ಕಾರವಾರ: ಗೋಕರ್ಣ ಪ್ರವಾಸಿ ತಾಣದಲ್ಲಿ ಸಾರ್ವಜನಿಕರ ಮತ್ತು ಪ್ರವಾಸಿಗರ ಸೂಕ್ತ ರಕ್ಷಣೆಗೆ ಮತ್ತು ಇಲ್ಲಿ ಯಾವುದೇ ಅಪರಾಧ ಪ್ರಕ್ರಿಯೆ ನಡೆಯದಂತೆ ತಡೆಗಟ್ಟುವ ಉದ್ದೇಶದಿಂದ ಈ ಹಿಂದೆ ಇದ್ದ ಸಿಸಿ ಕ್ಯಾಮೆರಾ ಜೊತೆ ಇನ್ನೂ ಹೆಚ್ಚು ಸಿಸಿ ಕ್ಯಾಮೆರಾ ಅಳವಡಿಸಿ ಡಿಜಿಟಲ್ ಪೊಲೀಸ್ ವ್ಯವಸ್ಥೆಯನ್ನು ಮಾಡಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠ್ಠಾಧಿಕಾರಿ ಎಂ. ನಾರಾಯಣ್ ಹೇಳಿದರು.
ಅವರು ಬುಧವಾರ ಗೋಕರ್ಣದಲ್ಲಿ , ಸಾರ್ವಜನಿಕರ ಮತ್ತು ಪ್ರವಾಸಿಗರ ಸುರಕ್ಷತೆ ಹಾಗೂ ಜಾಗೃತಿಗಾಗಿ ಪೊಲೀಸ್ ಮಾಹಿತಿ ಕೇಂದ್ರ, ಸಿಸಿ ಕ್ಯಾಮರಾಗಳು, ಜಾಗೃತಿ ಫಲಕಗಳು ಹಾಗೂ ಪೊಲೀಸ್ ಚೌಕಿಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡಿದರು.
ಮೇ.17 ರಂದು ಭಟ್ಕಳದಲ್ಲಿ ಜಿಲ್ಲಾಮಟ್ಟದ ಜನಸ್ಪಂಧನ ಕಾರ್ಯಕ್ರಮ: ಕಾರ್ಯಕ್ರಮದ ಪ್ರಯೋಜನ ಪಡೆಯಿರಿ- ಜಿಲ್ಲಾಧಿಕಾರಿ
ಗೋಕರ್ಣವು ನೈಸರ್ಗಿಕ ಕಡಲ ತೀರಗಳು, ಕಡಿಮೆ ಜೀವನದ ವೆಚ್ಚ, ರಮಣೀಯ ಪರಿಸರ ವೈವಿದ್ಯಮಯವನ್ನು ಹೊಂದಿದ್ದು, ಪ್ರವಾಸಿಗರ ನೆಚ್ಚಿನ ಪ್ರವಾಸಿ ತಾಣವಾಗಿದೆ. ಇಲ್ಲಿಗೆ ಪ್ರತಿ ವಷÀð 1.5 ಲಕ್ಷ ಪ್ರವಾಸಿಗರು ಆಗಮಿಸುತ್ತಾರೆ ಮತ್ತು 8 ರಿಂದ 10 ವಿದೇಶಿಗರು ಪ್ರತಿ ವರ್ಷ ಖಾಯಂ ಆಗಮಿಸುತ್ತಾರೆ. ಇಲ್ಲಿ ಸಾಹಸ ಚಟುವಟಿಕೆ ನಡೆಸಲು ಪ್ರಯತ್ನಿಸಿ ಸಮುದ್ರದಲ್ಲಿ ಮುಳುಗಿ ಸಾವಿಗೀಡಾಗುವ ಪ್ರಕರಣಗಳು ಸಂಭವಿಸುತ್ತಿವೆ, ಇದನ್ನು ತಡೆಗಟ್ಟುವ ನಿಟ್ಟಿನಲ್ಲಿ ಹಾಗೂ ಪ್ರವಾಸಿಗರ ಸುರಕ್ಷಿತ ದೃಷ್ಠಿಯಿಂದ ಸಿಸಿ ಕ್ಯಾಮೆರಾ ಅಳವಡಿಸಿ ಎಚ್ಚರಿಕೆ ನೀಡಲಾಗುವುದು, ಅಪಾಯಕಾರಿ ಸ್ಥಳಗಳಲ್ಲಿ ತೆರಳದಂತೆ 5 ಕಡೆ ಪೊಲೀಸ್ ಚೌಕಿ ವ್ಯವಸ್ಥೆ ಮಾಡಿ ಪ್ರವಾಸಿಗರಿಗೆ ಮಾಹಿತಿ ನೀಡಲಾಗುವುದು ಹಾಗೂ ಪುಣ್ಯಾಶ್ರಮ ಟ್ರಸ್ಟ್ ವತಿಯಿಂದ ಎಲ್ಲಾ ಬೀಚ್‌ಗಳಲ್ಲಿ ಆಳವಾದ ಮತ್ತು ಅಪಾಯಕಾರಿ ಸ್ಥಳಗಳಲ್ಲಿ ಸೂಚನಾ ಫಲಕವನ್ನು ಅಳವಡಿಸಲಾಗುತ್ತಿದೆ ಎಂದರು.
ಹನುಮಾಪುರ ಗ್ರಾಮದಲ್ಲಿ “ದೇವರ” ಜಾಗದಲ್ಲಿ ಗಲಾಟೆ, ಹಲ್ಲೆಗೊಳಗಾದ ಗಣೇಶ ಆಸ್ಪತ್ರೆಗೆ ದಾಖಲು..!
ಗೋಕರ್ಣಕ್ಕೆ ಬರುವ ವಿದೇಶಿ ಪ್ರವಾಸಿಗರಿಗೆ ಹಾಗೂ ಇತರೆ ಪ್ರವಾಸಿಗಳಿಗೆ ಪ್ರವಾಸಿ ಸ್ಥಳಗಳ ಬಗ್ಗೆ ಮಾಹಿತಿ ಮತ್ತು ಮಾರ್ಗದರ್ಶನ, ನೀಡಲು ಸಿ.ಎಸ್.ಆರ್ ಅನುದಾನದಡಿ ಪೊಲೀಸ್ ಮಾಹಿತಿ ಕೇಂದ್ರವನ್ನು ತೆರೆಯಲಾಗಿದೆ. ಈ ಕೇಂದ್ರದಲ್ಲಿ ಮೇನ್ ಬೀಚ್, ಓಂ ಬೀಚ್, ಕುಡ್ಲೆ ಬೀಚ್, ತದಡಿ ಬೀಚ್ ಸೇರಿದಂತೆ 33 ಸ್ಥಳಗಳಲ್ಲಿ ಅಳವಡಿಸಿರುವ ಸಿಸಿ ಟಿವಿಗಳನ್ನು 24*7 ವೀಕ್ಷಣೆ ಮಾಡಲಾಗುವುದು ಹಾಗೂ 3 ತಿಂಗಳ ಡೇಟಾವನ್ನು ಶೇಖರಿಸಿಡಲಾಗುವುದು ಎಂದರು.
ಹುನಗುಂದ ಗ್ರಾಪಂ ಉಪ ಚುನಾವಣೆ: “ಕೈ” ಬೆಂಬಲಿತ ಲಕ್ಷ್ಮೀ ಹನ್ಮಂತ ಲಮಾಣಿ ಬಹುತೇಕ ಅವಿರೋಧ ಆಯ್ಕೆ ಸಾಧ್ಯತೆ..!
ನಂತರ ನಡೆದ ಪೊಲೀಸ್ ಜನ ಸಂಪರ್ಕ ಸಭೆಯಲ್ಲಿ ಶೈಕ್ಷಣಿಕವಾಗಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಮತ್ತು ಸಮುದ್ರದಲ್ಲಿ ಮುಳುಗುತ್ತಿದ್ದವರ ಜೀವ ರಕ್ಷಿಸಿದ ಜೀವರಕ್ಷಕರಿಗೆ, ಪೊಲೀಸ್ ಸಿಬ್ಬಂದಿಗಳಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಗೋಕರ್ಣ ಗ್ರಾ.ಪಂ. ಅಧ್ಯಕ್ಷೆ ಸುಮನಾ ಗೌಡ, ಪ್ರವಾಸೋದ್ಯಮ ಇಲಾಖೆ ಉಪನಿರ್ದೇಶಕ ಮಂಜುನಾಥ ನಾವಿ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಕೃಷ್ಣೇಗೌಡ, ನಿವೇದಿತ ಆಳ್ವಾ, ಗೋಕರ್ಣ ದೇವಾಲಯದ ರಾಜಗೋಪಾಲ ಅಡಿಗ ಮತ್ತಿತರರು ಉಪಸ್ಥಿತರಿದ್ದರು. ಡಿವೈಎಸ್ಪಿ ಮಹೇಶ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು.