Home ಉತ್ತರ ಕನ್ನಡ ಮುಂಡಗೋಡ ಸುದ್ದಿ

Category: ಮುಂಡಗೋಡ ಸುದ್ದಿ

Post
ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಕೋವಿಡ್ ಕಟ್ಟೇಚ್ಚರ..!

ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ಹೋಗುವ ಕಾರ್ಮಿಕರಿಗೆ ಕೋವಿಡ್ ಕಟ್ಟೇಚ್ಚರ..!

ಮುಂಡಗೋಡ: ತಾಲೂಕಿನ ಟಿಬೇಟಿಯನ್ ಕಾಲೋನಿಗಳಲ್ಲಿ ಕೆಲಸಕ್ಕೆ ಹೋಗುವ ಸುತ್ತ ಮುತ್ತಲ ಹಳ್ಳಿಗಳ ಕೂಲಿ ಕಾರ್ಮಿಕರಿಗೆ ಆತಂಕ ಶುರುವಾಗಿದೆ. ರವಿವಾರ ತಾಲೂಕಿನ ಹುನಗುಂದ ಗ್ರಾಮದ ಮಹಿಳೆಯೋರ್ವಳಿಗೆ ಕೊರೋನಾ ಪಾಸಿಟಿವ್ ದೃಢ ಪಟ್ಟಿದ್ದು ಮತ್ತಷ್ಟು ಆತಂಕಕ್ಕೇ ಕಾರಣವಾಗಿದೆ. ನಿತ್ಯವೂ ಇಲ್ಲಿನ ಟಿಬೇಟಿಯನ್ ಕಾಲೋನಿಗಳಿಗೆ ಕೆಲಸಕ್ಕೆ ತೆರಳುವ ನೂರಾರು ಕಾರ್ಮಿಕರು ತಕ್ಷಣವೇ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ಆಯಾ ಗ್ರಾಮಗಳ ಗ್ರಾಮ ಪಂಚಾಯತಿಗಳು ಸೂಚನೆ ನೀಡಿವೆ.

Post
ಹುನಗುಂದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ..!

ಹುನಗುಂದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕೋತ್ಸವ..!

ಮುಂಡಗೋಡ: ತಾಲೂಕಿನ ಹುನಗುಂದ ಗ್ರಾಮದ ಗ್ರಾಮದೇವಿ ದೇವಸ್ಥಾನದಲ್ಲಿ ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಆಚರಿಸಲಾಯಿತು.‌ ವಿವಿದ ಚಿತ್ರಗಳ ರೂಪದಲ್ಲಿ ದೀಪ ಬೆಳಗಿಸಿ ಭಕ್ತರು ಸಂಭ್ರಮಿಸಿದ್ರು.‌ ದೇವಸ್ಥಾನದ ಅಂಗಳದಲ್ಲಿ ರಂಗೋಲಿ ಬಿಡಿಸಿ ಅದರ ಪ್ರಕಾರವೇ ದೀಪಗಳನ್ನು ಬೆಳಗಿಸಿದ್ರು‌. ಕಾರ್ತಿಕ ದೀಪ ಬೆಳಗಿಸೋ ಮೊದಲು ದೇವಿಗೆ ವಿಶೇಷ ಪೂಜೆ ಮಾಡಲಾಯಿತು.. ಇನ್ನು ಕಾರ್ತಿಕೋತ್ಸವದ ನಂತರ ಅನ್ನ ಸಂತರ್ಪಣೆ ನೆರವೇರಿಸಲಾಯಿತು.

Post
ನಿದ್ದೆಯಿಂದ ಎದ್ದ ಮುಂಡಗೋಡ PWD, ಅಮ್ಮಾಜಿ ಕೆರೆ ದಂಡೆಯ ಮೇಲೆ ಸುರಕ್ಷತಾ ಕ್ರಮ..!

ನಿದ್ದೆಯಿಂದ ಎದ್ದ ಮುಂಡಗೋಡ PWD, ಅಮ್ಮಾಜಿ ಕೆರೆ ದಂಡೆಯ ಮೇಲೆ ಸುರಕ್ಷತಾ ಕ್ರಮ..!

ಮುಂಡಗೋಡ: ಪಟ್ಟಣದ ಹೊರ ವಲಯದಲ್ಲಿ ಇತ್ತಿಚೆಗೆ ಸಂಭವಿಸಿದ ಕಾರು ದುರಂತದಲ್ಲಿ ದಂಪತಿಗಳು ಮೃತಪಟ್ಟ ಹಿನ್ನೆಲೆಯಲ್ಲಿ, ಹೀಗಾಗಿ, ಅಪಘಾತಗಳಿಗೆ ಆಮಂತ್ರಣ ನೀಡುತ್ತಿದ್ದ ಅಮ್ಮಾಜಿ ಕೆರೆಯ ದಂಡೆಯ ಮೇಲೆ ಬೇಲಿ ಹಾಕಲಾಗಿದೆ. ಇಲ್ಲಿನ ಪಿಡಬ್ಲ್ಯೂಡಿ ಇಲಾಖೆ ಈಗಷ್ಟೆ ಎಚ್ಚೆತ್ತುಕೊಂಡಿದ್ದು ಕೆರೆಯ ದಂಡೆಯ ಮೇಲೆ ಕಟ್ಟಿಗೆಯ ಕಂಬಗಳನ್ನು ನಿಲ್ಲಿಸಿ ಅದಕ್ಕೆ ಕೆಂಪು ಪಟ್ಟಿಯನ್ನು ಕಟ್ಟಲಾಗಿದೆ. ಅಲ್ಲದೇ ಸಣ್ಣ ಸಣ್ಣ ಚೀಲಗಳನ್ನು ತುಂಬಿ ಇಡಲಾಗಿದೆ.. ಇದ್ರಿಂದ ರಾತ್ರಿ ಸಮಯದಲ್ಲಿ ಅಪಘಾತ ಸಂಭವಿಸುವುದನ್ನು ಕೊಂಚ ತಪ್ಪಿಸಲು ಕ್ರಮ ಕೈಗೊಂಡಿದೆ.

Post
ಮುಂಡಗೋಡ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕೋತ್ಸವ, ವರ್ಧಂತಿ ಉತ್ಸವ..!

ಮುಂಡಗೋಡ ಮಹಾಲಕ್ಷ್ಮಿ ದೇವಾಲಯದಲ್ಲಿ ಕಾರ್ತಿಕೋತ್ಸವ, ವರ್ಧಂತಿ ಉತ್ಸವ..!

ಮುಂಡಗೋಡ: ಪಟ್ಟಣದ ಇಂದಿರಾನಗರದ ಮಹಾಲಕ್ಷ್ಮೀ ದೇವಸ್ಥಾನದಲ್ಲಿ ಇಂದು ಕಾರ್ತಿಕ ಅಮವಾಸ್ಯೆಯ ನಿಮಿತ್ತ ಕಾರ್ತಿಕೋತ್ಸವ ಹಾಗೂ 18 ನೇ ವರ್ಧಂತಿ ಉತ್ಸವ ಕಾರ್ಯಕ್ರಮ ನಡೆಯುತ್ತಿದೆ.. ಇಂದು ಬೆಳಗಿನಿಂದಲೂ ದೇವಸ್ಥಾನದಲ್ಲಿ ವಿಶೇಷ ಪೂಜಾ ಕೈಂಕರ್ಯಗಳು, ಹೋಮ ಹವನಗಳು ನಡಯುತ್ತಿವೆ. ಸಂಜೆ ಕಾರ್ತಿಕೋತ್ಸವ ಕಾರ್ಯಕ್ರಮ ನಡೆಯಲಿದೆ.. ಕಾರ್ತಿಕೋತ್ಸವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದ್ದು ದೇವಸ್ಥಾನದಲ್ಲಿ ತಳಿರು ತೋರಣಗಳಿಂದ ಅಲಂಕರಿಸಲಾಗಿದೆ‌.

Post
ಸಿದ್ದನಕೊಪ್ಪದ ಸ್ಪರ್ಧಾ ಹೋರಿಗೆ ಹುಟ್ಟುಹಬ್ಬದ ಸಂಭ್ರಮ..!

ಸಿದ್ದನಕೊಪ್ಪದ ಸ್ಪರ್ಧಾ ಹೋರಿಗೆ ಹುಟ್ಟುಹಬ್ಬದ ಸಂಭ್ರಮ..!

ಮುಂಡಗೋಡ: ತಾಲೂಕಿನ ಸಿದ್ದನಕೊಪ್ಪದಲ್ಲಿ ವಿಶೇಷ ಹುಟ್ಟುಹಬ್ಬ ಆಚರಿಸಲಾಗಿದೆ. ಸ್ಪರ್ಧಾ ಹೋರಿಗೆ ಜನ್ಮ ದಿನ ಆಚರಣೆ ಮಾಡಲಾಗಿದೆ.. ಹೋರಿಗೆ ವಿಶೇಷ ಅಲಂಕಾರ ಮಾಡಿ, ಕೇಕು ಕತ್ತರಿಸಿ ಸಿಹಿ ಹಂಚಿ ಸಂಭ್ರಮಿಸಲಾಗಿದೆ. ನೂರಾರು ಜನರು ಸೇರಿದ್ದ ಹುಟ್ಟುಹಬ್ಬದ ಕಾರ್ಯಕ್ರಮದಲ್ಲಿ ಹೋರಿಯ ಗುಣಗಾನ‌ ಮಾಡಲಾಯಿತು. ಈ ವೇಳೆ ಗ್ರಾಮಸ್ಥರು ಹಾಗೂ ಹೋರಿಯ ಮಾಲೀಕರು ಕುಣಿದು ಕುಪ್ಪಳಿಸಿದ್ರು.. ಪಟಾಕಿ ಸಿಡಿಸಿ ಸಂಭ್ರಮಿಸಿದ್ರು.. ಈ ಸಂದರ್ಭದಲ್ಲಿ ಮಳಗಿಯ ಬಿಜೆಪಿ ಮುಖಂಡ ಸಂತೋಷ ಶೇಟ್ ರಾಯ್ಕರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು..

Post
ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಕಂಚಿನ ಪುತ್ಥಳಿ ಸ್ಥಾಪನೆಗೆ ಲಕ್ಷ ರೂ. ದೇಣಿಗೆ..!

ಕಲಕೇರಿಯಲ್ಲಿ ಛತ್ರಪತಿ ಶಿವಾಜಿ ಕಂಚಿನ ಪುತ್ಥಳಿ ಸ್ಥಾಪನೆಗೆ ಲಕ್ಷ ರೂ. ದೇಣಿಗೆ..!

ಮುಂಡಗೋಡ: ತಾಲೂಕಿನ ಕಲಕೇರಿ ಗ್ರಾಮದಲ್ಲಿ ಛತ್ರಪತಿ ಶಿವಾಜಿ ಮಹಾರಾಜರ ಕಂಚಿನ ಪುತ್ಥಳಿ ಪ್ರತಿಷ್ಠಾಪಿಸಲು ಬಿಜೆಪಿ ಯುವ ಧುರೀಣ ಸಂತೋಷ ರಾಯ್ಕರ ಅವರು ಒಂದು ಲಕ್ಷ ರೂಪಾಯಿ ಚೆಕ್ ನೀಡಿದ್ದಾರೆ. ಬಳಿಕ ಮಾತನಾಡಿದ ಸಂತೋಷ ರಾಯ್ಕರ, ಹಿಂದೂ ಧರ್ಮದ ರಕ್ಷಣೆಗಾಗಿ ಶಿವಾಜಿ ಮಹಾರಾಜರ ಪುತ್ಥಳಿ ಪ್ರತಿಷ್ಠಾಪಿಸುವ ಮೂಲಕ ಅವರ ಆದರ್ಶ, ತತ್ವ ಸಿದ್ಧಾಂತ ಮತ್ತು ಇತಿಹಾಸವನ್ನು ಜನರಲ್ಲಿ ಮನವರಿಕೆ ಮಾಡಿಕೊಡಬೇಕಿದೆ ಎಂದರು. ಇದೇ ಸಂದರ್ಭದಲ್ಲಿ ಟ್ರಸ್ಟ್ ಕಮಿಟಿ ವತಿಯಿಂದ ಸಂತೋಷ ರಾಯ್ಕರ ಅವರನ್ನು ಗೌರವಿಸಲಾಯಿತು. ಟ್ರಸ್ಟ್‌ನ ಅಧ್ಯಕ್ಷ ಕಾಳೇಶ...

Post
ಅಮ್ಮಾಜಿ ಕೆರೆಗೆ ಕಾರು ಬಿದ್ದ ಕೇಸ್; ಮೃತರ ಅಂತಿಮ ದರ್ಶನ ಪಡೆದ ಸಚಿವ ಹೆಬ್ಬಾರ್..!

ಅಮ್ಮಾಜಿ ಕೆರೆಗೆ ಕಾರು ಬಿದ್ದ ಕೇಸ್; ಮೃತರ ಅಂತಿಮ ದರ್ಶನ ಪಡೆದ ಸಚಿವ ಹೆಬ್ಬಾರ್..!

ಮುಂಡಗೋಡ : ಪಟ್ಟಣದ ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ಅರಶಿಣಗೇರಿ ಗ್ರಾಮದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ದಂಪತಿಗಳು ಮೃತಪಟ್ಟ ಅಹಿತಕರ ಘಟನೆ ಸಂಭವಿಸಿದ್ದು. ಘಟನೆ ಬಗ್ಗೆ ತಿಳಿದ ತಕ್ಷಣ ಕಾರ್ಮಿಕ ಖಾತೆ ಸಚಿವ ಶಿವರಾಮ ಹೆಬ್ಬಾರ್ ಅವರು ಮುಂಡಗೋಡದ ಸಾರ್ವಜನಿಕ ಸರಕಾರಿ ಆಸ್ಪತ್ರೆಗೆ ಭೇಟಿ ನೀಡಿ, ಪಾರ್ಥಿವ ಶರೀರಕ್ಕೆ ಅಂತಿಮ ನಮನ ಸಲ್ಲಿಸಿ, ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ಸಂದರ್ಭದಲ್ಲಿ ಮಂಡಲಾಧ್ಯಕ್ಷರಾದ ನಾಗಭೂಷಣ ಹಾವಣಗಿ, ಪ್ರಮುಖರಾದ ಉಮೇಶ್ ಬಿಜಾಪುರ, ಕೆ.ಸಿ.ಗಲಭಿ, ಸಂಜೀವ್...

Post
ಮುಂಡಗೋಡ ಅಮ್ಮಾಜಿ ಕೆರೆಯಲ್ಲಿ ಕಾರು ದುರಂತ, ವಿಧಿಯಾಟಕ್ಕೆ ಬಲಿಯಾದವರು ಅರಶಿಣಗೇರಿ ದಂಪತಿಗಳು..!

ಮುಂಡಗೋಡ ಅಮ್ಮಾಜಿ ಕೆರೆಯಲ್ಲಿ ಕಾರು ದುರಂತ, ವಿಧಿಯಾಟಕ್ಕೆ ಬಲಿಯಾದವರು ಅರಶಿಣಗೇರಿ ದಂಪತಿಗಳು..!

ಮುಂಡಗೋಡ: ಹೊರವಲಯದ ಅಮ್ಮಾಜಿ ಕೆರೆಯಲ್ಲಿ ಕಾರು ಕೆರೆಗೆ ಬಿದ್ದ ಪರಿಣಾಮ ದಂಪತಿಗಳಿಬ್ಬರೂ ದಾರುಣ ಸಾವು ಕಂಡಿದ್ದಾರೆ‌. ನಸುಕಿನ ಜಾವ ಸಂಭವಿಸಿರಬಹುದಾದ ಘಟನೆ ಅಂತಾ ಹೇಳಲಾಗ್ತಿರೋ ಅಪಘಾತ ನಡೆದಿರೊದೇ ವಿಚಿತ್ರ. ಅಷ್ಟಕ್ಕೂ ಈ ಸಾವು ಅನ್ನೋದು ಇಷ್ಟು ಸಲೀಸಾ ಅನ್ನೋದೇ ಬಹುದೊಡ್ಡ ವಾಸ್ತವ..! ಮೃತರು ದಂಪತಿಗಳು..! ಬೆಂಗಳೂರು ನೋಂದಣಿ ಹೊಂದಿರುವ ಮಾರುತಿ ಸ್ವಿಪ್ಟ್ ಕಾರು ಇದಾಗಿದ್ದು, ಮೂಲತಃ ಮುಂಡಗೋಡ ತಾಲೂಕಿನ ಅರಶಿಣಗೇರಿಯವರಾದ ರಾಜು ವರ್ಗಿಸ್ ಹಾಗೂ ಬ್ಲೆಸ್ಸಿ ಮೃತಪಟ್ಟ ದಂಪತಿಗಳಾಗಿದ್ದಾರೆ. ಕರವಳ್ಳಿಯಲ್ಲಿ ಸಂಬಂಧಿಯೊಬ್ಬರು ಅಸು ನೀಗಿದ ಹಿನ್ನೆಲೆಯಲ್ಲಿ ಅಂತ್ಯಕ್ರಿಯೆಗಾಗಿ...

Post
ಇಂದೂರು ವಿದ್ಯಾರ್ಥಿಗಳಿಗೆ ಬಸ್ಸುಗಳೇ ಇಲ್ಲ..! ಅಧ್ಯಕ್ಷ ವಿ.ಎಸ್.ಪಾಟೀಲರೇ ಎಲ್ಲಿದ್ದೀರಿ..? ವಿದ್ಯಾರ್ಥಿಗಳ ಗೋಳು ಕಾಣ್ತಿಲ್ವಾ..?

ಇಂದೂರು ವಿದ್ಯಾರ್ಥಿಗಳಿಗೆ ಬಸ್ಸುಗಳೇ ಇಲ್ಲ..! ಅಧ್ಯಕ್ಷ ವಿ.ಎಸ್.ಪಾಟೀಲರೇ ಎಲ್ಲಿದ್ದೀರಿ..? ವಿದ್ಯಾರ್ಥಿಗಳ ಗೋಳು ಕಾಣ್ತಿಲ್ವಾ..?

ಮುಂಡಗೋಡ ತಾಲೂಕಿನಲ್ಲಿ ಗ್ರಾಮೀಣ ಭಾಗಗಳ ವಿದ್ಯಾರ್ಥಿಗಳ ಗೋಳು ಕೇಳೋರೇ ಇಲ್ವಾ..? ಪ್ರತಿನಿತ್ಯವೂ ಶಾಲಾ ಕಾಲೇಜಿಗೆ ಹೋಗಲು ಬಸ್ ಗಳಿಲ್ಲದೇ ಪರದಾಡುವಂತಾಗಿದೆ. ಹೀಗಾಗಿನೇ ತಾಲೂಕಿನ ವಿದ್ಯಾರ್ಥಿಗಳು ಹಾಗೂ ಪಾಲಕರ ಆಕ್ರೋಶದ ಕಟ್ಟೆ ಒಡೆದಿದೆ. ಇಂದೂರಿನಲ್ಲಿ ಪ್ರತಿಭಟನೆ..!                                      ಈ ಕಾರಣಕ್ಕಾಗೇ, ಇಂದೂರಿನಲ್ಲಿ ಇಂದು ವಿದ್ಯಾರ್ಥಿಗಳು ಸಮರ್ಪಕ ಬಸ್ ವ್ಯವಸ್ಥೆಗೆ ಆಗ್ರಹಿಸಿ ಪ್ರತಿಭಟನೆ ಕೈಗೊಂಡ್ರು. ಇಂದೂರು...

Post
ಮಳಗಿ ಹೋರಿಹಬ್ಬದ ವಿಜೇತರಿಗೆ ಬಹುಮಾನ ವಿತರಿಸಿದ ಸಂತೋಷ ಶೇಟ್ ರಾಯ್ಕರ್..!

ಮಳಗಿ ಹೋರಿಹಬ್ಬದ ವಿಜೇತರಿಗೆ ಬಹುಮಾನ ವಿತರಿಸಿದ ಸಂತೋಷ ಶೇಟ್ ರಾಯ್ಕರ್..!

ಮುಂಡಗೋಡ: ತಾಲೂಕಿನ ಮಳಗಿಯಲ್ಲಿ ನಡೆದ ಹೋರಿ ಬೆದರಿಸೋ ಸ್ಪರ್ಧೆಯ ವಿಜೇತ ಹೋರಿಗಳ ಮಾಲೀಕರಿಗೆ ಬಹುಮಾನ ನೀಡಲಾಯಿತು. ಮಳಗಿಯ ಸಂತೋಷ ಶೇಟ್ ರಾಯ್ಕರ್ ವಿಜೇತ ಹೋರಿಗಳಿಗೆ ಬಹುಮಾನ ನೀಡಿದ್ರು.. ಅತ್ಯುತ್ತಮ ಹಿಡಿತಗಾರರಿಗೂ ಬಹುಮಾನ ನೀಡಲಾಯಿತು. ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಹೋರಿಹಬ್ಬದ ಅಭಿಮಾನಿಗಳ ಸಮ್ಮುಖದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.. ಗೃಹೋಪಯೋಗಿ ವಸ್ತುಗಳ ಆಕರ್ಶಕ ಬಹುಮಾನ ನೀಡಲಾಯಿತು.. ಈ ವೇಳೆ ಅಣ್ಣಪ್ಪ ಸಾವಿಕೇರಿ, ಲಕ್ಷ್ಮಣ ಗಡಕನಳ್ಳಿ, ಮಂಜು ಭೋವಿ, ಜಮೀರ್ ಶೇಖ್, ಮುಖೇಶ್ ತಳವಾರ್, ಗಣೇಶ್ ಕೋಡಿಹಳ್ಳಿ, ಪ್ರಶಾಂತ್ ದೋರಳ್ಳಿ, ಕೃಷ್ಣ...

error: Content is protected !!