ಕೌಟುಂಬಿಕ ಕಲಹ ಹಿನ್ನೆಲೆ, ಕಲ್ಲಿನಿಂದ ಜಜ್ಜಿ ಅಣ್ಣ ತಂಗಿಯ ಬರ್ಬರ ಹತ್ಯೆ..!

ವಿಜಯಪುರ: ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ, ಕಲ್ಲಿನಿಂದ ಜಜ್ಜಿ ಅಣ್ಣ ಹಾಗೂ ತಂಗಿಯ ಬರ್ಭರ ಹತ್ಯೆ ಮಾಡಿರೊ ಘಟನೆ, ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದಲ್ಲಿ ನಡೆದಿದೆ.

ರಾಜಶ್ರೀ ಶಂಕರಗೌಡ ಬಿರಾದಾರ್ (40), ನಾನಾಗೌಡ ಯರಗಲ್ (45) ಕೊಲೆಗೀಡಾದ ಅಣ್ಣ ಹಾಗೂ ತಂಗಿಯಾಗಿದ್ದಾರೆ.

ರಾಜಶ್ರೀ ಪತಿ ಶಂಕರಗೌಡ ಹಾಗೂ ಇತರರು ಕೊಲೆ ಮಾಡಿರೋ ಆರೋಪ ಕೇಳಿಬಂದಿದೆ.
ಸಿಂದಗಿ ತಾಲೂಕಿನ ಬೂದಿಹಾಳ ಗ್ರಾಮದ ಹೊರ ಭಾಗದಲ್ಲಿ ಘಟನೆ ನಡೆದಿದೆ‌. ಸ್ಥಳಕ್ಕೆ ಸಿಂದಗಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.