ಮುಂಡಗೋಡ: CBSE , SSLC, ಫಲಿತಾಂಶ ಪ್ರಕಟವಾಗಿದೆ. ಮುಂಡಗೋಡಿನ ಲೊಯೊಲಾ ಕೇಂದ್ರೀಯ ವಿದ್ಯಾಲಯದ CBSE SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಶೇಕಡಾ 100 ರಷ್ಟು ಫಲಿತಾಂಶವಾಗಿದೆ. ಹೀಗಾಗಿ, ಶಾಲಾ ಆಡಳಿತ ಮಂಡಳಿ ಹಾಗೂ ಶಿಕ್ಷಕ ವರ್ಗ ಸಂತಸ ವ್ಯಕ್ತಪಡಿಸಿದೆ.
ಇನ್ನು ಮಾನಸಿ ಸಿದ್ಧಿ (500/452) 90.4 ಶೇಕಡಾ ಅಂಕಗಳೊಂದಿಗೆ ಪ್ರೌಢಶಾಲೆಗೆ ಪ್ರಥಮ ಸ್ಥಾನ ಪಡೆದು ಕೀರ್ತಿ ತಂದಿದ್ದಾಳೆ. ಅನ್ವೆಶ್ ನಾಯ್ಕ್ (500/443) 88.6 ಶೇಕಡಾ ಅಂಕಗಳೊಂದಿಗೆ ದ್ವಿತೀಯ ಸ್ಥಾನ ಪಡದಿದ್ದಾನೆ. ರಿತೇಶ್ ಬಾಡ್ಕರ್ (500/442) 88.4 ಶೇಕಡಾ ಅಂಕಗಳೊಂದಿಗೆ ತೃತೀಯ ಸ್ಥಾನ ಪಡೆದಿದ್ದಾನೆ.
ಐಶ್ವರ್ಯ ವೇರ್ಣೇಕರ್-88.2%, ಮುಹಮ್ಮದ್ ಫಾಝಿಲ್- 87.6%, ದಿಶಾ ಜಾಲಗಾರ್-85.4%, ರಾಘವೇಂದ್ರ ಕಲಾಲ್ -83%, ಆದಿತ್ಯ ಚವಾಣ್- 82.2% ಕ್ರಮವಾಗಿ ಸ್ಥಾನ ಪಡೆದು ಸಾಧನೆ ಮಾಡಿದ್ದಾರೆ.
ಒಟ್ಟು, SSLC CBSE ಪರೀಕ್ಷೆ ಬರೆದೆ 42 ವಿದ್ಯಾರ್ಥಿಗಳಲ್ಲಿ 42 ವಿದ್ಯಾರ್ಥಿಗಳೂ ಉತ್ತೀರ್ಣರಾಗಿದ್ದು, ಶೇಕಡಾ 75 ರಷ್ಟು ಅಂಕದೊಂದಿಗೆ15 ವಿದ್ಯಾರ್ಥಿಗಳು, ಶೆಕಡಾ 60 ರಷ್ಟು ಅಂಕಗಳೊಂದಿಗೆ 14 ವಿದ್ಯಾರ್ಥಿಗಳು, ಶೇಕಡಾ 50 ರಷ್ಟು ಅಂಕಗಳೊಂದಿಗೆ, 13 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಹೀಗಾಗಿ, ಶಾಲೆಯ ಕೀರ್ತಿ ಹೆಚ್ಚುವಂತೆ ಮಾಡಿದ್ದಾರೆ.
ಇನ್ನು, ಇದೇ ಶಾಲೆಯಲ್ಲಿ ವ್ಯಾಸಂಗ ಮಾಡಿದ್ದ ವಿದ್ಯಾರ್ಥಿ, ದಿ. ಅರ್ಹನ್ ಚಿವಟೆ (500/321) 64.2 ಶೇಕಡಾ ಅಂಕ ಗಳಿಸಿ ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣನಾಗಿದ್ದಾನೆ.