ಹುನಗುಂದ ಗ್ರಾಪಂ ಚುನಾವಣೆ; “ಕೈ” ಬೆಂಬಲಿತರಿಂದ ನಾಮಪತ್ರ ಸಲ್ಲಿಕೆ

ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಚುನಾವಣೆ ಹಿನ್ನೆಲೆ ಇಂದು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ರು.. ಸಿದ್ದನಗೌಡ ವರ್ಸಸ್ ಚಂದ್ರು ವಾರ್ಡ್ ನಂಬರ್ ಒಂದರ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಮಾಜಿ ತಾಲೂಕಾ ಪಂಚಾಯತ್ ಉಪಾಧ್ಯಕ್ಷ ಸಿದ್ದನಗೌಡ ಪಾಟೀಲ್ ನಾಮಪತ್ರ ಸಲ್ಲಿಸಿದ್ರು.. ಬಿಜೆಪಿ ಬೆಂಬಲಿತ ಅಭ್ಯರ್ಥಿ ಚಂದ್ರು ಹಡಪದ ವಿರುದ್ಧ ಅಖಾಡದಲ್ಲಿರೋ ಸಿದ್ದನಗೌಡ ಪಾಟೀಲ್ ಕೈ ಪಡೆಗೆ ಆಕ್ಸಿಜನ್ ಆಗ್ತಾರಾ ಕಾದು ನೋಡಬೇಕಿದೆ.. ವಿನೋದ್ ವರ್ಸಸ್ ತುಕಾರಾಂ ಇನ್ನು ವಾರ್ಡ್ ನಂಬರ್ ಎರಡರಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ರೈತ ತುಕಾರಾಮ್ ಹೊನ್ನಳ್ಳಿ ನಾಮಪತ್ರ ಸಲ್ಲಿಸಿದ್ರು.. ಇಲ್ಲಿ ಬಹುತೇಕ ಬಿಜೆಪಿ ಹಾಗೂ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಗಳ ಮದ್ಯೆ ನೇರ ಹಣಾಹಣಿ ನಡಿಯೋ ಸಾಧ್ಯತೆ ಇದ್ದು ತೀವ್ರ ಜಿದ್ದಾ ಜಿದ್ದು ಏರ್ಪಡುವ ಲಕ್ಷಣಗಳಿವೆ.. ಈಗಾಗಲೇ ಬಿಜೆಪಿ ಬೆಂಬಲಿತರಾಗಿ ನಾಮಪತ್ರ ಸಲ್ಲಿಸಿರೋ ವಿನೋದ್ ಬಿಸನಳ್ಳಿ ವಿರುದ್ಧ ತೊಡೆತಟ್ಟಿರೋ ತುಕಾರಾಮ್ ಹೊನ್ನಳ್ಳಿ ಅದ್ಯಾವ ಮಟ್ಟಿಗೆ ಠಕ್ಕರ್ ಕೊಡ್ತಾರೋ ಕಾದು ನೋಡಬೇಕಿದೆ.. ಈಶ್ವರಗೌಡ ವರ್ಸೆಸ್ ಮಹಾವೀರ್ ಇನ್ನು ಹುನಗುಂದ ಗ್ರಾಮ...

ವಿದ್ಯುತ್ ಅವಘಡ; ಭತ್ತದ ಮೇವು ತುಂಬಿದ್ದ ಟ್ರಾಕ್ಟರ್ ಗೆ ಬೆಂಕಿ, ಹಾನಿ

ಮುಂಡಗೋಡ- ಭತ್ತದ ಒಣಮೇವು ಸಾಗಿಸುತ್ತಿದ್ದ ಟ್ರಾಕ್ಟರ್ ಗೆ ಬೆಂಕಿ ತಗುಲಿ ಸುಟ್ಟು ಹೋದ ಘಟನೆ ತಾಲೂಕಿನ ಪಾಳಾದಲ್ಲಿ ನಡೆದಿದೆ.. ವಿದ್ಯತ್ ಕಂಬದ ಲೈನ್ ತಾಗಿ ಶಾರ್ಟ್ ಸರ್ಕ್ಯೂಟ್ ನಿಂದ ಬೆಂಕಿ ಹೊತ್ತಿಕೊಂಡಿದ್ದು ಟ್ರಾಕ್ಟರ ನಲ್ಲಿ ಸಾಗಿಸುತ್ತಿದ್ದ 0.5 ಎಕರೆಯ, ಸುಮಾರು 50 ಸಾವಿರ ರೂ. ಮೌಲ್ಯದ ಬತ್ತದ ಮೇವು ಸುಟ್ಟು ಭಸ್ಮವಾಗಿದೆ.. ಅದೃಷ್ಟವಶಾತ್ ಟ್ರಾಕ್ಟರ್ ಗೆ ಯಾವುದೇ ಹಾನಿಯಾಗಿಲ್ಲ.. ಇಕ್ಬಾಲ್ ಬಾರಾಸಾಬ್ ಹೊಂಡದ ಎಂವುವವರಿಗೆ ಸೇರಿದ ಮೇವು ಇದಾಗಿದ್ದು, ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿ, ಆಗಬಹುದಾಗಿದ್ದ ಹೆಚ್ಚಿನ ಹಾನಿ ತಡೆದಿದ್ದಾರೆ..

ಹುನಗುಂದ ಗ್ರಾಪಂ ಚುನಾವಣೆ; ಬಿಜೆಪಿ ಬೆಂಬಲಿತ ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ

ಮುಂಡಗೋಡ- ತಾಲೂಕಿನ ಹುನಗುಂದ ಗ್ರಾಮ ಪಂಚಾಯತಿ ಚುನಾವಣೆಗೆ ಇಂದಿನಿಂದ ಬಿರುಸಿನ ಚಟುವಟಿಕೆಗಳು ಪ್ರಾರಂಭವಾಗಿವೆ. ಈಗಾಗಲೇ ಇಲ್ಲಿನ ಪ್ರಮುಖ ಮೂರು ವಾರ್ಡುಗಳಿಗೆ ಬಿಜೆಪಿ ತನ್ನ ಬೆಂಬಲಿತ ಅಭ್ಯರ್ಥಿಗಳನ್ನ ಫೈನಲ್ ಮಾಡಿಕೊಂಡಿದೆ, ಬರೋಬ್ಬರಿ 9 ಜನ ಅಭ್ಯರ್ಥಿಗಳು ಇಂದು ನಾಮಪತ್ರ ಸಲ್ಲಿಸಿದ್ದಾರೆ. ಅದ್ರಂತೆ, ಕಾಂಗ್ರೆಸ್ ಕೂಡ ಮೂರೂ ವಾರ್ಡುಗಳಲ್ಲಿ ತನ್ನ ಅಭ್ಯರ್ಥಿಗಳನ್ನ ಕಣಕ್ಕಿಳಿಸಲು ಫಿಕ್ಸ್ ಮಾಡಿಕೊಂಡಿದೆ..ವಾರ್ಡ್ ನಂಬರ್ – 1.                                      ವಾರ್ಡ್ ನಂಬರ್ ಒಂದರಲ್ಲಿ ಬಿಜೆಪಿ ಬೆಂಬಲಿತರಾಗಿ ಒಟ್ಟೂ ಮೂರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ.. ಅದ್ರಲ್ಲಿ, ಚಂದ್ರು ಹಡಪದ ಈ ವಾರ್ಡಿನಲ್ಲಿ ವರ್ಷಗಳಿಂದಲೇ ಗ್ರೌಂಡ್ ವರ್ಕ್ ನಲ್ಲಿ ತೊಡಗಿದ್ದರು..ಹೀಗಾಗಿ, ಚಂದ್ರು ಈಗ ನಿರೀಕ್ಷೆಯಂತೆ ಅಭ್ಯರ್ಥಿಯಾಗಿದ್ದಾರೆ.. ಇನ್ನು ಈ ವಾರ್ಡಿನಿಂದ ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿಯಾಗಿ ಸಿದ್ದನಗೌಡ ಪಾಟೀಲ್ ಕಣಕ್ಕಿಳಿಯೋದು ಗ್ಯಾರಂಟಿ ಅನ್ನೊ ಮಾತು ಕೇಳಿ ಬಂದಿದೆ.. ಈ ಮೊದಲು, ತಾಲೂಕಾ...

ಮುಂಡಗೋಡ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ..! ಮರೆಯಲಾರದ ಅದ್ಭುತ ಕ್ಷಣ..!!

ಮುಂಡಗೋಡ- ನಿಜಕ್ಕೂ ಅದೊಂದು ಅದ್ಭುತ ಕಾರ್ಯಕ್ರಮ.. ಅವಾಗೇಲ್ಲಾ ನಾವು ಹೇಗಿದ್ವಿ..? ಅಂತಾ ಪ್ರತೀಕ್ಷಣ ನೆನಪಿನ ಪುಟಗಳ ಮೇಲೆ ಹಾದು ಹೋಗುತ್ತಿದ್ದ ಭಾವನೆಗಳೆಲ್ಲ ಥಟ್ಟನೇ ಎದ್ದು ಕುಳಿತ ಅನುಭವ.. ಕೀಟಲೆ, ಮೋಜು, ಮಸ್ತಿ ಒಂದಾ ಎರಡಾ..? ನಮಗೆ ಮತ್ತೆ ಅಂತಹದ್ದೊಂದು ಗೋಲ್ಡನ್ ಲೈಫ್ ಸಿಗತ್ತಾ..? ಇಂತಹದ್ದೊಂದು ಪ್ರಶ್ನೆಗೆ ಬಹುಶಃ ಯಾರೂ ಉತ್ತರಿಸಲಿಕ್ಕಿಲ್ಲ.. ಆದ್ರೆ, ಮುಂಡಗೋಡಿನ ಕೆಲವು ಭಾವನಾತ್ಮಕ ಜೀವಿಗಳ ಕೂಟ ಮತ್ತದೇ ಹಳೆಯ ನೆನಪಿನ ದೋಣಿ ಏರಿದೆ.. ಆ ಹೊತ್ತಲ್ಲಿ ನಡೆದುಹೋದ ಅಷ್ಟೂ ಘಟನೆಗಳನ್ನ ಭಾವದಂಗಳದಲ್ಲಿ ಮತ್ತೊಮ್ಮೆ ಮೆಲಕು ಹಾಕಿದೆ.. ಹೌದು, ಮುಂಡಗೋಡಿನಲ್ಲಿ ಹಳೆಯ ವಿದ್ಯಾರ್ಥಿಗಳು ಸೇರಿ ಇಂದು ಸ್ನೇಹ ಮಿಲನ ಕಾರ್ಯಕ್ರಮ ಹಮ್ಮಿಕೊಂಡಿದ್ರು.. 1988-91 ರ ಸಾಲಿನಲ್ಲಿ ಮುಂಡಗೋಡಿನ ಪದವಿ ಪೂರ್ವ ಹಾಗೂ ಪ್ರಥಮಧರ್ಜೆ ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಹಳೆಯ ವಿದ್ಯಾರ್ಥಿಗಳ ಸ್ನೇಹ ಮಿಲನ ಹಾಗೂ ಗುರುವಂದನಾ ಕಾರ್ಯಕ್ರಮ ಮುಂಡಗೋಡಿನಲ್ಲಿ ಇಂದು ನಡೆಯಿತು. ಎಷ್ಟೋ ವರ್ಷಗಳ ಬಳಿಕ ಮತ್ತೆ ಸ್ನೇಹಮಿಲನ ಕಾರ್ಯಕ್ರಮದ ಮೂಲಕ ಹಳೆಯ ಗೆಳೆಯರು ಒಂದೆಡೆ ಸೇರಿದ್ರು.. ಎಲ್ರೂ ಒಂದಿಲ್ಲೊಂದು...

ಕೊಪ್ಪ ಬಳಿ ಆಯತಪ್ಪಿ ಬಿದ್ದ ಬೈಕ್; ಬೌದ್ದ ಬಿಕ್ಕುವಿಗೆ ಗಂಭೀರ ಗಾಯ

ಮುಂಡಗೋಡ: ಬೈಕ್ ಆಯತಪ್ಪಿ ಬಿದ್ದು ಬೈಕ್ ಸವಾರ ಬೌದ್ದ ಸನ್ಯಾಸಿಗೆ ಗಂಭೀರ ಗಾಯವಾಗಿ, ಹಿಂಬದಿ ಕುಳಿತಿದ್ದ ಮತ್ತೋರ್ವನಿಗೆ ಸಣ್ಣಪುಟ್ಟ ಗಾಯವಾದ ಘಟನೆ ತಾಲೂಕಿನ ಕೊಪ್ಪ ಇಂದಿರಾನಗರ ಸೇತುವೆ ಬಳಿ ನಡೆದಿದೆ.. ಗಾಯಗೊಂಡವರನ್ನು ಟಿಬೆಟಿಯನ್ ಲಾಮಾ ಕ್ಯಾಂಪ್ ನಂ.2 ರ ಬೌದ್ದ ಬಿಕ್ಕು ಸಿರಿಂಗ್ ಅಂತಾ ಗುರುತಿಸಲಾಗಿದೆ.. ಹಿಂಬದಿ ಸವಾರ ನಿಮಾ ಅಂತಾ ತಿಳಿದು ಬಂದಿದೆ.. ಇವರಿಬ್ಬರು ಸೇರಿ ಮುಂಡಗೋಡದಿಂದ ಕಲಘಟಗಿ ರಸ್ತೆಯ ಕಡೆ ತಮ್ಮ ಮೋಟಾರ ಸೈಕಲ್‌ನ್ನು ಚಾಲನೆ ಮಾಡಿಕೊಂಡು ಹೋಗುತ್ತಿರುವಾಗ ಇಂದಿರಾನಗರದ ಸೇತುವೆಯ ಹತ್ತಿರ ಬೈಕನಿಂದ ಆಯತಪ್ಪಿ ಬಿದ್ದಿದ್ದಾರೆ.. ಚಾಲಕ ಸಿರಿಂಗ ಎಂಬುವನಿಗೆ ತಲೆಗೆ ಹಾಗೂ ಹಣೆಗೆ ಗಂಭೀರ ಗಾಯಗೊಂಡಿದ್ದು ತಾಲೂಕಾ ಆಸ್ಪತ್ರೆಯಲ್ಲಿ ಪ್ರಾಥಮಿಕ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿಯ ಕಿಮ್ಸಗೆ ಕಳುಹಿಸಲಾಗಿದೆ. ಹಿಂಬದಿ ಸವಾರನಿಗೆ ಸಣ್ಣ ಪುಟ್ಟ ಗಾಯಗಾಳಾಗಿವೆ. ಮುಂಡಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ..

ಅವಿರೋಧ ಆಯ್ಕೆಗೆ ಹರಾಜು; ಅಂತವರ ಗಡಿಪಾರಿಗೆ ಚು.ಆಯೋಗ ತಯಾರಿ

ಕಾರವಾರ- ಗ್ರಾಮ ಪಂಚಾಯತಿ ಚುನಾವಣೆಯಲ್ಲಿ ಇನ್ನಿಲ್ಲದ ಅಕ್ರಮಗಳು ನಡಿಯತ್ತೆ.. ಹಣ, ಹೆಂಡ, ಸೀರೆ ಅದು ಇದು ಅಂತಾ ಆಮೀಷಗಳನ್ನ ಒಡ್ಡಿ ಮತದಾರರನ್ನ ಸೆಳೆಯುವ ಅಡ್ಡದಾರಿಗಳನ್ನೂ ಅಭ್ಯರ್ಥಿಗಳು ಹಿಡಿಯುತ್ತಾರೆ.. ಸತ್ಯ ಅಂದ್ರೆ ಕೆಲವು ಹಳ್ಳಿಗಳಲ್ಲಿ ಗ್ರಾಮ ಪಂಚಾಯತಿಗೆ ಅವಿರೋಧ ಆಯ್ಕೆಯಾಗಲು ಹರಾಜು ನಡೆಸುವ ಹೀನ ಸಂಸ್ಕೃತಿಯೂ ನಡೆಯುತ್ತಿದೆ.. ಇಷ್ಟಿಷ್ಟು ಹಣ ಕೊಟ್ರೆ ಮುಗೀತು, ಆತ ಚುನಾವಣೆಗೆ ಸ್ಪರ್ಧಿಸದೇ ಅವಿರೋಧವಾಗಿ ಆಯ್ಕೆಯಾಗಿ ಬಿಡುತ್ತಾನೆ.. ಅಲ್ಲಿ ಯಾರ ಹತ್ರ ಹಣ ಇದೆಯೋ ಅವನೇ ಸದಸ್ಯನಾಗಿ ಬಿಡ್ತಾನೆ.. ಅಂತಹ ಹಣವನ್ನು ದೇವಸ್ಥಾನಗಳಿಗೋ ಅಥವಾ ಇನ್ನಿತರ ಗ್ರಾಮದ ಸಂಸ್ಥೆಗಳಿಗೋ ಉಪಯೋಗಿಸಿಕೊಳ್ಳುವ ವ್ಯವಸ್ಥೆಯನ್ನ ಕೆಲವು ಗ್ರಾಮಗಳಲ್ಲಿ ಮಾಡಿಕೊಳ್ಳಲಾಗಿರತ್ತೆ.. ಹೀಗಾಗಿ ಇಂತಹ ಪ್ರಜಾತಂತ್ರ ವಿರೋಧಿ ಪದ್ದತಿಗೆ ಕಡಿವಾಣ ಹಾಕಲು ರಾಜ್ಯ ಚುನಾವಣಾ ಆಯೋಗ ಕಟ್ಟು ನಿಟ್ಟಿನ ಕ್ರಮಕ್ಕೆ ಮುಂದಾಗಿದೆ.. ಹಾಗೆ ನಿಯಮಗಳ ವಿರುದ್ಧವಾಗಿ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಅಭ್ಯರ್ಥಿಗಳನ್ನು ಹರಾಜು ಹಾಕಿದರೆ ಅಂಥವರನ್ನು ಚುನಾವಣೆ ಪ್ರಕ್ರಿಯೆ ಮುಗಿಯುವವರೆಗೂ ಗಡಿಪಾರು ಮಾಡಲು ಚುನಾವಣಾ ಆಯೋಗ ಮುಂದಾಗಿದೆ. ಚುನಾವಣಾ ಆಯೋಗದ ಕಟ್ಟುನಿಟ್ಟಿನ ಎಚ್ಚರಿಕೆಯ ನಡುವೆಯೂ...

ಗ್ರಾಪಂ ಚುನಾವಣೆ; ಬಿಜೆಪಿಯಲ್ಲಿ ಅಭ್ಯರ್ಥಿಗಳ ಆಯ್ಕೆ ಕಸರತ್ತು..! ಮೂಲ- ವಲಸಿಗರ ಭಿನ್ನ ಮಸಲತ್ತು..!!

ಮುಂಡಗೋಡ: ತಾಲೂಕಿನಲ್ಲಿ ಗ್ರಾಮ ಪಂಚಾಯತಿ ಚುನಾವಣೆ ರಂಗು ಪಡೆದಿದೆ.. ಬಿಜೆಪಿಗೆ ತನ್ನ ಬೆಂಬಲಿತ ಅಭ್ಯರ್ಥಿಗಳ ಆಯ್ಕೆಯೇ ಪೀಕಲಾಟ ತಂದಿಟ್ಟಿದೆ.. ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ್ ಹೆಬ್ಬಾರ ಪಟ್ಟಣದ ಹೊರ ವಲಯದಲ್ಲಿರುವ ಮಹಾಲೆ ಮಿಲ್ ನಲ್ಲಿ ರವಿವಾರ ದಿನ ತೀವ್ರ ಕಸರತ್ತು ನಡೆಸಿ, ಕೆಲವೊಂದು ಅಭ್ಯರ್ಥಿಗಳ ಪಟ್ಟಿ ರೆಡಿ ಮಾಡಿದ್ದಾರೆ.. ಆದ್ರೆ ಇಡೀ ಇಡಿಯಾಗಿ ಮುಖಂಡರನ್ನ ಕರೆದ್ರೂ ಅಭ್ಯರ್ಥಿಗಳ ಆಯ್ಕೆ ಮಾತ್ರ ಪೂರ್ಣಗೊಂಡಿಲ್ಲ.. ತಾಲೂಕಿನ ಪ್ರತಿ ಪಂಚಾಯತ ವ್ಯಾಪ್ತಿಯ ವಾರ್ಡಗಳಲ್ಲಿ ಆಯಾ ಮುಖಂಡರ ಸಲಹೆ ಸೂಚನೆ ಪಡೆದೇ ಅಭ್ಯರ್ಥಿಗಳ ಆಯ್ಕೆ ಮಾಡಲು ತೀರ್ಮಾನಿಸಿರೋ ಸಚಿವರು, ಅಂತವರ ಸಲಹೆ ಸೂಚನೆ ಪಡೆದಿದ್ದಾರೆ.‌ ಬೆಳಿಗ್ಗೆ ಹತ್ತು ಗಂಟೆಗೆ ಆರಂಭವಾಗಿದ್ದ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಸಂಜೆಯವರೆಗೂ ಮುಗಿದಿರಲಿಲ್ಲ.. ಪ್ರತಿ ಪಂಚಾಯತ ವ್ಯಾಪ್ತಿಯಿಂದ, ತಮ್ಮ ತಮ್ಮ ಮುಖಂಡರೊಂದಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದ ಆಕಾಂಕ್ಷಿಗಳು, ಹೇಗಾದ್ರೂ ಸರಿ ಪಕ್ಷದ ಅಭ್ಯರ್ಥಿಯಾಗಿ ಕಣಕ್ಕಿಳಿಯಲೇ ಬೇಕು ಅನ್ನೋ ಉಮೇದಿನಲ್ಲಿದ್ದರು.. ತಾಲೂಕಿನ ಪ್ರತಿಯೊಂದೂ ಪಂಚಾಯತಿ ವ್ಯಾಪ್ತಿಯ ಮುಖಂಡರನ್ನು ಸಭೆಯಲ್ಲಿ ಕರೆದು ಅವರ ಅಭಿಪ್ರಾಯವನ್ನು ಆಲಿಸಿದ...

ಕೋಡಿಹಳ್ಳಿ ವಿರುದ್ಧ ಸಚಿವ ಹೆಬ್ಬಾರ್ ಕಿಡಿ ಪ್ರತಿಭಟನೆ ಕೈಬಿಡಿ, ನೌಕರರಿಗೆ ಮನವಿ

ಮುಂಡಗೋಡ- ರಾಜ್ಯದ ಸಾರಿಗೆ ನೌಕರರು ಮುಂದಿಟ್ಟಿರುವ ಬಹುತೇಕ ಬೇಡಿಕೆಯನ್ನು ಈಡೇರಿಸುವುದಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನವರ ಇಂದು ಭರವಸೆ ನೀಡಿದ್ದಾರೆ ಸಾರಿಗೆ ನೌಕರರು ಮುಷ್ಕರ ಕೈಬಿಟ್ಟು ಕರ್ತವ್ಯಕ್ಕೆ ಹಾಜರಾಗುವಂತೆ ಸಚಿವ ಶಿವರಾಮ್ ಹೆಬ್ಬಾರ್ ಮನವಿ ಮಾಡಿದ್ದಾರೆ. ರೈತ ನಾಯಕರು ಎನಿಸಿಕೊಂಡಿರುವ ಕೋಡಿಹಳ್ಳಿ ಚಂದ್ರಶೇಖರ ಅವರ ಯಾವುದೇ ಪ್ರಚೋದನೆಗೆ ಒಳಗಾಗದೆ ರಾಜ್ಯದ ಜನರ ಹಿತಕ್ಕಾಗಿ ತಮ್ಮ ಪ್ರತಿಭಟನೆಯನ್ನು ಹಿಂಪಡೆಯುವ ಮೂಲಕವಾಗಿ ಕರ್ತವ್ಯಕ್ಕೆ ಹಾಜರಾಗಲು ಸಚಿವರು ವಿನಂತಿಸಿದ್ದಾರೆ.. ಕೋಡಿಹಳ್ಳಿ ಚಂದ್ರಶೇಖರ ಅವರು ಅನಗತ್ಯವಾಗಿ ತಮಗೆ ಬೇಡವಾದ ಕ್ಷೇತ್ರದಲ್ಲಿ ಮೂಗು ತೂರಿಸಿ ರಾಜ್ಯದಲ್ಲಿ ಶಾಂತಿ ಕದಡುವ ಕೃತ್ಯಕ್ಕೆ ಕೈ ಹಾಕಿರುವುದು ಅವರ ವ್ಯಕ್ತಿತ್ವಕ್ಕೆ ಶೋಭೆ ತರುವುದಿಲ್ಲ ಇಂತಹ ಕೃತ್ಯವನ್ನು ನಾನು ತೀವ್ರವಾಗಿ ಖಂಡಿಸುತ್ತೆನೆ ಅಂತಾ ಸಚಿವ ಶಿವರಾಮ್ ಹೆಬ್ಬಾರ್ ಖಂಡಿಸಿದ್ರು..

ಯುವತಿ ನಾಪತ್ತೆ ದೂರು; ಅಗಡಿ ಗ್ರಾಮದ ಯುವಕನೂ ನಾಪತ್ತೆ

ಮುಂಡಗೋಡ: ಪಟ್ಟಣದ ಕಿಲ್ಲೇ ಓಣಿಯಲ್ಲಿನ ಯುವತಿಯೋರ್ವಳು ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಹೋಗಿ ಕಾಣೆಯಾದ ಬಗ್ಗೆ ಮುಂಡಗೋಡ ಠಾಣೆಯಲ್ಲಿ ದೂರು ದಾಖಲಾಗಿದೆ. ಕಾಣೆಯಾದ ಯುವತಿಯನ್ನು ಪರವೀನಬಾನು ಫಕೀರ(20) ಎಂದು ತಿಳಿದು ಬಂದಿದ್ದು ಈಕೆಯು ಡಿ.4 ರಂದು ಮಧ್ಯಾಹ್ನ ಮನೆಯಲ್ಲಿ ಯಾರಿಗೂ ಹೇಳದೆ ಕೇಳದೆ ಮನೆಯಿಂದ ಹೋದವಳು ಈ ವರೆಗೂ ಮನೆಗೂ ಬಾರದೆ ಸಂಬಂಧಿಕರ ಮನೆಗೂ ಹೋಗದೆ ನಾಪತ್ತೆಯಾಗಿದ್ದಾಳೆ. ತಾಲೂಕಿನ ಅಗಡಿ ಗ್ರಾಮದ ಯುವಕ ಶಾರೂಖ್ ಪಠಾಣ ಎಂಬುವನು ಕಾಣುತ್ತಿಲ್ಲ ಆತನೊಂದಿಗೆ ಹೋಗಿರಬಹುದೆಂಬ ಸಂಶಯವಿದೆ ತಮ್ಮ ಸಹೋದರಿಯನ್ನು ಹುಡಿಕಿ ಕೊಡಬೇಕೆಂದು ಯುವತಿಯ ಸಹೋದರ ಮಹ್ಮದಕಾಸಿಫ್ ರಜಾ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

ಗುಂಜಾವತಿ ಬಳಿ ಕಾರಿಗೆ ಬೈಕ್ ಡಿಕ್ಕಿ; ಬೈಕ್ ಸವಾರ ಗಂಭೀರ

ಮುಂಡಗೋಡ: ಕಾರಿಗೆ ಮೋಟರ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಗಂಭೀರ ಗಾಯಗೊಂಡ ಘಟನೆ ತಾಲೂಕಿನ ಗುಂಜಾವತಿ ಗ್ರಾಮದ ಮಸೀದಿಯ ಹತ್ತಿರ ಸಂಭವಿಸಿದೆ. ಗಾಯಗೊಂಡ ಬೈಕ್ ಸವಾರನನ್ನು ಮೈನಳ್ಳಿ ಗ್ರಾಮದ ಸಣ್ಯಾ ಸಿದ್ದಿ ಎಂದು ತಿಳಿದು ಬಂದಿದೆ. ಈತನು ಮುಂಡಗೋಡ ಕಡೆಯಿಂದ ಹೋಗುತ್ತಿರುವಾಗ ಗುಂಜಾವತಿ ಗ್ರಾಮದ ಮಸೀದಿಯ ಹತ್ತಿರ ಯಲ್ಲಾಪೂರದಿಂದ ಮುಂಡಗೋಡ ಕಡೆಗೆ ಬರುತ್ತಿರುವ ಕಾರಿಗೆ ಡಿಕ್ಕಿ ಹೊಡೆದು ಸ್ವಯಂಕೃತ ಅಪಘಾತ ಪಡಿಸಿಕೊಂಡು ಹಣೆ, ತಲೆಗೆ, ಕಾಲು ಹಾಗೂ ಗದ್ದಕ್ಕೆ ಗಾಯಪಡಿಸಿಕೊಂಡಿದ್ದಾನೆಂದು ಮುಂಡಗೋಡ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಲಾಗಿದೆ.

error: Content is protected !!