ಕಲಘಟಗಿ: ಪೆಟ್ರೊಲ್, ಡೀಸೆಲ್, ಅಡುಗೆ ಅನಿಲ ಹಾಗೂ ಅಗತ್ಯವಸ್ತುಗಳ ಬೆಲೆ ಏರಿಕೆ ಖಂಡಿಸಿ ಮಾಜಿ ಸಚಿವ ಸಂತೋಷ್ ಲಾಡ್ ನೇತೃತ್ವದಲ್ಲಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಬೃಹತ್ ಸೈಕಲ್ ಜಾಥಾವನ್ನ ಧಾರವಾಡ ಜಿಲ್ಲೆಯ ಕಲಘಟಗಿಯಲ್ಲಿ ಮಾಡಲಾಯಿತು.
ಸೈಕಲ್ ಜಾಥಾ ಜೊತೆಗೆ ಸಂತೋಷ್ ಲಾಡ್ ಒಂಟೆ, ಕುದುರೆ ಹಾಗೂ ಎತ್ತಿನ ಬಂಡಿಯ ಮೇಲೆ ಕುಳಿತು ಪ್ರತಿಭಟನೆ ನಡೆಸಿದ್ದು ರಾಜ್ಯದಲ್ಲೇ ವಿನೂತನವಾಗಿತ್ತು. ಅಲ್ಲದೇ ಎತ್ತಿನ ಬಂಡೆಯ ಮೇಲೆ ಬೈಕ್ ಇಟ್ಟು ಆಕ್ರೋಶವನ್ನ ಲಾಡ್ ವ್ಯಕ್ತ ಪಡಿಸಿದರು, ಇನ್ನು ಬಡವರ ಜೀವನದ ಜೊತೆ ಚೆಲ್ಲಾಟವಾಡುತ್ತಿದೆ ಅಂತಾ, ಕೇಂದ್ರ ಸರ್ಕಾರದ ವಿರುದ್ಧ ಕೈ ಕಾರ್ಯಕರ್ತರು ಧಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದ್ರು.
ದಾಸ್ತಿಕೊಪ್ಪ ಪೆಟ್ರೊಲ್ ಬಂಕ್ ನಿಂದ ತಹಶೀಲ್ದಾರ್ ಕಚೇರಿವರೆಗೆ ನಡೆದ ಜಾಥಾದಲ್ಲಿ ಸಾವಿರಾರು ಕಾರ್ಯಕರ್ತರು ಭಾಗವಹಿಸಿದ್ರು. ಎತ್ತಿನ ಬಂಡಿಯ ಮೇಲೆ ಬೈಕ್‌ಗಳನ್ನಿಟ್ಟು ಜನರು ಆಕ್ರೋಶ ವ್ಯಕ್ತಪಡಿಸಿದರು.