ಹನುಮಾಪುರ ಕಾಳಿಕಾಮಠದ “ಶ್ರೀಗಳು” ಅಸ್ತಂಗತ..! ಗಣ್ಯರ ಸಂತಾಪ..!!

ಮುಂಡಗೋಡ ತಾಲೂಕಿನ ಹನುಮಾಪುರ ಕಾಳಿಕಾಮಠದ (ಹೀರೇಮಠ) ಸದಾನಂದ ಶಿವಾಚಾರ್ಯ ಸ್ವಾಮೀಜಿ ಇಂದು ನಸುಕಿನ ಜಾವ ವಿಧಿವಶರಾಗಿದ್ದಾರೆ.

ಒಂದು ತಿಂಗಳಿಂದ ಅನಾರೋಗ್ಯ..!
ಕಳೆದ ಒಂದು ತಿಂಗಳಿನಿಂದ ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದ ಶ್ರೀಗಳು ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೇ ಶ್ರೀಗಳು ಇಂದು ಬೆಳಗಿನ ಜಾವ ಹುಬ್ಬಳ್ಳಿಯ ಕಿಮ್ಸ್ ನಲ್ಲಿ ಕೊನೆ ಉಸಿರೆಳೆದಿದ್ದಾರೆ.

ಪ್ರತಿಷ್ಠಿತ ಮಠ..!
ಮುಂಡಗೋಡ ತಾಲೂಕಿನ ಪ್ರತಿಷ್ಠಿತ ಕಾಳಿಕಾಮಠದಲ್ಲಿ ಹಲವು ವರ್ಷಗಳಿಂದ ಸಾಮಾಜಿಕ ಕಾರ್ಯಗಳನ್ನು ಶ್ರೀಗಳು ಕೈಗೊಂಡಿದ್ರು. ಹೀಗಾಗಿ, ಶ್ರೀ ಮಠ ತಾಲೂಕು ಸೇರಿದಂತೆ ಹೊರ ಜಿಲ್ಲೆಗಳಲ್ಲೂ ಅಪಾರ ಪ್ರಮಾಣದ ಭಕ್ತರನ್ನು ಹೊಂದಿತ್ತು.

ಚೇತರಿಕೆ ಕಾಣಲೇ ಇಲ್ಲ..!
ಮಠದ ಪರಮ ಭಕ್ತರಾಗಿದ್ದ ಮಾಜಿ ಶಾಸಕ, ವಾಯುವ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮದ ಅಧ್ಯಕ್ಷ ವಿ.ಎಸ್.ಪಾಟೀಲ್ ಸ್ವಾಮೀಜಿಗಳ ಚಿಕಿತ್ಸೆಗಾಗಿ ಸಾಕಷ್ಟು ಪರಿಶ್ರಮ ಪಟ್ಟಿದ್ದರು. ಆದ್ರೆ ಶ್ರೀಗಳ ಆರೋಗ್ಯ ಚೇತರಿಕೆ ಕಾಣದೇ ಕೊನೆ ಉಸಿರೆಳೆದಿದ್ದಾರೆ.

ಸಂತಾಪ..
ಶ್ರೀಗಳ ನಿಧನಕ್ಕೆ ತಾಲೂಕಿನ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ. ಮಾಜಿ ಶಾಸಕ ವಿ‌.ಎಸ್. ಪಾಟೀಲ್ ಸೇರಿದಂತೆ ಹಲವು ಗಣ್ಯರು, ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ.

ಮಠದ ಆವರಣದಲ್ಲೇ ಇಂದು ಅಂತ್ಯಸಂಸ್ಕಾರ..!
ಇನ್ನು ಅಗಲಿದ ಶ್ರೀಗಳ ಪಾರ್ಥೀವ ಶರೀರ ಹನುಮಾಪುರದ ಶ್ರೀ ಮಠಕ್ಕೆ ಮದ್ಯಾಹ್ನದ ವೇಳೆಗೆ ಬರುವ ನಿರೀಕ್ಷೆಯಿದೆ. ನಂತರ ಭಕ್ತರ ಸಮ್ಮುಖದಲ್ಲಿ ಸಂಜೆ 4 ಗಂಟೆಗೆ, ಶ್ರೀ‌ಮಠದ ಆವರಣದಲ್ಲೇ ಅಂತ್ಯ ಸಂಸ್ಕಾರ ನೆರವೇರಿಸಲಾಗುವುದು ಅಂತಾ ಮಠದ ಮೂಲಗಳಿಂದ ಪಬ್ಲಿಕ್ ಫಸ್ಟ್ ಗೆ ಮಾಹಿತಿ ಲಭ್ಯವಾಗಿದೆ.

error: Content is protected !!