ಮುಂಡಗೋಡ: ತಾಲೂಕಿನ ಕರವಳ್ಳಿ ಗ್ರಾಮದ ಮಹಿಳೆಯೋರ್ವಳು 108 ಅಂಬ್ಯುಲೆನ್ಸ್ ನಲ್ಲೇ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.
ಹೆರಿಗೆಗೆ ಅಂತಾ ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಾಗಿದ್ದ ಕರವಳ್ಳಿಯ ಜ್ಯೋತಿ ಅಜಿತ್ ಕುಮಾರ್ ಕಾಂಬಳೆ ಎಂಬುವ ಮಹಿಳೆಗೆ ಪರೀಕ್ಷಿಸಿದ್ದ ವೈದ್ಯರು, ಹೇರಿಗೆ ನಂತರ ಮಗುವಿಗೆ NICU ಅವಶ್ಯಕತೆ ಇರೋ ಕಾರಣಕ್ಕೆ ಹುಬ್ಬಳ್ಳಿಯ ಕಿಮ್ಸ್ ಗೆ ರೆಫರ್ ಮಾಡಿದ್ರು.
ಹೀಗಾಗಿ ಮುಂಡಗೋಡಿನ 108 ಅಂಬ್ಯುಲೆನ್ಸ್ ಮೂಲಕ ಹುಬ್ಬಳ್ಳಿಗೆ ಹೋಗುತ್ತಿದ್ದಾಗ, ಮಾರ್ಗಮದ್ಯೆ ಹೇರಿಗೆ ನೋವು ಹೆಚ್ಚಾದಾಗ ಅಂಬ್ಯುಲೆನ್ಸ್ ನಲ್ಲೇ ಸುರಕ್ಷಿತ ವಾಗಿ ಹೆರಿಗೆ ಮಾಡಿಸಲಾಗಿದೆ. ನಂತರ ಕಿಮ್ಸ್ ಗೆ ದಾಖಲಿಸಲಾಗಿದೆ. ತಾಯಿ ಮಗು ಇಬ್ಬರೂ ಆರೋಗ್ಯ ವಾಗಿದ್ದಾರೆ
108 ತುರ್ತು ವೈದ್ಯಕೀಯ ತಂತ್ರಜ್ಞ ಧನರಾಜ ಸಿ. ಬಳೂರು, ಹಾಗೂ ಚಾಲಕ ಕೆಂಚೇಶ್ ಇ. ಎನ್. ಸಮಯ ಪ್ರಜ್ಞೆಗೆ ಶ್ಲಾಘನೆ ವ್ಯಕ್ತವಾಗಿದೆ.