ಮುಂಡಗೋಡ: ತಾಲೂಕಿನ ಕೆಲವು ಕಡೆ ಬಡವರಿಗೆ ಪೂರೈಸುವ ಪಡಿತರ ಅಕ್ಕಿಗಳಲ್ಲಿ ಪ್ಲಾಸ್ಟಿಕ್ ಅಕ್ಕಿ ಬೆರೆಸಲಾಗಿದೆಯಾ..? ಇಂತಹದ್ದೊಂದು ಆತಂಕ ಹಾಗೂ ಅನುಮಾನ ಸದ್ಯದ ಪಡಿತರ ಅಕ್ಕಿ ಪಡೆದಿರೋ ಬಡವರಿಗೆ ಶುರುವಾಗಿದೆ. ಥೇಟು ಪ್ಲಾಸ್ಟಿಕ್ ಅಥವಾ ಬೇರೆ ಯಾವುದೋ ಪದಾರ್ಥದಿಂದ ರೆಡಿ ಮಾಡಲಾಗಿರೋ ಅಕ್ಕಿ ಪಡಿತರ ಅಕ್ಕಿಯಲ್ಲಿ ಅರ್ದಕ್ಕರ್ದ ತುಂಬಿಕೊಂಡಿದ್ದು ಆತಂಕ ತಂದಿಟ್ಟಿದೆ.
ಎಲ್ಲೇಲ್ಲಿ ಪತ್ತೆ..?
ತಾಲೂಕಿನ ಕೊಪ್ಪ ಇಂದೂರು ಹಾಗೂ ಬಾಚಣಕಿ ಭಾಗದಲ್ಲಿ ಬಡವರಿಗೆ ನೀಡಲಾಗಿರೋ ಪಡಿತರ ಅಕ್ಕಿಯಲ್ಲಿ ಇಂತಹ ಅಕ್ಕಿಗಳು ಸಿಗುತ್ತಿವೆ. ಪ್ಲಾಸ್ಟಿಕ್ ಅಕ್ಕಿಯ ಹಾಗೆ ಇರೋ ಅಕ್ಕಿಯ ಕಾಳುಗಳು ಪತ್ತೆಯಾಗಿ ಆತಂಕಕ್ಕೆ ಕಾರಣವಾಗಿದೆ. ಹೀಗಾಗಿ, ಬಡವರು ಈ ಸಾರಿ ಪಡಿತರ ಅಂಗಡಿಗಳಲ್ಲಿ ಪಡೆದಿರೋ ಅಕ್ಕಿಯನ್ನು ಊಟ ಮಾಡಲು ಹಿಂದೇಟು ಹಾಕುವಂತಾಗಿದೆ.
ವಿಚಿತ್ರವಾಗಿದೆ ಅಕ್ಕಿ ಕಾಳು..!
ಅಸಲು, ಈ ಸಾರಿ ಸರ್ಕಾರ ನೀಡಿರೋ ಪಡಿತರ ಅಕ್ಕಿಯಲ್ಲಿ ಪತ್ತೆಯಾಗಿರೋ ವಿಚಿತ್ರ ಮಾದರಿಯ ಅಕ್ಕಿ ಕಾಳು ನೀರಲ್ಲಿ ಹಾಕಿದ್ರೆ ಮಂಡಕ್ಕಿ ಹಾಗೆ ಉಬ್ಬಿಕೊಳ್ಳತ್ತೆ. ತಿನ್ನಲು ಯೋಗ್ಯವಾಗಿಲ್ಲ ಅಂತಿದಾರೆ ಜನ. ಹೀಗಾಗಿ, ಪಡಿತರ ಅಕ್ಕಿಯನ್ನೇ ನಂಬಿಕೊಂಡು ಹಸಿವು ನೀಗಿಸಿಕೊಳ್ಳುತ್ತಿರೋ ಬಡವರು ತಮ್ಮ ಮಕ್ಕಳಿಗೆ ಇಂತಹ ಅಕ್ಕಿ ಹೇಗೆ ತಿನ್ನಿಸೋದು ಅಂತಾ ಕಂಗಾಲಾಗಿದ್ದಾರೆ.
ಪ್ಲಾಸ್ಟಿಕ್ ಅಕ್ಕಿನಾ..?
ಅಷ್ಟಕ್ಕೂ, ಕಳೆದ 15 ದಿನಗಳಿಂದ ತಾಲೂಕಿನ ಬಾಚಣಕಿ, ಇಂದೂರು ಕೊಪ್ಪ ಭಾಗಗಳಲ್ಲಿ ಇಂತಹ ಅಕ್ಕಿಗಳು ಪಡಿತರ ಅಂಗಡಿಗಳಲ್ಲಿ ಸಿಗುತ್ತಿವೆ. ಈ ಅಕ್ಕಿಯನ್ನು ನೋಡಿದ ಜನರು ಇದು ಪ್ಲಾಸ್ಟಿಕ್ ಅಕ್ಕಿ ಅಂತಾ ಭಯಭೀತಗೊಂಡಿದ್ದಾರೆ. ಹೀಗಾಗಿ, ತಾಲೂಕಾಡಳಿತ ಈ ಬಗ್ಗೆ ಗಮನಿಸಬೇಕಿದೆ. ಅಸಲಿಗೆ ಈ ಅಕ್ಕಿ ಯಾವುದು..? ಇದು ಪ್ಲಾಸ್ಟಿಕ್ ಅಕ್ಕಿನಾ..? ಅಥವಾ ಬೇರೆ ಏನೋ ಕಲಬೆರಕೆನಾ ಅನ್ನೋ ಅಸಲೀಯತ್ತು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿದೆ. ಬಡವರ ಆತಂಕ ದೂರ ಮಾಡಬೇಕಿದೆ.
ಹಾಗಿದ್ರೆ, ಇದು ಪೋಷಕಾಂಶಗಳನ್ನು ಹೊಂದಿರೋ ಕ್ಯಾಲ್ಸಿಯಂ ಟ್ಯಾಬ್ಲೆಟ್ ಮಿಶ್ರಣವಾ..? ಅಥವಾ ಇನ್ನಿತರ ಪೋಷಕಾಂಶಗಳ ಕೊರತೆ ನಿಗಿಸಲು ಸರ್ಕಾರವೇ ಅಕ್ಕಿಗಳ ಮೂಲಕ ಬೀಡಲಾಗ್ತಿರೋ ತಾಕತ್ತಿನ ಔಷಧಿಯಾ..? ಅಧಿಕಾರಿಗಳೇ ಆತಂಕಗೊಂಡಿರೋ ಜನರಿಗೆ ತಿಳಿಸಬೇಕಿದೆ..