ಮುಂಡಗೋಡ: ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ರಾಯಣ್ಣ ಅಭಿಮಾನಿಗಳ ಸಂಘದಿಂದ ಸಂಭ್ರಮದ ಸ್ವಾತಂತ್ರ್ಯೋತ್ಸವ ಹಾಗೂ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನವರ ಜನ್ಮ ದಿನ ಆಚರಿಸಲಾಯಿತು. ಸಂಗೊಳ್ಳಿ ರಾಯಣ್ಣನವರ ಭಾವಚಿತ್ರಕ್ಕೆ ವಿಶೇಷವಾಗಿ ಪೂಜೆ ಸಲ್ಲಿಸುವ ಮೂಲಕ ರಾಯಣ್ಣನವರ ಶೌರ್ಯ ಹಾಗೂ ಬಲಿದಾನವನ್ನು ಸ್ಮರಿಸಲಾಯಿತು. ರಾಯಣ್ಣನವರ ಪರವಾಗಿ ಘೋಷಣೆ ಕೂಗಿ ಅಭಿಮಾನಿಗಳು ಸಂಭ್ರಮಿಸಿದ್ರು.
Top Stories
ಹಾವೇರಿ BEO ಮನೆ ಮೇಲೆ ಲೋಕಾಯುಕ್ತ ದಾಳಿ, ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಬ್ರಷ್ಟರು..!
CET ಪರೀಕ್ಷಾರ್ಥಿಯ ಜನಿವಾರ ಕತ್ತರಿಸಿದ ವಿಚಾರ, ಶಾಸಕ ಶಿವರಾಮ್ ಹೆಬ್ಬಾರ್ ತೀವ್ರ ಖಂಡನೆ, ತಪ್ಪಿತಸ್ತರ ಮೇಲೆ ಸೂಕ್ತ ಕ್ರಮಕ್ಕೆ ಆಗ್ರಹ..!!
ಹುಬ್ಬಳ್ಳಿಯ 5 ವರ್ಷದ ಬಾಲಕಿ ಮೇಲೆ ರೇಪ್, ಮರ್ಡರ್ ಕೇಸ್, ಆರೋಪಿಯ ಎನಕೌಂಟರ್..!
ಹುಬ್ಬಳ್ಳಿಯಲ್ಲಿ ಅಮಾನುಷ ಕ್ರೌರ್ಯ, 5 ವರ್ಷದ ಬಾಲಕಿಯನ್ನು ಅಪಹರಿಸಿ, ಭೀಕರ ಹತ್ಯೆ..! ಟಾಯ್ಲೆಟ್ ಹಲೀಜಿನಲ್ಲೇ ಕೊಂದ ಪಾಪಿಗಳು..!
ಬನವಾಸಿಯಲ್ಲಿ ಕದಂಬೋತ್ಸವಕ್ಕೆ ವಿದ್ಯುಕ್ತ ಚಾಲನೆ, ಪಂಪನ ನೆನಪಿನಲ್ಲಿ ಪಂಪ ಭವನ ನಿರ್ಮಾಣಕ್ಕೆ ಪ್ರತಿಜ್ಞೆ..!
“ಭೂ ಸುರಕ್ಷಾ” ಯೋಜನೆಯಲ್ಲಿ ಹೊನ್ನಾವರ ತಾಲೂಕು ರಾಜ್ಯದಲ್ಲೇ ಪ್ರಥಮ..!
ಕಾರವಾರದ ಆಮದಳ್ಳಿಯಲ್ಲಿ ಉದ್ಯೋಗ ಖಾತ್ರಿ ಯೋಜನೆಯ ಸ್ತ್ರೀ ಚೇತನ ಅಭಿಯಾನ..!
ಪರಿಶಿಷ್ಟ ಪಂಗಡದ ಕ್ರೀಡಾ ವಸತಿ ನಿಲಯಗಳಿಗೆ ಪ್ರತಿಭಾವಂತ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆ
12 ವರ್ಷ ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಅಥ್ಲೆಟಿಕ್ ಬೇಸಿಗೆ ಶಿಬಿರ
ಎಪ್ರಿಲ್ 12, 13 ಕ್ಕೆ ಬನವಾಸಿಯಲ್ಲಿ ಕದಂಬೋತ್ಸವ-2025, ಪ್ರತಿಷ್ಠಿತ ಪಂಪ ಪ್ರಶಸ್ತಿ ಪ್ರದಾನ ಸಮಾರಂಭ..!
ಉದ್ಯೋಗ ಖಾತ್ರಿ (ಮನರೇಗಾ) ಯೋಜನೆಯಡಿ ಸತತ ಎರಡನೇ ವರ್ಷವೂ ಉತ್ತರ ಕನ್ನಡ ಜಿಲ್ಲೆ100% ಗುರಿ ಸಾಧನೆ..!
ಮುಂಡಗೋಡ ಪಟ್ಟಣದಲ್ಲಿ ಭಾರೀ ಮಳೆ ಗಾಳಿಗೆ ಉರುಳಿಬಿದ್ದ ಮೊಬೈಲ್ ಟವರ್..! ಪಟ್ಟಣದ ಹಲವು ಮನೆಗಳಿಗೆ ಹಾನಿ
ಮಳೆಗಾಳಿಗೆ ರಸ್ತೆ ಮೇಲೆ ಬಿದ್ದ ಬೃಹತ್ ಮಾವಿನ ಮರ, ಶಿರಸಿ-ಹುಬ್ಬಳ್ಳಿ ರಸ್ತೆ ಸಂಪೂರ್ಣ ಸ್ಥಗಿತ..!
ನಂದಿಪುರದಲ್ಲಿ ಬೋರವೆಲ್ ಗೆ ಅನಧೀಕೃತ ವಿದ್ಯುತ್ ಸಂಪರ್ಕ, ಗದ್ದೆಯಲ್ಲಿ ವೈಯರ್ ತುಳಿದು ಸ್ಥಳದಲ್ಲೇ ಸಾವು ಕಂಡ ರೈತ..!
ಮುಂಡಗೋಡ ಪೊಲೀಸರ ಕಾರ್ಯಾಚರಣೆ, IPL ಬೆಟ್ಟಿಂಗ್ ನಡೆಸುತ್ತಿದ್ದ ಓರ್ವ ಆರೋಪಿ ವಶಕ್ಕೆ, ಮೂವರು ಎಸ್ಕೇಪ್..!
ಮಾದಕ ವಸ್ತುಗಳಿಂದ ಸಮಾಜದ ಮೇಲೆ ಕೆಟ್ಟ ಪರಿಣಾಮ: ನ್ಯಾ. ವಿಜಯ ಕುಮಾರ್
ನಂದಿಕಟ್ಟಾದಲ್ಲಿ ಅರ್ಥಪೂರ್ಣ ಶ್ರೀರಾಮ ನವಮಿ, ಉಚಿತ ಆರೋಗ್ಯ, ಹೃದಯ ತಪಾಸಣಾ ಶಿಬಿರ..!
ಗಾಂಧಿನಗರ “ಸ್ಲಂ” ಬೋರ್ಡ್ ರಂಪಾಟ; ಜಂಟೀ ತನಿಖಾ ತಂಡ ಭೇಟಿ, ಎರಡೂ ತಂಡದಿಂದ ಪರ-ವಿರೋಧದ ಮನವಿ..!
ಅರಣ್ಯ ಇಲಾಖೆಯವ್ರೂ ಉದ್ಯೋಗ ಖಾತ್ರಿ ಯೋಜನೆ ಸದ್ಬಳಕೆ ಮಾಡಿಕೊಳ್ಳಿ: ಮುಂಡಗೋಡಿಗೆ ಭೇಟಿ ನೀಡಿದ ಜಿಪಂ CEO ಈಶ್ವರ ಖಾಂದೂ ಕರೆ..!
Category: ಮುಂಡಗೋಡ ಸುದ್ದಿ
ಹುನಗುಂದದಲ್ಲಿ ರಾಯಣ್ಣ ಬಾಯ್ಸ್ ನಿಂದ ಸಂಭ್ರಮದ ಧ್ವಜಾರೋಹಣ..!
ಮುಂಡಗೋಡ; ತಾಲೂಕಿನ ಹುನಗುಂದ ಗ್ರಾಮದಲ್ಲಿ ರಾಯಣ್ಣ ಬಾಯ್ಸ್ ವತಿಯಿಂದ ಸಂಭ್ರಮದ ಧ್ವಜಾರೋಹಣ ಹಾಗೂ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನವರ ಜನ್ಮ ದಿನಾಚರಣೆಯನ್ನು ಸಂಭ್ರಮದಿಂದ ಆಚರಿಸಿದ್ರು. ಹುನಗುಂದದ ಮುಖ್ಯ ಸರ್ಕಲ್ ನಲ್ಲಿ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಧ್ವಜಾರೋಹಣ ನೆರವೇರಿಸಲಾಯಿತು. ಅಲ್ದೇ ಸರ್ಕಲ್ ನಲ್ಲಿ ಇರುವ ಧ್ವಜಸ್ತಂಭದ ಮೇಲೆ ಭಗವಾ ಧ್ವಜವನ್ನೂ ಹಾರಿಸಲಾಯಿತು. ಈ ವೇಳೆ ಗ್ರಾಮದ ರಾಯಣ್ಣ ಬಾಯ್ಸ್ ಸೇರಿದಂತೆ ಹಲವರು ಭಾಗಿಯಾಗಿದ್ರು.
ಭಲೇ ಬಹಾದ್ದೂರ್..! ಒಂದೇ ನಿಮಿಷದಲ್ಲಿ 100 ಅಡಿ ದೂರ ಟ್ರಾಕ್ಟರ್ ಎಳೆದ ಪೈಲ್ವಾನ್..!
ಮುಂಡಗೋಡ: ತಾಲೂಕಿನ ಕೊಪ್ಪ ಗ್ರಾಮದಲ್ಲಿ ಇಂದು ನಾಗರ ಪಂಚಮಿ ಪ್ರಯುಕ್ತ ಖಾಲಿ ಟ್ರಾಕ್ಟರ್ ಇಂಜಿನ್ ಎಳೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಸ್ಪರ್ಧೆಯಲ್ಲಿ ಯಲ್ಲಪ್ಪ ಫಕ್ಕೀರಪ್ಪ ತುಳಜಾನವರ್ ಎಂಬುವ ಯುವಕ, ಕೇವಲ ಒಂದು ನಿಮಿಷದಲ್ಲಿ100 ಅಡಿ ದೂರ ಟ್ರಾಕ್ಟರ್ ಎಳೆದು ಸಾಹಸ ತೋರಿಸಿದ್ರು. ಹೀಗಾಗಿ, ಗ್ರಾಮಸ್ಥರ ಸಂಭ್ರಮಕ್ಕೆ ಕಾರಣರಾದ್ರು. ಜಯಶಾಲಿ ಯುವಕನಿಗೆ ಕೊಪ್ಪ ಗ್ರಾಮಸ್ಥರು ಸನ್ಮಾನಿಸಿ ಬಹುಮಾನ ನೀಡಿದ್ರು.
ಇಬ್ಬರು ಅಂತರ್ ಜಿಲ್ಲಾ ಕಳ್ಳರ ಹೆಡೆಮುರಿ ಕಟ್ಟಿದ ಮುಂಡಗೋಡ ಪೊಲೀಸ್ರು..!
ಮುಂಡಗೋಡ: ಅವ್ರು ದೇವಸ್ಥಾನ, ಒಂಟಿ ಮನೆಗಳನ್ನು ಗುಡಿಸಿ ಗುಂಡಾಂತರ ಮಾಡೋ ಮಹಾನ್ ಖದೀಮರು, ಅವಕಾಶ ಸಿಕ್ರೆ ರಾಬರಿ ಮಾಡಿ ಬಾಚಿಕೊಂಡು ಹೋಗೋ ಖತರ್ನಾಕ ಕಿರಾತಕರು, ಆದ್ರೆ ಈಗ ಮುಂಡಗೋಡ ಪೊಲೀಸರ ಕೈಗೆ ತಗಲಾಕ್ಕೊಂಡು ಬಿಟ್ಟಿದ್ದಾರೆ. ತಾಲೂಕಿನ ಮಂದಿಗೆ ಒಂದಿಷ್ಟು ನಿಟ್ಟುಸಿರು ಬಿಡುವಂತೆ ಮಾಡಿದ್ದಾರೆ. ದೇವರನ್ನೇ ಬಿಡದವರು..! ಯಸ್, ಇವ್ರು ಅಕ್ಷರಶಃ ಅಂತರ್ ಜಿಲ್ಲಾ ಪ್ರೊಫೆಷನಲ್ ಕಳ್ಳರು. ಮುಂಡಗೋಡ ತಾಲೂಕಿನಲ್ಲಿ ದೇವಸ್ಥಾನ, ಮನೆ ಕಳ್ಳತನ ಹಾಗೂ ರಾಬರಿ ಪ್ರಕರಣಗಳಲ್ಲಿ ಸೇರಿ ಒಟ್ಟು ನಾಲ್ಕು ಪ್ರಕರಣಗಳಲ್ಲಿ ಭಾಗಿಯಾಗಿದ್ದವರು. ಆದ್ರೆ ನಸೀಬು...
ಇಂದೂರಿನಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಟ್ಟ ಅರಣ್ಯ ಇಲಾಖೆ..!
ಮುಂಡಗೋಡ: ತಾಲೂಕಿನ ಇಂದೂರು ಭಾಗದಲ್ಲಿ ಚಿರತೆ ಹಾವಳಿ ಹೆಚ್ಚಾಗಿರೋ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಚಿರತೆ ಸೆರೆ ಹಿಡಿಯಲು ಮುಂದಾಗಿದೆ. ಇಂದೂರು ಹೊರವಲಯದ ಅರಣ್ಯ ಪ್ರದೇಶದಲ್ಲಿ ಚಿರತೆ ಸೆರೆ ಹಿಡಿಯಲು ಬೋನು ಇಡಲಾಗಿದೆ. ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿಗಳು ಚಿರತೆ ಸೆರೆ ಹಿಡಿಯುವ ಕಾರ್ಯಾಚರಣೆ ಕೈಗೊಂಡಿದ್ದಾರೆ.
ನಂದಿಕಟ್ಟಾದ “ಗಟಾರು ಸಮಸ್ಯೆ” ಪರಿಶೀಲಿಸಿದ ಸದಸ್ಯರು..! ಪಿಡಿಓ ಸಾಹೇಬ್ರೇ ನಿಮ್ಮ ನಿರ್ಲಕ್ಷ ಸರಿನಾ..?
ಮುಂಡಗೋಡ: ತಾಲೂಕಿನ ನಂದಿಗಟ್ಟಾ ಗ್ರಾಮದಲ್ಲಿ ನಿನ್ನೆ ಗುರುವಾರ ನಡೆದಿದ್ದ ಪುಟ್ಟ ಬಾಲಕಿ ಗಟಾರಿನಲ್ಲಿ ಬಿದ್ದು ಒದ್ದಾಡಿದ ಘಟನೆಗೆ ಸಂಬಂಧಿಸಿದಂತೆ ಇಂದು ನಂದಿಕಟ್ಟಾ ಗ್ರಾಮ ಪಂಚಾಯತಿ ಅಧ್ಯಕ್ಷರು, ಉಪಾಧ್ಯಕ್ಷರು, ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಆದ್ರೆ ಪಿಡಿಓ ಸಾಹೇಬ್ರು ಮಾತ್ರ ಪಂಚಾಯತಿಗೆ ಬಂದರೂ ಘಟನಾ ಸ್ಥಳಕ್ಕೆ ಭೇಟಿ ನೀಡದೇ ನಿರ್ಲಕ್ಷ ತೋರಿದ್ದಾರೆ ಅಂತಾ ಕೆಲವ್ರು ಅಸಮಾಧಾನ ಹೊರ ಹಾಕಿದ್ರು. ಅವೈಜ್ಞಾನಿಕ ಗಟಾರು ನಿರ್ಮಾಣ..! ಇನ್ನು ಗಟಾರಗಳ ಅವ್ಯವಸ್ಥೆ ಕಣ್ಣಾರೆ ಕಂಡ ಗ್ರಾಮ ಪಂಚಾಯತಿ ಅಧ್ಯಕ್ಷರು, ಸದಸ್ಯರು ತಕ್ಷಣವೇ...
ಗಟಾರಿನ ಕೊಳಚೆಯಲ್ಲಿ ಬಿದ್ದ ಮಗು: ಆ ಅಜ್ಜಿಯ ಸಮಯಪ್ರಜ್ಞೆಯಿಂದ ಬಚಾವ್..!
ಮುಂಡಗೋಡ: ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಇವತ್ತು ಭಯಾನಕ ಘಟನೆಯೊಂದು ನಡೆದು ಹೋಗಿದೆ. ಅಂಗಳದಲ್ಲಿ ಆಟವಾಡುತ್ತಿದ್ದ ಒಂದೂವರೇ ವರ್ಷದ ಪುಟ್ಟ ಕಂದಮ್ಮ ಕೊಳಚೆ ತುಂಬಿದ್ದ ಗಟಾರಿನಲ್ಲಿ ಬಿದ್ದು ಒದ್ದಾಡಿದೆ. ಅದೃಷ್ಟವಶಾತ್ ಹಾಗೆ ಬಿದ್ದ ಪುಟ್ಟ ಮಗುವನ್ನು ತಕ್ಷಣವೇ ಅಜ್ಜಿ ಮೇಲಕ್ಕೆತ್ತಿದ್ದಾರೆ. ಇಲ್ಲವಾಗಿದ್ದರೆ, ಪುಟ್ಟ ಮಗು ಈಗ ನೆನಪಾಗಿ ಉಳಿಯುತ್ತಿತ್ತು ಅಷ್ಟೆ. ಮಗು ಬದುಕಿದ್ದೇ ಪುಣ್ಯ..! ಹೌದು, ನಂದಿಕಟ್ಟಾ ಗ್ರಾಮದ ಮಕ್ಬುಲ್ ಖಾನ್ ಶಾಹಪುರ್ ಎಂಬುವರ, ಒಂದೂವರೇ ವರ್ಷದ ಪುಟ್ಟ ಬಾಲಕಿ ಇವತ್ತು ಮದ್ಯಾಹ್ನ ಮನೆಯ ಅಂಗಳದಲ್ಲಿ ಆಟವಾಡುತ್ತಿತ್ತು. ಈ...
ಇಂದೂರಿನಲ್ಲಿ ಮಹಿಳೆ ಮೇಲೆ ದಾಳಿ ಮಾಡಿದ್ದು ಚಿರತೆ ಮರಿನಾ..?
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದ ಇಬ್ಬರು ಮಹಿಳೆಯರ ಮೇಲೆ ಚಿರತೆ ಮರಿ ದಾಳಿ ಮಾಡಿದೆ ಅನ್ನೋ ಮಾಹಿತಿ ಲಭ್ಯವಾಗಿದೆ. ಇಂದು ಬೆಳಿಗ್ಗೆ ಗದ್ದೆಯ ಕೆಲಸಕ್ಕಾಗಿ ಹೋಗುತ್ತಿದ್ದ ವೇಳೆ ಎರಡು ಮರಿಗಳೊಂದಿಗೆ ಚಿರತೆ ಅಲ್ಲಿ ಕಂಡುಬಂದಿತ್ತು ಎನ್ನಲಾಗಿದೆ. ಆ ವೇಳೆ ತಾಯಿ ಚಿರತೆ ಮುಂದೆ ಹೋಗಿದೆ. ಆದ್ರೆ ಚಿರತೆ ಮರಿಗಳು ಮಾತ್ರ ಮಹಿಳೆಯರ ಮೇಲೆ ಅಟ್ಯಾಕ್ ಮಾಡಿವೆ ಎನ್ನಲಾಗಿದೆ. ಇಬ್ಬರು ಮಹಿಳೆಯರ ಮೇಲೆ ಮರಿ ದಾಳಿ ಮಾಡಿದೆ ಆದ್ರೆ, ಅದ್ರಲ್ಲಿ ಓರ್ವ ಮಹಿಳೆ ಗೀತಾ ನಾಗಪ್ಪ ದೊಡ್ಮನಿ ಎಂಬುವವರಿಗೆ...
ಹೆಬ್ಬಾರ್ ಸಚಿವರಾಗಿ ಪ್ರಮಾಣ ವಚನ; ಮುಂಡಗೋಡಿನಲ್ಲಿ ಬಿಜೆಪಿಗರ ಸಂಭ್ರಮ..!
ಮುಂಡಗೋಡ: ಶಾಸಕ ಶಿವರಾಮ್ ಹೆಬ್ಬಾರ್ ಎರಡನೇ ಬಾರಿಗೆ ಸಚಿವ ಸ್ಥಾನ ಅಲಂಕರಿಸುತ್ತಿರೋ ಹಿನ್ನೆಲೆಯಲ್ಲಿ, ಇಂದು ಪ್ರಮಾಣ ವಚನ ಸ್ವೀಕರಿಸಿದ ವೇಳೆ ಮುಂಡಗೋಡಿನಲ್ಲಿ ಹೆಬ್ಬಾರ್ ಬೆಂಬಲಿಗರು ಸಂಭ್ರಮಿಸಿದ್ರು. ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದ ಬಿಜೆಪಿ ಕಾರ್ಯಕರ್ತರು , ಹೆಬ್ಬಾರ್ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದ್ರು. ಈ ವೇಳೆ ಬಿಜೆಪಿ ಮುಖಂಡ ಸಿದ್ದಪ್ಪ ಹಡಪದ್, ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಗಣೇಶ್ ಶಿರಾಲಿ, ಭರತ್ ಹದಳಗಿ, ಪ್ರಶಾಂತ್ ಲಮಾಣಿ, ರಾಮಣ್ಣ ಲಮಾಣಿ, ಯಲ್ಲಪ್ಪ ಮಜ್ಜಿಗೇರಿ, ಅಶೋಕ...
ಸಾಲಗಾಂವ್ ನಲ್ಲಿ ಅಕ್ರಮ ಗಾಂಜಾ ಸಾಗಾಟ, ಬಂಧಿತ ಆರೋಪಿಗಳು ಇವರೇ ನೋಡಿ..!
ಮುಂಡಗೋಡ: ತಾಲೂಕಿನ ಸಾಲಗಾಂವ್ ನಲ್ಲಿ ಅಕ್ರಮವಾಗಿ ಗಾಂಜಾ ಸಾಗಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಮುಂಡಗೋಡ ಪೊಲೀಸರು ಬಂಧಿಸಿದ್ದಾರೆ. ಹಾವೇರಿ ಜಿಲ್ಲೆಯ ಹಾನಗಲ್ಲ ನಿಂದ ಸಾಲಗಾಂವ್ ಗ್ರಾಮಕ್ಕೆ ಅಕ್ರಮವಾಗಿ ಗಾಂಜಾ ಸಾಗಾಟ ಮಾಡಿ, ಮಾರಾಟ ಮಾಡಲು ಯತ್ನಿಸುತ್ತಿದ್ದ ವೇಳೆ ದಾಳಿ ನಡೆಸಲಾಗಿದೆ. ಮುಂಡಗೋಡ ಪಿಐ ಪ್ರಭುಗೌಡ ಹಾಗೂ ಬಸವರಾಜ್ ಮಬನೂರು ಹಾಗೂ ಮತ್ತವರ ತಂಡ ನಾಲ್ವರು ಆರೋಪಿಗಳನ್ನು ಬಂಧಿಸಿ, ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ. ತಾಲೂಕಿನ ಸಾಲಗಾಂವ್ ಗ್ರಾಮದ ಗಂಗಪ್ಪ ಮಾಯಪ್ಪ ಪರಸಣ್ಣನವರ್, ಹಾನಗಲ್ಲಿನ ಇಮ್ರಾನ್ ಮಕ್ಬುಲ್ ಅಹ್ಮದ್ ಬ್ಯಾಡಗಿ,...