ಬೆಳಗಾವಿಯಲ್ಲಿ ನಾಳೆ ಹಡಪದ ಅಪ್ಪಣ್ಣ ಸಮಾಜದಿಂದ ವಿವಿಧ ಬೇಡಿಕೆಗೆ ಆಗ್ರಹಿಸಿ ಪ್ರತಿಭಟನೆ..!

ಮುಂಡಗೋಡ: ಹಡಪದ ಅಪ್ಪಣ್ಣ ಸಮಾಜದ ಬಾಂಧವರು ನಾಳೆ ಬೆಳಗಾವಿಯಲ್ಲಿ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ. ಬೆಳಗಾವಿಯಲ್ಲಿ ಅಧಿವೇಶನ ನಡೆಯುತ್ತಿರೋ ಹಿನ್ನೆಲೆಯಲ್ಲಿ ಸರ್ಕಾರದ ಗಮನ ಸೆಳೆಯಲು ಹಡಪದ ಅಪ್ಪಣ್ಣ ಸಮಾಜ ಬಾಂಧವರು ಸಾಂಕೇತಿಕ ಪ್ರತಿಭಟನೆ ನಡೆಸಲು ತೀರ್ಮಾನಿಸಿದ್ದಾರೆ.

ಹಡಪದ ಅಪ್ಪಣ್ಣ ಸಮಾಜದ ಶ್ರೀಗಳು ಹಾಗೂ ಸುಕ್ಷೇತ್ರ ತಂಗಡಿಗಿ ಮಠದ ಪರಮಪೂಜ್ಯ ಶ್ರೀ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮಿಗಳ ನೇತೃತ್ವದಲ್ಲಿ ನಾಳೆ ಸುವರ್ಣ ಗಾರ್ಡನ್ ಟೆಂಟ್ ನಂಬರ್ 6 ರಲ್ಲಿ ನಡೆಯುವ ಹಡಪದ ಸಮಾಜದ ಬೃಹತ್ ಹೋರಾಟಕ್ಕೆ ರಾಜ್ಯಾದ್ಯಂತ ಸಮಾಜಬಾಂಧವರು ಆಗಮಿಸುತ್ತಿದ್ದಾರೆ ಕಾರಣ ಮುಂಡಗೋಡ ತಾಲೂಕಿನ ಸಮಾಜದ ಬಾಂಧವರೂ ಭಾಗಿಯಾಗುವಂತೆ ಮುಖಂಡ ಸಿದ್ದು ಹಡಪದ ಮನವಿ ಮಾಡಿದ್ದಾರೆ.

error: Content is protected !!