ಮುಂಡಗೋಡಿನ ಯುವ ಪಡೆಯೊಂದು ನೊಂದವರ ಕಣ್ಣೀರು ಒರೆಸುವ ಪ್ರಾಮಾಣಿಕ ಪ್ರಯತ್ನ ಮಾಡಿದೆ. ತಾಲೂಕಿನಲ್ಲಿ ರೋಗಗಳಿಂದ ಬಳಲಿ, ಆರ್ಥಿಕವಾಗಿಯೂ ಜರ್ಜಿತವಾಗಿರೋ ಕುಟುಂಬಗಳಿಗೆ ಆಸರೆಯ ಕಿರಿಬೆರಳು ನೀಡುವ ಮಹತ್ಕಾರ್ಯ ಮಾಡುತ್ತಿದೆ. ಹೀಗಾಗಿ, ಮೊಟ್ಟ ಮೊದಲು, ಆ ಎಲ್ಲಾ ಯುವಕರಿಗೂ ಪಬ್ಲಿಕ್ ಫಸ್ಟ್ ನ್ಯೂಸ್ ವತಿಯಿಂದ, ಬಿಗ್ ಸೆಲ್ಯೂಟ್..!
“ಭವತಿ ಭಿಕ್ಷಾಂದೇಹಿ”
ಅಂದಹಾಗೆ, ಮುಂಡಗೋಡಿನ ಅಯ್ಯಪ್ಪ ಭಜಂತ್ರಿ ಮತ್ತು ಅವರ ತಂಡ ಇಂತಹದ್ದೊಂದು ಮಾನವೀಯ ಕಾರ್ಯಕ್ಕೆ ಕೈ ಹಾಕಿ ಯಶಸ್ವಿಯೂ ಆಗಿದೆ. ಅಷ್ಟಕ್ಕೂ ಇಲ್ಲಿ ನೊಂದವರ ಕಣ್ಣೀರ ಹನಿ ಒರೆಸುವ ಜೊತೆಗೆ, ಅಂತವರ ಕಷ್ಟಗಳಿಗೆ ಒಂದಿಷ್ಟು ಆಸರೆ ಒದಗಿಸಲು ಭಿಕ್ಷೆಗೆ ಇಳಿದಿದ್ದಾರೆ ಯುವಕರು. “ಭವತಿ ಭಿಕ್ಷಾಂದೇಹಿ” ಅಂತಾ ಹಲವು ಪಟ್ಟಣ, ನಗರಗಳ ಗಲ್ಲಿ ಗಲ್ಲಿಗಳಲ್ಲಿ ತಿರುಗಿ ಭಿಕ್ಷೆ ಬೇಡಿ ಹಣ ಕೂಡಿಸಿದ್ದಾರೆ. ಹಾಗೆ ಬಂದ ಹಣದಿಂದ ನೊಂದ ಕುಟುಂಬಕ್ಕೆ ಆರ್ಥಿಕ ಸಹಾಯ ಮಾಡಲು ಮುಂದಾಗಿದ್ದಾರೆ.
ವಿಶೇಷ ವೇಷ..!
ನಿಜ, ಈ ಯುವಕರ ದಿಟ್ಟತನ ನಿಜಕ್ಕೂ ಮೆಚ್ಚುವಂತದ್ದು, ಯಾಕಂದ್ರೆ ಬಿರು ಬಿಸಿಲಿನಲ್ಲೂ ನೊಂದವರ ಕಣ್ಣಿರು ಒರೆಸಲು, ವಿಶೇಷ ವೇಷ ತೊಟ್ಟು ಭಿಕ್ಷೆ ಬೇಡಿದ್ದಾರೆ. ಮತ್ತವರ ಬಾಳಲ್ಲಿ ನಗು ತುಂಬಲು, ತಾವೂ ಕೂಡ ನಗುವಿನ ಮುಖವಾಡ ತೊಟ್ಟು ನಗಿಸಿದ್ದಾರೆ, ನಲಿಸಿದ್ದಾರೆ. ಆ ಮೂಲಕ ಸಹಾಯದ ಹಸ್ತ ಚಾಚಿದ್ದಾರೆ. ಹಾಗೆ ಭಿಕ್ಷೆ ಬೇಡಿ ಬಂದ ಹಣವನ್ನು ಸೋಮವಾರ ಸಂಜೆ ಪಟ್ಟಣದ ಸಾಯಿ ಮಂದಿರದಲ್ಲಿ ಸಾರ್ವಜನಿಕರ ಸಮಕ್ಷಮ “ಭಿಕ್ಷೆಯ” ಪೆಟ್ಟಿಗೆಗಳನ್ನು ಓಪನ್ ಮಾಡಿದ್ದಾರೆ. ಅದ್ರಲ್ಲಿ ಹೃದಯವಂತ ದಾನಿಗಳು ನೀಡಿದ ಹಣವನ್ನು ಒಟ್ಟು ಮಾಡಿದ್ದಾರೆ. ಅದ್ರಲ್ಲಿ ಮೂರು ಭಾಗ ಮಾಡಿ, ನೊಂದ ಕುಟುಂಬಗಳಿಗೆ ಹಣ ಸಂದಾಯ ಮಾಡುವ ಗುರಿ ಹೊಂದಿದ್ದಾರೆ.
ಅಲ್ಲಿ, ಅದೇಷ್ಟೇ ಹಣ ಬಂದಿರಲಿ, ಅದ್ರಲ್ಲಿ ಆ ಎಲ್ಲಾ ಯುವಕರ ಬೆವರಿನ ಕಣವಿದೆ. ನೊಂದವರ ಕಣ್ಣೀರಿಗೆ ಆ ಯುವಪಡೆ ಸಲ್ಲಿಸಿದ ಸಾಂತ್ವನಗಳ ಮಹಾಪೂರವಿದೆ. ಅದು ಆ ಬಡವರ ಮನೆಯ ಆಶಾಕಿರಣವಾಗಲಿ ಅನ್ನೊದು ನಮ್ಮ ಆಶಯ.. ಮತ್ತೊಮ್ಮೆ ಮುಂಡಗೋಡಿನ ಆ ಯುವ ಪಡೆಗೆ ನಮ್ಮ ಕಡೆಯಿಂದ ಸಲಾಂ..!