ಕಳ್ಳ ಇವನೇ ನೋಡಿ..! ಮೊಬೈಲ್ ಶಾಪ್ ದೋಚಿದ ಕಳ್ಳನ ಕರಾಮತ್ತು ಹೇಗಿದೆ ಗೊತ್ತಾ..?

ಮುಂಡಗೋಡ: ಯಲ್ಲಾಪುರ ರಸ್ತೆಯ ಶ್ರೀ ಮೊಬೈಲ್ ಶಾಪ್ ದೋಚಿದ ಕಳ್ಳ ಕೊನೆಗೂ ತನ್ನ ಕುರುಹು ಬಿಟ್ಟು ಹೋಗಿದ್ದಾನೆ. ಕಳ್ಳ ಅಂಗಡಿಗೆ ನುಗ್ಗಿ ಮೊಬೈಲ್ ಎಗರಿಸೋ ಅಷ್ಟೂ ದೃಷ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿವೆ.

“ಕತ್ತಲಿನಲ್ಲಿ ಯಾರಯ್ಯಾ ನನ್ನ ನೋಡ್ತಾರೆ” ಅಂತಾ ಬೆಳ್ಳಂ ಬೆಳಿಗ್ಗೆ ನಾಲ್ಕೂವರೇ ಹೊತ್ತಲ್ಲಿ, ಪುಟ್ಟದೊಂದು ಮೊಬೈಲ್ ಟಾರ್ಚ್ ಬೆಳಕಲ್ಲೇ ಮೊಬೈಲ್ ಅಂಗಡಿಗೆ ಕನ್ನ ಹಾಕೋ ಖದೀಮ, ತನ್ನ ಲೀಲೆಗಳನ್ನು ಅಲ್ಲೇ ಕಣ್ಣರಳಿಸಿ ಕೂತಿರೋ ಸಿಸಿಟಿವಿ ದಾಖಲಿಸಿಕೊಳ್ಳತ್ತೆ ಅಂತಾ ಬಹುಶಃ ಆತನಿಗೆ ಗೊತ್ತಿರಲಿಲ್ಲವೇನೋ.

ಅಂದಹಾಗೆ, ಈ ಸಿಸಿಟಿವಿಯಲ್ಲಿ ಸೆರೆಯಾಗಿರೋ ಕಳ್ಳನ ಮುಖ ಚಹರೆ ನೋಡಿದ್ರೆ, ಇವನನ್ನ ಇಲ್ಲೇ ಎಲ್ಲೋ ನೋಡಿದಿನಲ್ಲ..? ಅನ್ನುವಷ್ಟು ಪರಿಚಿತನ ಹಾಗೆ ಕಾಣ್ತಿದಾನೆ. ಆದ್ರೆ ಯಾವುದೂ ಸ್ಪಷ್ಟತೆಯಿಲ್ಲ.

ಹಾಗಾದ್ರೆ, ಇಂದು ನಡೆದಿರೋ ಎರಡೂ ಕಳ್ಳತನ ಕೇಸ್ ನಲ್ಲೂ ಇವನದ್ದೇ ಕರಾಮತ್ತಾ..? ಈತನ ಜೊತೆ ಮತ್ಯಾರಾದ್ರೂ ಬಂದು ಏಕಕಾಲದಲ್ಲೇ ಎರಡೆರಡು ಕಡೆ ದೋಚಿದ್ರಾ..? ಪೊಲೀಸರ ತನಿಖೆಯಿಂದ ಹೊರಬರಬೇಕಿದೆ.

error: Content is protected !!