ವೈದ್ಯಕೀಯ ಸೇವೆಗೆ ಸದಾ ಸನ್ನದ್ದವಾಗಿರಿ : ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ..!

ಕಾರವಾರ ಜಿಲ್ಲೆಯಲ್ಲಿ ಸಂಭವಿಸುವ ಯಾವುದೇ ರೀತಿಯ ಪ್ರಾಕೃತಿಕ ವಿಕೋಪ ಸೇರಿದಂತೆ ಎಲ್ಲಾ ತುರ್ತು ಸಂದರ್ಭಗಳಲ್ಲಿ ಗಾಯಾಳು ಸಂತ್ರಸ್ಥರಿಗೆ ವೈದ್ಯಕೀಯ ಸೇವೆ ನೀಡುವಲ್ಲಿ ಯಾವುದೇ ವಿಳಂಬವಾಗದಂತೆ ಸದಾ ಸನ್ನದ್ದ ಸ್ಥಿತಿಯಲ್ಲಿರುವಂತೆ ವೈದ್ಯಕೀಯ ಸಿಬ್ಬಂದಿಗಳಿಗೆ ಜಿಲ್ಲಾಧಿಕಾರಿ ಕೆ.ಲಕ್ಷ್ಮೀಪ್ರಿಯ ಸೂಚನೆ ನೀಡಿದರು.

ಅವರು ಮಂಗಳವಾರ ಕ್ರಿಮ್ಸ್ ನಲ್ಲಿ, ಪೊಲೀಸ್ ಇಲಾಖೆ , ಕೊಂಕಣ ರೈಲ್ವೆ, ಜಿಲ್ಲಾ ವಿಪ್ತು ನಿರ್ವಹಣಾ ಪ್ರಾಧಿಕಾರ, ವಿಪತ್ತು ನಿರ್ವಹಣೆ ಮತ್ತು ತಗ್ಗಿಸುವ ಕೇಂದ್ರ, ತೇಜಸ್ ವಿಪತ್ತು ನಿರ್ವಹಣೆ ಮತ್ತು ತಗ್ಗಿಸುವ ಕೇಂದ್ರ, ವಿಪತ್ತು ನಿರ್ವಹಣಾ ವಿಭಾಗ ಕರ್ಸ್ತೂಬಾ ಮೆಡಿಕಲ್ ಕಾಲೇಜು ಮಣಿಪಾಲ , ಕೈಗಾ , ಗ್ರಾಸಿಂ ಹಾಗೂ ಕಾರವಾರ ಮೆಡಿಕಲ್ ಕಾಲೇಜು ಸಹಯೋಗದಲ್ಲಿ ನಡೆದ , ವಿಪತ್ತು ಸಂದರ್ಭದಲ್ಲಿ ತುರ್ತು ವೈದ್ಯಕೀಯ ನೆರವು ಒದಗಿಸುವ ಕುರಿತ ತರಬೇತಿ ಕಾರ್ಯಗಾರ ಉದ್ಘಾಟಿಸಿ ಮಾತನಾಡಿದರು.

CBSE, SSLC ಫಲಿತಾಂಶ ಪ್ರಕಟ: ಮುಂಡಗೋಡ ಲೊಯೊಲಾ ಕೇಂದ್ರೀಯ ವಿದ್ಯಾಲಯ 100% ಫಲಿತಾಂಶದ ಸಾಧನೆ..! ಮಾನಸಿ ಸಿದ್ದಿ ಪ್ರಥಮ..!

ಜಿಲ್ಲೆಯಲ್ಲಿ ಅನೇಕ ಸೂಕ್ಷ್ಮ ಸ್ಥಳಗಳಿದ್ದು ಮಳೆಗಾಲದ ಸಂದರ್ಭದಲ್ಲಿ ಗುಡ್ಡ ಕುಸಿತ ಸೇರಿದಂತೆ ಇತರೇ ಯಾವುದೇ ರೀತಿಯ ಪ್ರಾಕೃತಿಕ ವಿಕೋಪ ಮತ್ತು ಇನ್ನಿತರ ತುರ್ತು ಸಂದರ್ಭಗಳಲ್ಲಿ ಸಂತ್ರಸ್ಥರಾಗುವ ಜಿಲ್ಲೆಯ ಸಾರ್ವಜನಿಕರಿಗೆ ವೈದ್ಯಕೀಯ ಚಿಕಿತ್ಸೆ ನೀಡುವಲ್ಲಿ ಯಾವುದೇ ವಿಳಂಬವಾಗುವುದನ್ನು ತಡೆಯಲು ಇಲ್ಲಿರುವ ಮಾನವ ಸಂಪನ್ಮೂಲವನ್ನು ಸೂಕ್ತ ರೀತಿಯಲ್ಲಿ ಬಳಸಿಕೊಂಡು, ಅವರಿಗೆ ಸೂಕ್ತ ತರಬೇತಿ ನೀಡುವ ಮೂಲಕ, ವೈದ್ಯಕೀಯ ನೆರವು ಒದಗಿಸಲು ಸಾಧ್ಯವಾಗಲಿದೆ ಎಂದರು.

ಮಕ್ಕಳ ಬೌದ್ಧಿಕ ಮತ್ತು ಕ್ರೀಯಾಶೀಲ ಚಟುವಟಿಕೆಗೆ ಬೇಸಿಗೆ ಶಿಬಿರ ಸಹಕಾರಿ..!

ವಿಪತ್ತು ಸಂದರ್ಭದಲ್ಲಿ ಗಾಯಳುಗಳಿಗೆ ತುರ್ತು ಚಿಕಿತ್ಸೆ ನೀಡುವ ಕುರಿತು ತರಬೇತಿ ಪಡೆದ ಸಿಬ್ಬಂದಿಗಳಿದ್ದಲ್ಲಿ ಜೀವಹಾನಿಯಾಗುವುದನ್ನು ತಡೆಯಲು ಸಾಧ್ಯವಾಗಲಿದ್ದು, ಇಂತಹ ಸಂದರ್ಭಗಳಲ್ಲಿ ರೋಗಿಗಳಿಗೆ ಚಿಕಿತ್ಸೆ ನೀಡುವ ಮೊದಲು ಗಾಯಾಳುಗಳ ಪರಿಸ್ಥಿತಿಯನ್ನು ಗಮನಿಸಿ, ಅವರನ್ನು ಸೂಕ್ತ ರೀತಿಯಲ್ಲಿ ವಿಂಗಡಿಸುವ ಮೂಲಕ ಆದ್ಯತೆಯಲ್ಲಿ ಎಲ್ಲರಿಗೂ ಅಗತ್ಯ ಚಿಕಿತ್ಸೆ ಒದಗಿಸಲು ಸಾಧ್ಯವಾಗಲಿದೆ ಎಂದರು.

ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಕ್ರಿಮ್ಸ್ ನ ಡೀನ್ ಡಾ.ಪೂರ್ಣಿಮ, ಕೆಎಂಸಿ ಮಣಿಪಾಲದ ತುರ್ತು ಚಿಕಿತ್ಸಾ ವಿಭಾಗದ ಮಾಜಿ ಮುಖ್ಯಸ್ಥ ಹಾಗೂ ಮಾಹೆ ವಿಪತ್ತು ನಿರ್ವಹಣಾ ಪ್ರಾಧಿಕಾರದ ಸಂಯೋಜಕ ಮತ್ತು ಕೆ.ಎಂ.ಸಿ ವಿಪತ್ತು ನಿರ್ವಹಣಾ ಪ್ರಾಧಿಕಾರದ ಅಧ್ಯಕ್ಷ ಪ್ರೋ.ಡಾ.ಜಯರಾಜ್ ಬಾಲಕೃಷ್ಣನ್, ತೇಜಸ್ ವಿಪತ್ತು ನಿರ್ವಹಣೆ ಮತ್ತು ತಗ್ಗಿಸುವ ಕೇಂದ್ರದ ಸಂಯೋಜಕ ಸಂದೀಪ್ ಶಿವರಾಮ್, ಕ್ರಿಮ್ಸ್ ನ ಸಮುದಾಯ ಆರೋಗ್ಯ ವಿಭಾಗದ ಮುಖ್ಯಸ್ಥ ಪ್ರೋ.ಡಾ. ಹೇಮಗಿರಿ ಕೆ ಮತ್ತಿತರರು ಉಪಸ್ಥಿತರಿದ್ದರು.

ಪ್ರಧಾನಿ ಮೋದಿ ಭಾಷಣ ಮುಗಿಸಿದ ಕೆಲವೇ ಹೊತ್ತಲ್ಲಿ ಜಲಂಧರ್‌ ಬಳಿ ಕಣ್ಗಾವಲು ಡ್ರೋನ್ ಹೊಡೆದುರುಳಿಸಿದ ಸೇನೆ ; ವಿದ್ಯುತ್ ಸ್ಥಗಿತ

ಕಾರ್ಯಗಾರದಲ್ಲಿ ಕ್ರಿಮ್ಸ್ ನ ವೈದ್ಯರು, ವೈದ್ಯಕೀಯ ಸ್ನಾತಕೋತ್ತರ ವಿದ್ಯಾರ್ಥಿಗಳು, ಶುಶ್ರೂಷಕ ಸಿಬ್ಬಂದಿಗಳು, ಪೊಲೀಸ್ ಸಿಬ್ಬಂದಿಗಳು, ಕೊಂಕಣ ರೈಲ್ವೆಯ ಸಿಬ್ಬಂದಿಗಳಿಗೆ ತುರ್ತು ಸಂದರ್ಭಗಳಲ್ಲಿ ವೈದ್ಯಕೀಯ ಚಿಕಿತ್ಸೆ ನಿಡುವ ತರಬೇತಿ ನೀಡಲಾಯಿತು.

error: Content is protected !!