Home ಉತ್ತರ ಕನ್ನಡ

Category: ಉತ್ತರ ಕನ್ನಡ

Post
ಬಸಾಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ, ಆಸ್ಪತ್ರೆಗೆ ದಾಖಲು..!

ಬಸಾಪುರದಲ್ಲಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವಕ, ಆಸ್ಪತ್ರೆಗೆ ದಾಖಲು..!

ಮುಂಡಗೋಡ ತಾಲೂಕಿನ ಬಸಾಪುರ ಗ್ರಾಮದ ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ. ಬಸಾಪುರ ಗ್ರಾಮದ ಅರುಣ್ ಸಿಂಗ್ ರಜಪೂತ್ (24) ಎಂಬುವ ಯುವಕನೇ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಯಾವುದೋ ವಿಷಯವನ್ನು ಮನಸಿಗೆ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ ಅನ್ನೋ ಮಾಹಿತಿ ಲಭ್ಯವಾಗಿದೆ. ತಕ್ಷಣವೇ ಯುವಕನನ್ನು ಮುಂಡಗೋಡ ತಾಲೂಕಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗ್ತಿದೆ. ಮುಂಡಗೋಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Post
ಸಾಲಬಾಧೆ, ಇಂದೂರಿನಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡನಾ ಅನ್ನದಾತ..? ತನ್ನ ಗದ್ದೆಯಲ್ಲೇ ಸಾವಿಗೆ ಶರಣಾದ ರೈತ

ಸಾಲಬಾಧೆ, ಇಂದೂರಿನಲ್ಲಿ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡನಾ ಅನ್ನದಾತ..? ತನ್ನ ಗದ್ದೆಯಲ್ಲೇ ಸಾವಿಗೆ ಶರಣಾದ ರೈತ

ಮುಂಡಗೋಡ ತಾಲೂಕಿನ ಇಂದೂರಿನಲ್ಲಿ ಅನ್ನದಾತನೋರ್ವ ಕಳೆನಾಶಕ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ನಡೆದಿದೆ. ತೀವ್ರ ಬರದ ಹಿನ್ನೆಲೆಯಲ್ಲಿ ಬೋರವೆಲ್ ನಲ್ಲಿ ಅಂತರ್ಜಲ ಬತ್ತಿಹೋದ ಕಾರಣಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರೋ ಶಂಕೆ ವ್ಯಕ್ತವಾಗಿದೆ. ಇಂದೂರು ಗ್ರಾಮದ ಬಾಬಾಜಾನ್ ದಾವಲಸಾಬ್ ಹುಬ್ಬಳ್ಳಿ(65) ಎಂಬುವ ರೈತನೇ ಆತ್ಮಹತ್ಯೆ ಮಾಡಿಕೊಂಡಿದ್ದು, ಗದ್ದೆಯಲ್ಲೇ ಸಾವಿಗೆ ಶರಣಾಗಿದ್ದಾನೆ. ಅಂದಹಾಗೆ, ಎರಡು ಎಕರೆ ಜಮೀನು ಹೊಂದಿರೋ ರೈತನಿಗೆ ಸಹಕಾರಿ ಬ್ಯಾಂಕ್ ಸೇರಿದಂತೆ ಖಾಸಗಿಯಾಗಿಯೂ ಸಾಲ ಮಾಡಿಕೊಂಡಿದ್ದ. ಸುಮಾರು 4 ಲಕ್ಷ ರೂ. ಸಾಲ ಮಾಡಿಕೊಂಡಿದ್ದ ರೈತನಿಗೆ ತೀವ್ರ...

Post
ಹಾರವಳ್ಳಿ ಬಳಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾರು ಅಪಘಾತ, ಆಸ್ಪತ್ರೆಗೆ ದಾಖಲು..!

ಹಾರವಳ್ಳಿ ಬಳಿ ಮಾಜಿ ಶಾಸಕ ವಿ.ಎಸ್.ಪಾಟೀಲ್ ಕಾರು ಅಪಘಾತ, ಆಸ್ಪತ್ರೆಗೆ ದಾಖಲು..!

ಮುಂಡಗೋಡ: ತಾಲೂಕಿನ ಹಾರವಳ್ಳಿ‌‌ ಗ್ರಾಮದ ಹತ್ತಿರ ಮಾಜಿ ಶಾಸಕ‌ ವಿ ಎಸ್ ಪಾಟೀಲ ಕಾರು ನಿಯಂತ್ರಣ ತಪ್ಪಿ ವಿದ್ಯುತ್ ಕಂಬಕ್ಕೆ ಡಿಕ್ಕಿಯಾದ ಘಟನೆ ನಡೆದಿದೆ. ಬನವಾಸಿಯಿಂದ ಪಾಳಾ- ರಾಮಪೂರ ಮಾರ್ಗವಾಗಿ ತಮ್ಮ ಸ್ವಗ್ರಾಮ ಅಂದಲಗಿಗೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯಲ್ಲಿದ್ದ ವಿದ್ಯುತ್ ಕಂಬಕ್ಕೆ ಡಿಕ್ಕಿಯಾಗಿದೆ. ಇದರ ಪರಿಣಾಮ‌ ಚಾಲಕ ಆನಂದ ಆಲೂರನಿಗೆ ಕಣ್ಣಿಗೆ ಹಾಗೂ ಮಾಜಿ ಶಾಸಕ ವಿ ಎಸ್ ಪಾಟೀಲರಿಗೆ ಎದಗೆ ಪೆಟ್ಟು ಬಿದ್ದಿದೆ. ಅದೃಷ್ಟವಾಶತ್ ಕಾರಿನ ಏರ್ ಬ್ಯಾಗ್ ಓಪನ್...

Post
ಮಂಗನ‌ ಕಾಯಿಲೆಯಿಂದ ಮೃತಪಟ್ಟವರಿಗೆ ಅರಣ್ಯ ಇಲಾಖೆಯಿಂದ ಪರಿಹಾರಕ್ಕೆ ಚರ್ಚಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

ಮಂಗನ‌ ಕಾಯಿಲೆಯಿಂದ ಮೃತಪಟ್ಟವರಿಗೆ ಅರಣ್ಯ ಇಲಾಖೆಯಿಂದ ಪರಿಹಾರಕ್ಕೆ ಚರ್ಚಿಸಿದ್ದೇವೆ: ಸಿಎಂ ಸಿದ್ದರಾಮಯ್ಯ

ಶಿರಸಿ: ಮಂಗನ ಕಾಯಿಲೆಯಿಂದ ಮರಣ ಹೊಂದಿದವರಿಗೆ ಅರಣ್ಯ ಇಲಾಖೆ ವತಿಯಿಂದ ಪರಿಹಾರ ನೀಡುವ ಕುರಿತಂತೆ ಚರ್ಚೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಅವರು ಇಂದು ಶಿರಸಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದರು. ಖಾಸಗಿ ಸಂಸ್ಥೆಗಳು ನೀಡುವ FSL ವರದಿಯನ್ನು ಸರ್ಕಾರ ಒಪ್ಪುವುದಿಲ್ಲ, ಪೊಲೀಸ್ ಇಲಾಖೆ ನೀಡುವ ವರದಿಯೇ ಅಧಿಕೃತ ಎಂದರು. ರಾಜ್ಯದಲ್ಲಿ ಕುಡಿಯುವ ನೀರಿನ ಸಮಸ್ಯೆಗೆ ಅಧ್ಯತೆಯಲ್ಲಿ ಪರಿಹಾರ ನೀಡಲು ಕ್ರಮ ಕೈಗೊಳ್ಳಲಾಗಿದೆ. ಜಿಲ್ಲಾಧಿಕಾರಿಗಳ ಖಾತೆಯಲ್ಲಿ 854 ಕೋಟಿ ರೂ ಪಿಡಿ ಖಾತೆಯಲ್ಲಿದೆ. ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು...

Post
ಈಶ್ವರಪ್ಪನವ್ರೇ, ಗಾಜಿನ ಮನೇಲಿ ನಿಂತು, ಮತ್ತೊಬ್ಬರ ಮನೆ ಮೇಲೆ ಕಲ್ಲು ಎಸಿಬೇಡಿ- ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ಶಿವರಾಂ ಹೆಬ್ಬಾರ್ ಎಚ್ಚರಿಕೆ..!

ಈಶ್ವರಪ್ಪನವ್ರೇ, ಗಾಜಿನ ಮನೇಲಿ ನಿಂತು, ಮತ್ತೊಬ್ಬರ ಮನೆ ಮೇಲೆ ಕಲ್ಲು ಎಸಿಬೇಡಿ- ಬಿಜೆಪಿ ನಾಯಕ ಈಶ್ವರಪ್ಪ ವಿರುದ್ಧ ಶಿವರಾಂ ಹೆಬ್ಬಾರ್ ಎಚ್ಚರಿಕೆ..!

 ಶಿರಸಿ: ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ನಮಗೆ ಹಣ ಕೊಟ್ಟಿದೆ ಎಂದು ಮಾಜಿ ಸಚಿವ ಈಶ್ವರಪ್ಪ ಹೇಳಿಕೆಗೆ ಶಾಸಕ ಶಿವರಾಮ ಹೆಬ್ಬಾರ್ ಖಡಕ್ ತಿರುಗೇಟು ನೀಡಿದ್ದಾರೆ. ಶಿರಸಿಯಲ್ಲಿ ಮಾದ್ಯಮದವರೊಂದಿಗೆ ಮಾತನಾಡುತ್ತಿದ್ದ ಹೆಬ್ಬಾರ್, ಬೇರೆ ಬೇರೆ ರಾಜ್ಯದಲ್ಲಿ ಬಿಜೆಪಿಯವರೆ ಕಾಂಗ್ರೆಸ್ ಶಾಸಕರನ್ನ ಖರೀದಿ ಮಾಡಿದ್ದಾರಲ್ಲ ಅವರಿಗೆಲ್ಲಾ ಎಷ್ಟೆಷ್ಟು ಕೋಟಿ ಹಣ ನೀಡಿದ್ದಾರೆಂಬುದನ್ನು ಈಶ್ವರಪ್ಪ ಬಹಿರಂಗ ಪಡಿಸಲಿ ಅಂತಾ ತಿರುಗೇಟು ನೀಡಿದ್ದಾರೆ. ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ಮಾಧ್ಯಮದವರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಶಿವರಾಮ ಹೆಬ್ಬಾರ್, ಉತ್ತರ ಪ್ರದೇಶ ಹಾಗೂ...

Post
ಮುಂಡಗೋಡ ತಾಲೂಕಿನಲ್ಲಿ ಮಂಗನ ಕಾಯಿಲೆ ಕಟ್ಟೇಚ್ಚರ, ಜಾಗ್ರತೆ ವಹಿಸುವಂತೆ ವೈದ್ಯಾಧಿಕಾರಿಗಳ ಪ್ರಕಟಣೆ..!

ಮುಂಡಗೋಡ ತಾಲೂಕಿನಲ್ಲಿ ಮಂಗನ ಕಾಯಿಲೆ ಕಟ್ಟೇಚ್ಚರ, ಜಾಗ್ರತೆ ವಹಿಸುವಂತೆ ವೈದ್ಯಾಧಿಕಾರಿಗಳ ಪ್ರಕಟಣೆ..!

ಮುಂಡಗೋಡ: ಅಕ್ಕ ಪಕ್ಕದ ತಾಲೂಕುಗಳಲ್ಲಿ ಮಂಗನ ಕಾಯಿಲೆ ಪ್ರಕರಣಗಳು ವರದಿಯಾಗುತ್ತಿದ್ದು ಜನರು ಜಾಗೃತಿಯಿಂದ ವಹಿಸುವಂತೆ ತಾಲೂಕಾಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ.ನರೇಂದ್ರ ಪವಾರ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಸೋಂಕಿತ ಉಣ್ಣೆಗಳು ಕಚ್ಚುವುದರಿಂದ ಮನುಷ್ಯರಿಗೆ ಮಂಗನ ಕಾಯಿಲೆ ಬರುತ್ತದೆ. ಇದು ಮನುಷ್ಯರಿಂದ ನೇರವಾಗಿ ಮನುಷ್ಯರಿಗೆ ಹರಡುವುದಿಲ್ಲ. ಈ ವೈರಲ್ ಜ್ವರವನ್ನು ಸೂಕ್ತ ಚಿಕಿತ್ಸೆ ಮೂಲಕ ಗುಣಪಡಿಸಬಹುದು ಜನರು ಅನವಶ್ಯಕವಾಗಿ ಕಾಡಿಗೆ ಹೋಗಬಾರದು. ಕಾಡಿನಿಂದ ಒಣ ದರಕು.ತರಗೆಲೆ ಮನೆಗೆ,ತೋಟಕ್ಕೆ ತರಬಾರದು.ಕಾಯಿಲೆಯಿಂದ ಸತ್ತ ಮಂಗಗಳಲ್ಲಿ ಇರುವ ಉಣ್ಣೆಗಳು ತರಗೆಲೆಗಳಲ್ಲಿ ಇರುತ್ತವೆ. ಮಂಗನ ಕಾಯಲೆ...

Post
ಬೆಂಗಳೂರು “ಕೇಫೆ” ಬಾಂಬ್ ಸ್ಫೋಟ ಕೇಸ್ ಬಿಜೆಪಿಯದ್ದೇ ಚುನಾವಣಾ ಸಂಚು: ಮುಂಡಗೋಡಿನಲ್ಲಿ ಸಚಿವ ಮಂಕಾಳು ವೈದ್ಯ ಆರೋಪ..!

ಬೆಂಗಳೂರು “ಕೇಫೆ” ಬಾಂಬ್ ಸ್ಫೋಟ ಕೇಸ್ ಬಿಜೆಪಿಯದ್ದೇ ಚುನಾವಣಾ ಸಂಚು: ಮುಂಡಗೋಡಿನಲ್ಲಿ ಸಚಿವ ಮಂಕಾಳು ವೈದ್ಯ ಆರೋಪ..!

 ಬೆಂಗಳೂರು ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಮಂಕಾಳು ವೈದ್ಯ ಗಂಭೀರ ಆರೋಪ ಮಾಡಿದ್ದಾರೆ. ಇದು ಚುನಾವಣೆಗಾಗಿ ಬಿಜೆಪಿಯವರು ಮಾಡಿರೋ ಸಂಚು ಅನ್ನೊ ವ್ಯಾಕ್ಯಾನ ಮಾಡಿರೋ ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು, ಬಿಜೆಪಿಯವರು ಚುನಾವಣೆಗಾಗಿ ಏನ್ ಬೇಕಾದ್ರೂ ಮಾಡ್ತಾರೆ ಅಂತಾ ಆರೋಪಿಸಿದ್ರು. ಅವರು, ಮುಂಡಗೋಡಿನ ಪ್ರವಾಸಿ ಮಂದಿರದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಿದ್ದರು, ಚುನಾವಣೆ ಹೊತ್ತಲ್ಲಿ ಮತದಾರರ ಗಮನ ಸೆಳೆಯಲು ಯಾರು, ಯಾವ ಪಕ್ಷದವರು ಏನ್ ಮಾಡ್ತಾರೆ ಅಂತಾ ನಿಮಗೂ ಗೊತ್ತಿದೆ, ಎಲ್ಲರಿಗೂ ಗೊತ್ತಿದೆ. ಈ ಕೃತ್ಯ...

Post
ಮುಂಡಗೋಡ ಬ್ಲಾಕ್ ಕಾಂಗ್ರೆಸ್ ನಲ್ಲಿ ಕೋಲಾಹಲ, ಬ್ಲಾಕ್ “ಕೈ” ಅಧ್ಯಕ್ಷರ ಬದಲಾವಣೆಗಾಗಿ ಕಾರ್ಯಕರ್ತರ ಮನವಿ..!

ಮುಂಡಗೋಡ ಬ್ಲಾಕ್ ಕಾಂಗ್ರೆಸ್ ನಲ್ಲಿ ಕೋಲಾಹಲ, ಬ್ಲಾಕ್ “ಕೈ” ಅಧ್ಯಕ್ಷರ ಬದಲಾವಣೆಗಾಗಿ ಕಾರ್ಯಕರ್ತರ ಮನವಿ..!

ಮುಂಡಗೋಡ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಬದಲಾವಣೆ ಮಾಡುವಂತೆ ಒತ್ತಾಯಿಸಿ ಖುದ್ದು ಕಾಂಗ್ರೆಸ್ ಕಾರ್ಯಕರ್ತರೇ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಅವರಿಗೆ ಅಲವತ್ತುಕೊಂಡು ಮನವಿ ಅರ್ಪಿಸಿದ ಘಟನೆ ನಡೆದಿದೆ. ಸರ್ವಾಧಿಕಾರಿ ಅಧ್ಯಕ್ಷರಾ..? ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಕಾರ್ಯ ವೈಖರಿ ಕೆಲವು ಕಾರ್ಯಕರ್ತರಿಗೆ ಹಾಗೂ ಮುಖಂಡರಿಗೆ ಬೇಸರ ಮೂಡಿಸಿದ್ದು ಸರ್ವಾಧಿಕಾರಿ ಧೋರಣೆ ತೋರುತ್ತಿದ್ದಾರೆ. ಸರ್ವಾಧಿಕಾರಿ ಧೋರಣೆಯಿಂದ ಕಾರ್ಯಕರ್ತರು ಕಂಗಾಲಾಗಿದ್ದು ಲೋಕಸಭಾ ಚುನಾವಣೆಗೂ ಮುನ್ನವೆ ಈಗೀನ ಅಧ್ಯಕ್ಷ ಜ್ಞಾನದೇವ ಗುಡಿಹಾಳ ಅವರನ್ನು ಬದಲಾವಣೆ ಮಾಡಬೇಕು ಆ ಹುದ್ದೆಗೆ ಹೊಸ...

Post
ತಾಲೂಕಿನ ಅಧಿಕಾರಿಗಳ ಕಿವಿ ಹಿಂಡಿದ ಉಸ್ತುವಾರಿ ಮಂತ್ರಿ, ಹಾರಿಕೆ ಉತ್ತರ ನೀಡಿದ್ರೆ ನೆಟ್ಟಗಿರಲ್ಲ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಕಾಳು ವೈದ್ಯ ಖಡಕ್ ಎಚ್ಚರಿಕೆ..!

ತಾಲೂಕಿನ ಅಧಿಕಾರಿಗಳ ಕಿವಿ ಹಿಂಡಿದ ಉಸ್ತುವಾರಿ ಮಂತ್ರಿ, ಹಾರಿಕೆ ಉತ್ತರ ನೀಡಿದ್ರೆ ನೆಟ್ಟಗಿರಲ್ಲ, ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಂಕಾಳು ವೈದ್ಯ ಖಡಕ್ ಎಚ್ಚರಿಕೆ..!

ಮುಂಡಗೋಡ: ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಮುಂಡಗೋಡ ತಹಶೀಲ್ದಾರ್ ಕಚೇರಿಯಲ್ಲಿ ಪ್ರಗತಿ ಪರಿಶೀಲನಾ ಸಭೆ ನಡೆಸಿದ್ರು‌. ಸಭೆಯಲ್ಲಿ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳೊಂದಿಗೆ ಅಭಿವೃದ್ಧಿ ವಿಷಯಗಳ ಕುರಿತು ಚರ್ಚಿಸಿದ ಸಚಿವ್ರು, ಕೆಲವು ಅಧಿಕಾರಿಗಳ ಕಿವಿ ಹಿಂಡಿದ್ರು‌. ಗೃಹಲಕ್ಷ್ಮೀ ಯೋಜನೆ ಬಿಸಿ..! ಸಭೆಯಲ್ಲಿ ಬಹುತೇಕ ಗ್ಯಾರಂಟಿ ಯೋಜನೆಗಳ ಅನುಷ್ಟಾನಗಳ‌ ಕುರಿತು ಅಧಿಕಾರಿಗಳೊಂದಿಗೆ ಮಾಹಿತಿ ಪಡೆದ ಸಚಿವ ಮಂಕಾಳು ವೈದ್ಯ, ಅನುಷ್ಟಾನದಲ್ಲಿ ಕೊಂಚವಾದ್ರೂ ಯಡವಟ್ಟು ಆಗಿದ್ರೆ ಸಹಿಸಲ್ಲ ಅನ್ನೋ ಸ್ಪಷ್ಟ ಸಂದೇಶ ರವಾನಿಸಿದ್ರು. ಫಲಾನುಭವಿಗಳಿಗೆ ಗ್ಯಾರಂಟಿ...

Post
ಮದ್ಯಾನವಾದ್ರೂ ಮುಂಡಗೋಡಿಗೆ ಬಾರದ ಉಸ್ತುವಾರಿ ಸಚಿವ ಮಂಕಾಳು ವೈದ್ಯ..! ಅಧಿಕಾರಿಗಳು, ಕಾರ್ಯಕರ್ತರು ಸಚಿವರಿಗಾಗಿ ಕಾದು ಕಾದು ಸುಸ್ತು..!

ಮದ್ಯಾನವಾದ್ರೂ ಮುಂಡಗೋಡಿಗೆ ಬಾರದ ಉಸ್ತುವಾರಿ ಸಚಿವ ಮಂಕಾಳು ವೈದ್ಯ..! ಅಧಿಕಾರಿಗಳು, ಕಾರ್ಯಕರ್ತರು ಸಚಿವರಿಗಾಗಿ ಕಾದು ಕಾದು ಸುಸ್ತು..!

ಮುಂಡಗೋಡ: ಉಸ್ತುವಾರಿ ಸಚಿವ ಮಂಕಾಳು ವೈದ್ಯರು ಇವತ್ತು ಮುಂಡಗೋಡಿಗೆ ಬರುವ ಕಾರ್ಯಕ್ರಮವಿತ್ತು. ತಾಲೂಕಿನ ಎಲ್ಲಾ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ಹಮ್ಮಿಕೊಂಡಿದ್ರು. ಅಸಲು, ಸಭೆ ಬೆಳಿಗ್ಗೆ 10 ಗಂಟೆಗೆ ಏರ್ಪಾಟಾಗಿತ್ತು. ಬಹುತೇಕ ತಾಲೂಕಿನ ಎಲ್ಲಾ ಇಲಾಖೆಗಳ ಅಧಿಕಾರಿಗಳು ಸಚಿವರ ಆಗಮನಕ್ಕಾಗಿ ಕಾದು ಕುಳಿತಿದ್ದಾರೆ. ಆದ್ರೆ ಉಸ್ತುವಾರಿ ಮಂತ್ರಿಗಳು ಮಾತ್ರ 10 ಗಂಟೆ ಹೋಗಲಿ, ಮದ್ಯಾನವಾದ್ರೂ ಪತ್ತೆಯಿಲ್ಲ. ಹೀಗಾಗಿ, ಅಧಿಕಾರಿಗಳು ತಮ್ಮೇಲ್ಲ ಕೆಲಸ ಕಾರ್ಯಗಳನ್ನೂ ಬದಿಗಿಟ್ಟು ಸಚಿವರನ್ನು ಕಾಣಲು ಇನ್ನೂ ಕಾಯುತ್ತಿದ್ದಾರೆ. ಕಾರ್ಯಕರ್ತರೂ ಕಂಗಾಲು..! ಇನ್ನು, ಉಸ್ತುವಾರಿ ಸಚಿವರ...

error: Content is protected !!