ಮುಂಡಗೋಡ-ತಾಲೂಕಿನಲ್ಲಿ ಇಂದು 58 ಕೊರೋನಾ ಪಾಸಿಟಿವ್ ಪ್ರಕರಣಗಳು ದೃಢಪಟ್ಟಿದ್ದು, ಓರ್ವ ಸಾವನ್ನಿಪ್ಪಿದ್ದಾನೆ. ಇನ್ನು 87 ಜನ ಸೋಂಕಿತರು ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ತಾಲೂಕಿನಲ್ಲಿ ಒಟ್ಟೂ 384 ಸಕ್ರೀಯ ಪ್ರಕರಣಗಳಿದ್ದು, 114 ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. 227 ಜನ ಸೋಂಕಿತರು ಹೋಂ ಐಸೋಲೇಶನ್ ನಲ್ಲಿದ್ದಾರೆ. 43 ಜನ ಸೋಂಕಿತರು ಕೋವಿಡ್ ಕೇರ್ ಸೆಂಟರ್ ನಲ್ಲಿದ್ದಾರೆ. ಇನ್ನು ತಾಲೂಕಿನ ಇಂದಿರಾನಗರದ 76 ವರ್ಷದ ವೃದ್ದ ಕೊರೋನಾಗೆ ಇಂದು ಬಲಿಯಾಗಿದ್ದು, ಇದುವರೆಗೂ ತಾಲೂಕಿನಲ್ಲಿ ಕೊರೋನಾದಿಂದ ಮೃತಪಟ್ಟವರ ಸಂಖ್ಯೆ 58 ಕ್ಕೆ ಏರಿಕೆಯಾಗಿದೆ. ಅಂದಹಾಗೆ, ಇದುವರೆಗೂ ತಾಲೂಕಿನಲ್ಲಿ 3616 ಪ್ರಕರಣಗಳು ಪತ್ತೆಯಾಗಿದ್ದು ಅದ್ರಲ್ಲಿ,3174 ಸೋಂಕಿತರು ಗುಣಮುಖರಾಗಿದ್ದಾರೆ.
Top Stories
ಮುಂಡಗೋಡಿನ ಅಂಗನವಾಡಿಯಲ್ಲಿ ಹಾವು ಕಚ್ಚಿದ್ದ ಬಾಲಕಿ ಕಿಮ್ಸ್ ನಲ್ಲಿ ಸಾವು..!
ಮುಂಡಗೋಡಿನಲ್ಲಿ ಅಂಗನವಾಡಿಗೆ ಹೋಗಿದ್ದ ಪುಟ್ಟ ಬಾಲಕಿಗೆ ಕಚ್ಚಿದ ಹಾವು..!
ಹಳೇ ದ್ವೇಷದ ಹಿನ್ನಲೆ ಇಬ್ಬರಿಗೆ ಚಾಕು ಇರಿತ
ಇಂದೂರು ಸೊಸೈಟಿ ಚುನಾವಣೆ: ಭರ್ಜರಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು..! ರೈತ ಒಕ್ಕೂಟಕ್ಕೆ ಮೂರು ಸ್ಥಾನಗಳು ಮಾತ್ರ..!
ಇಂದೂರು ಸೊಸೈಟಿ ಚುನಾವಣೆ ಅಚ್ಚರಿ ಫಲಿತಾಂಶ: ಮಾಜಿ ಜಿಪಂ ಸದಸ್ಯ ರವಿಗೌಡ ಪಾಟೀಲ್ ಸೋಲು..!
ಚವಡಳ್ಳಿ ಸೊಸೈಟಿ ಚುನಾವಣೆ: 11 ರಲ್ಲಿ ಕಾಂಗ್ರೆಸ್ ಬೆಂಬಲಿತರದ್ದೇ ಭರ್ಜರಿ ಗೆಲುವು..! ಬಿಜೆಪಿಗೆ ದಕ್ಕಿದ್ದು ಒಂದೇ ಒಂದು ಸ್ಥಾನ..!
ಮುಂಡಗೋಡ LSMP ಸೊಸೈಟಿ ಚುನಾವಣೆಯಲ್ಲಿ ಕಾಂಗ್ರೆಸ್ ಮೇಲುಗೈ, 12 ರ ಪೈಕಿ 9 ರಲ್ಲಿ ಕೈ ಬೆಂಬಲಿತರ ಗೆಲುವು..!
ಹುಬ್ಬಳ್ಳಿ ಸಿಲಿಂಡರ್ ಬ್ಲಾಸ್ಟ್: ಮತ್ತೋರ್ವ ಅಯ್ಯಪ್ಪ ಮಾಲಾಧಾರಿ ಸಾವು, ಸಾವಿನ ಸಂಖ್ಯೆ ಮೂರಕ್ಕೆ ಏರಿಕೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ ಹಿನ್ನೆಲೆ, ಶುಕ್ರವಾರ ಸರ್ಕಾರಿ ರಜೆ ಘೋಷಣೆ..! ಶಾಲಾ ಕಾಲೇಜುಗಳಿಗೆ ರಜೆ..!
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ವಿಧಿವಶ..! ನಾಳೆಯ ಬೆಳಗಾವಿ ಕೈ ಕಾರ್ಯಕ್ರಮ ರದ್ದು..!
ಮುಂಡಗೋಡ ಗಡಿ ಭಾಗದ ಹಾನಗಲ್ ತಾಲೂಕಿನ ಕೊಪ್ಪರಸಿಕೊಪ್ಪದಲ್ಲಿ ನಡೀತು ಭಯಾನಕ, ಅಮಾನುಷ ಘಟನೆ
ಹುಬ್ಬಳ್ಳಿ ಸಿಲಿಂಡರ್ ಸ್ಪೋಟದಲ್ಲಿ ಗಾಯಗೊಂಡಿದ್ದ ಇಬ್ಬರು ಅಯ್ಯಪ್ಪ ಮಾಲಾಧಾರಿಗಳು ಸಾವು..!
ತಡಸ ಕ್ರಾಸ್ ಬಳಿ ಭೀಕರ ಅಪಘಾತ, ಒಂದೇ ಕುಟುಂಬದ ನಾಲ್ವರು ದುರಂತ ಸಾವು..!
ಬೆಡಸಗಾಂವ್ ಸಹಕಾರಿ ಸಂಘದ ಚುನಾವಣೆ ನಡೆದ್ರೂ ಮತ ಎಣಿಕೆಗೆ ಬ್ರೇಕ್..! ಹೈಕೋರ್ಟ್ ತಡೆಯಾಜ್ಞೆ..!
ಸಿಂಗನಳ್ಳಿಯಲ್ಲಿ ಅಡಿಕೆ ಕಳ್ಳರ ಹಾವಳಿ, ಮನೆಯ ಪಕ್ಕದಲ್ಲೇ ಒಣ ಹಾಕಿದ್ದ ಅಡಿಕೆ ಕದ್ದೊಯ್ದ ಕಳ್ಳರು..!
ಹುನಗುಂದದಲ್ಲಿ ಎರಡು ಮನೆಗಳಲ್ಲಿ ನುಗ್ಗಿದ ಕಳ್ಳರು, ಒಂದು ಮನೆಯಲ್ಲಿ ಕಳ್ಳತನ, ಮತ್ತೊಂದು ಮನೆಯಲ್ಲಿ ವಿಫಲ ಯತ್ನ..!
ಚಿಗಳ್ಳಿ ಭಾಗದಲ್ಲಿ ಬಿಜೆಪಿಗೆ ಠಕ್ಕರ್ ಕೊಟ್ಟ ಕಾಂಗ್ರೆಸ್, ಹಲವು ಬಿಜೆಪಿಗರು ಕಾಂಗ್ರೆಸ್ ಸೇರ್ಪಡೆ..!
ಬಿಜೆಪಿಯಿಂದ ಉಚ್ಚಾಟನೆ ಮಾತು..! ಹೆಬ್ಬಾರ್ ಅಂಗಳದಲ್ಲಿ ಸಂಭ್ರಮವೋ ಸಂಭ್ರಮ..!!
ಮುರುಡೇಶ್ವರ ಪ್ರವಾಸಕ್ಕೆ ತೆರಳಿದ್ದ 7 ವಿದ್ಯಾರ್ಥಿಗಳು ನೀರುಪಾಲು, ಮೂವರ ರಕ್ಷಣೆ, ಓರ್ವ ವಿದ್ಯಾರ್ಥಿ ಸಾವು..!
ಕಾರವಾರ: ಜಿಲ್ಲೆಯಲ್ಲಿ E- ಹಾಸ್ಪಿಟಲ್ ಅಡಿ ನೇಮಕಗೊಂಡಿದ್ದ, 25 ಹೊರಗುತ್ತಿಗೆ ಸಿಬ್ಬಂದಿಗಳ ದಿಢೀರ್ ವಜಾ..!
ಕಾರವಾರ: E-ಹಾಸ್ಪಿಟಲ್ ಅಡಿಯಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ನಿಯೋಜನೆಗೊಂಡಿದ್ದ ಸುಮಾರು 25 ಸಿಬ್ಬಂದಿಗಳನ್ನು ಇಂದಿನಿಂದ ಕೈ ಬಿಡುವಂತೆ ಸರ್ಕಾರ ಆದೇಶ ಹೊರಡಿಸಿದ್ದು, ಸಿಬ್ಬಂದಿಗಳು ದಿಢೀರ್ ವಜಾದಿಂದ ದಿಕ್ಕು ತೋಚದಂತಾಗಿದ್ದಾರೆ. ಸರ್ಕಾರ ಕಳೆದ ಒಂದು ತಿಂಗಳ ಹಿಂದೆ E-ಹಾಸ್ಪಿಟಲ್ ಅಡಿಯಲ್ಲಿ ಜಿಲ್ಲೆಯ ಎಲ್ಲಾ ತಾಲೂಕಾ ಸರ್ಕಾರಿ ಆಸ್ಪತ್ರೆಗಳಲ್ಲಿ ಹೊರಗುತ್ತಿಗೆ ಸಿಬ್ಬಂದಿಗಳ ನೇಮಕ ಮಾಡಿಕೊಂಡಿತ್ತು. ಆಯಾ ತಾಲೂಕಾ ಸರ್ಕಾರಿ ಆಸ್ಪತ್ರೆಗಳಲ್ಲಿ ಒಂದು ನಿರ್ದಿಷ್ಟ ಮೊತ್ತಕ್ಕೆ ಸಿಬ್ಬಂದಿಗಳ ನೇಮಕ ಮಾಡಿಕೊಳ್ಳುವಂತೆ ಆದೇಶಿಸಿತ್ತು. ಈ ಆದೇಶದಂತೆ ಆಸ್ಪತ್ರೆಗಳು ಡಾಟಾ ಎಂಟ್ರಿ ಸಿಬ್ಬಂದಿಗಳ ನೇಮಕ ಮಾಡಿಕೊಂಡಿದ್ದವು. ಈ ಸಿಬ್ಬಂದಿಗಳಿಂದಾಗಿ ಕೋವಿಡ್ ಸಂದರ್ಭದಲ್ಲಿ ಆಸ್ಪತ್ರೆಗಳಿಗೆ ಸಹಾಯ ಕೂಡ ಆಗಿತ್ತು. ಆದ್ರೆ ಈಗ ಸರ್ಕಾರ ದಿಢೀರ್ ಆದೇಶ ಹೊರಡಿಸಿದ್ದು, ಇಂದಿನಿಂದ ಸಿಬ್ಬಂದಿಗಳನ್ನು ಕೈ ಬಿಡಬೇಕು ಅಂತ ಆದೇಶದಲ್ಲಿ ತಿಳಿಸಿದೆ. ಇದರಿಂದಾಗಿ ಇಂದು ಜಿಲ್ಲೆಯ ಸರ್ಕಾರಿ ಆಸ್ಪತ್ರೆಗಳ ವ್ಯಾಕ್ಸಿನೇಷನ್ ಕಾರ್ಯದಲ್ಲಿ ವ್ಯತ್ಯಯವಾಗಿದೆ. ಸರ್ಕಾರಿ ಆಸ್ಪತ್ರೆಗಳು ನಾಳೆಯಿಂದ ವ್ಯಾಕ್ಸಿನೇಷನ್ ಕಾರ್ಯಕ್ಕೆ ತೊಂದರೆಯಾಗಲಿದೆ ಅಂತ ಆಯಾ ತಹಶೀಲ್ದಾರರುಗಳಿಗೆ ಪತ್ರವನ್ನ ಸಹ ಬರೆದಿದ್ದಾರೆ. ಆದ್ರೆ ಸರ್ಕಾರ ಮುಂದೆ...
ರಾಜ್ಯದಲ್ಲಿ ಮುಂದುವರಿಯತ್ತಾ ಲಾಕ್ ಡೌನ್..? ತಜ್ಞರ ಸಮಿತಿ ಸರ್ಕಾರಕ್ಕೆ ಕೊಟ್ಟ ವರದಿಯಲ್ಲಿ ಏನಿದೆ..?
ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಎರಡನೇ ಅಲೆ ತೀವ್ರ ಸಂಕಷ್ಟ ತಂದಿದೆ. ನಿತ್ಯ ಸಾವು-ನೋವಿನ ಪ್ರಮಾಣ ಹೆಚ್ಚುತ್ತಲೇ ಇದೆ. ರಾಜ್ಯದ ಬಹುತೇಕ ಗ್ರಾಮೀಣ ಭಾಗಕ್ಕೂ ಸೋಂಕು ಹೊಕ್ಕು ಹಿಂಡಿ ಹಿಪ್ಪೆ ಮಾಡಿದೆ. ಹೀಗಾಗಿ ಕೋವಿಡ್ ಪಾಸಿಟಿವಿಟಿ ರೇಟ್ ಶೇಕಡಾ 5 ಕ್ಕಿಂತ ಕಡಿಮೆ ಹಾಗೂ ಸಾವಿನ ಪ್ರಮಾಣ ಶೇಕಡಾ 1ಕ್ಕಿಂತ ಕಡಿಮೆಯಾಗುವರೆಗೂ ಲಾಕ್ ಡೌನ್ ಸೂಕ್ತ ಅಂತಾ ತಜ್ಞರ ಸಮಿತಿ ಸಲಹೆ ನೀಡಿದೆ. ಅಂದಹಾಗೆ, ಈಗ ರಾಜ್ಯ ಸರ್ಕಾರ ಹಲವು ನಿಯಮಾವಳಿಗಳ ಜೊತೆ ವಿಧಿಸಿರುವ ಸೆಮಿ ಲಾಕ್ ಡೌನ್ ಜೂನ್ 7 ಕ್ಕೆ ಕೊನೆಯಾಗಲಿದೆ. ಈ ನಿಟ್ಟಿನಲ್ಲಿ ರವಿವಾರ ಸಭೆ ನಡೆಸಿದ ತಜ್ಞರ ಸಮಿತಿ ಸೋಮವಾರ ಸರ್ಕಾರಕ್ಕೆ ಹಲವು ಅಂಶಗಳನ್ನು ಒಳಗೊಂಡ ವರದಿ ನೀಡಿದೆ. ಸೋಮವಾರ ರಾಜ್ಯದಲ್ಲಿ ಕೊರೋನಾ ಪಾಸಿಟಿವಿಟಿ ರೇಟ್ 13.57 ರಷ್ಟಿದ್ದರೇ, ಮರಣ ಪ್ರಮಾಣ ಶೇಕಡಾ 2.47 ರಷ್ಟಿದೆ. ಈ ಪ್ರಮಾಣ ಶೇಕಡಾ 5 ಮತ್ತು 1 ಕ್ಕಿಂತ ಕಡಿಮೆ ಬರುವರೆಗೂ ಲಾಕ್ ಡೌನ್ ಮುಂದುವರಿಸುವುದು ಸೂಕ್ತ ಎಂದು ಕೋವಿಡ್...
ಮುಂಡಗೋಡ: ಹೊಟ್ಟೆನೋವು ತಾಳದೆ ಕಾಡಿನಲ್ಲಿ ವ್ಯಕ್ತಿ ನೇಣಿಗೆ ಶರಣು..!
ಮುಂಡಗೋಡ: ಹೊಟ್ಟೆನೋವು ತಾಳಲಾರದೆ ವ್ಯಕ್ತಿಯೋರ್ವ ಕಾಡಿನಲ್ಲಿ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ಘಟನೆ ಮುಂಡಗೋಡ-ಹುಬ್ಬಳ್ಳಿ ರಸ್ತೆಯಲ್ಲಿ ನಡೆದಿದೆ. ಮುಂಡಗೋಡ ಗಣೇಶ ನಗರದ, ಬಸವರಾಜ್ ಬಾಲಪ್ಪ ಗೌಳಿ(36) ಆತ್ಮಹತ್ಯೆಗೆ ಶರಣಾದ ವ್ಯಕ್ತಿಯಾಗಿದ್ದಾನೆ. ಹೈನುಗಾರಿಕೆ ಮಾಡುತ್ತಿದ್ದ ವ್ಯಕ್ತಿ ತೀವ್ರ ಹೊಟ್ಟೆನೋವಿನಿಂದ ಬಳಲುತ್ತಿದ್ದ, ಹೀಗಾಗಿ ಸಾಕಷ್ಟು ಚಿಕಿತ್ಸೆ ನೀಡಿದರೂ ನೋವು ಕಡಿಮೆಯಾಗಿರಲಿಲ್ಲ. ಹೀಗಾಗಿ, ಅದನ್ನೇ ಮನಸಿಗೆ ಹಚ್ಚಿಕೊಂಡು ಖಿನ್ನತೆಗೆ ಒಳಗಾಗಿ ಆತ್ಮಹತ್ಯೆಗೆ ಶರಣಾಗಿದ್ದಾನೆ ಅಂತಾ ಮೃತನ ಸಹೋದರ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇಂದಿರಾನಗರಕ್ಕೂ ವಕ್ಕರಿಸಿದ ಕೊರೋನಾ..! ಸೋಂಕಿನಿಂದ ಮೃತಪಟ್ಟ ವೃದ್ಧನ ಅಂತಿಮ ಸಂಸ್ಕಾರ..!!
ಮುಂಡಗೋಡ-ತಾಲೂಕಿನ ಇಂದೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಕೊಪ್ಪ ಇಂದಿರಾನಗರದಲ್ಲಿ ಕೊರೋನಾ ಮಹಾಮಾರಿ ತನ್ನ ಕಬಂಧ ಬಾಹು ಚಾಚಿದೆ. ಅಂದಹಾಗೆ, ಇದುವರೆಗೂ ಒಂದೇ ಒಂದು ಪಾಸಿಟಿವ್ ಪ್ರಕರಣ ದಾಖಲಾಗದೇ ಸುರಕ್ಷಿತವಾಗಿದ್ದ ಹಳ್ಳಿಯಲ್ಲಿ ಈಗ ಕೊರೋನಾದಿಂದಲೇ ಒಂದು ಸಾವು ಸಂಭವಿಸಿದೆ. ನಿನ್ನೆ ಈ ಹಳ್ಳಿಯ 76 ವರ್ಷ ವಯಸ್ಸಿನ ವೃದ್ದ ಕೊರೋನಾ ಸೋಂಕಿನಿಂದ ಮೃತಪಟ್ಟಿದ್ದಾನೆ. ತೀವ್ರ ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ವದ್ದನನ್ನು ಚಿಕಿತ್ಸೆಗಾಗಿ ಕೋವಿಡ್ ಕೇರ್ ಸೆಂಟರ್ ಗೆ ದಾಖಲಿಸಲಾಗಿತ್ತು. ಆದ್ರೆ ಚಿಕಿತ್ಸೆ ಫಲಕಾರಿಯಾಗದೆ ವೃದ್ದ ಮೃತಪಟ್ಟಿದ್ದಾನೆ. ಹೀಗಾಗಿ, ಸೋಂಕಿತ ವೃದ್ಧನ ಅಂತಿಮ ಸಂಸ್ಕಾರ ಕೋವಿಡ್ ನಿಯಮಾನುಸಾರ, ಇಂದಿರಾನಗರದಲ್ಲಿ ನೆರವೇರಿಸಲಾಯಿತು. ಪಿಪಿಇ ಕಿಟ್ ಧರಿಸಿ ಅಂತಿಮ ಸಂಸ್ಕಾರ ನೆರವೇರಿಸಲಾಯಿತು.
ಮುಂಡಗೋಡ ಕೋವಿಡ್ ಕೇರ್ ಸೆಂಟರ್ನಲ್ಲೇ ಕೊರೋನಾ ಸೋಂಕಿತನ ಡ್ಯಾನ್ಸ್..!
ಮುಂಡಗೋಡ: ಕೊರೋನಾ ಅನ್ನೋದು ಈಗ ಇಡೀ ದೇಶದ ಜನರ ಜೀವ ಹಿಂಡ್ತಿದೆ. ಅದ್ರಲ್ಲೂ ಕೊರೋನಾ ಸೋಂಕು ದೃಢಪಟ್ಟರೆ ಮುಗಿತು ಎಷ್ಟೊ ಸೋಂಕಿತರು ಭಯದಿಂದಲೇ ಪ್ರಾಣ ಕಳೆದುಕೊಳ್ತಿದಾರೆ. ಆದ್ರೆ ಇಲ್ಲೊಬ್ಬ ಸೋಂಕಿತ ಯುವಕ ಕೋವಿಡ್ ಕೇರ್ ಸೆಂಟರ್ ನಲ್ಲೇ ಕುಣಿದು ಕುಪ್ಪಳಿಸ್ತಿದಾನೆ. ಕೋವಿಡ್ ಅಂದ್ರೆ ಭಯ ಪಡೋ ಜನ್ರಿಗೆ ಧೈರ್ಯ ತುಂಬಿದ್ದಾನೆ. ತನ್ನ ಜೊತೆ ಕೋವಿಡ್ ಕೇರ್ ಸೆಂಟರ್ ನಲ್ಲಿ ಅಡ್ಮಿಟ್ ಆಗಿದ್ದ ಇನ್ನಿತರ ರೋಗಿಗಳಿಗೂ ಆತ್ಮ ಸ್ಥೈರ್ಯ ತುಂಬಿದ್ದಾನೆ. ನಕ್ಕು ನಲಿಸಿದ್ದಾನೆ. ಕೊರೋನಾ ಅಂದ್ರೆ ಯಾರೂ ಭಯ ಪಡಬೇಡಿ ಅಂತಾ ಎಲ್ರಿಗೂ ತಿಳಿ ಹೇಳಿದ್ದಾನೆ.. ಅಂದಹಾಗೆ, ಈತನ ಹೆಸ್ರು ಮಹೇಂದ್ರ ಬಾಬು ಪಾಟೀಲ್ ಅಂತಾ ಮುಂಡಗೋಡ ತಾಲೂಕಿನ ನಂದಿಕಟ್ಟಾ ಗ್ರಾಮದವನು.. ಕಳೆದ ನಾಲ್ಕು ದಿನದ ಹಿಂದೆ ಕೊರೋನಾ ಸೋಂಕು ಪೀಡಿತನಾಗಿ ಮುಂಡಗೋಡಿನ ಕೋವಿಡ್ ಕೇರ್ ಸೆಂಟರ್ ಗೆ ದಾಖಲಾಗಿದ್ದಾನೆ.. ಆದ್ರೆ ಈತ ಇಲ್ಲಿ ಅಡ್ಮಿಟ್ ಆದ ನಂತರ ಇಲ್ಲಿನ ಇನ್ನಿತರ ಸೋಂಕಿತರಿಗೂ ಮನರಂಜನೆ ನೀಡ್ತಿದಾನೆ. ನಕ್ಕು ನಗಿಸ್ತಿದಾನೆ. ಈ ಮೂಲಕ ಸೋಂಕಿತರ...
ಅಳ್ನಾವರ- ತಾಲೂಕಿನ ಹುಲಿಕೇರಿಯಲ್ಲಿ ಕೋವಿಡ್ ಟೆಸ್ಟ್..!
ಅಳ್ನಾವರ- ತಾಲೂಕಿನ ಕಡಬಗಟ್ಟಿ ಗ್ರಾ.ಪಂಚಾಯತ ವ್ಯಾಪ್ತಿಯ ಹುಲಿಕೇರಿ ಗ್ರಾಮದಲ್ಲಿ ಕೋವಿಡ್ ಟೆಸ್ಟ್ ಮಾಡಲಾಯಿತು. ಈ ವೇಳೆ ಜನರಿಗೆ ತೊಂದರೆ ಆಗದಂತೆ ಅಂತರ ಕಾಪಾಡಿಕೊಂಡು ಕೋವಿಡ್ ನಿಯಮಾವಳಿ ಪಾಲನೆಯನ್ನು ಮಾಡಲಾಯಿತು ಮತ್ತು ಮಾಸ್ಕ ಹಾಕದವರಿಗೆ ಜಾಗೃತಿ ಮೂಡಿಸಿ ನಿಯಮಾವಳಿಗಳನ್ನು ಪಾಲಿಸಲು ಸೂಚನೆ ನೀಡಲಾಯಿತು. ಜನರು ಭಯ ಪಡುವ ಅವಶ್ಯಕತೆ ಇಲ್ಲ ಕೋವಿಡ್ ಗುಣಲಕ್ಷಣಗಳು ಕಂಡು ಬಂದಲ್ಲಿ ಸರಕಾರಿ ಶಾಲೆಯನ್ನು ಕೋವಿಡ್ ಕಾಳಜಿ ಕೇಂದ್ರವನ್ನಾಗಿ ಪರಿವರ್ತನೆ ಮಾಡಿ ಸೋಂಕಿತರಿಗೆ ಅಗತ್ಯ ಚಿಕಿತ್ಸೆ ನಿಡಲಾಗುತ್ತದೆ ಅಂತಾ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಸದಸ್ಯ ಅಭೂಬಕರ ನದಾಪ ತಿಳಿಸಿದರು. ಈ ಸಂಧರ್ಭದಲ್ಲಿ ಗ್ರಾ.ಪಂಚಾಯತ ಸದಸ್ಯರಾದ ಶ್ರೀಮತಿ ಇಮಾಂಬಿ ನದಾಫ, ಗ್ರಾ.ಪಂ ಕಾರ್ಯದರ್ಶಿ ಷಣ್ಮುಖ ಸುಳಗೇಕರ ಪಂಚಾಯತ್ ಸಿಬ್ಬಂದಿ ವರ್ಗ ಮತ್ತು , ಬಸವರಾಜ ಇನಾಮದಾರ್, ದಾವಲ್, ತಹಶೀಲ್ದಾರ ಮಲ್ಲಿಕಾರ್ಜುನ ಕಲ್ಲೂರ, ಜಮಾಲ ಮುನವಳ್ಳಿ ಸದ್ದಾಂ ಬೋಗುರ, ಇಸ್ಮಾಯಿಲ್ ಪಠಾಣ್, ಶಕೀಲ್ ಗೌಂಡಿ, ಸಂತೋಷ ಹರಿಜನ, ಶಿಂದಬಹಾದ, ಹುಸೇನ್ ಹಾಜರಿದ್ದರು.
ಸೋಂದಾ ಸ್ವರ್ಣವಲ್ಲಿ ಮಠದಿಂದ ಅಶಕ್ತರಿಗೆ ದಿನಸಿ ಕಿಟ್ ವಿತರಣೆ..!
ಶಿರಸಿ: ಆಧ್ಯಾತ್ಮ ಸಾಧನೆಯ ಜೊತೆಗೆ ಸಮಾಜಮುಖಿ ಮಠವಾಗಿಯೂ ಗುರುತಿಸಿಕೊಂಡಿರೋ ಉತ್ತರ ಕನ್ನಡ ಜಿಲ್ಲೆಯ ಶಿರಸಿಯ ಸೋಂದಾ ಸ್ವರ್ಣವಲ್ಲೀ ಮಹಾ ಸಂಸ್ಥಾನವು ಮಠದ ಸುತ್ತಲಿನ ಅಗತ್ಯವುಳ್ಳ ಜನರಿಗೆ ಉಚಿತವಾಗಿ ದಿನಸಿ ಸಾಮಗ್ರಿ ವಿತರಿಸಿತು. ಲಾಕ್ ಡೌನ್, ಕೋವಿಡ್ ಕಾರಣದಿಂದ ಬಡತನದಲ್ಲಿ ಇರೋ ಕುಟುಂಬಗಳಿಗೆ ಅಕ್ಕಿ, ಕಾಯಿ, ಬೆಲ್ಲ, ಬೇಳೆ, ಶ್ರೀದೇವರ ಪ್ರಸಾದವನ್ನ ಕೂಡ ಸ್ವರ್ಣವಲ್ಲೀ ಮಠಾಧೀಶ ಶ್ರೀ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮೀಜಿಗಳು ವಿತರಿಸಿದರು. ಇದೇ ವೇಳೆ ಈ ಸಂದಿಗ್ದ ಕಾಲವನ್ನು ಒಟ್ಟಾಗಿ ಎದುರಿಸಬೇಕಾಗಿದೆ. ಸಾಮಾಜಿಕ ಅಂತರ, ಮಾಸ್ಕ ಧಾರಣೆ ಮಾಡಬೇಕು. ಆಂತರಿಕ ಧೈರ್ಯಕ್ಕಾಗಿ ದೇವರ ಜಪ ಧ್ಯಾನ ಮಾಡಬೇಕು ಅಂತ ಸ್ವಾಮೀಜಿ ಆಶಿಸಿದರು. ಈ ವೇಳೆ ಮಠದ ಆಡಳಿತ ಮಂಡಳಿ ಅಧ್ಯಕ್ಷ ವಿ.ಎನ್.ಹೆಗಡೆ ಬೊಮ್ನಳ್ಳಿ, ಸೋಂದಾ ಗ್ರಾ.ಪಂ.ಅಧ್ಯಕ್ಷೆ ಮಮತಾ ಜೈನ್, ಮಠದ ವ್ಯವಸ್ಥಾಪಕ ಎಸ್.ಎನ್. ಗಾಂವಕರ ಇತರರು ಇದ್ದರು.
ಮುಂಡಗೋಡ ಪಟ್ಟಣದಲ್ಲಿ ಅಗತ್ಯ ವಸ್ತುಗಳ ಖರೀಧಿ ಭರಾಟೆ ಜೋರು..!
ಮುಂಡಗೋಡ- ಪಟ್ಟಣದಲ್ಲಿ ಇಂದಿನಿಂದ ವಾರದ 4 ದಿನಗಳ ಕಾಲ ಬೆಳಿಗ್ಗೆ 8 ಗಂಟೆಯಿಂದ ಮದ್ಯಾನ 12 ಗಂಟೆವರೆಗೆ ಅಗತ್ಯ ವಸ್ತುಗಳ ಖರೀಧಿಗೆ ಅವಕಾಶ ಕಲ್ಪಿಸಿರೋ ಹಿನ್ನೆಲೆಯಲ್ಲಿ ತಾಲೂಕಿನೆಲ್ಲೆಡೆಯಿಂದ ಪಟ್ಟಣಕ್ಕೆ ಬೆಳಗಿನಿಂದಲೇ ಜನ ಬಂದಿದ್ರು. ಅಗತ್ಯ ವಸ್ತುಗಳ ಖರೀಧಿಗೆ ಬಂದ ಜನ ಅಗತ್ಯ ವಸ್ತಗಳಿಗಾಗಿ ಮುಗಿಬೀಳುತ್ತಿರೊ ದೃಷ್ಯಗಳು ಸಾಮಾನ್ಯವಾಗಿತ್ತು. ಹೀಗಾಗಿ ಪೊಲೀಸ್ರು ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಸಿದ್ರು. ಇನ್ನು ದಿನಸಿ ಅಂಗಡಿಗಳ ಮಾಲೀಕರಿಗೂ ಅಂಗಡಿಗಳ ಮುಂದೆ ಗ್ರಾಹಕರಿಗೆ ಸಾಮಾಜಿಕ ಅಂತರ ಹಾಗೂ ಮಾಸ್ಕ್ ಬಳಸುವಂತೆ ಸೂಚಿಸಲು ಎಚ್ಚರಿಸಿದ್ರು.
ಮುಂಡಗೋಡ ಪಟ್ಟಣದಲ್ಲಿ ಅನಗತ್ಯ ತಿರುಗಾಡುವವರ ವಿರುದ್ಧ ಪೊಲೀಸರ ಕಠಿಣ ಕ್ರಮ..!
ಮುಂಡಗೋಡ- ಪಟ್ಟಣದಲ್ಲಿ ಅನಗತ್ಯ ತಿರುಗಾಡುವ ವಾಹನ ಸವಾರರಿಗೆ ಪೊಲೀಸ್ರು ಬಿಸಿ ಮುಟ್ಟಿಸುತ್ತಿದ್ದಾರೆ. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಬ್ಯಾರಿಕೇಡ್ ಹಾಕಿ ಪರಿಶೀಲನೆಗೆ ಇಳಿದಿರೋ ಪೊಲೀಸ್ರು ಅನಗತ್ಯವಾಗಿ ತಿರುಗಾಡುವ ವಾಹನಗಳ ಬಗ್ಗೆ ಕಣ್ಣಿಟ್ಟಿದ್ರು. ಬೈಕ್ ಸವಾರರು, ಕಾರ್ ಸವಾರರು ಪಟ್ಟಣದ ಒಳಗೆ ಅಥವಾ ಪಟ್ಟಣದಿಂದ ಹೊರಗೆ ಹೋಗುವ ಸಂದರ್ಭದಲ್ಲಿ ಅಂತವರನ್ನು ಪೊಲೀಸರು ಪರಿಶೀಲಿಸುತ್ತಿದ್ದರು. ಇನ್ನು ಮಾಸ್ಕ್ ಧರರಿಸದೇ ತಿರುಗಾಡುವ ಸವಾರರ ವಿರುದ್ಧ ಸಮರ ಸಾರಿರೋ ಪೊಲೀಸ್ರು, ಮಾಸ್ಕ್ ಧರಿಸದವರನ್ನು ತಡೆದು ಕ್ಲಾಸ್ ತೆಗೆದುಕೊಂಡರು, ಅಲ್ದೆ ದಂಡ ಹಾಕುವ ಮೂಲಕ ಬಿಸಿ ಮುಟ್ಟಿಸಿದ್ರು.