ಶಿಗ್ಗಾವಿ: ಗ್ರಾಮ ಪಂಚಾಯತಿ ಪಿಡಿಓ ಹಾಗೂ ಗುತ್ತಿಗೆದಾರನ ನಡುವೆ ಕೈ-ಕೈ ಮಿಲಾಯಿಸಿದ ಘಟನೆ ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು ಗ್ರಾಮ ಪಂಚಾಯಿತಿಯ ಆವರಣದಲ್ಲಿ ನಡೆದಿದ್ದು ತಡವಾಗಿ ಬೆಳಕಿಗೆ ಬಂದಿದೆ.

ಶಿಗ್ಗಾವಿ ತಾಲೂಕಿನ ಹಿರೇಮಲ್ಲೂರು ಗ್ರಾಮ ಪಂಚಾಯಿತಿಯ ಪಿಡಿಓ ಅಶೋಕ್ ಗೋಂದಿ ಅವರನ್ನು ಪಂಚಾಯಿತಿಯ ಗುತ್ತಿಗೆ ಕೆಲಸದ ವಿಷಯವಾಗಿ ಗುತ್ತಿಗೆದಾರ ಮಂಜುನಾಥ ಕಂಕನವಾಡಿ ಅವರ ನಡುವೆ ಮಾತಿನ ಚಕಮಕಿ ನಡೆದು ಕೈಕೈ ಮಿಲಾಯಿಸಿ, ಬಾಯಿಗೆ ಬಂದಹಾಗೆ ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿಕೊಂಡಿದ್ದಾರೆ. ಘಟನೆ ನಡೆದು ನಂತರ ಪೊಲೀಸ್ ಠಾಣೆ ಮೆಟ್ಟಿಲೇರಿ ರಾಜಿ ಸಂಧಾನ ಮಾಡಿಕೊಂಡ ನಂತರ ಬಹಿರಂಗವಾಗಿದೆ.

ಪಂಚಾಯತಿಯ ಎನ್.ಆರ್.ಇ.ಜಿ ಕೆಲಸಗಳಿಗಾಗಿ ಗುತ್ತಿಗೆ ಪಡೆದ  ಮಂಜುನಾಥ್ ಕೆಲಸದ ವಿಷಯವಾಗಿ ಕೇಳಿದ್ದಾನೆ ಆಗ ಪಿಡಿಓ ಅಶೋಕ್ ಗೋಂದಿ ಮಳೆಗಾಲವಿದೆ ಕೆಲಸ ಮಾಡಬೇಡ ಎಂದು ಹೇಳಿದ್ದಾರೆ ಎನ್ನಲಾಗಿದೆ. ಆದರೆ ಇಲ್ಲಿ ಇನ್ನೊಬ್ಬ ಗುತ್ತಿಗೆದಾರನಿಗೆ ಗುತ್ತಿಗೆ ಕೆಲಸ ಮಾಡಲು ಹೇಳಿ ನನಗೆ ಏಕೆ ಬೇಡ ಎನ್ನುತ್ತೀರಿ ? ಎಂದು ಪ್ರಶ್ನಿಸಿದಾಗ ಈ ರೀತಿಯ ಮಾತಿನ ಚಕಮಕಿ ನಡೆದಿದೆ ಎನ್ನಲಾಗಿದೆ.

ಪಿಡಿಓ

ಒಟ್ಟಾರೆ ಒಬ್ಬ ಸರಕಾರಿ ದಕ್ಷ ಅಧಿಕಾರಿ ಸಾರ್ವಜನಿಕರೊಂದಿಗೆ ಹೇಗೆ ವರ್ತಿಸಬೇಕು ಎಂಬುದನ್ನು ರೂಢಿಸಿಕೊಳ್ಳದ ಏಕಾಏಕಿ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಕೈ ಕೈ ಮಿಲಾಯಿಸಿರುವುದು ಈಗ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಒಂದುವೇಳೆ ಈ ಘಟನೆಯಲ್ಲಿ ಗುತ್ತಿಗೆದಾರನ ವರ್ತನೆ ಸರಿಯಾಗಿ ಇಲ್ಲವಾದರೆ ಪಿಡಿಒ ಅವರು ನಡೆದ ಘಟನೆಯ ವಿಷಯವಾಗಿ ಪೊಲೀಸರಿಗೆ ಮಾಹಿತಿ ನೀಡಿ ಸೂಕ್ತ ರಕ್ಷಣೆ ಮತ್ತು ಭದ್ರತೆಯನ್ನು ಮಾಡಿಕೊಳ್ಳಬಹುದಾಗಿತ್ತು ಆದರೆ ಯಾಕೆ ಮಾಡಿಲ್ಲ. ಗುತ್ತಿಗೆದಾರನ ಜೊತೆ ಈ ರೀತಿಯ ವರ್ತನೆಗಳು ಎಷ್ಟು ಸರಿ ? ಎಂಬ ವಿಷಯಕ್ಕೆ ಪಿಡಿಓ ಅವರೇ ಉತ್ತರಿಸಬೇಕಿದೆ ಈ ಕುರಿತು ಗ್ರಾಮ ಪಂಚಾಯತಿಯ ಮೇಲಾಧಿಕಾರಿಗಳು ಪಂಚಾಯಿತಿಗೆ ಭೇಟಿ ನೀಡಿ ನಡೆದ ಘಟನೆಯ ಕುರಿತು ಮಾಹಿತಿ ಪಡೆದು ಸೂಕ್ತ ಕ್ರಮ ಜರುಗಿಸಬೇಕಿದೆ.