Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಕಳ್ಳ ಇವನೇ ನೋಡಿ..! ಮೊಬೈಲ್ ಶಾಪ್ ದೋಚಿದ ಕಳ್ಳನ ಕರಾಮತ್ತು ಹೇಗಿದೆ ಗೊತ್ತಾ..?

ಕಳ್ಳ ಇವನೇ ನೋಡಿ..! ಮೊಬೈಲ್ ಶಾಪ್ ದೋಚಿದ ಕಳ್ಳನ ಕರಾಮತ್ತು ಹೇಗಿದೆ ಗೊತ್ತಾ..?

ಮುಂಡಗೋಡ: ಯಲ್ಲಾಪುರ ರಸ್ತೆಯ ಶ್ರೀ ಮೊಬೈಲ್ ಶಾಪ್ ದೋಚಿದ ಕಳ್ಳ ಕೊನೆಗೂ ತನ್ನ ಕುರುಹು ಬಿಟ್ಟು ಹೋಗಿದ್ದಾನೆ. ಕಳ್ಳ ಅಂಗಡಿಗೆ ನುಗ್ಗಿ ಮೊಬೈಲ್ ಎಗರಿಸೋ ಅಷ್ಟೂ ದೃಷ್ಯಗಳೂ ಸಿಸಿಟಿವಿಯಲ್ಲಿ ಸೆರೆಯಾಗಿವೆ. “ಕತ್ತಲಿನಲ್ಲಿ ಯಾರಯ್ಯಾ ನನ್ನ ನೋಡ್ತಾರೆ” ಅಂತಾ ಬೆಳ್ಳಂ ಬೆಳಿಗ್ಗೆ ನಾಲ್ಕೂವರೇ ಹೊತ್ತಲ್ಲಿ, ಪುಟ್ಟದೊಂದು ಮೊಬೈಲ್ ಟಾರ್ಚ್ ಬೆಳಕಲ್ಲೇ ಮೊಬೈಲ್ ಅಂಗಡಿಗೆ ಕನ್ನ ಹಾಕೋ ಖದೀಮ, ತನ್ನ ಲೀಲೆಗಳನ್ನು ಅಲ್ಲೇ ಕಣ್ಣರಳಿಸಿ ಕೂತಿರೋ ಸಿಸಿಟಿವಿ ದಾಖಲಿಸಿಕೊಳ್ಳತ್ತೆ ಅಂತಾ ಬಹುಶಃ ಆತನಿಗೆ ಗೊತ್ತಿರಲಿಲ್ಲವೇನೋ. ಅಂದಹಾಗೆ, ಈ ಸಿಸಿಟಿವಿಯಲ್ಲಿ ಸೆರೆಯಾಗಿರೋ...

Post
ಅಯ್ಯೋ, ನಿನ್ನೆ ನಡೆದಿದ್ದು ಒಂದೇ ಕಳ್ಳತನ ಅಲ್ಲಾ..! ಅದೇ ರಸ್ತೆಯ ಪೋಟೊ ಸ್ಟುಡಿಯೋನೂ ದೋಚಿದ್ರು ನೋಡಿ ಕಳ್ಳರು..!!

ಅಯ್ಯೋ, ನಿನ್ನೆ ನಡೆದಿದ್ದು ಒಂದೇ ಕಳ್ಳತನ ಅಲ್ಲಾ..! ಅದೇ ರಸ್ತೆಯ ಪೋಟೊ ಸ್ಟುಡಿಯೋನೂ ದೋಚಿದ್ರು ನೋಡಿ ಕಳ್ಳರು..!!

ಮುಂಡಗೋಡ: ಪಟ್ಟಣದಲ್ಲಿ ರಾತ್ರಿ ಮತ್ತೊಂದು ಕಳ್ಳತನ ನಡೆದಿದೆ. ಶ್ರೀ ಮೊಬೈಲ್ ಶಾಪ್ ದೋಚಿದ ಹಾಗೇ, ಅದೇ ಮಾದರಿಯಲ್ಲಿ ಯಲ್ಲಾಪುರ ರಸ್ತೆಯ ಶ್ರೀ ಶಕ್ತಿ ಪೋಟೋ ಸ್ಟುಡಿಯೋಗೆ ನುಗ್ಗಿ ಬೆಲೆ ಬಾಳುವ ವಿಡಿಯೊ ಕ್ಯಾಮೆರಾ, ಪೋಟೊ ಕ್ಯಾಮೆರಾ, ಹಾರ್ಡ್ ಡಿಸ್ಕ್ ಸೇರಿ ಹಲವು ವಸ್ತಗಳನ್ನು ಎಗರಿಸಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಬಹುಶಃ, ನಿನ್ನೆ ರಾತ್ರಿ ಮೊಬೈಲ್ ಶಾಪ್ ದೋಚಿರೋ ಕಳ್ಳರೇ, ಪೋಟೋ ಸ್ಟುಡಿಯೋಗೂ ನುಗ್ಗಿರೋ ಸಾಧ್ಯತೆ ಇದೆ. ಇನ್ನು ಯಲ್ಲಾಪುರ ರಸ್ತೆಯ ಈ ಏರಿಯಾದಲ್ಲಿ ಕಳ್ಳರು ಅಷ್ಟೊಂದು ಲೀಲಾಜಾಲವಾಗಿ...

Post
ಮುಂಡಗೋಡಿನಲ್ಲಿ ಮತ್ತೆ ಕಳ್ಳರ ಕರಾಮತ್ತು, ಮೊಬೈಲ್ ಶಾಪ್ ದೋಚಿದ ಖದೀಮರು..!

ಮುಂಡಗೋಡಿನಲ್ಲಿ ಮತ್ತೆ ಕಳ್ಳರ ಕರಾಮತ್ತು, ಮೊಬೈಲ್ ಶಾಪ್ ದೋಚಿದ ಖದೀಮರು..!

ಮುಂಡಗೋಡ: ಪಟ್ಟಣದಲ್ಲಿ ಅದ್ಯಾಕೋ ಏನೋ ಕಳ್ಳರ ಕೈಚಳಕಗಳು ಕಡಿಮೆಯೇ ಆಗುತ್ತಿಲ್ಲ‌. ಪಟ್ಟಣದ ವೈನ್ ಶಾಪ್ ಕಳ್ಳತನ ನಡೆದು ಇನ್ನೂ ತಿಂಗಳಾಗಿಲ್ಲ, ಈಗ ಮತ್ತೆ ಮೊಬೈಲ್ ಅಂಗಡಿಯೊಂದಕ್ಕೆ ಖದೀಮರು ಕನ್ನ ಹಾಕಿದ್ದಾರೆ. ನಿನ್ನೆ ರಾತ್ರಿ, ಮುಂಡಗೋಡ ಪಟ್ಟಣದ ಯಲ್ಲಾಪುರ ರಸ್ತೆಯಲ್ಲಿರೋ ಶ್ರೀಧರ್ ಉಪ್ಪಾರ್ ಎಂಬುವವರ “ಶ್ರೀ ಮೊಬೈಲ್” ಶಾಪ್ ನ ಮೇಲ್ಚಾವಣಿ ತೆಗೆದ ಒಳನುಗ್ಗಿರೋ ಕಳ್ಳರು ಬೆಲೆಬಾಳುವ ಮೊಬೈಲ್ ಸೇರಿ ಹಲವು ವಸ್ತುಗಳನ್ನು ಎಗರಿಸಿದ್ದಾರೆ ಅಂತಾ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಆದ್ರೆ, ಕಳ್ಳತನವಾದ ವಸ್ತುಗಳ ಅಸಲೀ ಮೌಲ್ಯ ಎಷ್ಟು,...

Post
ಮಾಜಿ ಪೊಲೀಸಪ್ಪನ ವಂಚಕ ಪುರಾಣ; ಬಗೆದಷ್ಟು ಬಯಲಾಗತ್ತೆ “ಪೀಕಾ”ಯಣ..! ಅಷ್ಟಕ್ಕೂ, ಆತನ ಅಸಲಿ ಕಹಾನಿ ಏನು ಗೊತ್ತಾ..?

ಮಾಜಿ ಪೊಲೀಸಪ್ಪನ ವಂಚಕ ಪುರಾಣ; ಬಗೆದಷ್ಟು ಬಯಲಾಗತ್ತೆ “ಪೀಕಾ”ಯಣ..! ಅಷ್ಟಕ್ಕೂ, ಆತನ ಅಸಲಿ ಕಹಾನಿ ಏನು ಗೊತ್ತಾ..?

ಖಾಕಿ ಪಡೆಯಲ್ಲೂ ಇನ್ನಿಲ್ಲದ ಎತ್ತುವಳಿ ಶೂರರಿದ್ದಾರೆ, ಅವ್ರಿಂದ ಹುಶಾರಾಗಿರಿ ಅಂತಾ ಉತ್ತರ ಕನ್ನಡ ಎಸ್ಪಿ ಪ್ರಕಾಶ ದೇವರಾಜು ಇತ್ತಿಚೇಗಷ್ಟೇ ಖಡಕ್ಕಾಗಿ ಹೇಳಿದ್ರು‌. ಅಲ್ದೇ ಹಿರಿಯ ಅಧಿಕಾರಿಗಳ ಹೆಸ್ರಲ್ಲಿ ದುಡ್ಡು ಪೀಕೊ ಕೆಲ ಪೊಲೀಸರು, ವಂಚಕರು ದಂಧೆಗೆ ಇಳಿದಿದ್ದಾರೆ. ಅಂತವರಿಗೆ ಯಾರೂ ಬಿಡಿಗಾಸೂ ಕೊಡಬೇಡಿ, ಹಾಗೇನಾದ್ರೂ ಕೇಳಿದ್ರೆ ನೇರವಾಗಿ ನಂಗೆ ಕಂಪ್ಲೇಂಟ್ ಕೊಡಿ ಅಂತಾ ಖಡಕ್ಕಾದ ಮಾತು ಹೇಳಿದ್ರು. ಹಾಗಾದ್ರೆ, ಅವ್ರು ಇಂತವರನ್ನ ನೋಡಿಯೇ ಹೇಳಿದ್ರಾ..? ಗೊತ್ತಿಲ್ಲ. ಹಾಗಾದ್ರೆ, ಎಸ್ಪಿ ಸಾಹೇಬ್ರು ಹೇಳಿದ್ದಾದ್ರೂ ಏನು ಒಮ್ಮೆ ಕೇಳಿ, ಆಮೇಲೆ...

Post
ಅಗಡಿಯ “ಮೈಲಾರಿ”ಗೆ ಹುಟ್ಟುಹಬ್ಬದ ಸಂಭ್ರಮ..! ಹಾಗಾದ್ರೆ ಯಾರು ಈ ಮೈಲಾರಿ..?

ಅಗಡಿಯ “ಮೈಲಾರಿ”ಗೆ ಹುಟ್ಟುಹಬ್ಬದ ಸಂಭ್ರಮ..! ಹಾಗಾದ್ರೆ ಯಾರು ಈ ಮೈಲಾರಿ..?

ಮುಂಡಗೋಡ: ತಾಲೂಕಿನ ಅಗಡಿ ಗ್ರಾಮದ ನಿಂಗಪ್ಪ ಬರಮಪ್ಪ ತಳವಾರ ಎಂಬುವವರು ತಾವು ಮುದ್ದಿನಿಂದ ಸಾಕಿದ ಹೋರಿಗೆ ಹುಟ್ಟು ಹಬ್ಬ ಆಚರಿಸಿ ಸಂಭ್ರಮಿಸಿದ್ರು. ತಮ್ಮ ಮನೆಯ ಮುದ್ದಿನ ಮಗನ ಹಾಗೆ ಸಾಕಿದ ಮೈಲಾರಿ ಎಂಬ ಹೋರಿಗೆ ನಾಲ್ಕನೇ ವರ್ಷದ ಹುಟ್ಟು ಹಬ್ಬ ಆಚರಿಸಿದ್ರು. ಅಂದಹಾಗೆ, ಮೈಲಾರಿ ಅನ್ನೋ ಹೋರಿ ಈಗಾಗಲೇ ನಾಲ್ಕೈದು ಸ್ಪರ್ಧೆಗಳಲ್ಲಿ ಭಾಗವಹಿಸಿ ಬಹುಮಾನ ಪಡೆದಿದೆ. ತಮ್ಮ ಮನೆಯಲ್ಲೆ ಹುಟ್ಟಿ ಬೆಳೆದ ಹೋರಿಗೆ ಇಡೀ ಮನೆಯ ಮಂದಿ ತಮ್ಮ ಮನೆಮಗನ ಹಾಗೇ ಮುದ್ದು ಮಾಡುತ್ತಾರೆ. ಪ್ರೀತಿಯಿಂದ ತುತ್ತು...

Post
ಹುನಗುಂದ ವಿಠ್ಠಲ ರುಕ್ಮಾಯಿ ಮಂದಿರದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ..!

ಹುನಗುಂದ ವಿಠ್ಠಲ ರುಕ್ಮಾಯಿ ಮಂದಿರದಲ್ಲಿ ಇಂದು ಶ್ರೀಕೃಷ್ಣ ಜನ್ಮಾಷ್ಟಮಿ ಕಾರ್ಯಕ್ರಮ..!

ಮುಂಡಗೋಡ:ತಾಲೂಕಿನ ಹುನಗುಂದ ಗ್ರಾಮದ ವಿಠಲ ರುಕ್ಮಿಣಿ ಹರಿಮಂದಿರದಲ್ಲಿ ರವಿವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ನಿಮಿತ್ತ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. 29-8-2021 ರಂದು ರವಿವಾರ ದಿವಸ ಬೆಳಿಗ್ಗೆ 10-00 ಘಂಟೆಗೆ ವಿಠ್ಹಲ ರುಕ್ಮಿಣಿ ಹರಿ ಮಂದಿರದಲ್ಲಿ ಶ್ರೀ ಸತ್ಯನಾರಾಯಣ ಪೂಜಾ ಮತ್ತು ಶ್ರೀ ಕೃಷ್ಣ ಜನ್ಮಾಷ್ಟಮಿ ಅಂಗವಾಗಿ ಶ್ರೀ ಕೃಷ್ಣನನ್ನು ತೊಟ್ಟಿಲು ಹಾಕುವ ಕಾರ್ಯಕ್ರಮ ಇರುತ್ತದೆ. ಮಧ್ಯಾನ ಪ್ರಸಾಧ ವ್ಯವಸ್ಥೆ ಇರುವದರಿಂದ ಎಲ್ಲಾ ಭಕ್ತಾದಿಗಳು ಭಾಗವಹಿಸಬೇಕೆಂದು ಪಾಂಡುರಂಗ ಸೇವಾ ಸಮಿತಿಯವರು ಮನವಿ ಮಾಡಿದ್ದಾರೆ.

Post
ಆಲಳ್ಳಿಯಲ್ಲಿ ವ್ಯಕ್ತಿಯ ಮೇಲೆ ಕರಡಿ ದಾಳಿ, ಗಾಯ..!

ಆಲಳ್ಳಿಯಲ್ಲಿ ವ್ಯಕ್ತಿಯ ಮೇಲೆ ಕರಡಿ ದಾಳಿ, ಗಾಯ..!

ಮುಂಡಗೋಡ : ತಾಲೂಕಿನ ಆಲಳ್ಳಿ ಗ್ರಾಮದ ಕಾಡಿನಲ್ಲಿ ಅಣಬೆ ಕೀಳಲು ಹೋದ ವ್ಯಕ್ತಿಯ ಮೇಲೆ ಕರಡಿಯೊಂದು ದಾಳಿ ಮಾಡಿದ ಘಟನೆ ನಡೆದಿದೆ. ಇಂದು ನಸುಕಿನ ಜಾವ ಆಲಳ್ಳಿ ಗ್ರಾಮದ ಧರ್ಮಣ್ಣ ಖಂಡೋಜಿ ಹಾಗೂ ಸಂಗಡಿಗರು ಸೇರಿ ಆಲಳ್ಳಿ ಅರಣ್ಯದಲ್ಲಿ ಅಣಬೆ ಕೀಳಲು ಹೋದಾಗ ಧರ್ಮಣ್ಣನ ಮೇಲೆ ಕರಡಿ ದಾಳಿ ಮಾಡಿದೆ ಅಂತಾ ತಿಳಿದು ಬಂದಿದೆ. ಅರಣ್ಯದಂಚಿನಲ್ಲಿರುವ ಗೋವಿನಜೋಳ ಹೊಲಕ್ಕೆ ಹೋದ ಸಂದರ್ಭದಲ್ಲಿ ಮಂಗಗಳನ್ನು ಓಡಿಸಲು ಹೋದಾಗ ಕರಡಿ ದಾಳಿ ಮಾಡಿದೆ. ಕರಡಿಯ ಜೊತೆ ಎರಡು ಮರಿಗಳಿದ್ದವು. ಜೋರಾಗಿ...

Post
ಎಲ್ಟಿ MLC ಆಗೋ ಕನಸಿನ ಹಿಂದೆ, ಇಂದೂರು ಕ್ಷೇತ್ರದ ನಂಟು..? ಒಳ ಮಸಲತ್ತುಗಳ ಏಟಿಗೆ, ಎಲ್ಲವೂ ಕಗ್ಗಂಟು..!!

ಎಲ್ಟಿ MLC ಆಗೋ ಕನಸಿನ ಹಿಂದೆ, ಇಂದೂರು ಕ್ಷೇತ್ರದ ನಂಟು..? ಒಳ ಮಸಲತ್ತುಗಳ ಏಟಿಗೆ, ಎಲ್ಲವೂ ಕಗ್ಗಂಟು..!!

ಮುಂಡಗೋಡ: ಇಂದೂರು ಜಿಲ್ಲಾ ಪಂಚಾಯತಿ ಕ್ಷೇತ್ರಕ್ಕೆ ಬಿಜೆಪಿಯಲ್ಲಿ ಸದ್ಯ ಟಿಕೆಟ್ ಪೈಪೋಟಿ ತಾರ್ಕಿಕ ಅಂತ್ಯಕ್ಕೆ ಬಂದಾಯ್ತಾ..? ಇಂತಹದ್ದೊಂದು ಪ್ರಶ್ನೆ ಮತ್ತು ಅನುಮಾನ ಸದ್ಯದ ಕೆಲ ಬೆಳವಣಿಗೆಗಳನ್ನು ನೋಡಿದ್ರೆ ಎಂತವರಿಗೂ ಅನಿಸದೇ ಇರಲ್ಲ. ಯಾಕಂದ್ರೆ, ಮೊದ ಮೊದಲು ಮೂವರ ನಡುವೆ ಟಿಕೆಟ್ ಗುದ್ದಾಟ ಇತ್ತು. ಅದ್ರಲ್ಲಿ, ಕೆಂಜೋಡಿ ಗಲಬಿ, ಸಿದ್ದು ಹಡಪದ ಹಾಗೂ ರವಿಗೌಡ ಪಾಟೀಲರ ನಡುವೆ ಟಿಕೆಟ್ ಫೈಟ್ ನಡೆದಿತ್ತು, ಆ ನಂತರದಲ್ಲಿ ಬಸನೂ ನಡುವಿನಮನಿ ಅನ್ನೊ ಯುವಕ ನಾನೂ ಒಂದು ಕೈ ನೋಡೇ ಬಿಡ್ತಿನಿ ಅಂತಾ...

Post
ಬಿಜೆಪಿ ಮಹಿಳಾ ಮೋರ್ಚಾದಿಂದ ಹಿರಿಯ ನಾಗರಿಕರಿಗೆ ರಕ್ಷಾಬಂಧನ..!

ಬಿಜೆಪಿ ಮಹಿಳಾ ಮೋರ್ಚಾದಿಂದ ಹಿರಿಯ ನಾಗರಿಕರಿಗೆ ರಕ್ಷಾಬಂಧನ..!

ಮುಂಡಗೋಡ: ಪಟ್ಟಣದಲ್ಲಿ ಭಾರತೀಯ ಜನತಾ ಪಾರ್ಟಿಯ ಮಂಡಲ ಮಹಿಳಾ ಮೋರ್ಚಾ ವತಿಯಿಂದ ರಕ್ಷಾ ಬಂಧನ ನಿಮಿತ್ತ ಹಿರಿಯ ನಾಗರಿಕರಿಗೆ ರಾಖಿ ಕಟ್ಟುವ ಮೂಲಕ ಆಚರಿಸಲಾಯಿತು. ಈ ವೇಳೆ ಜಿಲ್ಲಾ ಉಪಾಧ್ಯಕ್ಷೆ ವೀಣಾ ಓಸಿಮಠ, ತಾಲೂಕಾಧ್ಯಕ್ಷೆ ಲೈಸಾ ಥಾಮಸ್, ಪ್ರದಾನ ಕಾರ್ಯದರ್ಶಿ ಅಂಜು ಪಾಯಣ್ಣವರ, ಉಪಾಧ್ಯಕ್ಷೆ ಸರಸ್ವತಿ ಕೊಂಡ್ಲಿ, ಮತ್ತು ಸವಿತಾ ಸಾನು ಸೇರಿ ಹಲವರು ಹಾಜರಿದ್ದರು.

Post
ಮುಂಡಗೋಡಿನಲ್ಲಿ ನೂಲಿ ಚಂದಯ್ಯನವರ ಜಯಂತ್ಯೋತ್ಸವ..!

ಮುಂಡಗೋಡಿನಲ್ಲಿ ನೂಲಿ ಚಂದಯ್ಯನವರ ಜಯಂತ್ಯೋತ್ಸವ..!

ಮುಂಡಗೋಡ: ಪಟ್ಟಣದಲ್ಲಿ ಕೊರವ ಸಮಾಜದ ಶಿವಶರಣ ಶ್ರೀ ನೂಲಿ ಚಂದಯ್ಯ ನವರ ಜಯಂತೋತ್ಸವ ಕಾರ್ಯಕ್ರಮವನ್ನು ಬಂಕಾಪುರ ರಸ್ತೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಹಮ್ಮಿಕೊಳ್ಳಲಾಗಿತ್ತು. ಸಮಾಜದ ಗುರುಹಿರಿಯರ ಹಾಗೂ ಸಮಾಜದ ಬಂಧು ಮಿತ್ರ ಸಹೋದರರ ಆಶ್ರಯದಲ್ಲಿ ಶಿವ ಶರಣರ ಭಾವಚಿತ್ರಕ್ಕೆ ಪೂಜೆ, ಪುಷ್ಪಾರ್ಚನೆ ಮಾಡಲಾಯಿತು. ಕಾಯಕಯೋಗಿ ನೂಲಿಯ ಚಂದಯ್ಯನವರು ಜನಿಸಿದ ದಿನವಾದ ಇಂದು ರಕ್ಷಾ ಬಂಧನದ ಪ್ರಯುಕ್ತವಾಗಿ ಬಂಧುಗಳಲ್ಲಿ ಶ್ರೀರಕ್ಷೆ ನಮ್ಮೆಲ್ಲರಿಗೂ ರಕ್ಷಣೆ ಆಗಲೆಂದು ರಕ್ಷಾಬಂಧನವನ್ನು ಮಾಡಿಸಿ ಪ್ರಸಾದ ವಿತರಣೆ ಕಾರ್ಯಕ್ರಮವನ್ನು ನೆರವೇರಿಸಲಾಯಿತು. ಈ ವೇಳೆ ತಾಲೂಕಿನ ಸಮಾಜದ ಎಲ್ಲ...

error: Content is protected !!