ಮುಂಡಗೋಡ: ಪಟ್ಟಣದಲ್ಲಿ ಈಗ ಎಲ್ಲೆಂದರಲ್ಲಿ ಬಿಡಾಡಿ ದನಗಳ ಕಾರುಬಾರು ಜೋರಾಗಿದೆ. ಪಟ್ಟಣ ಪಂಚಾಯತಿಯವರ ನಿರ್ಲಕ್ಷದಿಂದ ವಾಹನ ಸವಾರರು ಪರದಾಡುವ ಸ್ಥಿತಿ ಇದೆ.
ಪಟ್ಟಣದ ಶಿವಾಜಿ ಸರ್ಕಲ್ ನಲ್ಲಿ ಹಾಗೂ ಪಟ್ಟಣದ ಹಲವು ಮುಖ್ಯ ರಸ್ತೆಗಳಲ್ಲಿ ಎಲ್ಲೆಂದರಲ್ಲಿ ಬಿಡಾಡಿ ದನಗಳು ರಸ್ತೆಯಲ್ಲೇ ಗುಂಪು ಗುಂಪಾಗಿ ಠಿಕಾಣಿ ಹೂಡುತ್ತವೆ. ರಸ್ತೆಯ ನಡುವೆಯೇ ಹಿಂಡು ಹಿಂಡಾಗಿ ಮಲಗಿರುತ್ತವೆ. ಹೀಗಾಗಿ, ವಾಹನ ಸವಾರರು ರಸ್ತೆಯಲ್ಲಿ ಸಂಚರಿಸಲು ಇನ್ನಿಲ್ಲದ ತೊಂದರೆ ಅನುಭವಿಸುವಂತಾಗಿದೆ. ಕೆಲವು ಸಾರಿ ಅದೇಷ್ಟೋ ಜನ ಸವಾರರು ಬಿಡಾಡಿ ದನಗಳ ಕಾಟದಿಂದ ಬಿದ್ದು ಗಾಯಗೊಂಡಿದ್ದಾರೆ. ಹಾಗೆನೇ, ದನಗಳಿಗೂ ಗಾಯಗಳಾಗಿವೆ.
ರಾತ್ರಿ ವೇಳೆ ಅಪಘಾತ..!
ಇನ್ನು, ಹಗಲು ಅದೇಷ್ಟು ಸಮಸ್ಯೆಯೋ ಅದಕ್ಕಿಂತ ಹೆಚ್ಚು ಸಮಸ್ಯೆಯಾಗ್ತಿರೋದು ರಾತ್ರಿ ಹೊತ್ತಲ್ಲಿ. ಯಾಕಂದ್ರೆ, ಎಲ್ಲೆಂದರಲ್ಲಿ ರಸ್ತೆಯ ನಡುವೆಯೇ ಮಲಗುವ ಬಿಡಾಡಿ ದನಗಳಿಂದ ವಾಹನ ಸವಾರರಿಗೆ ಇನ್ನಿಲ್ಲದ ಕಿರಿಕಿರಿ ಆಗ್ತಿದೆ. ರಾತ್ರಿ ವೇಳೆ ಹಾಗೆ ಮಲಗುವ ದನಗಳು ಕಾಣದೇ ಅದೇಷ್ಟೋ ಅಪಘಾತಗಳು ಸಂಭವಿಸಿವೆ. ಅದ್ರಲ್ಲಿ, ಸವಾರರಿಗೂ ಗಾಯವಾದ್ರೆ, ಕೆಲವು ಸಾರಿ ಇಂತಹ ಅಪಘಾತಗಳಲ್ಲಿ ದನಗಳೂ ಸಾವನ್ನಪ್ಪಿವೆ. ಹೀಗಾಗಿ, ಅಧಿಕಾರಿಗಳಿಗೆ ಇದೇಲ್ಲ ಕಾಣ್ತಾನೇ ಇಲ್ವಾ ಅನ್ನೋ ಪ್ರಶ್ನೆ ಎದುರಾಗಿದೆ.
ಪಪಂ ಅಧಿಕಾರಿಗಳ ಬೇಜವಾಬ್ದಾರಿ..!
ಇನ್ನು, ಹೀಗೆ ನಿತ್ಯವೂ ಬಿಡಾಡಿ ದನಗಳು ಒಂದಿಲ್ಲೊಂದು ಯಡವಟ್ಟುಗಳಿಗೆ ಕಾರಣವಾಗ್ತಿವೆ. ಹೀಗಾಗಿ, ಬಿಡಾಡಿ ದನಗಳ ಹಾವಳಿಯನ್ನು ನಿಯಂತ್ರಿಸಿ ಅಂತಾ ಇಲ್ಲಿನ ಸಾರ್ವಜನಿಕರು ಸಾಕಷ್ಟು ಬಾರಿ ಪಟ್ಟಣ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದಿದ್ದಾರೆ. ಆದ್ರೆ, ಇಲ್ಲಿನ ಅಧಿಕಾರಿಗಳು ಮಾತ್ರ ಕ್ಯಾರೇ ಅಂತಿಲ್ಲ.
ಕ್ರಮ ಯಾವಾಗ..?
ಪಟ್ಟಣದಲ್ಲಿ ಬಿಡಾಡಿ ದನಗಳ ಹಾವಳಿಗೆ ಕಡಿವಾಣ ಹಾಕಲು ಬೇಕಾದ ಕ್ರಮಗಳು ತಕ್ಷಣವೇ ಆಗಬೇಕಿದೆ. ಆದ್ರೆ, ಪಟ್ಟಣ ಪಂಚಾಯತಿ ಅಧಿಕಾರಿಗಳ ಇಚ್ಚಾಶಕ್ತಿಯ ಕೊರತೆಯಿಂದ ಪಟ್ಟಣದ ಸಮಸ್ಯೆಗಳು ಸಮಸ್ಯೆಗಳಾಗೆ ಉಳಿಯುತ್ತಿವೆ ಅನ್ನೋದು ಮುಂಡಗೋಡಿಗರ ಆರೋಪವಾಗಿದೆ. ಆದಷ್ಟು ಬೇಗ ಬಿಡಾಡಿ ದನಗಳ ಹಾವಳಿಯಿಂದ ಮುಂಡಗೋಡಿಗರನ್ನು ರಕ್ಷಿಸಬೇಕಿದೆ.