ಶಿರಸಿಯಲ್ಲಿ ಡಿಕೆಶಿ ನೇತೃತ್ವದಲ್ಲಿ ಕಾಂಗ್ರೆಸ್  ಸೈಕಲ್ ಸವಾರಿಗೆ ಆರಂಭಿಕ ವಿಘ್ನ..? ನಡಿಯತ್ತಾ ಪ್ರತಿಭಟನೆ..?

ಶಿರಸಿ: ನಗರದಲ್ಲಿ ಇಂದು ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನೇತೃತ್ವದಲ್ಲಿ ತೈಲ ಬೆಲೆ ಏರಿಕೆ ಖಂಡಿಸಿ ನಡೆಸಲಿರೋ ಸೈಕಲ್ ಜಾಥಾ ಗೆ ಆರಂಭಿಕ ವಿಘ್ನ ಎದುರಾಗಿದೆ.

ಕೋವಿಡ್ ನಿಯಮ ಹಿನ್ನೆಲೆಯಲ್ಲಿ ಡಿ.ಕೆ ಶಿವಕುಮಾರ್ ಸೈಕಲ್ ಜಾಥಾಗೆ ಉತ್ತರ ಕನ್ನಡ ಜಿಲ್ಲಾಡಳಿತ ಅನುಮತಿ ನೀಡಿಲ್ಲ. ಅನುಮತಿ ನಿರಾಕರಿಸಲಾಗಿದ್ದು, ಈ ನಡುವೆಯೇ ಕಾಂಗ್ರೆಸ್ ಸೈಕಲ್ ಜಾಥಾ ನಡೆಸಲು ತಯಾರಿ ನಡೆಸಿದೆ.

ಈಗಷ್ಟೇ ಶಿರಸಿ ನಗರಕ್ಕೆ ಡಿಕೆ ಶಿವಕುಮಾರ್ ಆಗಮಿಸಿದ್ದಾರೆ. ಮೊದಲು ಮಾರಿಕಾಂಬೆಯ ದರ್ಶನ ಪಡೆದ ಡಿಕೆಶಿ, ಆನಂತರದಲ್ಲಿ ಸೈಕಲ್ ಜಾಥಾ ನಡೆಸಲಿದ್ದಾರೆ. ಹೀಗಾಗಿ, ಶಿರಸಿ‌‌ ಮಾರಿಕಾಂಬೆ ದೇವಸ್ಥಾನದ ಆವರಣದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಜಮಾವಣೆಗೊ‌ಂಡಿದ್ದಾರೆ. ಕೋವಿಡ್ ನಿಯಮಕ್ಕೆ ಕ್ಯಾರೇ ಎನ್ನದೇ ಜಮಾವಣೆ ಆಗಿರೋ ಕಾರ್ಯಕರ್ತರಿಗೆ ಸೈಕಲ್ ಜಾಥಾ ನಡೆಸಲು ಜಿಲ್ಲಾಡಳಿತ ಮತ್ತೆ ತಡೆ ನೀಡುವ ಸಾಧ್ಯತೆ ಇದೆ.

ಶಿರಸಿ ಮಾರಿಕಾಂಬೆ ದರ್ಶನ ಪಡೆದ ಡಿಕೆಶಿ

ಈಗಾಗಲೇ ಪೊಲೀಸರು ಬಿಗಿ ಬಂದೋಬಸ್ತ ವ್ಯವಸ್ಥೆ ಮಾಡಲಾಗಿದ್ದು, ಸೈಕಲ್ ಜಾಥಾ ಆರಂಭವಾಗುತ್ತಿದ್ದಂತೆ ಪೊಲೀಸರು ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.

error: Content is protected !!