ನಂದಿಕಟ್ಟಾ ಗ್ರಾಮದ ಕೊರೋನಾ ಸೋಂಕು ಪೀಡಿತರ ಕುಟುಂಬಗಳಿಗೆ ದಿನಸಿ ಕಿಟ್..!

ಮುಂಡಗೋಡ:ತಾಲೂಕಿನ ನಂದಿಕಟ್ಟಾ ಗ್ರಾಮದಲ್ಲಿ ಕೊರೋನಾ ಪಾಸಿಟಿವ್ ಪೀಡಿತರ ಕುಟುಂಬಗಳಿಗೆ, ಗ್ರಾಮ ಪಂಚಾಯತಿ ಸದಸ್ಯರು ಆಹಾರದ ಕಿಟ್ ವಿತರಿಸಿದ್ರು.

ಕೊರೋನಾ ಎರಡನೇ ಅಲೆಯ ಪರಿಣಾಮ ಲಾಕ್ ಡೌನ್ ಜಾರಿಯಾದ ಹಿನ್ನಲೆಯಲ್ಲಿ ನಂದಿಕಟ್ಟಾ ಗ್ರಾಮದ ಬಡ ಕುಟುಂಬಗಳು ತೀವ್ರ ಸಂಕಷ್ಟದಲ್ಲಿವೆ. ಅದ್ರಲ್ಲೂ ಕೊರೋನಾ ಪಾಸಿಟಿವ್ ದೃಢಪಟ್ಟ ಕೆಲವು ಕುಟುಂಬಗಳ ಪಾಡು ಹೇಳತೀರದ್ದಾಗಿದೆ.

ಹೀಗಾಗಿ, ಗ್ರಾಮ ಪಂಚಾಯತಿ ಸದಸ್ಯ ಸಂತೋಷ ಭೋಸ್ಲೆ ಸೇರಿದಂತೆ ಹಲವು ಸದಸ್ಯರು ಅಂತಹ ಬಡ‌ ಕುಟುಂಬಗಳಿಗೆ ಆಹಾರದ ದಿನಸಿ ಕಿಟ್ ವಿತರಿಸಿದ್ದಾರೆ.

error: Content is protected !!