ಹುನಗುಂದ ಗ್ರಾಪಂ ಉಪ ಚುನಾವಣೆ: “ಕೈ” ಬೆಂಬಲಿತ ಲಕ್ಷ್ಮೀ ಹನ್ಮಂತ ಲಮಾಣಿ ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ..!

ಮುಂಡಗೋಡ ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಉಪ ಚುನಾವಣೆ ಘೋಷಣೆ ಆಗ್ತಿದ್ದಂತೆ, ಚುನಾವಣಾ ಪ್ರಕ್ರಿಯೆಗಳು ಜಾರಿಯಾಗಿವೆ. ಅಗಡಿಯ ವಾರ್ಡ್ ನಂಬರ್ 2 ರ ಸದಸ್ಯೆ ಮಹಾಬುಬ್ಬಿ ಮಹ್ಮದ್ ಸಾಬ್ ವಾಲೀಕಾರ್ ನಿಧನದಿಂದ ತೆರವಾಗಿದ್ದ ಸ್ಥಾನಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಇವತ್ತು ಬುಧವಾರ ಕೇವಲ ಒಂದೇ ಒಂದು ನಾಮಪತ್ರ ಸಲ್ಲಿಕೆಯಾಗಿದೆ. ಹೀಗಾಗಿ, ಬಹುತೇಕ ಅವಿರೋಧ ಆಯ್ಕೆಯಾಗುವ ಎಲ್ಲಾ ಸಾಧ್ಯತೆ ನಿಚ್ಚಳವಾಗಿದೆ.

ಅಂದಹಾಗೆ, ಸದ್ಯ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಲಕ್ಷ್ಮೀ ಹನಮಂತ ಲಮಾಣಿ ನಾಮಪತ್ರ ಸಲ್ಲಿಸಿದ್ದು, ಇವ್ರೇ ಬಹುತೇಕ ಅವಿರೋಧವಾಗಿ ಆಯ್ಕೆಯಾಗುವ ಎಲ್ಲಾ ಲಕ್ಷಣಗಳು ಇದ್ದು, ಅವಿರೋಧವಾಗಿ ಆಯ್ಕೆ ಮಾಡುವ ನಿಟ್ಟಿನಲ್ಲಿ ಇಲ್ಲಿನ ಮುಖಂಡರ ಸತತ ಪ್ರಯತ್ನ ಫಲಕೊಟ್ಟಿದೆ ಎನ್ನಲಾಗಿದೆ.

ಹನುಮಾಪುರ ಗ್ರಾಮದಲ್ಲಿ “ದೇವರ” ಜಾಗದಲ್ಲಿ ಗಲಾಟೆ, ಹಲ್ಲೆಗೊಳಗಾದ ಗಣೇಶ ಆಸ್ಪತ್ರೆಗೆ ದಾಖಲು..!

ಶಾಕಸ ಶಿವರಾಮ್ ಹೆಬ್ಬಾರರ ಮಾರ್ಗದರ್ಶನದಲ್ಲಿ ಸ್ಥಳೀಯ ಮುಖಂಡರಾದ ಎಚ್. ಎಂ‌.ನಾಯ್ಕ್, ಯುವ ಮುಖಂಡ ಬಸವರಾಜ್ ಆಸ್ತಕಟ್ಟಿ, ಗ್ರಾಮ ಪಂಚಾಯತಿ ಅಧ್ಯಕ್ಷ ಷರೀಪಸಿಂಗ್ ಸಿಗ್ಗಟ್ಟಿ, ಸದಸ್ಯರಾದ ಸಿದ್ದನಗೌಡ ಪಾಟೀಲ, ತುಕಾರಾಮ್ ಹೊನ್ನಳ್ಳಿ, ಈಶ್ವರಗೌಡ ಅರಳಿಹೊಂಡ, ಶೇಜಾದಬಿ ಅಗಸರ್, ಮುಖಂಡರಾದ ರಾಮಣ್ಣ ಲಮಾಣಿ, ಸಿದ್ದಪ್ಪ ಹಡಪದ, ಧರಣೇಂದ್ರ ಹೊಂಡದಕಟ್ಟಿ, ಮರಿಯಪ್ಪ ಬೆನಕನಳ್ಳಿ, ಸಿದ್ದು ನಡಮನಿ, ಭಾಸ್ಕರ್ ನಾಯ್ಕ್ ಸೇರಿದಂತೆ ಹಲವರ ನೇತೃತ್ವದಲ್ಲಿ ಅವಿರೋಧ ಆಯ್ಕೆಯಾಗುವ ಸಾಧ್ಯತೆ ಇದೆ ಎನ್ನಲಾಗಿದೆ.

error: Content is protected !!