ಹನುಮಾಪುರ ಶ್ರೀಗಳ ಸಾವಿಗೆ ಕಾರಣವೇನು..? ಅಷ್ಟಕ್ಕೂ ವಿ.ಎಸ್.ಪಾಟೀಲರು ಹೇಳಿದ್ದೇನು..?

ಮುಂಡಗೋಡ: ತಾಲೂಕಿನ ಹನುಮಾಪುರ ಕಾಳಿಕಾಮಠದ ಸದಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ. ಕಳೆದ ಕೆಲ ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು ಕೊರೋನಾ ಪಾಸಿಟಿವ್ ಆಗಿ ತೀವ್ರ ಸಂಕಷ್ಟ ಅನುಭವಿಸಿದ್ರು. ತುಮಕೂರು, ರಾಣೇಬೆನ್ನೂರು ಸೇರಿದಂತೆ ಹಲವು ಕಡೆ ಚಿಕಿತ್ಸೆ ಪಡೆದಿದ್ರು. 

ಆನಂತರದಲ್ಲಿ ಶ್ರೀಗಳಿಗೆ, ಬ್ಲ್ಯಾಕ್ ಫಂಗಸ್ ಕಾಣಿಸಿಕೊಂಡು ಮತ್ತಷ್ಟು ಆರೋಗ್ಯ ಹದಗೆಟ್ಟಿತ್ತು. ಹೀಗಾಗಿ, ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು.. ಆದ್ರೆ ಚಿಕಿತ್ಸೆ ಪಲಕಾರಿಯಾಗದೇ ಶ್ರೀಗಳು ವಿಧಿವಶರಾದ್ರು ಅಂತಾ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಪಬ್ಲಿಕ್ ಫಸ್ಟ್ ಗೆ ಮಾಹಿತಿ ನೀಡಿದ್ದಾರೆ. ಹಾಗಾದ್ರೆ ಮಾಜಿ ಶಾಸಕರು ಶ್ರೀಗಳ ಬಗ್ಗೆ ಹೇಳಿದ್ದಾದ್ರೂ ಏನು..? ಇಲ್ಲಿದೆ ನೋಡಿ..

error: Content is protected !!