ಮುಂಡಗೋಡಿಗೆ ಅಪರೂಪದ ಅತಿಥಿಯ ಆಗಮನ, ರಕ್ಷಣೆ..!

ಮುಂಡಗೋಡ: ಪಟ್ಟಣದ BSNL ವಸತಿ ಸಮುಚ್ಛಯದ ಮಹಡಿ ಮೇಲೆ ಇಂದು ಅಪರೂಪದ ಅತಿಥಿಯೊಂದು ಆಗಮಿಸಿತ್ತು. BSNL ವಸತಿ ಸಮುಚ್ಚಯದ ಟೇರೇಸಿನ ಮೇಲೆ ಕಣಜ ಗೂಬೆ (Barn owl) ಪ್ರತ್ಯಕ್ಷವಾಗಿತ್ತು. ಅಪರೂಪದ ಈ ಪಕ್ಷಿಯನ್ನು ಕಂಡ ಸ್ಥಳೀಯರು ಆಶ್ಚರ್ಯಗೊಂಡು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ರು‌. ಮಾಹಿತಿ ಪಡೆದು ಬಂದ ಅರಣ್ಯ ಇಲಾಖೆ ಸಿಬ್ಬಂದಿ ಶ್ರೀಧರ ಬಜಂತ್ರಿ ಅಪರೂಪದ ಕಣಜ ಗೂಬೆಯನ್ನು ರಕ್ಷಿಸಿದ್ರು. ಹಾಗೆ ರಕ್ಷಿಸಿದ ಕಣಜ ಗೂಬೆಯನ್ನು ಸುರಕ್ಷಿತವಾಗಿ ಕಾಡಿಗೆ ಬಿಟ್ಟು ಬರಲಾಗಿದೆ. ಈ ವೇಳೆ ಅರಣ್ಯ ಇಲಾಖೆ ಸಿಬ್ಬಂದಿ ಶಿವಪ್ಪ ಸಾಥ್ ನೀಡಿದ್ರು.

error: Content is protected !!