ಮುಂಡಗೋಡ ತಾಲೂಕಿನ ಹನಮಾಪುರ ಗ್ರಾಮದಲ್ಲಿ ದೇವಸ್ಥಾನ ಶೆಡ್ಡ್ ತೆರವುಗೊಳಿಸುವ ಸಲುವಾಗಿ ಎರಡು ಗುಂಪುಗಳ ನಡುವೆ ಗಲಾಟೆ ನಡೆದಿದೆ. ಈ ವೇಳೆ ಗಣೇಶ ಬಸಲಿಂಗಪ್ಪ ಸುಣಗಾರ ಎಂಬುವ ವ್ಯಕ್ತಿಯ ಮೇಲೆ ಹಲ್ಲೆ ನಡೆದಿದೆ ಅನ್ನೊ ಆರೋಪ ಕೇಳಿ ಬಂದಿದೆ. ಸದ್ಯ ತಾಲೂಕಾಸ್ಪತ್ರೆಗೆ ದಾಖಲಾಗಿ ಹಲ್ಲೆಗೊಳಗಾದವ ಚಿಕಿತ್ಸೆ ಪಡೆಯುತ್ತಿದ್ದಾನೆ.
ಬುಧವಾರ ಬೆಳಿಗ್ಗೆ ಹನುಮಾಪುರ ಗ್ರಾಮದ ಜನರೇಲ್ಲ ಸೇರಿ, ಗ್ರಾಮದ ಮಾಸ್ತಿ ಗುಡಿಯ ಹತ್ತಿರ ಇದ್ದ, ಬಸವಣ್ಣನ ಮೂರ್ತಿ ಯನ್ನು ಸ್ಥಳಾಂತರ ಮಾಡಿದ್ದರು. ಹೀಗಾಗಿ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತಿಗೆ ಮಾತು ಬೆಳೆದು ಗ್ರಾಮಸ್ಥರು ಹಾಗೂ ಅದೊಂದು ಕುಟುಂಬದ ನಡುವೆ ಗಲಾಟೆ ನಡೆದಿದೆ.
ಹುನಗುಂದ ಗ್ರಾಪಂ ಉಪ ಚುನಾವಣೆ: “ಕೈ” ಬೆಂಬಲಿತ ಲಕ್ಷ್ಮೀ ಹನ್ಮಂತ ಲಮಾಣಿ ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ..!
ಇದೆ ವೇಳೆ ನನ್ನ ಮೇಲೂ ಹಲ್ಲೆ ನಡೆದಿದೆ, ಅಲ್ದೆ ಜೀವ ಬೆದರಿಕೆ ಹಾಕಿದ್ದಾರೆ ಅಂತಾ ಆಸ್ಪತ್ರೆಯಲ್ಲಿ ಸದ್ಯ ಚಿಕಿತ್ಸೆಗೆ ದಾಖಲಾಗಿರೊ ಹಲ್ಲೆಗೊಳಗಾದವ ಆರೋಪಿಸಿದ್ದಾನೆ. ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ದೂರು ನೀಡಿದ್ದು, ಪೊಲೀಸರು ರಾಜೀ ಮಾಡ್ತಾರೋ ಅಥವಾ FIR ದಾಖಲಿಸ್ತಾರೊ ಕಾದು ನೋಡಬೇಕಿದೆ.