Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಲಂಚಕ್ಕಾಗಿ ಕೈಚಾಚಿದ್ದ ಹೊನ್ನಾವರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ..!

ಲಂಚಕ್ಕಾಗಿ ಕೈಚಾಚಿದ್ದ ಹೊನ್ನಾವರ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲೋಕಾಯುಕ್ತ ಬಲೆಗೆ..!

ಹೊನ್ನಾವರ: ಇಲ್ಲಿನ ಪಟ್ಟಣ ಪಂಚಾಯತ ಮುಖ್ಯಾಧಿಕಾರಿ ಖಾತಾ ಬದಲಾವಣೆಗಾಗಿ ವ್ಯಕ್ತಿ ಓರ್ವರಿಂದ ಲಂಚ ಪಡೆಯುತ್ತಿದ್ದ ವೇಳೆ ಲೋಕಾಯುಕ್ತರು ದಾಳಿ ನಡೆಸಿರುವ ಘಟನೆ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ಪಟ್ಟಣ ಪಂಚಾಯತದಲ್ಲಿ ನಡೆದಿದೆ. ಪಟ್ಟಣ ಪಂಚಾಯತ ಅಧಿಕಾರಿ ಪ್ರವೀಣ ಕುಮಾರ ಎಂಬುವವರು ಚಂದ್ರಹಾಸ ಎಂಬುವವರ ಬಳಿ ಜಮೀನಿಗೆ ಸಂಬಂಧಿಸಿ A ಖಾತಾ ಬದಲಾವಣೆಗಾಗಿ ಎರಡು ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಆದರೆ ಮೊದಲ ಹಂತವಾಗಿ ಚಂದ್ರಹಾಸ ಅವರು ಇಂದು 60ಸಾವಿರ ನಗದು ಕೊಡುತ್ತಿದ್ದ ವೇಳೆ ಲೋಕಾಯುಕ್ತರು ನಡೆಸಿದ ದಾಳಿಯ ವೇಳೆ...

Post
ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಡಾ. ವಿಷ್ಣುವರ್ಧನ್ ವರ್ಗ, ನೂತನ ಎಸ್ಪಿ ಯಾರು ಗೊತ್ತಾ..?

ಉತ್ತರ ಕನ್ನಡ ಜಿಲ್ಲೆಯ ಎಸ್ಪಿ ಡಾ. ವಿಷ್ಣುವರ್ಧನ್ ವರ್ಗ, ನೂತನ ಎಸ್ಪಿ ಯಾರು ಗೊತ್ತಾ..?

ಕಾರವಾರ: ಉತ್ತರ ಕನ್ನಡದ ಎಸ್ಪಿ ಡಾ.ವಿಷ್ಣುವರ್ಧನ್ ವರ್ಗವಾಗಿದ್ದಾರೆ. ನೂತನ ಎಸ್ಪಿಯಾಗಿ ನಾರಾಯಣ್ ಎಂ. ಅವರನ್ನು ಸರ್ಕಾರ ನೇಮಕ ಮಾಡಿದೆ‌. ಅಂದಹಾಗೆ, ರಾಜ್ಯದ 25 ಐಪಿಎಸ್ ಅಧಿಕಾರಿಗಳನ್ನ ವರ್ಗಾವಣೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಅದ್ರಲ್ಲಿ, ಉತ್ತರಕನ್ನಡ ಎಸ್ಪಿ ಆಗಿದ್ದ ಡಾ. ವಿಷ್ಣುವರ್ಧನ್ ಅವರನ್ನ ಸಹ ವರ್ಗಾವಣೆ ಮಾಡಲಾಗಿದೆ.   ಉತ್ತರಕನ್ನಡ ಹಾಲಿ ಎಸ್ಪಿ ಆಗಿದ್ದ ವಿಷ್ಣುವರ್ಧನ್ ಅವರನ್ನ ಮೈಸೂರಿಗೆ ವರ್ಗಾವಣೆ ಮಾಡಲಾಗಿದ್ದು, ಅವರ ಜಾಗಕ್ಕೆ ನಾರಾಯಣ್ ಎಂ ಅವರನ್ನ ನೇಮಕ ಮಾಡಲಾಗಿದೆ. ಇನ್ನು, ನಾರಾಯಣ್ ಎಂ. ರವರು...

Post
ಜೋಯಿಡಾದಲ್ಲಿ ಪತ್ರಕರ್ತರ ಕಾರಿನಡಿ ನಾಡಬಾಂಬ್ ಸ್ಪೋಟ, ಕಾರಿಗೆ ಹಾನಿ..!

ಜೋಯಿಡಾದಲ್ಲಿ ಪತ್ರಕರ್ತರ ಕಾರಿನಡಿ ನಾಡಬಾಂಬ್ ಸ್ಪೋಟ, ಕಾರಿಗೆ ಹಾನಿ..!

ಜೊಯಿಡಾ: ಪತ್ರಕರ್ತರು ತೆರಳುತ್ತಿದ್ದ ಕಾರಿನಡಿ ನಾಡ ಬಾಂಬ್ ಸ್ಫೋಟವಾದ ಘಟನೆ ಜೊಯಿಡಾದಲ್ಲಿ ನಡೆದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ಅಂದಹಾಗೆ, ಜೋಯಿಡಾದಲ್ಲಿ ನಡೆಯತ್ತಿದ್ದ ಜನ ಸಂಪರ್ಕ ಸಭೆಗೆ ಗುಂದದಿಂದ ಆಗಮಿಸುತ್ತಿದ್ದ ಪತ್ರಕರ್ತರ ಕಾರಿನಡಿ ನಾಡಬಾಂಬ್ ಬ್ಲಾಸ್ಟ್ ಆಗಿದೆ. ಪರಿಣಾಮ ಕಾರಿನ ಹಿಂಭಾಗಕ್ಕೆ ಹಾನಿಯಾಗಿದೆ. ಅದೃಷ್ಟವಶಾತ್ ಮೂವರು ಪತ್ರಕರ್ತರು ಯಾವುದೇ ಅಪಾಯವಿಲ್ಲದೇ ಪಾರಾಗಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ. ಕಾಡು ಪ್ರಾಣಿಗಳನ್ನು ಬೇಟೆಯಾಡಲು ಬಳಸುವ ನಾಡ ಬಾಂಬ್ ರಸ್ತೆಯಲ್ಲಿ ಬಿದ್ದಿದ್ದು, ಅದರ ಮೇಲೆ ಕಾರಿನ ಟಯ‌ರ್ ಹತ್ತಿ ಸ್ಫೋಟ ಸಂಭವಿಸಿದೆ. ಜೊಯಿಡಾ...

Post
ಬಾಡಿಗೆಗೆ ಇಳಿಯುವ ವೈಟ್ ಬೋರ್ಡ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಿ- ಟ್ಯಾಕ್ಸಿ ಮಾಲೀಕರ ಸಂಘದ ಆಗ್ರಹ..!

ಬಾಡಿಗೆಗೆ ಇಳಿಯುವ ವೈಟ್ ಬೋರ್ಡ್ ಟ್ಯಾಕ್ಸಿಗಳ ವಿರುದ್ಧ ಕ್ರಮ ಕೈಗೊಳ್ಳಿ- ಟ್ಯಾಕ್ಸಿ ಮಾಲೀಕರ ಸಂಘದ ಆಗ್ರಹ..!

ಮುಂಡಗೋಡ: ಖಾಸಗಿ ಮಾಲೀಕತ್ವದ (ವೈಟ್ ಬೋರ್ಡ್) ಟ್ಯಾಕ್ಸಿ ವಾಹನಗಳನ್ನು ಬಾಡಿಗೆ ಆಧಾರದ ಮೇಲೆ ಉಪಯೋಗಿಸುತ್ತಿರುವ ಮಾಲೀಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಟ್ಯಾಕ್ಸಿ ಮಾಲೀಕರ ಸಂಘದ ಸದಸ್ಯ ತಹಶೀಲ್ದಾರ್ ಹಾಗೂ ಪೊಲೀಸ್ ಇಲಾಖೆಯ ಅಧಿಕಾರಿಗಳಿಗೆ ಮನವಿ ಅರ್ಪಿಸಿದ್ದಾರೆ. ಮುಂಡಗೋಡ ತಾಲೂಕಿನಲ್ಲಿ ಖಾಸಗೀ ಮಾಲೀಕತ್ವದ ಟ್ಯಾಕ್ಸಿ ವಾಹನಗಳನ್ನು ಬೇಕಾಬಿಟ್ಟಿ ದರಗಳಲ್ಲಿ ಬಾಡಿಗೆಗೆ ಬಿಡುತ್ತಿದ್ದಾರೆ. ಇದ್ರಿಂದ ನಮ್ಮ ಬದುಕೇ ಮೂರಾಬಟ್ಟೆಯಾಗ್ತಿದೆ. ನಾವು ಸರ್ಕಾರಕ್ಕೆ ಕಾಲ ಕಾಲಕ್ಕೆ ಟ್ಯಾಕ್ಸ್ ಕಟ್ಟಿ, ಬಾಡಿಗೆಗಾಗಿ ವಾಹನಗಳನ್ನು ಬಿಡುತ್ತಿದ್ದೇವೆ. ಅದ್ರಿಂದ ಬಂದ ಬಾಡಿಗೆಯಲ್ಲೇ...

Post
ನ್ಯಾಸರ್ಗಿ ಗೌಳಿ ದಡ್ಡಿ ಬಳಿ ಬೈಕ್ ಅಪಘಾತ ಹೊಸೂರಿನ ವ್ಯಕ್ತಿ ಸ್ಥಳದಲ್ಲೇ ಸಾವು..!

ನ್ಯಾಸರ್ಗಿ ಗೌಳಿ ದಡ್ಡಿ ಬಳಿ ಬೈಕ್ ಅಪಘಾತ ಹೊಸೂರಿನ ವ್ಯಕ್ತಿ ಸ್ಥಳದಲ್ಲೇ ಸಾವು..!

ಮುಂಡಗೋಡ ತಾಲೂಕಿನ ನ್ಯಾಸರ್ಗಿಯ ಗೌಳಿದಡ್ಡಿ ಬಳಿ ಬೈಕ್ ಅಪಘಾತವಾಗಿದೆ. ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಮೃತನು ಶಿಗ್ಗಾವಿ ತಾಲೂಕಿನ ಹೊಸುರು ಗ್ರಾಮದವನು ಅಂತಾ ತಿಳಿದು ಬಂದಿದೆ. ಹೊಸೂರಿನ ವೀರಭದ್ರಪ್ಪ ಶೇಖರಯ್ಯ ಹಿರೇಮಠ(48), ಎಂಬುವವರೇ ಮೃತಪಟ್ಟ ಬೈಕ್‌ ಸವಾರನಾಗಿದ್ದಾನೆ. ಈತ ಮುಂಡಗೋಡಿನಿಂದ ನ್ಯಾಸರ್ಗಿ ಮಾರ್ಗವಾಗಿ ಹೊಸೂರಿಗೆ ಬೈಕ್ ಮೂಲಕ ಹೊರಟಿದ್ದ. ಈ ವೇಳೆ ನ್ಯಾಸರ್ಗಿ ಸಮೀಪದ ಗೌಳಿದಡ್ಡಿಯ ರಸ್ತೆ ತಿರುವಿನಲ್ಲಿ ಅಪಘಾತವಾಗಿದೆ ಅನ್ನೊ ಮಾಹಿತಿ ತಿಳಿದುಬಂದಿದೆ. ತಡಸ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡದಿದೆ.

Post
ಕೊಪ್ಪದ ಕುಟ್ರಿಯವರ ಹುಡುಗ “ಅಭಿ” ಇನ್ನು ನೆನಪು ಮಾತ್ರ..! ಕ್ರೂರ ವಿಧಿಯೇ ಧಿಕ್ಕಾರವಿರಲಿ

ಕೊಪ್ಪದ ಕುಟ್ರಿಯವರ ಹುಡುಗ “ಅಭಿ” ಇನ್ನು ನೆನಪು ಮಾತ್ರ..! ಕ್ರೂರ ವಿಧಿಯೇ ಧಿಕ್ಕಾರವಿರಲಿ

ಮುಂಡಗೋಡ ತಾಲೂಕಿನ ಕೊಪ್ಪ ಗ್ರಾಮದ ಅಭಿಷೇಕ ಬಸವಂತಪ್ಪ ಕುಟ್ರಿ ಮೃತಪಟ್ಟಿದ್ದಾನೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅಭಿಷೇಕಙ್ನು ಹುಬ್ಬಳ್ಳಿಯ ಕಿಮ್ಸ್ ಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದ್ರೆ, ಇಂದು ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾನೆ. ಅಂದಹಾಗೆ, ಸದಾ ಹಸನ್ಮಖಿಯಾಗಿದ್ದ ಹುಡುಗ ಅಭಿಷೇಕ ಮುಂಡಗೋಡಿನ ಮಹಾರಾಜಾ ಮೊಬೈಲ್ಸ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ. ಕಳೆದ ಎರಡು ಮೂರು ದಿನಗಳಿಂದ ಕೊಂಚ ಜ್ವರದಿಂದ ಬಳಲುತ್ತಿದ್ದ ಅಭಿಷೇಕ ಗೆ ಹುಬ್ಬಳ್ಳಿ ಕೀಮ್ಸ್ ಗೆ ರವಾನಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೇ ಎರಡು ದಿನಗಳ ನಂತ್ರ ಇಂದು ರವಿವಾರ...

Post
ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ನಾಲ್ವರ ಬಂಧನ, ಮೂವರು ಎಸ್ಕೇಪ್..!?

ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ಪೊಲೀಸರ ದಾಳಿ, ನಾಲ್ವರ ಬಂಧನ, ಮೂವರು ಎಸ್ಕೇಪ್..!?

ಮುಂಡಗೋಡ ಪಿಎಸ್ ಐ ಪರಶುರಾಮ್ ಮತ್ತವರ ಟೀಂ ಮಿಂಚಿನ ಕಾರ್ಯಾಚರಣೆ ನಡೆಸಿದೆ. ಕಾತೂರು ಸಮೀಪ ಇಸ್ಪೀಟು ಅಡ್ಡೆಯ ಮೇಲೆ ದಾಳಿ ನಡೆಸಿ ಆಟದಲ್ಲಿ “ಬ್ಯುಸಿ” ಆಗಿದ್ದ ನಾಲ್ವರು ಆರೋಪಿಗಳನ್ನು ಅರೆಸ್ಟ್ ಮಾಡಿದ್ದಾರೆ. ಮತ್ತೆ ಮೂವರು ಪರಾರಿಯಾಗಿದ್ದಾರೆ ಅನ್ನೋ ಮಾಹಿತಿ ಪಬ್ಲಿಕ್ ಫಸ್ಟ್ ಗೆ ತಿಳಿದು ಬಂದಿದೆ. ಅಂದಹಾಗೆ, ತಾಲೂಕಿನ ಕಾತೂರು ಸಮೀಪ ಇಸ್ಪೀಟು ಆಟದಲ್ಲಿ ತೊಡಗಿದ್ದರು. ಈ ವೇಳೆ ದಾಳಿ ನಡೆಸಿರೋ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ. ಇನ್ನುಳಿದಂತೆ ಮೂವರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ‌. ಇನ್ನು ಆಟದಲ್ಲಿ...

Post
ಇಂದೂರು ಗ್ರಾಪಂ ನಲ್ಲಿ ಉದ್ಯೋಗ ಖಾತ್ರಿಯಲ್ಲಿ ಚೊಂಬಾಟ..! ತಾಲೂಕಿನಲ್ಲಿ ಅವನೊಬ್ಬ ನುಂಗಣ್ಣನಿಂದ ಇಡೀ ಯೋಜನೆಯೇ ಉಳ್ಳವರ ಪಾಲಾಗ್ತಿದೆಯಾ..?

ಇಂದೂರು ಗ್ರಾಪಂ ನಲ್ಲಿ ಉದ್ಯೋಗ ಖಾತ್ರಿಯಲ್ಲಿ ಚೊಂಬಾಟ..! ತಾಲೂಕಿನಲ್ಲಿ ಅವನೊಬ್ಬ ನುಂಗಣ್ಣನಿಂದ ಇಡೀ ಯೋಜನೆಯೇ ಉಳ್ಳವರ ಪಾಲಾಗ್ತಿದೆಯಾ..?

ಮುಂಡಗೋಡ ತಾಲೂಕಿನಲ್ಲಿ ಉದ್ಯೋಗ ಖಾತ್ರಿ ಯೋಜನೆ ಬಹುತೇಕ ಹಳ್ಳ ಹಿಡಿತಿದೆಯಾ..? ಅವನೊಬ್ಬ ಬಕಾಸುರ ಬಗಬಂಡಿಯಿಂದ ಬಡ ಕೂಲಿ ಕಾರ್ಮಿಕರಿಗೆ ಬದುಕಾಗಬೇಕಿದ್ದ ಉದ್ಯೋಗ ಖಾತ್ರಿ ಯೋಜನೆ, ಕೆಲ ಆಸೆ ಬುರುಕ ಗ್ರಾಮ ಪಂಚಾಯತಿ ಮೆಂಬರುಗಳಿಗೆ ರೊಕ್ಕ ಗಳಿಸುವ ಅಡ್ಡ ಕಸುಬು ಆಗ್ತಿದೆಯಾ..? ಇಂತಹದ್ದೊಂದು ಅನುಮಾನ ಇಂದೂರಿನ ಈ ಗ್ರಾಮ‌ ಪಂಚಾಯತಿ ಸದಸ್ಯನ ಮಾತುಗಳನ್ನು ಕೇಳಿದ್ರೆ ಎಂತವರಿಗೂ ಅರ್ಥವಾಗ್ತಿದೆ. ಅದು ಇಂದೂರು ಪಂಚಾಯತಿ..! ಯಸ್, ಇಂದೂರು ಗ್ರಾಮ ಪಂಚಾಯತಿ ತಾಲೂಕಿನಲ್ಲಿ ಇದುವರೆಗೂ ಒಂದಿಷ್ಟು ಮಾನ ಮರ್ಯಾದೆ ಅಂತಾ ಇಟ್ಕೊಂಡು ಹೆಸರುವಾಸಿಯಾಗಿತ್ತು....

Post
ಮುಂಡಗೋಡ ಪೊಲೀಸಪ್ಪನ ವಿರುದ್ಧ 420 ಕೇಸ್, ಆತ ಹಾಸನದ ಯುವತಿಗೆ ಹಾಕಿದ್ದು, 18 ಲಕ್ಷದ ನಾಮ..!

ಮುಂಡಗೋಡ ಪೊಲೀಸಪ್ಪನ ವಿರುದ್ಧ 420 ಕೇಸ್, ಆತ ಹಾಸನದ ಯುವತಿಗೆ ಹಾಕಿದ್ದು, 18 ಲಕ್ಷದ ನಾಮ..!

ಇದು ಮುಂಡಗೋಡ ಪೊಲೀಸಪ್ಪನ ಘನಂಧಾರಿ ಕೆಲಸ. ಯುವತಿಯೋರ್ವಳಿಗೆ ಅನಾಮತ್ತಾಗಿ ಲಕ್ಷ ಲಕ್ಷ ಹಣ ಮುಂಡಾಮೋಚಿದ ನಯವಂಚಕತನದ ಸ್ಟೋರಿ. ಈತನಿಗೆ ಈ ಹಿಂದೆಯೇ ಇಲ್ಲಿನ ಇಲಾಖೆಯ ಹಿರಿಯರು ಒಂದಿಷ್ಟು ಕಿವಿ ಹಿಂಡಿದ್ದಿದ್ರೆ ಬಹುಶಃ ಇವತ್ತು ಇಡೀ ಇಲಾಖೆಗೆ ಆಗಿರೋ ಮುಜುಗರ ಒಂದಿಷ್ಟು ತಪ್ಪುತ್ತಿತ್ತೋ ಏನೋ. ಆದ್ರೆ, ಯಾರಂದ್ರೆ ಯಾರೂ ಈತನ ಅಡ್ನಾಡಿ ಕೆಲಸಗಳ ವಿರುದ್ಧ ಧನಿ ಎತ್ತಲೇ ಇಲ್ಲ‌. ಹೀಗಾಗಿ ಇವತ್ತು ಅದೊಂದು ಅಮಾಯಕ ಹೆಣ್ಣು ಜೀವ ಮುಂಡಗೋಡ ಠಾಣೆಯ ಮೆಟ್ಟಿಲೇರಿ FIR ದಾಖಲಿಸಿದೆ. ತನಗೆ ಆಗಿರೋ ಅನ್ಯಾಯದ...

Post
ಭಟ್ಕಳದಲ್ಲಿ ಮತ್ತೋರ್ವ ಶಂಕಿತ ಉಗ್ರನಿಗಾಗಿ ATS ಅಧಿಕಾರಿಗಳಿಂದ ಶೋಧ, ಶಂಕಿತನ ಮನೆಗೆ ನೋಟೀಸ್..!

ಭಟ್ಕಳದಲ್ಲಿ ಮತ್ತೋರ್ವ ಶಂಕಿತ ಉಗ್ರನಿಗಾಗಿ ATS ಅಧಿಕಾರಿಗಳಿಂದ ಶೋಧ, ಶಂಕಿತನ ಮನೆಗೆ ನೋಟೀಸ್..!

ಭಟ್ಕಳ:ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ಮತ್ತೊಬ್ಬ ಶಂಕಿತ (Suspected Terrorist) ಮಹಾರಾಷ್ಟ್ರದ ಉಗ್ರ ನಿಗ್ರಹ ಪಡೆ (ಎಟಿಎಸ್) ತೀವ್ರ ಶೋಧ ನಡೆಸಿದ್ದು, ಶಂಕಿತ ಉಗ್ರನ ನಿವಾಸಕ್ಕೆ ATS ಅಧಿಕಾರಿಗಳು ನೋಟಿಸ್‌ ಅಂಟಿಸಿದ್ದು, ಶಂಕಿತನ ಬಂಧನಕ್ಕೆ ಉತ್ತರ ಕನ್ನಡ ಪೊಲೀಸರ ಸಹಕಾರ ಕೋರಿದ್ದಾರೆ. ಮಹಾರಾಷ್ಟ್ರದಲ್ಲಿ ಕೆಲ ವರ್ಷಗಳ ಹಿಂದೆ ಸಂಬಂಧಿಸಿದಂತೆ ತಲೆ ಮರೆಸಿಕೊಂಡಿರುವ ಭಟ್ಕಳ ಮೂಲದ ವ್ಯಕ್ತಿಯನ್ನು ಜೂನ್ 21ಕ್ಕೆ ಹಾಜರು ಪಡಿಸಲು ಪುಣೆ ಜಿಲ್ಲಾ ನ್ಯಾಯಾಲಯ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ಪುಣೆಯ ಅಧಿಕಾರಿಗಳ ತಂಡ ಭಟ್ಕಳದಲ್ಲಿ ತಲಾಶ್...

error: Content is protected !!