಆದ್ರೂ ಆನೆಗಳ ಹಿಂಡುಗಳನ್ನು ನಿಗ್ರಹಿಸುವಲ್ಲಿ ಅರಣ್ಯ ಇಲಾಖೆ ಮುಂಜಾಗ್ರತೆ ವಹಿಸಬೇಕಿದೆ. ಶಾಶ್ವತ ಪರಿಹಾರ ಕಂಡುಕೊಳ್ಳಬೇಕಿದೆ. ಇದು ಈ ಭಾಗದ ಅನ್ನದಾತರ ಆಗ್ರಹ.