ಮುಂಡಗೋಡಿನ ಯುವ ಪಡೆಯೊಂದು ನೊಂದವರ ಕಣ್ಣೀರು ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ತಾಲೂಕಿನಲ್ಲಿ ರೋಗಗಳಿಂದ ಬಳಲಿ, ಆರ್ಥಿಕವಾಗಿಯೂ ಜರ್ಜಿತವಾಗಿರೋ ಕುಟುಂಬಗಳಿಗೆ ಆಸರೆಯ ಕಿರಿಬೆರಳು ನೀಡುವ ಮಹತ್ಕಾರ್ಯ ಮಾಡುತ್ತಿದೆ. ಹೀಗಾಗಿ, ಮೊಟ್ಟ ಮೊದಲು, ಆ ಎಲ್ಲಾ ಯುವಕರಿಗೂ ಪಬ್ಲಿಕ್ ಫಸ್ಟ್ ನ್ಯೂಸ್ ವತಿಯಿಂದ, ಬಿಗ್ ಸೆಲ್ಯೂಟ್..! “ಭವತಿ ಭಿಕ್ಷಾಂದೇಹಿ” ಅಂದಹಾಗೆ, ಮುಂಡಗೋಡಿನ ಅಯ್ಯಪ್ಪ ಭಜಂತ್ರಿ ಮತ್ತು ಅವರ ತಂಡ ಇಂತಹದ್ದೊಂದು ಮಾನವೀಯ ಕಾರ್ಯಕ್ಕೆ ಕೈ ಹಾಕಿ ಯಶಸ್ವಿಯೂ ಆಗಿದೆ. ಅಷ್ಟಕ್ಕೂ ಇಲ್ಲಿ ನೊಂದವರ ಕಣ್ಣೀರ ಹನಿ ಒರೆಸುವ ಜೊತೆಗೆ, ಅಂತವರ ಕಷ್ಟಗಳಿಗೆ ಒಂದಿಷ್ಟು ಆಸರೆ ಒದಗಿಸಲು ಭಿಕ್ಷೆಗೆ ಇಳಿದಿದ್ದಾರೆ ಯುವಕರು. “ಭವತಿ ಭಿಕ್ಷಾಂದೇಹಿ” ಅಂತಾ ಹಲವು ಪಟ್ಟಣ, ನಗರಗಳ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ಭಿಕ್ಷೆ ಬೇಡಿ ಹಣ ಕೂಡಿಸಿದ್ದಾರೆ. ಹಾಗೆ ಬಂದ ಹಣದಿಂದ ನೊಂದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ. ವಿಶೇಷ ವೇಷ..! ನಿಜ, ಈ ಯುವಕರ ದಿಟ್ಟತನ ನಿಜಕ್ಕೂ ಮೆಚ್ಚುವಂತದ್ದು, ಯಾಕಂದ್ರೆ ಬಿರು ಬಿಸಿಲಿನಲ್ಲೂ ನೊಂದವರ ಕಣ್ಣಿರು ಒರೆಸಲು, ವಿಶೇಷ...
Top Stories
ಮುಂಡಗೋಡ ನೆಹರು ನಗರದಲ್ಲಿ ಜೇನುದಾಳಿ 6 ಜನರಿಗೆ ಗಾಯ, ಮೂವರು ಗಂಭೀರ..!
ಸಭಾಪತಿ ಹೊರಟ್ಟಿ ಮನೆ ಬಳಿ ದರೋಡೆ ಮಾಡಿದ್ದ ಇಬ್ಬರ ಕಾಲಿಗೆ ಪೊಲೀಸರ ಗುಂಡೇಟು
ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಲಾರಿ, ಕಾರಿನಲ್ಲಿ ಇಬ್ಬರು ಸಿಲುಕಿ ನರಳಾಟ, ಹೊರತೆಗೆಯಲು ಹರಸಾಹಸ..!
ತಿಂಗಳಾಂತ್ಯಕ್ಕೆ ಹೆಬ್ಬಾರ್ ಹಾಗೂ ST ಸೋಮಶೇಖರ್, ಬಿಜೆಪಿ ಪಕ್ಷದಿಂದ ಉಚ್ಚಾಟನೆ ಗ್ಯಾರಂಟಿ- ಲಿಂಗರಾಜ ಪಾಟೀಲ್
ಮೈನಳ್ಳಿ ಪಂಚಾಯತಿಯ ಕಳಕೀಕಾರೆಯಲ್ಲಿ ಕುಡಿಯುವ ನೀರಿಗೆ ಬರ..! ಟ್ಯಾಂಕರ್ ಮೂಲಕ ನೀರು ಪೂರೈಕೆ..!
ಜಿಲ್ಲೆಯಲ್ಲಿ ಅನ್ನಭಾಗ್ಯ ಯೋಜನೆಯಡಿ ಈ ತಿಂಗಳಿಂದ ಹಣ ನೀಡಲ್ಲ, ಬದಲಾಗಿ ಅಕ್ಕಿ ವಿತರಣೆೆ ; ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯ
ಇದುವರೆಗೆ 2500 ಕ್ಕೂ ಆಧಿಕ ಕಡಲಾಮೆ ಮರಿಗಳು ಸಮುದ್ರಕ್ಕೆ : ಉಪ ಅರಣ್ಯ ಸಂರಕ್ಷಣಾಧಿಕಾರಿ ಸಿ.ರವಿಶಂಕರ್
SSLC ಪರೀಕ್ಷೆಗಳು ವ್ಯವಸ್ಥಿತ ಮತ್ತು ಪಾರದರ್ಶಕವಾಗಿರಲಿ, ಪೂರ್ವಭಾವಿ ಸಭೆಯಲ್ಲಿ ಡೀಸಿ ಲಕ್ಷ್ಮಿಪ್ರಿಯ ಅಧಿಕಾರಿಗಳಿಗೆ ತಾಕೀತು..!
ಹಿರಿಯೂರು ಬಳಿ ಅಪಘಾತ, ವಿಧಾನಸಭಾ ಉಪಾಧ್ಯಕ್ಷ ರುದ್ರಪ್ಪ ಲಮಾಣಿಗೆ ಗಂಭೀರ ಗಾಯ..!
ಹುನಗುಂದದಲ್ಲಿ ರೇಣುಕಾಚಾರ್ಯರ ಜಯಂತಿ ಉತ್ಸವ..!
ಬಂಕಾಪುರ ಬಳಿ ಮುಡಸಾಲಿ ವ್ಯಕ್ತಿಯ ಅನುಮಾನಾಸ್ಪದ ಸಾವು..? ಅಪಘಾತವಾ..? ಕೊಲೆಯಾ..?
ಹುನಗುಂದ ಗ್ರಾಪಂ PDO ಮಂಜುನಾಥ್ ಗೆ “ಬೆಸ್ಟ್ ಪಿಡಿಒ ಆಫ್ ದಿ ಮಂತ್” ಪ್ರಶಸ್ತಿ..!
ಮಾರ್ಚ್ 9 ರಂದು ರವಿವಾರ ಕಾರವಾರದಲ್ಲಿ ಪೊಲೀಸ್ ರನ್ 2025ರ ಮ್ಯಾರಾಥಾನ್ 5K ಓಟ..!
ಪತ್ರಕರ್ತ ಶಿವಶಂಕರ್ ಕೋಲಸಿರ್ಸಿ ಹೃದಯಾಘಾತದಿಂದ ನಿಧನ..!
ಮುಂದಿನ ಎರಡು ದಿನ ಜಿಲ್ಲೆಯಲ್ಲಿ ಬಿಸಿಗಾಳಿ ಪರಿಸ್ಥಿತಿಗೆ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಿ :ಜಿಲ್ಲಾಧಿಕಾರಿ ಕೆ.ಲಕ್ಷ್ಮಿಪ್ರಿಯ
ಭೀಮಾತೀರದಲ್ಲಿ ಸಾಂಸ್ಕೃತಿಕ ಸಂಭ್ರಮ, ಬರಗುಡಿ ಗ್ರಾಮದ ಜಾತ್ರೆಗೆ ಕ್ಷಣಗಣನೆ..! ಲಕ್ಷ್ಮೀ ದೇವಿಯ ಸನ್ನಿಧಿಯಲ್ಲಿ ವಿಶೇಷ ಪಾರಂಪರಿಕ ಮೆರಗು..!
ಟಿಬೇಟಿಯನ್ ಕಾಲೋನಿ ಬಳಿ ಜ. 18 ರಂದು ನಡೆದಿದ್ದ ಕಾರ್ ಮರಕ್ಕೆ ಡಿಕ್ಕಿ, ಉಲ್ಟಾ ಪಲ್ಟಾ ಕೇಸು..?
ಇಂದೂರು ಅರಣ್ಯದಲ್ಲಿ ರಾತ್ರೋ ರಾತ್ರಿ ಅಕ್ರಮ ಮಣ್ಣು ಸಾಗಾಟ, ಒಂದು JCB, ಟ್ರ್ಯಾಕ್ಟರ್ ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು..!
“ತುಂಬಿದ ಕೊಡ ತುಳಕೀತಲೇ ಪರಾಕ್” ಪ್ರಸಕ್ತ ವರ್ಷದ ಶ್ರೀಕ್ಷೇತ್ರ ಮೈಲಾರ ಕಾರ್ಣೀಕ ನುಡಿ..!
ಕೌಟುಂಬಿಕ ಕಲಹ ಹಿನ್ನೆಲೆ, ಕಲ್ಲಿನಿಂದ ಜಜ್ಜಿ ಅಣ್ಣ ತಂಗಿಯ ಬರ್ಬರ ಹತ್ಯೆ..!
ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಕಲ್ಲಿನಿಂದ ಜಜ್ಜಿ ಅಣ್ಣ ಹಾಗೂ ತಂಗಿಯ ಬರ್ಭರ ಹತ್ಯೆ ಮಾಡಿರೊ ಘಟನೆ, ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ. ರಾಜಶ್ರೀ ಶಂಕರಗೌಡ ಬಿರಾದಾರ್ (40), ನಾನಾಗೌಡ ಯರಗಲ್ (45) ಕೊಲೆಗೀಡಾದ ಅಣ್ಣ ಹಾಗೂ ತಂಗಿಯಾಗಿದ್ದಾರೆ. ರಾಜಶ್ರೀ ಪತಿ ಶಂಕರಗೌಡ ಹಾಗೂ ಇತರರು ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ. ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದ ಹೊರ ಭಾಗದಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಮುಂದಿನ 4 ದಿನಗಳ ಕಾಲ ಬಾರೀ ಮಳೆ ಮುನ್ಸೂಚನೆ..!
ಬೆಂಗಳೂರು: ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ 4 ದಿನಗಳ ಕಾಲ ಗುಡುಗು ಮಿಂಚು ಸಹಿತ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಹೆ ಎಚ್ಚರಿಕೆ ನೀಡಿದೆ. ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲಿ ಜೂನ್ 7ರಿಂದ 9ರವರೆಗೆ ಯಲ್ಲೋ ಅಲರ್ಟ್ ಘೋಷಿಸಲಾಗಿದೆ. ಜೂನ್ 9ರವವರೆಗೆ ಈ ಜಿಲ್ಲೆಗಳಲ್ಲಿ ಭಾರಿ ಮಳೆಯಾಗಲಿದೆ ಎಂದು ತಿಳಿಸಿದೆ. ಬೆಂಗಳೂರು, ರಾಮನಗರ, ಚಿಕ್ಕಮಗಳೂರು ಹಾಗೂ ಚಿತ್ರದುರ್ಗದಲ್ಲಿ ಇಂದು ಯಲ್ಲೋ ಅಲರ್ಟ್ ಘೋಷಿಸಲಾಗಿದೆ.
ಮುಂಡಗೋಡ ಪೊಲೀಸರ ಕಾರ್ಯಾಚರಣೆ: ಮಳಗಿಯಲ್ಲಿ ಕಳ್ಳತನ ಮಾಡಿದ್ದ ಮೂವರು ಆರೋಪಿಗಳು ಅಂದರ್..!
ಮುಂಡಗೋಡ ಪೊಲೀಸರು ಭರ್ಜರಿ ಬೇಟೆಯಾಡಿದ್ದಾರೆ. ತಾಲೂಕಿನ ಮಳಗಿಯ ಪಂಚವಟಿಯಲ್ಲಿ ಮೇ. 20 ರಂದು ನಡೆದಿದ್ದ ಅಂಗಡಿ ಕಳ್ಳತನ ಪ್ರಕರಣ ಬೇಧಿಸಿ, ಮೂವರು ಆರೋಪಿಗಳ ಹೆಡೆಮುರಿ ಕಟ್ಟಿದ್ದಾರೆ. ಇದ್ರೊಂದಿಗೆ ನಿಟ್ಟುಸಿರು ಬಿಟ್ಟಿದ್ದಾರೆ ಖಾಕಿಗಳು. ಶಿರಸಿಯ ನಿವಾಸಿಗಳಾದ ಸಲೀಂ(25) ಅಬ್ದುಲ್ ಸತ್ತಾರ ಅಬ್ದುಲ್ ಗಫಾರ್ ಮುಲ್ಲಾ(28) ಹಾಗೂ ಇರ್ಫಾನ್ ಮಕಬೂಲ್ ಶೇಖ್ (21) ಎಂಬುವ ಮೂವರು ಆರೋಪಿಗಳನ್ನು ಬಂಧಿಸಲಾಗಿದೆ. ಅಂದಹಾಗೆ, ಮೇ 20 ರ ರಾತ್ರಿ ಮಳಗಿ ಸಮೀಪದ ಪಂಚವಟಿಯಲ್ಲಿರುವ ಹಜರತ ಅಲಿ ಯಲಿವಾಳ್ ಎಂಬುವವರ ಅಂಗಡಿಯ ಮೇಲ್ಚಾವಣಿ ತೆಗೆದು ಒಳ ನುಗ್ಗಿದ್ದ ಖದೀಮರು, ಅಂಗಡಿಯಲ್ಲಿದ್ದ ರೇಶನ್, ಪ್ರಿಡ್ಜ್, ಸೇರಿ ಅಂದಾಜು 63,465 ರೂಪಾಯಿ ಬೆಲೆಯ ವಸ್ತುಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ರು. ಹೀಗಾಗಿ ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಹೀಗಾಗಿ, ಉತ್ತರ ಕನ್ನಡ ಎಸ್ಪಿ ಡಾ.ಸುಮನ್ ಪೆನ್ನೇಕರ್ ಮಾರ್ಗದರ್ಶನದಲ್ಲಿ ಮುಂಡಗೋಡಿನ ಪೊಲೀಸರು ಪ್ರಕರಣ ಬೇಧಿಸಿದ್ದಾರೆ. ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಯಲ್ಲಾಪುರ-ಶಿರಸಿ ಅರಣ್ಯ ಪ್ರದೇಶದಲ್ಲಿ ನಿಷೇಧಿತ ಸ್ಯಾಟಲೈಟ್ ಪೋನ್ ಮತ್ತೆ ಆ್ಯಕ್ಟಿವ್..!
ಬೆಂಗಳೂರು: ಉತ್ತರ ಕನ್ನಡ ಜಿಲ್ಲೆ ಸೇರಿ, ಕರಾವಳಿ ಜಿಲ್ಲೆಯ ನಾಲ್ಕು ಪ್ರದೇಶಗಳಲ್ಲಿ ಮತ್ತೆ ನಿಷೇಧಿತ ಸ್ಯಾಟಲೈಟ್ ಫೋನ್ ಆಕ್ಟಿವ್ ಗೊಂಡಿರುವುದು ಬಾರೀ ಆತಂಕ ತಂದಿಟ್ಟಿದೆ.. ಬೇಹುಗಾರಿಕಾ ಏಜೆನ್ಸಿ ಸ್ಯಾಟಲೈಟ್ ಫೋನ್ ಲೊಕೇಷನ್ ಗಳನ್ನು ಪತ್ತೆ ಮಾಡಿದೆ., ಹೀಗಾಗಿ, ನಾಲ್ಕು ಅರಣ್ಯ ಪ್ರದೇಶಗಳಿಂದ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿದ್ದಾರೆ ಅಂತಾ ಮಾಹಿತಿ ಲಭ್ಯವಾಗಿದೆ. ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ-ಶಿರಸಿ ಮಧ್ಯೆ ಇರುವ ಅರಣ್ಯ, ಮಂಗಳೂರು ಹೊರ ಭಾಗದಲ್ಲಿರುವ ನಾಟಿಕಲ್, ಕುಳಾಯಿ, ಚಿಕ್ಕಮಗಳೂರು ಜಿಲ್ಲೆಯ ಕಡೂರು, ಬೀರೂರು ನಡುವಿನ ಅರಣ್ಯ ಸೇರಿದಂತೆ ಒಟ್ಟು ನಾಲ್ಕು ಸ್ಥಳಗಳಿಂದ ಸ್ಯಾಟಲೈಟ್ ಫೋನ್ ಮೂಲಕ ಸಂಪರ್ಕ ಸಾಧಿಸಿದ್ದಾರೆ. ಮೇ 23ರಿಂದ 29ರವರೆಗೆ ನಾಲ್ಕು ಪ್ರದೇಶಗಳಲ್ಲಿ ಫೋನ್ ಆಕ್ಟಿವ್ ಆಗಿದ್ದು, 6 ದಿನಗಳ ಅವಧಿಯಲ್ಲಿ ನಾಲ್ಕು ಕಡೆಗಳಲ್ಲಿ ವ್ಯಕ್ತಿಗಳು ಸ್ಯಾಟಲೈಟ್ ಫೋನ್ ಸಂಪರ್ಕ ಸಾಧಿಸಿದ್ದಾರೆ ಎಂದು ಬೇಹುಗಾರಿಕಾ ಏಜೆನ್ಸಿ ಫೋನ್ ಲೊಕೇಷನ್ ಟ್ರೇಸ್ ಮಾಡಿದೆ.
ಸಚಿವ ಶಿವರಾಮ್ ಹೆಬ್ಬಾರ್ ಗೆ ಜನ್ಮ ದಿನದ ಶುಭಾಶಯಗಳು
ಜಾಹೀರಾತು ಯಲ್ಲಾಪುರ ಕ್ಷೇತ್ರದ ಜನಪ್ರಿಯ ಶಾಸಕರು, ಕಾರ್ಮಿಕ ಸಚಿವರು ಶಿವರಾಮ್ ಹೆಬ್ಬಾರ್ ಇಂದು ಜನುಮ ದಿನದ ಸಂಭ್ರಮದಲ್ಲಿದ್ದಾರೆ. ಹೀಗಾಗಿ, ಅಭಿಮಾನಿಗಳು ನಿನ್ನೆಯಿಂದಲೇ ಶುಭಾಶಯಗಳ ಸುರಿಮಳೆ ಸುರಿಸ್ತಿದಾರೆ. ಅದ್ರಂತೆ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷರು ಆದ ಹಾಗೂ ಬಿಜೆಪಿ ಮುಖಂಡರಾದ ಸಿದ್ದಪ್ಪ ಹಡಪದ ಸಚಿವ ಶಿವರಾಮ್ ಹೆಬ್ಬಾರ್ ರವರಿಗೆ ಶುಭಾಶಯ ಕೋರಿದ್ದಾರೆ.
ಬಸಾಪುರದಲ್ಲಿ ರಾಣಾ ಪ್ರತಾಪ ಸಿಂಹರ ಜಯಂತಿ ಉತ್ಸವ, ಭವ್ಯ ಮೆರವಣಿಗೆ..!
ಮುಂಡಗೋಡ: ತಾಲೂಕಿನ ಬಸಾಪುರ ಗ್ರಾಮದಲ್ಲಿ ರಾತ್ರಿಯಿಡಿ ರಾಣಾ ಪ್ರತಾಪ್ ಸಿಂಗ್ ರವರ ಜಯಂತಿ ಭವ್ಯ ಮೆರವಣಿಗೆ ನಡೆಯಿತು. ಸಮಾಜ ಬಾಂದವರು ರಾಣಾ ಪ್ರತಾಪ ಸಿಂಹರ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ, ಇಡೀ ಗ್ರಾಮದ ಗಲ್ಲಿ ಗಲ್ಲಿಗಳಲ್ಲಿ ಮೆರವಣಿಗೆ ನಡೆಸಿದ್ರು. ಭಕ್ತಿಗೀತೆಗಳನ್ನು ಹಾಕಿ ಮೆರವಣಿಗೆಯುದ್ದಕ್ಕೂ ಕುಣಿದು ಕುಪ್ಪಳಿಸಿದ ಯುವಕರು, ರಾಣಾ ಪ್ರತಾಪ ಪರವಾಗಿ ಘೋಷಣೆ ಕೂಗಿ ಸಂಭ್ರಮಿಸಿದ್ರು. ಇನ್ನು ನಿನ್ನೆ ಸಂಜೆಯಿಂದಲೇ ಬಸಾಪುರ ಗ್ರಾಮದಲ್ಲಿ ” ರಾಣಾ” ಜಯಂತಿ ಆಚರಣೆ ಸಂಭ್ರಮ ಜೋರಾಗಿತ್ತು. ವಿವಿಧ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಶಿರಸಿಯಲ್ಲಿ ಮಟ್ಕಾ ಅಡ್ಡೆಯ ಮೇಲೆ ಪೊಲೀಸರ ದಾಳಿ, ಲಕ್ಷ ಲಕ್ಷ ನಗದು ವಶ..?
ಶಿರಸಿಯಲ್ಲಿ ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಮಟ್ಕಾ ಅಡ್ಡೆಯ ಮೇಲೆ ದಾಳಿ ನಡೆಸಿರೋ ಪೊಲೀಸರು ಬುಕ್ಕಿ ಸೇರಿ,15 ಕ್ಕೂ ಹೆಚ್ಚು ಆರೋಪಿಗಳನ್ನ ವಶಕ್ಕೆ ಪಡೆದಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಉತ್ತರ ಕನ್ನಡ ಎಸ್ಪಿ, ಡಾ.ಸುಮನಾ ಪೆನ್ನೇಕರ್ ರಚಿಸಿರೋ ವಿಶೇಷ ಪೊಲೀಸ್ ಟೀಂ ಕಾರ್ಯಾಚರಣೆ ನಡೆಸಿದ್ದು, ಮಟ್ಕಾ ಆಡಿಸುತ್ತಿದ್ದ ದಂಧೆಕೋರರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗೆನೆ, ಮಟ್ಕಾ ದಂಧೆಯಲ್ಲಿಬಕೈ ಬದಲಾಯಿಸುತ್ತ ಅಂದಾಜು 3-4 ಲಕ್ಷ ರೂ. ನಗದು ವಶಪಡಿಸಿಕೊಳ್ಳಲಾಗಿದೆ ಅನ್ನೋ ಪ್ರಾಥಮಿಕ ಮಾಹಿತಿ ಲಭ್ಯವಾಗಿದೆ. ಶಿರಸಿ ನಗರ ಹಾಗೂ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಅನ್ನೊ ಮಾಹಿತಿ ಲಭ್ಯವಾಗಿದೆ. ಇನ್ನು ಎಸ್ಪಿ ಮೇಡಂ ರವರ ಟೀಂ ಮಾಡಿರೋ ಕಾರ್ಯಕ್ಕೆ ಸಾರ್ವಜನಿಕರಿಂದ ಪ್ರಶಂಸೆ ವ್ಯಕ್ತವಾಗಿದೆ.
ಶಿಗ್ಗಾವಿಯಲ್ಲಿ ಮುಂಡಗೋಡಿನ ಟಿಪ್ಪರ್ ಮಾಲೀಕ ಮರ್ಡರ್..! ಸಿಎಂ ತವರು ಕ್ಷೇತ್ರದಲ್ಲಿ ಏನಿದೇಲ್ಲ..?
ಸಿಎಂ ಬಸವರಾಜ್ ಬೊಮ್ಮಾಯಿಯವರ ತವರು ಕ್ಷೇತ್ರ ಶಿಗ್ಗಾವಿ ಕ್ರೈಮುಗಳ ಸಿಟಿಯಾಯ್ತಾ..? ಇಂತಹದ್ದೊಂದು ಅನುಮಾನ ಇಡೀ ಕ್ಷೇತ್ರದ ಪ್ರಜ್ಞಾವಂತರನ್ನ ಬೆಂಬಿಡದೇ ಕಾಡ್ತಿದೆ. ಇಲ್ಲಿ ಕೊಲೆ ಅನ್ನೋದು ಕಾರಣಗಳೇ ಇಲ್ಲದೇ ನಡೆದು ಹೋಗ್ತಿವೆ. ನಿನ್ನೆ ಸಂಜೆ ನಡೆದದ್ದೂ ಇದೆ. ಸರಗೊಲು ಆಡುತ್ತಿದ್ದಾಗ ಕೋಲು ಬಡಿಸಿಕೊಂಡ ಟಿಪ್ಪರ್ ಮಾಲೀಕನೊಬ್ಬ ಪ್ರಶ್ನೆ ಮಾಡಿದ್ದಕ್ಕೆ ಅನಾಮತ್ತಾಗಿ ಮರ್ಡರ್ ಆಗಿದ್ದಾನೆ ಅನ್ನೊ ಮಾಹಿತಿ ಲಭ್ಯವಾಗಿದೆ. ಮುಂಡಗೋಡ ತಾಲೂಕಿನ ಚಿಗಳ್ಳಿಯ ಉಮೇಶ್ ಶಿವಜೋಗಿಮಠ್ (45) ಎಂಬುವವನನ್ನು ಬರೋಬ್ಬರಿ ಏಳು ಜನರ ತಂಡ ಮನಬಂದಂತೆ ಥಳಿಸಿ ಕೊಂದು ಹಾಕಿದ್ದಾರೆ ಎನ್ನಲಾಗಿದೆ. ಘಟನೆ ಏನು..? ನಿನ್ನೆ ಬುಧವಾರ, ಅದು ಸಂಜೆಯ ಹೊತ್ತು. ಶಿಗ್ಗಾವಿಯ ಎಪಿಎಂಸಿ ಬಳಿ ಮುಂಡಗೋಡ ತಾಲೂಕಿನ ಚಿಗಳ್ಳಿ ಗ್ರಾಮದ ಟಿಪ್ಪರ್ ಮಾಲೀಕ ಕಂ ಚಾಲಕ, ಉಮೇಶ್ ತನ್ನ ಟಿಪ್ಪರ್ ಗೆ ಗ್ರೀಸಿಂಗ್ ಮಾಡ್ತಾ ನಿಂತಾಗ, ಅದೇ ಎಪಿಎಂಸಿ ಆವರಣದಲ್ಲಿ ಯುವಕರು ಸರಗೋಲು ಆಟವಾಡ್ತಿದ್ದಾಗ ಕೋಲು ಬಂದು ಟಿಪ್ಪರ್ ಗೆ ಬಿದ್ದಿದೆ, ಹೀಗಾಗಿ ಉಮೇಶ್ ಆ ಯುವಕರನ್ನ ಯಾಕ್ರಯ್ಯಾ ಹೀಗೆ ಮಾಡಿದ್ರಿ ನಿಮಗೆ...
ಮುಂಡಗೋಡ ತಾಲೂಕಿನ ಮೂರು ಕಡೆ ಮಟ್ಕಾ ಅಡ್ಡೆಗಳ ಮೇಲೆ ಪೊಲೀಸರ ದಾಳಿ, 7 ಜನರ ವಿರುದ್ಧ ಕೇಸ್..!
ಮುಂಡಗೋಡ ಪೊಲೀಸರು ನಿನ್ನೆಯಿಂದ ಭರ್ಜರಿ ಕಾರ್ಯಾಚರಣೆಗೆ ಇಳಿದಿದ್ದಾರೆ. ಮಟ್ಕಾ ಅಡ್ಡೆಗಳ ಮೇಲೆ ಬಲೆ ಬೀಸಿರೋ ಮುಂಡಗೋಡ ಪಿಎಸ್ಐ ಬಸವರಾಜು ಮಬನೂರು ಮತ್ತವರ ತಂಡ ಮೂರು ಕಡೆ ಪ್ರತ್ಯೇಕ ದಾಳಿ ನಡೆಸಿ ಹಲವು ದಂಧೆಕೋರರ ಹೆಡೆಮುರಿ ಕಟ್ಟಿದ್ದಾರೆ. 7 ಜನರ ವಿರುದ್ಧ ಪ್ರಕರಣ ದಾಖಲಾಗಿದ್ದು, ಇದ್ರೊಂದಿಗೆ ಮೂರೂ ಕೇಸುಗಳಲ್ಲಿ ಒಟ್ಟೂ 10 ಸಾವಿರಕ್ಕೂ ಹೆಚ್ಚು ನಗದು ವಶಪಡಿಸಿಕೊಂಡಿದ್ದಾರೆ. ದಾಳಿ ನಂಬರ್-1 ಮುಂಡಗೋಡ ತಾಲೂಕಿನ ಕಾತೂರಿನ ಬಸ್ ನಿಲ್ದಾಣದ ಪಕ್ಕದಲ್ಲಿ ನಿಂತು ಮಟ್ಕಾ ಆಡಿಸುತ್ತಿದ್ದ, ನಾಗರಾಜ ಅಡಿವೆಪ್ಪ ಆಡಿನವರ ಎಂಬುವವನ ಮೇಲೆ ಕೇಸು ದಾಖಲಿಸಲಾಗಿದೆ. ಇವನ ಜೊತೆ ಮಟ್ಕಾ ದಂಧೆಯಲ್ಲಿ ಸಂಗ್ರಹವಾದ ಹಣವನ್ನು ಪಡೆಯುತ್ತಿದ್ದ ಆರೋಪದ ಮೇಲೆ, ಪಾಳಾ ಗ್ರಾಮದ ಮೌಲಾಲಿ, ಹಾಗೂ ಹಾವೇರಿ ಜಿಲ್ಲೆ ಹಿರೇಕೆರೂರು ತಾಲೂಕಿನ ಚಿಕ್ಕೆರೂರಿನ ಅತಾವುಲ್ಲಾ ಎಂಬುವವನ ಮೇಲೂ ಕೇಸು ಜಡಿಯಲಾಗಿದೆ. ಇದೇ ವೇಳೆ 910 ರೂ. ನಗದು ವಶ ಪಡಿಸಿಕೊಳ್ಳಲಾಗಿದೆ. ದಾಳಿ ನಂಬರ್-2 ಮುಂಡಗೋಡ ಪಟ್ಟಣದ ಬಂಕಾಪೂರ ರಸ್ತೆಯ ಪಕ್ಕದ ಚಿಕನ್ ಅಂಗಡಿಯ ಎದುರಿನ ಸಾರ್ವಜನಿಕ ಸ್ಥಳದಲ್ಲಿ...