ಹಾನಗಲ್- ಹಿರಿಯ ಬಿಜೆಪಿ ಶಾಸಕ ಮಾಜಿ ಸಚಿವ ಸಿ.ಎಂ.ಉದಾಸಿ(86) ವಿಧಿವಶವಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯದಲ್ಲಿ ಉದಾಸಿ ಕೊನೆಯುಸಿರೆಳೆದಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಉದಾಸಿಯವರನ್ನು ಚಿಕಿತ್ಸೆಗಾಗಿ ನಾರಾಯಣ ಹೃದಯಾಲಯದಲ್ಲಿ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ಇಂದು ಕೊನೆಯುಸಿರೆಳೆದಿದ್ದಾರೆ. ಹಾನಗಲ್ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾರ ಅಂತಲೇ ಖ್ಯಾತಿ ಪಡೆದಿದ್ದ ಸಿ.ಎಂ.ಉದಾಸಿಯ ಅಗಲಿಕೆಗೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಪಬ್ಲಿಕ್ ಫಸ್ಟ್ ನ್ಯೂಸ್ TOP 5 ನ್ಯೂಸ್ ವೀಕ್ಷಿಸಲು ಈ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. https://youtu.be/712rEAKhVeE
Top Stories
NMD ಜಮೀರ್ ಬಾಯ್ ಸೇಫ್..! ಗದಗ ರಿಂಗ್ ರೋಡಲ್ಲಿ ಬಿಟ್ಟು ಹೋದ ಕಿಡ್ನ್ಯಾಪರ್ಸ್..! ಐವರು ಆರೋಪಿಗಳ ಹೆಡೆಮುರಿ ಕಟ್ಟಿದ್ರಾ ಮುಂಡಗೋಡ ಪೊಲೀಸ್ರು..?
ಮುಂಡಗೋಡಿನ NMD ಗ್ರೂಪ್ ಮಾಲೀಕನ ಮೇಲೆ ದುಷ್ಕರ್ಮಿಗಳ ಅಟ್ಯಾಕ್
ಟಿಬೇಟಿಯನ್ ಕಾಲೋನಿ ಬಳಿ ಬೈಕ್ ಗಳ ನಡುವೆ ಡಿಕ್ಕಿ, ಓರ್ವ ಸವಾರ ಸ್ಥಳದಲ್ಲೇ ಸಾವು, ಮತ್ತೋರ್ವ ಗಂಭೀರ..!
ಮುಂಡಗೋಡಿನ ಮುಲ್ಲಾ ಓಣಿಯ ಬಾವಿಯಲ್ಲಿ ವ್ಯಕ್ತಿಯ ಶವ ಪತ್ತೆ..! ಆತ್ಮಹತ್ಯೆನಾ..?
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಸಿಂಗನಳ್ಳಿಯಲ್ಲಿ ಅಡಿಕೆ ಕಳ್ಳರ ಹಾವಳಿ, ಮನೆಯ ಪಕ್ಕದಲ್ಲೇ ಒಣ ಹಾಕಿದ್ದ ಅಡಿಕೆ ಕದ್ದೊಯ್ದ ಕಳ್ಳರು..!
Author: publicfirstnewz (Santosh Shetteppanavar)
ಇಂದೂರಿನಲ್ಲಿ ಮನೆಗೆ ಆಕಸ್ಮಿಕ ಬೆಂಕಿ: ಸುಟ್ಟು ಕರಕಲಾದ ಮನೆ, ಲಕ್ಷಾಂತರ ಹಾನಿ..!
ಮುಂಡಗೋಡ: ತಾಲೂಕಿನ ಇಂದೂರು ಗ್ರಾಮದಲ್ಲಿ ಮನೆಗೆ ಆಕಸ್ಮಿಕ ಬೆಂಕಿ ತಗುಲಿ ಇಡೀ ಮನೆಯೇ ಭಸ್ಮವಾಗಿ ಲಕ್ಷಾಂತರ ರೂ. ಹಾನಿಯಾದ ಘಟನೆ ಸೋಮವಾರ ತಡರಾತ್ರಿ ನಡೆದಿದೆ. ಇಂದೂರು ಗ್ರಾಮದ ದ್ಯಾಮವ್ವ ದೇವಿ ದೇವಸ್ಥಾನದ ಹಿಂದುಗಡೆ ಇರುವ ಗೂಡುಮನಿ ಅತ್ತಾರ್ ಎಂಬುವ ಮಹಿಳೆಗೆ ಸೇರಿದ ಮನೆ ಬೆಂಕಿಗೆ ಆಹುತಿಯಾಗಿದ್ದು ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯವಾಗಿಲ್ಲ. ವಿದ್ಯುತ್ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ತಗುಲಿದೆ ಎನ್ನಾಲಾಗಿದ್ದು, ಬೆಂಕಿಯ ಕೆನ್ನಾಲಿಗೆ ಕೆಲವೇ ಹೊತ್ತಲ್ಲಿ ಇಡೀ ಮನೆಗೆ ಆವರಿಸಿದೆ. ಪಬ್ಲಿಕ್ ಫಸ್ಟ್ ನ್ಯೂಸ್ TOP 5...
ದೇವರಹಿಪ್ಪರಗಿ ತಾಲೂಕಿನಲ್ಲಿ ಬಿತ್ತನೆ ಬೀಜ, ಗೊಬ್ಬರದ ಕೊರತೆಯಿಲ್ಲ: ಶಾಸಕ ಸೋಮನಗೌಡ ಪಾಟೀಲ್
ದೇವರಹಿಪ್ಪರಗಿ: ತಾಲೂಕಿನಲ್ಲಿ ರೈತರಿಗೆ ಬಿತ್ತನೆ ಬೀಜ, ರಸಗೊಬ್ಬರಗಳ ಕೊರತೆಯಾಗದಂತೆ ಕ್ರಮ ವಹಿಸಿರುವುದಾಗಿ ಶಾಸಕ ಸೋಮನಗೌಡ ಪಾಟೀಲ್ ಸಾಸನೂರ್ ಹೇಳಿದ್ರು. ದೇವರಹಿಪ್ಪರಗಿ ರೈತ ಸಂಪರ್ಕ ಕೇಂದ್ರದಲ್ಲಿ ರೈತರಿಗೆ ಬಿತ್ತನೆ ಬೀಜ ವಿತರಿಸುವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇವರಹಿಪ್ಪರಗಿ ತಾಲೂಕಿನಲ್ಲಿ ಈ ವರ್ಷ ಉತ್ತಮ ಮಳೆಯಾಗುತ್ತಿದ್ದು ರೈತರಿಗೆ ಬಿತ್ತನೆ ಬೀಜ ಕೊರತೆಯಾಗದಂತೆ ಮುಂಜಾಗೃತಾ ಕ್ರಮ ಕೈಗೊಳ್ಳಲಾಗಿದೆ. ದಾಸ್ತಾನು ಮಾಡಲು ಕೃಷಿ ಇಲಾಖೆ ಕ್ರಮ ಕೈಗೊಂಡಿದ್ದು ರೈತರು ಬಿತ್ತನೆ ಬೀಜಗಳು ದೊರಕುವ ಬಗ್ಗೆ ಆತಂಕ ಪಡುವ ಅವಶ್ಯಕತೆ ಇಲ್ಲ. ಸಮಯಕ್ಕೆ...
“ನಮ್ಮ ಊರಾಗ್ ಇನ್ ಸೆರೇ ಮಾರಂಗಿಲ್ಲ” ಕಾಳಗಿನಕೊಪ್ಪ ಮಹಿಳೆಯರ ಖಡಕ್ ಎಚ್ಚರಿಕೆ..!
ಮುಂಡಗೋಡ: ತಾಲೂಕಿನ ಕಾಳಗಿನಕೊಪ್ಪದ ಮಹಿಳೆಯರು ಸಿಡಿದು ನಿಂತಿದ್ದಾರೆ. ತಮ್ಮ ಗ್ರಾಮದಲ್ಲಿ ಯುವಕರನ್ನ ದಾರಿ ತಪ್ಪಿಸ್ತಿರೋ ಸರಾಯಿ, ಗುಟ್ಕಾ, ಸಿಗರೇಟ್ ಮಾರಾಟ ಮಾಡುವ ಅಂಗಡಿಗಳ ಮೇಲೆ ದಾಳಿ ಮಾಡಿದ್ದಾರೆ. ಹೌದು, ಮುಂಡಗೋಡ ತಾಲೂಕಿನ ಕಾಳಗಿನ ಕೊಪ್ಪದ ಮಹಿಳೆಯರಿಗೆ ಇವತ್ತು ಆಕ್ರೋಶದ ಕಟ್ಟೆಯೊಡೆದಿದೆ. ನಿತ್ಯವೂ ಕುಡಿದು ನಶೆಯಲ್ಲಿ ತೇಲಾಡುವ, ಗುಟ್ಕಾ ತಿಂದು ಕಂಡ ಕಂಡಲ್ಲೆ ಗಲೀಜು ಮಾಡುವ, ಸಿಗರೇಟು ಸೇದುತ್ತು ಮಸ್ತಿ ಮಾಡುವ ಯುವಕರನ್ನು ಹಾಗೂ ತಮ್ಮ ಮನೆ ಯುವ ಹುಡುಗರನ್ನು ಹೇಗಾದ್ರೂ ಸರಿ ದಾರಿಗೆ ತರಲೇ ಬೇಕು ಅಂತಾ...
KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ: ಬೆಳೆಸಾಲ ಪಡೆಯಲು ಹರಸಾಹಸ..!
ಮುಂಡಗೋಡ: ಪಟ್ಟಣದ KDCC ಬ್ಯಾಂಕ್ ಎದುರು ಅನ್ನದಾತರ ಪರದಾಟ ಇನ್ನೂ ನಿಂತಿಲ್ಲ. ತಮ್ಮ ಬೆಳೆಸಾಲದ ಹಣಕ್ಕಾಗಿ ದಿನವಿಡೀ ಬಿಸಿಲು, ಮಳೆಯಲ್ಲೇ ಕಾಯಬೇಕಾದ ದುಸ್ತಿತಿ ತಪ್ಪಿಲ್ಲ.. ಬ್ಯಾಂಕ್ ಎದುರು ಅರ್ಧ ಕಿಲೋ ಮೀಟರ್ ವರೆಗೂ ಸರತಿ ಸಾಲಲ್ಲಿ ನಿಂತು ಬಸವಳಿಯುತ್ತಿರೋ ಅನ್ನದಾತರಿಗೆ ಸೂಕ್ತ ವ್ಯವಸ್ಥೆ ಕಲ್ಪಿಸುವ ಜವಾಬ್ದಾರಿ ಯಾರೂ ತೋರುತ್ತಿಲ್ಲ. ಈ ಸುದ್ದಿಯ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. ಹೌದು, ಮುಂಡಗೋಡ ತಾಲೂಕಿನ ರೈತರಿಗೆ ಸಿಗಬೇಕಾದ ಬೆಳೆಸಾಲಕ್ಕೆ ಅನ್ನದಾತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ....
ಮುಂಡಗೋಡಿನಲ್ಲಿ ಇಂದಿನಿಂದ 4 ನೇ ಹಂತದ ಲಾಕ್ ಡೌನ್: ಅಗತ್ಯ ವಸ್ತುಗಳ ಖರೀಧಿಗೆ ಮುಗಿಬಿದ್ದ ಜನ..!
ಮುಂಡಗೋಡ-ಪಟ್ಟಣದಲ್ಲಿ ನಾಲ್ಕನೇ ಹಂತದ ಲಾಕ್ ಡೌನ್ ಇಂದಿನಿಂದ ಪ್ರಾರಂಭವಾಗಿದೆ. ನಿನ್ನೆಯಷ್ಟೇ ಉತ್ತರ ಕನ್ನಡ ಜಿಲ್ಲಾಧಿಕಾರಿ ಪರಿಷ್ಕೃತ ಆದೇಶ ಹೊರಡಿಸಿದ್ದಾರ. ಈ ಹಿನ್ನೆಲೆಯಲ್ಲಿ ಇಂದಿನಿಂದ ಸೋಮವಾರ, ಮಂಗಳವಾರ, ಬುಧವಾರ ಹಾಗೂ ಗುರುವಾರ ಹೀಗೆ ನಾಲ್ಕು ದಿನಗಳ ಕಾಲ, ಬೆಳಿಗ್ಗೆ 8 ಗಂಟೆಯಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ನೀಡಲಾಗಿದೆ. ಹೀಗಾಗಿ ಇಂದು ಮುಂಡಗೋಡ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀಧಿಗೆ ಜನ ಮುಗಿಬಿದ್ದಿದ್ರು. ಇಲ್ಲಿನ ದಿನಸಿ ಅಂಗಡಿಗಳ ಎದುರು ಜನ ಜಂಗುಳಿಯೇ ಸೇರಿತ್ತು. ಇನ್ನು ಅನಗತ್ಯ ತಿರುಗಾಡುವ...
ಮುಂಡಗೋಡಿನಲ್ಲಿ ಛತ್ರಿ, ರೇನ್ ಕೋಟ್ ಮಾರಾಟಕ್ಕೆ ಅನುಮತಿ: ಪಪಂ ನಿಂದ ಧ್ವನಿವರ್ದಕದ ಮೂಲಕ ಸೂಚನೆ..!
ಮುಂಡಗೋಡ: ಪಟ್ಟಣದಲ್ಲಿ ಮಳೆಗಾಲಕ್ಕೆ ಅವಶ್ಯಕವಾಗಿರೋ ಛತ್ರಿ, ರೇನ್ ಕೋಟ್ ಸೇರಿದಂತೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ಕಲ್ಪಿಸಲಾಗಿದ್ದು ಪಟ್ಟಣ ಪಂಚಾಯತ ಈ ಕುರಿತು ಧ್ವನಿ ವರ್ಧಕದ ಮೂಲಕ ಪಟ್ಟಣದಲ್ಲಿ ಸಾರ್ವಜನಿಕರಿಗೆ ಮಾಹಿತಿ ನೀಡುತ್ತಿದೆ. ಛತ್ರಿ ರೇನ್ ಕೋಟ್ ಸೇರಿದಂತೆ ಮಳೆಗಾಲಕ್ಕೆ ಉಪಯೋಗಿಸುವ ಪಾದರಕ್ಷೆಗಳ ಮಾರಾಟಗಾರರು ತಮ್ಮ ಅಂಗಡಿಗಳಲ್ಲೆ ಬೆಳಿಗ್ಗೆ 8 ರಿಂದ 12 ಗಂಟೆಯವರೆಗೆ ಸಾಮಾಜಿಕ ಅಂತರ ಕಾಯ್ದುಕೊಂಡು ಮಾರಾಟ ಮಾಡಲು ಅನುಮತಿ ನೀಡಲಾಗಿದೆ.
ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ TOP 5 ನ್ಯೂಸ್
ಪಬ್ಲಿಕ್ ಫಸ್ಟ್ ನ್ಯೂಸ್ ನ ಇವತ್ತಿನ ಟಾಪ್ 5 ನ್ಯೂಸ್ ನೋಡಲು ಈ ಕೆಳಗಿನ ಯೂಟ್ಯೂಬ್ ಲಿಂಕ್ ಕ್ಲಿಕ್ ಮಾಡಿ.. Subscribe ಮಾಡಿ.. https://youtu.be/CJbeBeJyGuk
ನಾಯಕತ್ವ ಬದಲಾವಣೆ ಪ್ರಶ್ನೆಯೇ ಇಲ್ಲ: ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ
ಹುಬ್ಬಳ್ಳಿ: ಹೈಕಮಾಂಡ್ ಸೂಚಿಸಿದ್ರೆ ರಾಜೀನಾಮೆ ಕೊಡಲು ಸಿದ್ದ ಅಂತಾ ಸಿಎಂ ಯಡಿಯೂರಪ್ಪ ಹೇಳಿಕೆ ನೀಡಿದ ಹಿನ್ನೆಲೆಯಲ್ಲಿ, ಹುಬ್ಬಳ್ಳಿಯಲ್ಲಿ ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಪ್ರತಿಕ್ರಿಯಿಸಿದ್ದಾರೆ. ಕೇಂದ್ರ ಸಚಿವರು ಸಿಎಂ ರಾಜೀನಾಮೆ ಮಾತಿಗೆ ಹೇಳಿದ್ದಾದ್ರೂ ಏನು..? ತಿಳಿಬೇಕಾ ಈ ಕೆಳಗಿನ ಯೂಟ್ಯೂಬ್ ಲಿಂಕ್ ಗೆ ಕ್ಲಿಕ್ ಮಾಡಿ.. ಇತ್ತೀಚೆಗೆ ನಾಯಕತ್ವ ಬದಲಾವಣೆ ಬಗ್ಗೆ ಮಾಧ್ಯಮಗಳಲ್ಲಿ ಪದೇ ಪದೇ ಚರ್ಚೆ ಆಗ್ತಿದೆ, ಪದೇ ಪದೇ ಚರ್ಚೆಗೆ ಬಂದ ಹಿನ್ನೆಲೆಯಲ್ಲಿ ಸಿಎಂ ಈ ರೀತಿ ಹೇಳಿರಬಹುದು. ಕೋವಿಡ್ ಸಮಯದಲ್ಲಿ ಸಿಎಂ ಉತ್ತಮ...
ನಂದಿಕಟ್ಟಾ ಗ್ರಾಮದ ಕೊರೋನಾ ಸೋಂಕು ಪೀಡಿತರ ಕುಟುಂಬಗಳಿಗೆ ದಿನಸಿ ಕಿಟ್..!
ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಪೀಡಿತರ ಕುಟುಂಬಗಳಿಗೆ, ಗ್ರಾಮ ಪಂಚಾಯತಿ ಸದಸ್ಯರು ಆಹಾರದ ಕಿಟ್ ವಿತರಿಸಿದ್ರು. ಕೊರೋನಾ ಎರಡನೇ ಅಲೆಯ ಪರಿಣಾಮ ಲಾಕ್ ಡೌನ್ ಜಾರಿಯಾದ ಹಿನ್ನಲೆಯಲ್ಲಿ ನಂದಿಕಟ್ಟಾ ಗ್ರಾಮದ ಬಡ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಅದ್ರಲ್ಲೂ ಕೊರೋನಾ ಪಾಸಿಟಿವ್ ದೃಢಪಟ್ಟ ಕೆಲವು ಕುಟುಂಬಗಳ ಪಾಡು ಹೇಳತೀರದ್ದಾಗಿದೆ. ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯ ಸಂತೋಷ ಭೋಸ್ಲೆ ಸೇರಿದಂತೆ ಹಲವು ಸದಸ್ಯರು ಅಂತಹ ಬಡ ಕುಟುಂಬಗಳಿಗೆ ಆಹಾರದ ದಿನಸಿ ಕಿಟ್ ವಿತರಿಸಿದ್ದಾರೆ.