ಮುಂಡಗೋಡ: ಪಟ್ಟಣದ ನಿವೃತ್ತ ನೌಕರರ ಸಭಾಭವನದಲ್ಲಿ ಇಂದು 108 ಅಂಬ್ಯುಲೆನ್ಸ್ ನೌಕರರ ಪದಾಧಿಕಾರಿಗಳು ಪತ್ರಿಕಾಗೋಷ್ಠಿ ನಡೆಸಿದ್ರು. ರಾಜ್ಯ ಮಟ್ಟದ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ್ರು. ಸರ್ಕಾರಕ್ಕೆ ಹಲವು ಬೇಡಿಕೆಗಳನ್ನ ಈಡೇರಿಸುವಂತೆ ಒತ್ತಾಯಿಸಿದ್ರು.
ಪತ್ರಿಕಾಗೋಷ್ಠಿಯಲ್ಲಿ ಸಂಘದ ರಾಜ್ಯಾಧ್ಯಕ್ಷ ಶ್ರೀಶೈಲ್ ಹಳ್ಳೂರು ಮಾತನಾಡಿ, 2016 ರಲ್ಲಿ ನಡೆದಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸುಮಾರು 150 ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ವಜಾ ಮಾಡಲಾಗಿದೆ. ಹಾಗೆ ವಜಾ ಮಾಡಿರೋ ಸಿಬ್ಬಂದಿಗಳನ್ನು ಪುನಃ ಕರ್ತವ್ಯಕ್ಕೆ ನೇಮಕ ಮಾಡಿಕೊಳ್ಳಬೇಕು, ಅಲ್ದೇ, ಹಳೆಯ ಸಿಬ್ಬಂದಿಗಳ ವೇತನ ತಾರತಮ್ಯ ಸರಿಪಡಿಸಬೇಕು ಅಂತಾ ಅವ್ರು ಮನವಿ ಮಾಡಿದ್ರು.
ಹೊಸ ಟೆಂಡರ್ ವಿಚಾರ..!
ಇನ್ನೇನು ಕೆಲವೇ ದಿನಗಳಲ್ಲಿ ನೂತನ ಟೆಂಡರ್ ಕರೆಯಲಾಗುತ್ತದೆ. ಆ ಟೆಂಡರ್ ನಲ್ಲಿ ಈಗಿರುವ ಸಿಬ್ಬಂದಿಗಳನ್ನೇ ಮುಂದುವರೆಸಿಕೊಂಡು ಹೋಗಬೇಕು. ಬೇರೆ ಸಿಬ್ಬಂದಿಗಳ ನಿಯೋಜನೆಗೆ ಮುಂದಾಗಬಾರದು ಅಂತಾ ರಾಜ್ಯಾಧ್ಯಕ್ಷ ಶ್ರೀಶೈಲ್ ಹಳ್ಳೂರು ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಅರಿಯರ್ಸ್, ಇನ್ಕ್ರಿಮೆಂಟ್ ನೀಡಿ..!
ಹಾಗೆಯೇ, ರಾಜ್ಯದ 108 ಆರೋಗ್ಯ ಕವಚ ಸಿಬ್ಬಂದಿಗಳಿಗೆ 2020-21 ರ ಅರಿಯರ್ಸ್, ಇನ್ಕ್ರಿಮೆಂಟ್ ನೀಡಲು ಒತ್ತಾಯಿಸಿದ ಪಧಾಧಿಕಾರಿಗಳು, ಕೋವಿಡ್ 2 ನೇ ಅಲೆಯಲ್ಲಿ ಕೆಲಸ ನಿರ್ವಹಿಸಿದ್ದವರಿಗೆ ನೀಡಬೇಕಾಗಿದ್ದ ಭತ್ತೆಯನ್ನು ಇದುವರೆಗೂ ನೀಡಿಲ್ಲ, ಕೂಡಲೇ ಭತ್ತೆಯ ಹಣವನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿದ್ರು.
ಸ್ವಂತ ಜಿಲ್ಲೆಗೆ ವರ್ಗಾಯಿಸಿ..!
ರಾಜ್ಯಾಧ್ಯಂತ ಕಾರ್ಯನಿರ್ವಹಿಸ್ತಿರೋ 108 ಅಂಬ್ಯುಲೆನ್ಸ್ ಸಿಬ್ಬಂದಿಗಳು, ಸ್ವಂತ ಜಿಲ್ಲೆ ಬಿಟ್ಟು ಬೇರೆ ಬೇರೆಯ, ದೂರದ ಜಿಲ್ಲೆಗಳಲ್ಲಿ ಕಾರ್ಯನಿರ್ವಹಿಸ್ತಿದಾರೆ. ಅದ್ರಿಂದ ಅವ್ರಿಗೇಲ್ಲ ಸಮಸ್ಯೆಗಳು ಎದುರಾಗುತ್ತಿದೆ. ಹೀಗಾಗಿ, ಸಿಬ್ಬಂದಿಗಳನ್ನು ಅವರವರ ಸ್ವಂತ ಜಿಲ್ಲೆಗಳಿಗೆ ವರ್ಗಾವಣೆಗೊಳಿಸಬೇಕು ಅಂತಾ ರಾಜ್ಯಾಧ್ಯಕ್ಷ ಶ್ರೀಶೈಲ್ ಹಳ್ಳೂರ್ ಮನವಿ ಮಾಡಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯ ಘಟಕದ ಪಧಾಧಿಕಾರಿಗಳು ಉಪಸ್ಥಿತರಿದ್ದರು.